Hyderabad News:
ಶಿಯೋಮಿಯು ಕ್ರಾಸ್ GAMING ಪ್ಲಾಟ್ಫಾರ್ಮ್ ವಿನ್ ಪ್ಲೇ ಎಂಜಿನ್ ಆವಿಷ್ಕರಿಸಿದೆ.ಆದರೆ, ಸಾಫ್ಟ್ವೇರ್ನ ಕಡಿಮೆ ಸಾಮರ್ಥ್ಯದಿಂದ ಈ ಸಾಧನಗಳನ್ನು ತಮ್ಮ ಗರಿಷ್ಠ ಮಟ್ಟದಲ್ಲಿ ಗ್ರಾಹಕರು ಬಳಸಲು ಸಾಧ್ಯವಾಗುತ್ತಿಲ್ಲ. ಶಿಯೋಮಿ ಕನಿಷ್ಠ ಪಕ್ಷ GAMING ವಿಚಾರದಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ. ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಗ್ರಾಹಕ ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಹೊಸದಾಗಿ ಆಸಕ್ತಿ ಕಂಡು ಬಂದಿದೆ. ತಯಾರಕರು ಫ್ಲ್ಯಾಗ್ ಶಿಪ್ ಮಟ್ಟದ ಚಿಪ್ ಸೆಟ್ ಗಳನ್ನು ಹೊಂದಿರುವ ಆಂಡ್ರಾಯ್ಡ್ ಟ್ಯಾಬ್ಲೆಟ್ಗಳನ್ನು ಈಗ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗುತ್ತಿದ್ದಾರೆ.
ಸರಳವಾಗಿ ಹೇಳುವುದಾದರೆ, ಇದು ಬಳಕೆದಾರರಿಗೆ ಆಂಡ್ರಾಯ್ಡ್ ಟ್ಯಾಬ್ಲೆಟ್ನಲ್ಲಿ ಪಿಸಿ ಗೇಮ್ಗಳನ್ನು ಆಡಲು ಅನುವು ಮಾಡಿಕೊಡುತ್ತದೆ. ಶಿಯೋಮಿ ಪ್ಯಾಡ್ 6ಎಸ್ ಪ್ರೊ 12.4 ಗಾಗಿ ಈ ವೈಶಿಷ್ಟ್ಯವನ್ನು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ.ಚೀನಾದ ಎಲೆಕ್ಟ್ರಾನಿಕ್ಸ್ ಕಂಪನಿ ಶಿಯೋಮಿ ವಿನ್ ಪ್ಲೇ ಹೆಸರಿನ ಎಂಜಿನ್ ಅನ್ನು ಪರಿಚಯಿಸಿದೆ. ಇದು ಹೈಪರ್ ಓಎಸ್ ಮತ್ತು ವಿಂಡೋಸ್ GAMING ನಡುವಿನ ಕ್ರಾಸ್-ಪ್ಲಾಟ್ ಫಾರ್ಮ್ ಹೊಂದಾಣಿಕೆ ಸಂಯೋಜಿಸುವ ಸಿಸ್ಟಮ್ – ಲೆವೆಲ್ ವೈಶಿಷ್ಟ್ಯವಾಗಿದೆ.
Director of Software Zhang Guoquan says: ಟ್ಯಾಬ್ಲೆಟ್ನಲ್ಲಿ GAMING ಅನುಭವವನ್ನು ಆನಂದಿಸಲು ಬಳಕೆದಾರರು ಸ್ಟೀಮ್ ನಂತಹ ಪ್ಲಾಟ್ ಫಾರ್ಮ್ಗಳಿಂದ ಗೇಮ್ಗಳನ್ನು ಆಡಬಹುದು ಅಥವಾ ನೇರವಾಗಿ ಡೌನ್ ಲೋಡ್ ಮಾಡಬಹುದು ಎಂದರು.ಈ ಬಗ್ಗೆ ಮಾತನಾಡಿದ ಶಿಯೋಮಿ ಮೊಬೈಲ್ ಸಿಸ್ಟಮ್ ಸಾಫ್ಟ್ವೇರ್ ವಿಭಾಗದ ನಿರ್ದೇಶಕ ಜಾಂಗ್ ಗುವೊಕ್ವಾನ್, ವಿನ್ ಪ್ಲೇ ಎಂಜಿನ್ ಟ್ಯಾಬ್ಲೆಟ್ನಲ್ಲಿ ವರ್ಚುವಲ್ ವಾತಾವರಣವನ್ನು ಸೃಷ್ಟಿಸುತ್ತದೆ, ಇದು ಪಿಸಿ ಗೇಮ್ಗಲನ್ನು ಬೆಂಬಲಿಸುತ್ತದೆ, ಜೊತೆಗೆ ಹೆಚ್ಚಿನ ಕಾರ್ಯಕ್ಷಮತೆ ಮತ್ತು ಸ್ಥಿರತೆಯನ್ನು ನೀಡುತ್ತದೆ.
ಮೌಸ್, ಕೀಬೋರ್ಡ್ ಮತ್ತು ಕನ್ಸೋಲ್ ನಿಯಂತ್ರಕ ಸೇರಿದಂತೆ ವಿವಿಧ ಗೇಮಿಂಗ್ ಪೆರಿಫೆರಲ್ಗಳನ್ನು ಬೆಂಬಲಿಸುತ್ತದೆ ಎಂದು ವಿನ್ ಪ್ಲೇ ಎಂಜಿನ್ ಹೇಳಿಕೊಂಡಿದೆ. Xbox ನಿಯಂತ್ರಕಗಳು ಟ್ಯಾಬ್ಲೆಟ್ ನೊಂದಿಗೆ ಹ್ಯಾಪ್ಟಿಕ್ಸ್ ಅನ್ನು ಸಹ ಬೆಂಬಲಿಸುತ್ತವೆ. ಏತನ್ಮಧ್ಯೆ, ವಿನ್ ಪ್ಲೇ ಎಂಜಿನ್ ಬಳಸಿ ನಾಲ್ಕು ಜನರೊಂದಿಗೆ ಮಲ್ಟಿಪ್ಲೇಯರ್ GAMING ಅನ್ನು ಸಹ ಆಡಬಹುದು.
Attempt to increase GPU performance with WinPlay: “ಟೋಂಬ್ ರೈಡರ್ 9 ಅನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಇದು ಸರಾಸರಿ 45 ಫ್ರೇಮ್ ಗಳಲ್ಲಿ ಚಲಿಸುತ್ತದೆ ಮತ್ತು ಇಡೀ ಯಂತ್ರದ ವಿದ್ಯುತ್ ಬಳಕೆ ಕೇವಲ 8.3W ಆಗಿದೆ. ಇದು ಟ್ಯಾಬ್ಲೆಟ್ ನಲ್ಲಿ ಸ್ಥಳೀಯ ಗೇಮ್ಗಳನ್ನು ಆಡುವುದಕ್ಕೆ” ಎಂದು ಗುವೊಕ್ವಾನ್ ಹೇಳುತ್ತಾರೆ.ಆಂಡ್ರಾಯ್ಡ್ ನಲ್ಲಿ ವಿಂಡೋಸ್ ಗೇಮ್ಗಳನ್ನು ಆಪ್ಟಿಮೈಸ್ ಮಾಡುವುದು ಎಂದರೆ ಒಂದಿಷ್ಟು ಸಮಸ್ಯೆಗಳು ಖಂಡಿತವಾಗಿಯೂ ಉಳಿದುಕೊಂಡಿರುತ್ತವೆ.
ಆದಾಗ್ಯೂ, ಶಿಯೋಮಿ ತನ್ನ ಆಂತರಿಕ ಪರೀಕ್ಷೆಗಳ ಪ್ರಕಾರ ವಿನ್ ಪ್ಲೇ ಮೂಲಕ ಜಿಪಿಯು ಕಾರ್ಯಕ್ಷಮತೆಯ ನಷ್ಟವು ಶೇಕಡಾ 2.9 ರಷ್ಟು ಮಾತ್ರ ಆಗಿರುತ್ತದೆ ಎಂದು ಹೇಳಿಕೊಂಡಿದೆ.ಅಗತ್ಯ ಎಪಿಐಗಳು, ಇಮೇಜ್ ರೆಂಡರಿಂಗ್ ಮತ್ತು ಕಮಾಂಡ್ ಕಾರ್ಯಗತಗೊಳಿಸುವಿಕೆಯನ್ನು ನಿರ್ವಹಿಸಲು ಶಿಯೋಮಿ ಮೂರು ಪದರಗಳ ವರ್ಚುಯಲೈಸೇಶನ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ ಹಾಗೂ ಕನಿಷ್ಠ ಸಂಪನ್ಮೂಲ ಬಳಕೆಯೊಂದಿಗೆ ತಡೆರಹಿತ ಬಳಕೆದಾರ ಅನುಭವವನ್ನು ಸಾಧಿಸಿದೆ ಎಂದು ಅವರು ತಿಳಿಸಿದರು.
ಬುದ್ಧಿವಂತ ಸಂಪನ್ಮೂಲ ಹಂಚಿಕೆ ವ್ಯವಸ್ಥೆಯು ಲೋಡ್ ನಿಂದ ರೆಂಡರಿಂಗ್ ವರೆಗೆ ತಡೆರಹಿತ GAMINGಗಾಗಿ ಸಿಸ್ಟಮ್ ಸಂಪನ್ಮೂಲ ಹೊರೆಯನ್ನು ಕಡಿಮೆ ಮಾಡುವ ಮೂಲಕ GAMING ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ.
Only supports Windows games: ಬಳಕೆದಾರರ ಪ್ರತಿಕ್ರಿಯೆಯ ಆಧಾರದ ಮೇಲೆ ವೈಶಿಷ್ಟ್ಯವನ್ನು ಪರಿಷ್ಕರಿಸಲು ಕಂಪನಿಯು ಯೋಜಿಸಿದೆ. ಆದಾಗ್ಯೂ ಸ್ಟೇಬಲ್ ವರ್ಷನ್ ಯಾವಾಗ ಬಿಡುಗಡೆಯಾಗಲಿದೆ ಎಂಬುದನ್ನು ಕಂಪನಿ ಈವರೆಗೂ ಘೋಷಿಸಿಲ್ಲ.
ಹೈಪರ್ ಓಎಸ್ 2 ಬೀಟಾದಲ್ಲಿ ಕೆಲಸ ಮಾಡುವ ಪ್ಯಾಡ್ 6 ಎಸ್ ಪ್ರೊ 12.4 ಬೀಟಾ ಪ್ರೋಗ್ರಾಂ ಪ್ರಸ್ತುತ ಸ್ಟೇಬಲ್ ವರ್ಷನ್ ಬಿಡುಗಡೆಗೆ ಮುಂಚಿತವಾಗಿ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ಬಳಸಿ ನೋಡುವ ಅವಕಾಶವನ್ನು ನೀಡಿದೆ.ವಿನ್ ಪ್ಲೇ ಪ್ರಸ್ತುತ ಶಿಯೋಮಿ ಪ್ಯಾಡ್ 6 ಎಸ್ ಪ್ರೊನಲ್ಲಿ ವಿಂಡೋಸ್ ಗೇಮ್ಗಳನ್ನು ಮಾತ್ರ ಬೆಂಬಲಿಸುತ್ತದೆ ಮತ್ತು ಪ್ರಮಾಣಿತ ವಿಂಡೋಸ್ ಅಪ್ಲಿಕೇಶನ್ಗಳನ್ನು ಬೆಂಬಲಿಸುವುದಿಲ್ಲ ಎಂಬುದು ಗಮನಾರ್ಹ.
ಇದನ್ನು ಓದಿರಿ : DEMAND FOR OLD PENSION SCHEME : ನ್ಪಿಎಸ್-ಯುಪಿಎಸ್ ಬೇಡ; OPS ಜಾರಿಗೆ ಸರ್ಕಾರಿ ನೌಕರರ ಬಿಗಿಪಟ್ಟು