spot_img
spot_img

ರಾಜ್ಯದಲ್ಲಿ ಸರ್ಕಾರೀ ‘ಭೂಮಿ’ಯಲ್ಲಿ ಮನೆ ನಿರ್ಮಾಣ : ‘ಸಕ್ರಮ’ಕ್ಕಿದೆ ಅವಕಾಶ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಂಗಳೂರು: ರಾಜ್ಯದಲ್ಲಿ ಅನೇಕರು ಸರ್ಕಾರಿ ಭೂಮಿಯಲ್ಲಿ ವಾಸದ ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಇಂತಹ ಜನರು ಸಕ್ರಮಕ್ಕಾಗಿ, ತಾವು ವಾಸಿಸುತ್ತಿರುವಂತ ಮನೆಯ ಭೂಮಿ ಸರ್ಕಾರಿ ಜಾಗವಾಗಿದ್ದರೂ, ತಮ್ಮ ಹೆಸರಿಗೆ ಮಂಜೂರಾತಿ ಪಡೆಯಲು ನಿಯಮಗಳ ಅಡಿಯಲ್ಲಿ ಅವಕಾಶವಿದೆ.
ಈ ಕುರಿತಂತೆ ತಹಶೀಲ್ದಾರರ ಕೈಪಿಡಿ ಪುಸ್ತಕದಲ್ಲಿ ಮಾಹಿತಿಯನ್ನು ನೀಡಲಾಗಿದೆ. ರಾಜ್ಯದಲ್ಲಿ ಸರ್ಕಾರಿ ಭೂಮಿಯಲ್ಲಿ ಅತಿಕ್ರಮವಾಗಿ ವಾಸದ ಮನೆಯನ್ನು ದಿನಾಂಕ 14-04-1998ರ ಪೂರ್ವಭಾವಿಯಾಗಿ ನಿರ್ಮಿಸಿದ್ದರೇ, ನಿಗದಿತ ನಮೂನೆ 1ರಲ್ಲಿ ಸಕ್ಷಮ ಪ್ರಾಧಿಕಾರಿಗೆ, ವಾಸದ ಮನೆಯ ಕಟ್ಟಡ ನಿರ್ಮಿಸಿರುವ ವಿಸ್ತೀರ್ಣದ ಭೂಮಿಯನ್ನು ಸಕ್ರಮೀಕರಣಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಕರ್ನಾಟಕ ( ವಾಸದ ಮನೆ ನಿಯಮ) ಭೂ ಮಂಜೂರಾತಿ ನಿಯಮಗಳು 1999ರ ಕಲಂ 94 (ಸಿ) ಅಡಿಯಲ್ಲಿ ಸಕ್ರಮೀಕರಣಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ ಅಂತ ನಿಯಮದಲ್ಲೇ ಹೇಳಲಾಗಿದೆ.
ಬೆಂಗಳೂರು ಮಹಾನಗರ ಪಾಲಿಕೆಗಳ ವ್ಯಾಪ್ತಿಯ 18 ಕಿಲೋ ಮೀಟರ್ ವ್ಯಾಪ್ತಿಯ ಸರಹದ್ದಿನ ಸರ್ಕಾರಿ ಜಮೀನುಗಳಲ್ಲಿ ನೀವು ವಾಸದ ಮನೆ ನಿರ್ಮಿಸಿಕೊಂಡಿದ್ದರೇ, ಜಿಲ್ಲಾಧಿಕಾರಿಗಳು(ನಗರ), ಬೆಂಗಳೂರು ಜಿಲ್ಲೆ ಇವರು ಸಕ್ಷಮ ಪ್ರಾಧಿಕಾರಿಗಳಾಗಿರುತ್ತಾರೆ. ಇವರಿಗೆ ನೀವು ಅರ್ಜಿಯನ್ನು ಸಕ್ರಮೀಕರಣಕ್ಕೆ ಸಲ್ಲಿಸಬಹುದು.
ಬೆಂಗಳೂರು ಜಿಲ್ಲೆಯ ನಗರಸಭೆ ವ್ಯಾಪ್ತಿಯೊಳಗಿನ ಜಮೀನುಗಳಲ್ಲಿ ವಾಸದ ಮನೆ ನಿರ್ಮಿಸಿಕೊಂಡಿದ್ದರೇ ಜಿಲ್ಲಾಧಿಕಾರಿಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರು ಸಕ್ಷಮ ಪ್ರಾಧಿಕಾರಿಗಳು.
ಇತರೆ ಜಿಲ್ಲೆಗಳ ನಗರಸಭೆಯ ವ್ಯಾಪ್ತಿಯೊಳಗಿನ ಜಮೀನುಗಳಲ್ಲಿ ನೀವು ವಾಸದ ಮನೆ ನಿರ್ಮಿಸಿಕೊಂಡಿದ್ದರೇ, ಜಿಲ್ಲಾಧಿಕಾರಿಗಳಿಗೆ ಸಕ್ರಮಕ್ಕೆ, ಸರ್ಕಾರಿ ಭೂಮಿ ಮಂಜೂರಾತಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಪುರಸಭೆ ವ್ಯಾಪ್ತಿಯೊಳಗಿನ ಜಮೀನುಗಳಿಗೆ ಉಪ ವಿಭಾಗಾಧಿಕಾರಿಗಳು ಸಕ್ಷಮ ಪ್ರಾಧಿಕಾರಿಗಳು. ಅವರಿಗೆ ಸಕ್ರಮಕ್ಕೆ ಅರ್ಜಿ ಸಲ್ಲಿಸಬಹುದು.
ಇನ್ನು ಪುರಸಭೆಯ ವ್ಯಾಪ್ತಿಯ ಹೊರಗೆ, ತಾಲ್ಲೂಕಿನಲ್ಲಿ ಇತರೆ ಗ್ರಾಮಾಂತರ ಜಮೀನುಗಳಲ್ಲಿ ವಾಸದ ಮನೆ ನಿರ್ಮಿಸಿಕೊಂಡಿದ್ದರೇ ತಹಶೀಲ್ದಾರರು ಸಕ್ಷಮ ಪ್ರಾಧಿಕಾರಿಗಳು.
ಕಲಂ 94(ನಿ) ಅನ್ವಯ, ದಿನಾಂಕ 1-1-2002 ರೊಳಗಾಗಿ ನಿಗದಿತ ನಮೂನೆ 1ರಲ್ಲಿ ರೂ. 50ರ ಶುಲ್ಕದೊಂದಿಗೆ, ಪ.ಜಾತಿ/ಪ. ವರ್ಗದವರಾದಲ್ಲಿ ರೂ. 5ರ ಶುಲ್ಕದೊಂದಿಗೆ, ಜಮೀನಿನ ನಕ್ಷೆ ಮತ್ತು ಅನಧಿಕೃತ ನಿರ್ಮಾಣದ ಕಟ್ಟಡದ ನಕ್ಷೆಯೊಂದಿಗೆ, ತಹಶೀಲ್ದಾರ್‌ರವರಿಗೆ ಜಿಲ್ಲಾಧಿಕಾರಿಗಳು ಪ್ರತಿ ಪ್ರಕರಣದಲ್ಲಿ ಗ್ರಾಮದಲ್ಲಿ ವಿಚಾರಣೆ ನಡೆಸಲು ದಿನಾಂಕ ನಿಗದಿಪಡಿಸಿ ನಮೂನೆ 2ರಲ್ಲಿ ಅರ್ಜಿದಾರರಿಗೆ ನೋಟೀಸು ನೀಡಿ, ಅಗತ್ಯ ದಾಖಲೆ ಹಾಜರಪಡಿಸಬೇಕು.
ಟಾಂ ಟಾಂ ಮೂಲಕ ವಿಚಾರಣೆ ನಡೆಸುವ ದಿನಾಂಕ ಸಾರ್ವಜನಿಕರಿಗೆ ತಿಳಿಯಪಡಿಸಿ, ಸ್ಥಳೀಯ ಗ್ರಾಮಸ್ಥರ ಸಮ್ಮುಖದಲ್ಲಿ ವಿಚಾರಣೆ ನಡೆಸುವುದು.
1. ಅನಧಿಕೃತ ಕಟ್ಟಡ ನಿರ್ಮಾಣ ಜಮೀನು ಸಕ್ರಮ ಕೋರಿರುವ ಅರ್ಜಿದಾರ, ಕುಟುಂಬದ ಹೆಸರಿನಲ್ಲಿ ಯಾವುದೇ ಗ್ರಾಮದಲ್ಲಿ ವಾಸದ ಮನೆ ಹೊಂದಿರಕೂಡದು.
2.ಅರ್ಜಿದಾರರು ಅಥವಾ ಕುಟುಂಬದವರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಮನೆಯ ನಿವೇಶನ ಮಂಜೂರಾತಿಗೆ ಅರ್ಹರಲ್ಲ.
3. ಸಮೀಕರಣದ ಮಂಜೂರಾತಿ ಜಮೀನು ಕನಿಷ್ಠ 15 ವರ್ಷದವರೆಗೂ ಪರಭಾರೆ ಮಾಡುವಂತಿಲ್ಲ. 4. ಮಂಜೂರಾದ ಜಮೀನು ವಾಸದ ಉದ್ದೇಶಕ್ಕೆ ಹೊರತುಪಡಿಸಿ ಇತರೇ ಉದ್ದೇಶಗಳಿಗೆ ಬಳಸುವಂತಿಲ್ಲ.
5. ಮಂಜೂರಾತಿ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಜಿಲ್ಲಾಧಿಕಾರಿಗಳ ಆದೇಶದನ್ವಯ ಜಮೀನು, ಯಾವುದೇ ಪರಿಹಾರ ನೀಡದೇ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದು. 6. ಸರ್ಕಾರದ ಪೂರ್ವ ಅನುಮತಿ ಪಡೆದು, ವಿಧಿಸುವ ಷರತ್ತುಗಳಿಗೊಳಪಟ್ಟ ಪರಭಾರೆಗೆ ಅವಕಾಶ ನೀಡಬಹುದು.
7. ಇತರೇ ವಾಸದ ಮನೆ ನಿವೇಶನ ಹೊಂದಲು ಪರಭಾರೆ ಮಾಡಲು ಸಕಾರಣವಿದ್ದಲ್ಲಿ ಅನುಮತಿಸಬಹುದು.
ಎಂಬ ಹಲವು ಷರತ್ತುಗಳನ್ನು ಹೊಂದಿದ್ದಾರೆ.
ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ ವಾಸದ ಮನೆಯನ್ನು ದಿನಾಂಕ 14-04-1998 ರೊಳಗೆ ನಿರ್ಮಿಸಿದ್ದರೆ ಮಾತ್ರ ಕಟ್ಟಡ ನಿರ್ಮಿಸಿದ ವಿಸ್ತೀರ್ಣದ ಭೂಮಿಯನ್ನು ಸಕ್ರಮೀಕರಣಕ್ಕಾಗಿ ಕಾಲಂ 94 ಸಿ ಅಡಿಯಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇರುತ್ತದೆ. ಅದರ ಹೊರತಾಗಿ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಜಾತಿ ತಾರತಮ್ಯ ತೀವ್ರವಾಗಿದ್ದು, ನಿರ್ದೇಶಕರನ್ನು ವಜಾಗೊಳಿಸಿ: ವಿದ್ಯಾರ್ಥಿಗಳ ಆಗ್ರಹ

ಬೆಂಗಳೂರು:ಅಖಿಲ ಭಾರತ ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಸಂಘ (AIOBCSA), ಡಾ ಬಿಆರ್ ಅಂಬೇಡ್ಕರ್ ಅಸೋಸಿಯೇಷನ್ ​​ಆಫ್ ಇಂಜಿನಿಯರ್ಸ್ (BANAE), ಮತ್ತು ಒಬಿಸಿ ಫೆಡರೇಶನ್...

ಉತ್ತರ ಭಾರತಕ್ಕೂ ಕಾಲಿಟ್ಟ ನಂದಿನಿ; ದೆಹಲಿಯಲ್ಲಿ Nandini Products ಬಿಡುಗಡೆ

ನವದೆಹಲಿ: ಕರ್ನಾಟಕದ ನಂದಿನಿ ಹಾಲು ಉತ್ಪನ್ನ ಇದೀಗ ಉತ್ತರ ಭಾರತದಲ್ಲೂ ತನ್ನ ಮಾರುಕಟ್ಟೆ ವ್ಯಾಪ್ತಿ ವಿಸ್ತರಿಸಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕರ್ನಾಟಕ ಹಾಲು ಒಕ್ಕೂಟದ...

ಸರ್ಕಾರಿ ನೌಕರರು, IT ಪಾವತಿದಾರರ BPL ಕಾರ್ಡ್ ಮಾತ್ರ ರದ್ದು, ಅರ್ಹರ ಕಾರ್ಡ್​ ರದ್ದಾಗಿದ್ದರೆ ತಕ್ಷಣ ವಾಪಸ್ ನೀಡಿ: ಸಿಎಂ

ಬೆಂಗಳೂರು: ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಪಡಿತರ ಚೀಟಿ (ಬಿಪಿಎಲ್ ಕಾರ್ಡ್)​ ರದ್ದುಗೊಳಿಸುವಿಕೆ ವಿವಾದಕ್ಕೆ ಗುರಿಯಾಗಿದೆ. ಈ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದೆ. ಸರ್ಕಾರಿ ನೌಕರರು ಮತ್ತು...

100, 200, 500 ಅಲ್ಲ ಬರೋಬ್ಬರಿ 20 ಲಕ್ಷ ರೂಪಾಯಿ ನೋಟಿನ ಸುರಿಮಳೆ

100, 200, 500 ರೂಪಾಯಿ ಗರಿ, ಗರಿ ನೋಟು. ಅಬ್ಬಾ.. ಏನಿದು ಮಳೆಯಂತೆ ಆಕಾಶದಿಂದ ತೇಲಿ ಬರುತ್ತಿದೆ ಅಂತ ಅಂದುಕೊಳ್ಳಬೇಡಿ. ಇದು ನಿಜವಾದ ನೋಟಿನ...