ಜಾಗತಿಕವಾಗಿ, ಪ್ರಾಚೀನವಾದ ಮತ್ತು ಸ್ವತಂತ್ರವಾದ ಸಾಹಿತ್ಯಿಕ ಪರಂಪರೆಯಿದ್ದು, ಲಿಖಿತ ಕೃತಿಗಳನ್ನು ಹೊಂದಿದ ಭಾಷೆಗಳನ್ನು ಶಾಸ್ತ್ರೀಯ ಭಾಷೆಗಳೆಂದು ಪರಿಗಣಿಸಲಾಗುತ್ತದೆ.
2004ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರವು, ಭಾರತೀಯ ಭಾಷೆಗಳಿಗೆ ಶಾಸ್ತ್ರೀಯ ಮಾನ್ಯತೆಯನ್ನು ನೀಡುವ ಕ್ರಮವನ್ನು ಆರಂಭಿಸಿತು.
ಲ್ಯಾಟಿನ್ ಅಥವಾ ಸಂಸ್ಕೃತದಂತೆ, ಆಡುಭಾಷೆಯಾಗಿ ಬಳಕೆಯಲ್ಲಿ ಉಳಿದಿರುವುದಿಲ್ಲ ಅಥವಾ ಈಗ ಚಾಲ್ತಿಯಲ್ಲಿರುವ ಭಾಷೆ ಪ್ರಾಚೀನ ಆವೃತ್ತಿಗಿಂತ ಭಿನ್ನವಾಗಿರುತ್ತದೆ.
ಭಾರತದ ಇನ್ನೂ ಐದು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನಗಳನ್ನು ನೀಡಿರುವುದಾಗಿ ಕೇಂದ್ರ ಸರ್ಕಾರವು ಈ ತಿಂಗಳ ಆರಂಭದಲ್ಲಿ ಪ್ರಕಟಿಸಿದೆ.
ಮರಾಠಿ, ಬಂಗಾಳಿ, ಅಸ್ಸಾಮಿ, ಪಾಳಿ ಮತ್ತು ಪ್ರಾಕೃತ ಭಾಷೆಗಳಿಗೆ ಭಾಷೆಯೊಂದನ್ನು ಶಾಸ್ತ್ರೀಯವೆಂದು ಪರಿಗಣಿಸುವುದಕ್ಕೆ ಇರಬೇಕಾದ ಮಾನದಂಡದಲ್ಲಿ ಕೊಂಚ ಹೊಂದಾಣಿಕೆ ಮಾಡಿಕೊಂಡು ಈ ಹೊಸ ಮಾನ್ಯತೆಯನ್ನು ಪ್ರಕಟಿಸಲಾಗಿದೆ.
ಆಯಾ ಭಾಷೆಗಳಲ್ಲಿ (Benefits of Classical Languages) ಹೆಚ್ಚಿನ ಸಂಶೋಧನೆ, ಅನುವಾದಗಳು ನಡೆದು, ಭಾಷೆಯ ಭವಿಷ್ಯದ ಬಗೆಗೆ ಹೆಚ್ಚಿನ ಭರವಸೆ ಮೂಡುವುದೆನ್ನುವುದು ವಿದ್ವಾಂಸರು ಮತ್ತು ಶಿಕ್ಷಣ ತಜ್ಞರ ನಿರೀಕ್ಷೆಯನ್ನು ಹೊಂದಿದೆ.
ಆ ಭಾಷೆಯ ಪ್ರಾಚೀನ ಶಾಸನ, ಗ್ರಂಥಗಳು ಅಥವಾ ದಾಖಲಿಸಲಾದ ಚರಿತ್ರೆಯು ಸಾವಿರಾರು ವರ್ಷಗಳ ಹಿಂದಿನದ್ದಾಗಿರಬೇಕು; ಬಹಳಷ್ಟು ತಲೆಮಾರುಗಳಿಂದ ಆ ಭಾಷೆಯನ್ನು ಬಳಸುತ್ತಿರುವವರು ಮೌಲಿಕ ಪರಂಪರೆಯೆಂದು ಪರಿಗಣಿಸುವಂಥ ಪ್ರಾಚೀನ ಸಾಹಿತ್ಯ ಅದಕ್ಕಿರಬೇಕು; ಆ ಭಾಷೆಯ ಸಾಹಿತ್ಯಿಕ ಪರಂಪರೆಯು ಸ್ವಂತದ್ದಾಗಿದ್ದು, ಇತರ ಭಾಷೆಗಳಿಂದ ಎರವಲು ಪಡೆದಿದ್ದಾಗಿರಬಾರದು ಎಂಬ ಈ ಮೂರೂ ಮುಖ್ಯ ಮಾನದಂಡಗಳನ್ನು ಇರಿಸಿಕೊಳ್ಳಲಾಗಿತ್ತು.
ಆ ಭಾಷೆಯು ಕಾಲಾಂತರದಲ್ಲಿ ಅವಿಚ್ಛಿನ್ನವಾಗಿಲ್ಲದೆ ಇರಬಹುದು ಎನ್ನುವುದರ ಜತೆಗೆ, ಹಿಂದಿನ ನಿಯಮಗಳನ್ನು ಅಂತೆಯೆ ಉಳಿಸಿಕೊಳ್ಳಲಾಗಿತ್ತು. ಈ ನಿಯಮಗಳ ಅಡಿಯಲ್ಲಿ ಸಂಸ್ಕೃತ, ತೆಲುಗು, ಕನ್ನಡ, ಮಲಯಾಳಂ ಮತ್ತು ಒಡಿಯಾ ಭಾಷೆಗಳಿಗೆ ಶಾಸ್ತ್ರೀಯ ಮಾನ್ಯತೆ ನೀಡಲಾಗಿತ್ತು.
ಈ ಆಧಾರದ ಮೇಲೆ, ಮೊಟ್ಟಮೊದಲಿಗೆ ತಮಿಳು ಭಾಷೆಗೆ ಶಾಸ್ತ್ರೀಯ ಮಾನ್ಯತೆಯನ್ನು ನೀಡಲಾಯಿತು. 2005ರಲ್ಲಿ, ಈ ಮಾನದಂಡಗಳಲ್ಲಿ ಕೆಲವು ಪರಿಷ್ಕರಣೆಗಳನ್ನು ತರಲಾಯಿತು. ಶಾಸ್ತ್ರೀಯ ಮಾನ್ಯತೆ ಪಡೆಯಬಯಸುವ ಭಾಷೆಗಳಿಗೆ 1500ರಿಂದ 2000 ವರ್ಷಗಳಷ್ಟು ಸುದೀರ್ಘವಾದ ಇತಿಹಾಸ ದಾಖಲಾಗಿರಬೇಕು.
2024 ರ ಜುಲೈನಲ್ಲಿ, ಮಹಾರಾಷ್ಟ್ರದಲ್ಲಿದ್ದ ಪೃಥ್ವಿರಾಜ್ ಚವಾಣ್ ನೇತೃತ್ವದ ಕಾಂಗ್ರೆಸ್ ಸರ್ಕಾರವು, ಕೇಂದ್ರದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿದ್ದ ಮೋದಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. 2024ರ ಜುಲೈನಲ್ಲಿ ಶಾಸ್ತ್ರೀಯ ಭಾಷೆಯ ನಿಯಮಕ್ಕೆ ಇನ್ನಷ್ಟು ತಿದ್ದುಪಡಿಯನ್ನು ತರಲಾಯಿತು.
2024 ರಲ್ಲಿ ಭಾಷೆಯ ಸಾಹಿತ್ಯಿಕ ಪರಂಪರೆಯು ಸ್ವಂತದ್ದಾಗಿದ್ದು, ಇತರ ಭಾಷೆಗಳಿಂದ ಎರವಲು ಪಡೆದಿದ್ದಾಗಿರಬಾರದು ಎಂಬ ನಿಯಮವನ್ನು ಕೇಂದ್ರ ಭಾಷಾ ತಜ್ಞರ ಸಮಿತಿಯು ಸಡಿಲಿಸಿತು.
ಕ್ರಿ.ಪೂ. 3-4ನೇ ಶತಮಾನಗಳಿಂದ ಬಂಗಾಳಿ ಭಾಷೆ ಅಸ್ತಿತ್ವದಲ್ಲಿದ್ದ ಬಗ್ಗೆ ವಿವರ ವರದಿಯನ್ನು ಸಲ್ಲಿಸಿ, ಶಾಸ್ತ್ರೀಯ ಮಾನ್ಯತೆಯನ್ನು ಪಶ್ಚಿಮಬಂಗಾಳ ಸರ್ಕಾರವೂ 2024ರ ಆದಿಯಲ್ಲಿ ಕೋರಿತ್ತು.
ಶಾಸ್ತ್ರೀಯ ಭಾಷೆ ಎನಿಸಿಕೊಳ್ಳುವುದಕ್ಕೆ ಪ್ರಾಚೀನ ಶಿಲಾಶಾಸನಗಳು, ತಾಮ್ರಫಲಕಗಳು, ಪದ್ಯ-ಗದ್ಯದ ಸಾಹಿತ್ಯಗಳನ್ನು ಒಳಗೊಂಡ ಜ್ಞಾನಭಂಡಾರವಿರಬೇಕು. ಜತೆಗೆ, ತನ್ನ ಪ್ರಾಚೀನ ಆವೃತ್ತಿಗಿಂತ ಈಗಿನದು ಭಿನ್ನವಾಗಿ ʻಇರಬಹುದುʼ ಎಂದು ಹೇಳಿತು.
ಈ ಹೊಸ ನಿಯಮವು ಮರಾಠಿಗೆ ಮಾತ್ರವಲ್ಲ, ಬಂಗಾಳಿ ಮತ್ತು ಅಸ್ಸಾಮಿ ಭಾಷೆಗಳಿಗೂ ಶಾಸ್ತ್ರೀಯ ಮಾನ್ಯತೆ ಒದಗಿಸಿತು. ಮೂರನೇ ಶತಮಾನದಲ್ಲೇ ಅಸ್ಸಾಮಿ ಭಾಷೆ ಅಸ್ತಿತ್ವದಲ್ಲಿ ಇದ್ದ ಬಗ್ಗೆ ಶಿಲಾಶಾಸನಗಳು, ತಾಮ್ರಫಲಕಗಳು, ಸಂಚೀಪತ್ರಗಳು ಮತ್ತು ಜನಪದ ಆಧಾರಗಳನ್ನು ಸಂಸ್ಕೃತಿ ಸಚಿವಾಲಯಕ್ಕೆ ಒದಗಿಸಿರುವುದಾಗಿ ಅಸ್ಸಾಂ ಭಾಷಾ ತಜ್ಞರು ಹೇಳುತ್ತಾರೆ.