spot_img
spot_img

ಜಗತ್ತಿಗೆ ಕೊರೊನಾ ಆಯ್ತು ಈಗ ಮಂಕಿ ಫಾಕ್ಸ್​ ಭಯ; ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು? ಇದರ ಲಕ್ಷಣವೇನು?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಹೇ ಸೀತಾರಾಮ್‌ ನ್ಯೂಸ್‌ ಡೆಸ್ಕ್‌ –ಇಡೀ ವಿಶ್ವ ಒಂದು ಬಾರಿಯಲ್ಲ ಎರಡೆರಡು ಬಾರಿ ಕೊರೊನಾ ಎಂಬ ಹೆಮ್ಮಾರಿಯಿಂದ ತತ್ತರಿಸಿ ಹೋಗಿದ್ದು ಈ ಶತಮಾನದ ಕರಾಳ ಇತಿಹಾಸ. ಇಡೀ ಜಗತ್ತೇ ನಿಷ್ಕ್ರೀಯವಾಗಿ, ಸ್ತಬ್ಧಗೊಂಡಿತ್ತು ಆ ಸಮಯದಲ್ಲಿ ಲಕ್ಷ, ಲಕ್ಷ ಸಂಖ್ಯೆಯಲ್ಲಿ ಜನರು ಸಾವನ್ನಪ್ಪಿದ್ದರು. ಈಗ ಮತ್ತೊಂದು ಭೀಕರ ಹೆಮ್ಮಾರಿ ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯೂ ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.ಇದನ್ನೂ ಓದಿ:Priyank Kharge ಮನೆ ನೆಲಸಮಗೊಳಿಸಲು Siddalinga Swamiji ಸವಾಲ್?

ಎಮ್ ಫಾಕ್ಸ್ ಅಥವಾ ಮಂಕಿ ಫಾಕ್ಸ್ ಸೋಂಕು ಈಗ ಆಫ್ರಿಕಾದ ಬಳಿಕ ಪಾಕಿಸ್ತಾನದಲ್ಲಿಯೂ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಪಾಕಿಸ್ತಾನದಲ್ಲಿ ಈಗಾಗಲೇ ಮೂವರಲ್ಲಿ ಮಂಕಿಫಾಕ್ಸ್​ ಸೋಂಕು ದೃಢವಾಗಿದೆ. ಯುಎಇ ಯಿಂದ ಪಾಕಿಸ್ತಾನಕ್ಕೆ ಬಂದ ಮೂವರಲ್ಲಿ ಮಂಕಿ ಫಾಕ್ಸ್ ದೃಢಗೊಂಡಿದ್ದು. ಈ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುವ ಕಾರಣ ಆತಂಕವಂತೂ ಉದ್ಭವಿಸಿದೆ.

ಮೊದಲಿಗೆ ಆಫ್ರಿಕಾದಲ್ಲಿ ಕಂಡು ಬಂದ ಮಂಕಿಫಾಕ್ಸ್​ 504 ಜನರನ್ನು ಈಗಾಗಲೇ ಬಲಿ ಪಡೆದಿದೆ.ಆಫ್ರಿಕಾ, ಸ್ವೀಡನ್ ಬಳಿಕ ಈಗ ಪಾಕಿಸ್ತಾನಕ್ಕೆ ಎಂಟ್ರಿ ಕೊಟ್ಟಿರುವ ಮಂಕಿಫಾಕ್ಸ್​ ಜಾಗತಿಕವಾಗಿ ಆತಂಕ ಸೃಷ್ಟಿಸಿದೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಈ ಮಂಕಿ ಫಾಕ್ಸ್​ನ್ನು ವರ್ಲ್ಡ್ ಹೆಲ್ತ್​ ಎಮರ್ಜೆನ್ಸಿ ಎಂದು ಘೋಷಿಸಿದೆ. ಈಗಾಗಲೇ ಈ ಕಾಯಿಲೆ 117ಕ್ಕೂ ಹೆಚ್ಚು ದೇಶಗಳಿಗೆ ಈ ಕಾಯಿಲೆ ಹರಡಿದ್ದು ದೊಡ್ಡ ಚಿಂತೆಗೆ ಕಾರಣವಾಗಿದೆ.

ಏನಿದು ಮಂಕಿ ಫಾಕ್ಸ್?
ಮಂಕಿ ಫಾಕ್ಸ್ ಅಂದ್ರೆ ಅದು ಕೂಡ ಒಂದು ವೈರಲ್ ಇನ್​ಫೆಕ್ಷನ್​. ಇದು ಸಾಮಾನ್ಯವಾಗಿ ಮನುಷ್ಯರು ಮತ್ತು ಪ್ರಾಣಿಗಳಲ್ಲಿ ಕಾಣ ಸಿಗುತ್ತದೆ. ಇದು ಸ್ಮಾಲ್​ ಫಾಕ್ಸ್​​ನ ಮತ್ತೊಂದು ತಳಿ ಇದ್ದಂತೆ. ಈಗಾಗಲೇ ಸ್ಮಾಲ್ ಫಾಕ್ಸ್​ನ್ನು ನಿರ್ಮೂಲನೆ ಮಾಡಲಾಗಿದೆ. ಅದರ ತಳಿಯಾಗಿರುವ ಈ ಮಂಕಿ ಫಾಕ್ಸ್ ಈಗ ಆತಂಕ ಸೃಷ್ಟಿಸಿದೆ. ಮಂಕಿ ಫಾಕ್ಸ್ ಅನ್ನೋದು ಚರ್ಮಕ್ಕೆ ಸಂಬಂಧಿಸಿದ ಸೋಂಕು. ಚರ್ಮದ ಮೇಲೆ ಗುಳ್ಳೆಗಳು ಏಳಲು ಶುರುವಾಗುತ್ತವೆ. ನಂತರ ಇಡೀ ಮೈಗೆ ವ್ಯಾಪಿಸಿಕೊಂಡು ಮೊಡವೆಗಳಲ್ಲಿ ಕೀವು ತುಂಬಿ ಇಲ್ಲದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: Russia VS Ukraine: ಪರಿಸ್ಥಿತಿ ಕೆಡುತ್ತಿದೆ! ಏನು ಹೇಳುತ್ತಿದೆ Russia?

ಇದು ಮೊದಲ ಬಾರಿ 1958ರಲ್ಲಿ ಕಂಡು ಹಿಡಿಯಲಾಗಿತ್ತು. ಕೋತಿಗಳ ಮೇಲೆ ನಡೆದ ಅನೇಕ ಸಂಶೋಧನೆಗಳು ಇಂಥಹದೊಂದು ರೋಗ ಇದೆ ಅನ್ನೋದನ್ನು ತಿಳಿಸಿತ್ತು. 1970ರಲ್ಲಿ ಕಾಂಗೋದಲ್ಲಿ 9 ತಿಂಗಳ ಮಗುವಿನಲ್ಲಿ ಮೊಟ್ಟ ಮೊದಲ ಬಾರಿಗೆ ಈ ಕಾಯಿಲೆ ಕಾಣಿಸಿಕೊಂಡಿತ್ತು.

ಪ್ರಾಣಿಗಳ ಕಡಿತದಿಂದ, ಅವುಗಳ ಉಗುರಿನಿಂದ ಪರಚುವುದರಿಂದ, ಇಲ್ಲವೇ ಸೋಂಕು ಕಾಣಿಸಿಕೊಂಡವರೊಂದಿಗಿನ ಸಂಪರ್ಕದಿಂದ ಈ ಸೋಂಕು ತಗಲುತ್ತದೆ. ಸ್ನಾಯುಗಳಲ್ಲಿ ವಿಪರೀತ ನೋವು. ಮುಖ, ಕೈ, ಕಾಲುಗಳಲ್ಲಿ ಸೇರಿ ದೇಹದ ಹಲವು ಭಾಗಗಳಲ್ಲಿ ಗುಳ್ಳೆಗಳು ಏಳುತ್ತವೆ. ಈ ರೀತಿಯ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಮನೆಯಲ್ಲಿ ಕುಟುಂಬದವರೊಂದಿಗೆ ಸಂಪರ್ಕದಿಂದ ದೂರವಿರಿ.

WhatsApp Group Join Now
Telegram Group Join Now
Instagram Account Follow Now
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...