Cholesterol Level Akkicarding to Age News:
ಪ್ರತಿಯೊಬ್ಬರ ವಯಸ್ಸು ಮತ್ತು ದೈಹಿಕ ಚಟುವಟಿಕೆಗಳ ಆಧಾರದ ಮೇಲೆ CHOLESTEROL ಮಟ್ಟವು ಬೇರೆ ಬೇರೆಯಾಗಿರುತ್ತದೆ. ನಿಮ್ಮ ಆಹಾರ ಪದ್ಧತಿ ಹಾಗೂ ಜೀವನಶೈಲಿ ಅವಲಂಬಿಸಿರುತ್ತದೆ ಎಂದು ತಜ್ಞರು ತಿಳಿಸುತ್ತಾರೆ.ಕೆಲವು ಆಹಾರಗಳ ಸೇವನೆಯಿಂದ ದೇಹಕ್ಕೆ CHOLESTEROL ಲಭಿಸುತ್ತದೆ. ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರಗಳ (CDC) ತಿಳಿಸುವಂತೆ, ಮುಖ್ಯವಾಗಿ CHOLESTEROLನಲ್ಲಿ ಎರಡು ವಿಧಗಳಿವೆ.ದೇಹಕ್ಕೆ ಬೇಕಾಗಿರುವ ಕೊಲೆಸ್ಟ್ರಾಲ್ ನಿಮ್ಮ ಯಕೃತ್ತಿನಲ್ಲಿ ರೂಪಗೊಳ್ಳುತ್ತದೆ.
ನಿಮ್ಮ ದೇಹವು ಅದರ ಕಾರ್ಯನಿರ್ವಹಣೆಗೆ ಬೇಕಾದಷ್ಟು CHOLESTEROLನ್ನು ತಯಾರು ಮಾಡುತ್ತದೆ. ಇಂದಿನ ಕಾಲದಲ್ಲಿ ದೇಹದಲ್ಲಿ ಕೆಟ್ಟ CHOLESTEROL (LDL) ಹೆಚ್ಚಳವು ಸಾಮಾನ್ಯ ಸಮಸ್ಯೆಯೆಂದು ಪರಿಗಣಿಸಲಾಗಿದೆ. ಈ ತೊಂದರೆ ಪ್ರಪಂಚದಾದ್ಯಂತ ಬಹುತೇಕ ಎಲ್ಲಾ ವಯಸ್ಸಿನ ಜನರಲ್ಲಿ ವೇಗವಾಗಿ ಪರಿಣಾಮ ಬೀರುತ್ತದೆ. ಇದರಿಂದ ಯಾವ ವಯಸ್ಸಿನವರದಲ್ಲಿ CHOLESTEROL ಮಟ್ಟ ಎಷ್ಟಿರಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಮೊದಲನೇಯದ್ದು ಕೆಟ್ಟ CHOLESTEROL ಹಾಗೂ ಮತ್ತೊಂದು ಒಳ್ಳೆಯ CHOLESTEROL ಆಗಿದೆ. ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ (LDL) ಎನ್ನವಂತಹ ಕೆಟ್ಟ CHOLESTEROL ನಿಮ್ಮ ರಕ್ತದಲ್ಲಿ ಇರುತ್ತದೆ. ಹೆಚ್ಚು CHOLESTEROL ಇರುವಂತಹ ಆಹಾರಗಳನ್ನು ಹೆಚ್ಚು ಸೇವನೆ ಮಾಡುವುದು ಕೆಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
Cholesterol Levels in Adults: ನಿಮ್ಮ CHOLESTEROL ಮಟ್ಟವು ಈ ಪ್ರಮಾಣದಲ್ಲಿ ಇಲ್ಲದಿದ್ದರೆ, ನೀವು ಉತ್ತಮ ಹೃದಯ ರೋಗ ತಜ್ಞರನ್ನು ಭೇಟಿ ಮಾಡಬೇಕಾಗುತ್ತದೆ. ನಿಯಮಿತ ತಪಾಸಣೆಯು ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಕೆಟ್ಟ CHOLESTEROL 100 ಮಿಗ್ರಾಂ/ಡಿಎಲ್ ಅಥವಾ ಅದಕ್ಕಿಂತ ಕಡಿಮೆ, ಎಚ್‌ಡಿಎಲ್ CHOLESTEROL ಅಥವಾ ಒಳ್ಳೆಯ CHOLESTEROL 60 ಮಿಗ್ರಾಂ/ಡಿಎಲ್, ಅದಕ್ಕಿಂತ ಹೆಚ್ಚು ಹಾಗೂ ಎಚ್‌ಡಿಎಲ್ ಅಲ್ಲದ CHOLESTEROL 130 ಮಿಗ್ರಾಂ/ಡಿಎಲ್, ಅದಕ್ಕಿಂತ ಕಡಿಮೆ ಇದ್ದರೆ ಒಳ್ಳೆಯದು.ಅಮೆರಿಕನ್ ಹಾರ್ಟ್ ಅಸೋಸಿಯೇಷನ್ (AHA) ಪ್ರಕಾರ, 20ನೇ ವಯಸ್ಸಿನವರು ಪ್ರತಿ 4 ರಿಂದ 6 ವರ್ಷಗಳಿಗೊಮ್ಮೆ ತಮ್ಮ CHOLESTEROL ಅನ್ನು ಪರೀಕ್ಷಿಸಿಕೊಳ್ಳಬೇಕೆಂದು ಸಲಹೆ ನೀಡಲಾಗುತ್ತದೆ.
ಈ ವಯಸ್ಸಿನವರಲ್ಲಿ CHOLESTEROL ಮಟ್ಟವು ಹೆಚ್ಚಾಗಲು ಆರಂಭವಾಗುತ್ತದೆ. ವಯಸ್ಕರಿಗೆ ಒಟ್ಟು CHOLESTEROL ಮಟ್ಟವು ಪ್ರತಿ ಡೆಸಿಲೀಟರ್‌ಗೆ 200 ಮಿಲಿಗ್ರಾಂ (mg/dL) ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಉತ್ತಮ.ಜರ್ನಲ್ ಆಫ್ ದಿ ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ (JACC)ನಲ್ಲಿ ಪ್ರಕಟವಾದ ರಕ್ತದ CHOLESTEROL ಅನ್ನು ನಿರ್ವಹಿಸುವ 2018ರ ಮಾರ್ಗಸೂಚಿಗಳಲ್ಲಿ ವಯಸ್ಕರಿಗೆ CHOLESTEROL ಮಟ್ಟ ಎಷ್ಟಿರಬೇಕು ಎಂಬುದನ್ನು ವಿವರವಾಗಿ ತಿಳಿಸಲಾಗಿದೆ.
Cholesterol level in children: ಮಕ್ಕಳಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಲು ಅನೇಕ ಕಾರಣಗಳಿವೆ. ಇವುಗಳಲ್ಲಿ ದೈಹಿಕ ಚಟುವಟಿಕೆ, ಪೌಷ್ಟಿಕ-ಭರಿತ ಆಹಾರ ಸೇವಿಸುವುದು, ಅಧಿಕ ತೂಕ ಹೊಂದಿರುವುದು ಹಾಗೂ ಹೆಚ್ಚಿನ ಕೊಲೆಸ್ಟ್ರಾಲ್‌ಗೆ ಆನುವಂಶಿಕ ಕಾರಣವು ಸೇರಿವೆ. ಸಿಡಿಸಿ ಪ್ರಕಾರ, 9 ರಿಂದ 11 ವರ್ಷ ವಯಸ್ಸಿನ ಮಕ್ಕಳು ಹಾಗೂ 17 ರಿಂದ 21 ವರ್ಷ ವಯಸ್ಸಿನವರ ಕೊಲೆಸ್ಟ್ರಾಲ್ನ ಪರೀಕ್ಷೆ ಮಾಡಿಸಿಬೇಕು.
ಮಗುವಿನ ಕೆಟ್ಟ CHOLESTEROL 130 ಮಿಗ್ರಾಂ/ಡಿಎಲ್, ಅದಕ್ಕಿಂತ ಹೆಚ್ಚಿದ್ದರೆ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ. ಮಗುವಿನ ಟ್ರೈಗ್ಲಿಸರೈಡ್‌ಗಳ ಮಟ್ಟವು 200 mg/dL, ಅದಕ್ಕಿಂತ ಹೆಚ್ಚಿದ್ದರೆ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಮಕ್ಕಳಲ್ಲಿ CHOLESTEROL ಮಟ್ಟ ಕಡಿಮೆ ಮಾಡಲು ಆಹಾರ ಪದ್ಧತಿ ಬದಲಾಯಿಸುವುದು ಬಹಳ ಮುಖ್ಯವಾಗಿದೆ. ಮಕ್ಕಳು ವ್ಯಾಯಾಮ ಮಾಡುವುದು ಅವಶ್ಯವಾಗಿದೆ ಎನ್ನುತ್ತಾರೆ ತಜ್ಞರು.
ನಿರ್ಲಕ್ಷ್ಯ ಮಾಡಿದರೆ, ಮಧುಮೇಹ, ಬೊಜ್ಜು ಸೇರಿದಂತೆ ವಿವಿಧ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ. ಇದರಿಂದ ಮಕ್ಕಳ CHOLESTEROL ಮಟ್ಟ ಎಷ್ಟು ಇದೆ ಎಂಬುದನ್ನು ತಿಳಿಯಲು ಪರೀಕ್ಷೆ ಮಾಡಬೇಕಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಮಕ್ಕಳಲ್ಲಿನ CHOLESTEROL ಮಟ್ಟವು 170 ಮಿಗ್ರಾಂ/ಡಿಎಲ್ಗಿಂತ ಕಡಿಮೆ ಇರಬೇಕು.
Cholesterol level in women: ಹೃದಯದ ಆರೋಗ್ಯ ನಿರ್ಣಯಿಸಲು CHOLESTEROL ಮಟ್ಟವನ್ನು ಪರಿಶೀಲಿಸುವುದು ಮುಖ್ಯವಾಗಿದೆ. ರಕ್ತ ಪರೀಕ್ಷೆಯ ಸಮಯದಲ್ಲಿ ಒಟ್ಟು CHOLESTEROL ಮಟ್ಟ, ಕೆಟ್ಟ CHOLESTEROL ಹಾಗೂ ಒಳ್ಳೆಯ CHOLESTEROL ಮಟ್ಟವನ್ನು ಅಳೆಯಲಾಗುತ್ತದೆ. ರಕ್ತದಲ್ಲಿರುವ CHOLESTEROLನ ಅತ್ಯುತ್ತಮ ಮಟ್ಟವು ವ್ಯಕ್ತಿಯ ವಯಸ್ಸು, ಲಿಂಗ ಅವಲಂಬಿಸಿ ಬದಲಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ಮಹಿಳೆಯರಿಗೆ ಸಾಮಾನ್ಯವಾಗಿ ಪುರುಷರಿಗಿಂತ ಹೆಚ್ಚಿನ HDL (ಒಳ್ಳೆಯ) CHOLESTEROL ಇರಬೇಕಾಗುತ್ತದೆ. ಮಹಿಳೆಯರಲ್ಲಿ ಒಟ್ಟು CHOLESTEROL ಮಟ್ಟ 200 mg/dL, ಅದಕ್ಕಿಂತ ಕಡಿಮೆ ಇದ್ದರೆ ಉತ್ತಮ. ಒಳ್ಳೆಯ ಕೊಲೆಸ್ಟ್ರಾಲ್ (HDL) 55 mg/dL, ಅದಕ್ಕಿಂತ ಹೆಚ್ಚಿರಬೇಕು. ಕೆಟ್ಟ CHOLESTEROL (LDL) 100 mg/dL, ಅದಕ್ಕಿಂತ ಕಡಿಮೆ ಇದ್ದರೆ ಉತ್ತಮ.
Do you know how cholesterol is measured?: ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್‌ಗಳು (LDL) ರಕ್ತಪರಿಚಲನೆಯಿಂದ CHOLESTEROLನ್ನು ಸಾಗಿಸುತ್ತವೆ. ಹೆಚ್ಚಿನ ಪ್ರಮಾಣದಲ್ಲಿ LDL CHOLESTEROL ಇದ್ದರೆ, ಇದು ರಕ್ತನಾಳಗಳಲ್ಲಿ ಪ್ಲೇಕ್‌ಗಳನ್ನು ರೂಪಿಸುತ್ತದೆ. ಜೊತೆಗೆ ಹೃದಯ ಕಾಯಿಲೆಯ ಅಪಾಯ ಹೆಚ್ಚಿಸುತ್ತದೆ. ಇದನ್ನು ಕೆಟ್ಟ CHOLESTEROL ಎಂದು ಹೇಳುತ್ತಾರೆ.
ರಕ್ತದಲ್ಲಿನ ಒಟ್ಟು CHOLESTEROL ಪ್ರಮಾಣ ಅಳೆಯಲು ಆರೋಗ್ಯ ವೃತ್ತಿಪರರು ಲಿಪಿಡ್ ಪ್ಯಾನಲ್ ಬ್ಲಡ್ ಟೆಸ್ಟ್ ಮಾಡುತ್ತಾರೆ. ಇದನ್ನು ಒಟ್ಟು CHOLESTEROL ಮಟ್ಟ ತಿಳಿಯಲು ಸಾಧ್ಯಗುತ್ತದೆ. ಇದರಿಂದ ಮೂರು ಲಿಪಿಡ್‌ಗಳನ್ನು ಹೊಂದಿರುತ್ತದೆ. ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್‌ಗಳು (HDL) ಹೃದಯ ಕಾಯಿಲೆಯಿಂದ ನಿಮ್ಮನ್ನು ರಕ್ಷಿಸುತ್ತವೆ.
ಟ್ರೈಗ್ಲಿಸರೈಡ್ಸ್ ನಿಮ್ಮ ದೇಹದಲ್ಲಿ ಸಂಗ್ರಹವಾಗುವ ಮತ್ತೊಂದು ರೀತಿಯ ಕೊಬ್ಬು ಆಗಿರುತ್ತದೆ. ಹೆಚ್ಚಿನ ಮಟ್ಟದ ಟ್ರೈಗ್ಲಿಸರೈಡ್‌ಗಳು ಮತ್ತು ಕಡಿಮೆ ಮಟ್ಟದ HDL ನಿಮ್ಮ ಹೃದಯ ಕಾಯಿಲೆಯ ಅಪಾಯ ಹೆಚ್ಚಿಸುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ಇದನ್ನು ಓದಿರಿ : SUPPORT PRICE FOR TUR DAL : ತೊಗರಿಗೆ ರಾಜ್ಯ ಸರ್ಕಾರದಿಂದ ಕ್ವಿಂಟಾಲ್ಗೆ ಹೆಚ್ಚುವರಿ ₹450 ಬೆಂಬಲ ಬೆಲೆ