Mulbagal Crop News
ಮಳೆಯಿಂದ ನಷ್ಟವಾಗಿರುವ ಬೆಳೆ ಸಮೀಕ್ಷೆ ಮಾಡಲು ವಿಶೇಷ ತಂಡ ರಚನೆ ಮಾಡಿ, ಪ್ರತಿ ಎಕರೆಗೆ 3 ಲಕ್ಷ ರೂ. ಪರಿಹಾರ ವಿತರಿಸಬೇಕೆಂದು ರೈತ ಸಂಘದಿಂದ ತೋಟಗಾರಿಕೆ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.ಈ ಬಾರಿಯ ಅತಿಯಾದ ಮಳೆ, ಗಾಳಿ, ಚಂಡಮಾರುತದಿಂದ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ.
ಹೌದು ಮಳೆಯಿಂದ ಹೇಗೋ ಉಳಿದ ಬೆಳೆಯನ್ನು ಕಟಾವು ಮಾಡುವ ಸಂದರ್ಭದಲ್ಲಿ ಚಂಡಮಾರುತದಿಂದ ಮಳೆಯಾಗಿ ಆಗಲೂ ಬೆಳೆ ಹಾನಿಯಾಗಿದೆ. ಬಂಡವಾಳ ಹಾಕಿ ಬೆಳೆಯುತ್ತಿರುವ ಬೆಳೆಗೆ ರೋಗ ಒಂದು ಕಡೆಯಾದರೆ, ಮತ್ತೊಂದು ಕಡೆ ರೋಗ ನಿಯಂತ್ರಣಕ್ಕೆ ಬಂದರೆ ಅತಿವೃಷ್ಟಿ ಅನಾವೃಷ್ಟಿ ಹಾವಳಿಗೆ ಸಿಲುಕಿ ರೈತರ ನೆಮ್ಮದಿಯನ್ನು ಕಸಿದುಕೊಳ್ಳುತ್ತಿದ್ದರು.
ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಲ್ಲಿ ಸರಕಾರ ವಿಫಲವಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚಂಡಮಾರುತ ಜಡಿ ಮಳೆಯಿಂದ ನಷ್ಟವಾಗಿರುವ ಬೆಳೆ ಸಮೀಕ್ಷೆ ಮಾಡಲು ವಿಶೇಷ ತಂಡ ರಚನೆ ಮಾಡಿ, ಪ್ರತಿ ಎಕರೆಗೆ 3 ಲಕ್ಷ ರೂ. ಪರಿಹಾರ ವಿತರಿಸಬೇಕೆಂದು ರೈತ ಸಂಘದಿಂದ ತೋಟಗಾರಿಕೆ ಅಧಿಕಾರಿ ಶ್ರೀನಿವಾಸ್ ಮೂಲಕ ತೋಟಗಾರಿಕೆ ಸಚಿವರಿಗೆ ಮನವಿ ಪತ್ರ ರವಾನಿಸಲಾಯಿತು.ರೈತರ ಬದುಕು ದಿನೇ ದಿನೆ ದುಸ್ತರವಾಗುತ್ತಿದೆ. ಲಕ್ಷಾಂತರ ರೂ.
ಜಿಲ್ಲಾಕಾರ್ಯಧ್ಯಕ್ಷ ಹೆಬ್ಬಣಿ ಆನಂದ್‌ರೆಡ್ಡಿ ಮಾತನಾಡಿ, ಚಂಡ ಮಾರುತಗಳ ಹಾವಳಿಯಿಂದ ನಷ್ಟವಾಗಿರುವ ರೈತರ ಬೆಳೆ ಸಮೀಕ್ಷೆ ಮಾಡಲು ಜಿಲ್ಲಾಡಳಿತ ವಿಶೇಷ ಕಂದಾಯ ಹಾಗೂ ತೋಟಗಾರಿಕಾ ಅಧಿಕಾರಿಗಳನ್ನು ನೇಮಿಸಬೇಕು ರೈತರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡು ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬ ರೈತರ ತೋಟಗಳಿಗೂ ಭೇಟಿ ಕೊಟ್ಟು ಪರೀಶೀಲನೆ ಮಾಡಿ ವರದಿ ನೀಡಿಬೇಕೆಂದು ಒತ್ತಾಯಿಸಿದರು.
ತಮ್ಮ ಕಷ್ಟವೆಲ್ಲಾ ಪರಿಹಾರವಾಗುತ್ತಿದೆ ಎಂಬ ನೀರೀಕ್ಷೆಯಲ್ಲಿದ್ದ ರೈತರ ಬಾಳಿಗೆ ಬಂಗಾಳಕೊಲ್ಲಿ ವಾಯುಭಾರ ಕುಸಿತ ಬೆಂಕಿ ಇಟ್ಟು ಜಡಿ ಮಳೆಯಿಂದ ಸಂಪೂರ್ಣವಾಗಿ ಕಣ್ಣುಂದೆಯೇ ಬೆಳೆ ಪಸಲು ನಾಶವಾಗಿ ಹಾಕಿದ ಬಂಡವಾಳ ಕೈಗೆ ಸಿಗುತ್ತಿಲ್ಲ. ಮಾಡಿದ ಸಾಲ ತೀರಿಸಲಾಗದೆ ಸರಕಾರ ನೀಡುವ ಪರಿಹಾರಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಅನ್ನದಾತರ ರಕ್ಷಣೆಗೆ ಜಿಲ್ಲಾಡಳಿತ ಸರಕಾರ ನಿಲ್ಲಬೇಕೆಂದು ಒತ್ತಾಯಿಸಿದರು.
90 ದಿನಗಳ ಪರಿಶ್ರಮ ರಾತ್ರಿ ಹಗಲು ನಿದ್ದೆ ಇಲ್ಲದೆ ಮನೆ ಮಕ್ಕಳಂತೆ ಬೆಳೆಸಿದ್ದ ಟೊಮೊಟೊ, ಕ್ಯಾಪ್ಸಿಕಂ, ಮತ್ತಿತರ ಸಾವಿರಾರು ಹೆಕ್ಟೇರ್ ವಾಣಿಜ್ಯ ಬೆಳೆಗಳು ಸಮೃದ್ದವಾಗಿ ಉತ್ತಮ ಪಸಲು ಬಂದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ.ಹದಗೆಟ್ಟಿರುವ ಕೃಷಿ ಉದ್ಯಮದಲ್ಲಿ 1 ಎಕರೆ ಬೆಳೆ ಮಾಡಬೇಕಾದರೆ ಕನಿಷ್ಠ 3 ಲಕ್ಷ ರೂ.