ಹೇ ಸೀತಾ ರಾಮ್ ನ್ಯೂಸ್ ಡೆಸ್ಕ್ :70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಘೋಷಣೆಯಾಗಿದ್ದು, ಒಂದಲ್ಲಾ, ಎರಡಲ್ಲಾ ಮೂರು ಪ್ರಶಸ್ತಿಗಳು ಬಂದಿವೆ. ಅದರಲ್ಲಿ ಎರಡು ಪ್ರಶಸ್ತಿಗಳು ಕಾಂತಾರ ತಂಡದ ಪಾಲಾಗಿದೆ. ಮತ್ತೊಂದು ಪ್ರಶಸ್ತಿ ಕೆಜಿಎಫ್ ತಂಡಕ್ಕೆ ಸಿಕ್ಕಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದ್ದು, ಕಾಂತಾರ ಸಿನಿಮಾಗೆ ಮನರಂಜನಾ ಸಿನಿಮಾ ಪ್ರಶಸ್ತಿಗೆ ದೊರೆತಿದೆ.
ಇದನ್ನೂ ಓದಿ : ಜಗತ್ತಿಗೆ ಕೊರೊನಾ ಆಯ್ತು ಈಗ ಮಂಕಿ ಫಾಕ್ಸ್ ಭಯ; ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು? ಇದರ ಲಕ್ಷಣವೇನು
ರಾಷ್ಟ್ರೀಯ ಪ್ರಶಸ್ತಿ ಸಿಕ್ಕ ಖುಷಿಯಲ್ಲಿ ರಿಷಬ್ ಶೆಟ್ಟಿ ಖಾಸಗಿ ವಾಹಿನಿ ಜೊತೆಗೆ ಮಾತನಾಡಿದ್ದಾರೆ. ಈ ವೇಳೆ ಕಾಂತಾರ ಸಿನಿಮಾವನ್ನು ನಟ ಪುನೀತ್ ರಾಜ್ಕುಮಾರ್ಗೆ ಅರ್ಪಿಸಿರುವ ಬಗ್ಗೆ ನೆನಪಿಸಿಕೊಂಡಿದ್ದಾರೆ.
ಖಾಸಗಿ ವಾಹಿನಿ ಜೊತೆಗೆ ಮಾತನಾಡಿದ ಡಿವೈನ್ ಸ್ಟಾರ್, ನಾನು ನಟನಾಗಿರಬಹುದು, ನಿರ್ದೇಶಕನಾಗಿರಬಹುದು. ಈ ಎಲ್ಲಾ ಯಶಸ್ಸು ನನ್ನ ತಂಡಕ್ಕೆ ಸಲ್ಲುತ್ತೆ. ಕಾಂತಾರದ ಸಕಸ್ಸನ್ನು ಅಪ್ಪು ಸರ್ಗೆ, ದೈವ ನರ್ತಕರು ಮತ್ತು ಅವರು ಕುಟುಂಬ, ದೈವಕ್ಕೆ ನಾನು ಅರ್ಪಿಸಿದ್ದೆ. ಇದರ ಜೊತೆಗೆ ಕನ್ನಡ ಜನತೆಗೆ ಇಲ್ಲಿಯವರೆಗೆ ಬರಲು ಸಪೋರ್ಟ್ ಕೊಟ್ಟಿದ್ದಾರೆ. ಇಡೀ ತಂಡದ ಶ್ರಮ, ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಿಕೊಂಡು ಬಂದು ಇವತ್ತು ಕೂಡ ನಾನು ಅದೇ ಟೀಂ ಜೊತೆಗೆ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.