spot_img
spot_img

CUCUMBER CARROT PANCAKES : ಭರ್ಜರಿ ರುಚಿಯ ಸೌತೆಕಾಯಿ – ಗಜ್ಜರಿ ಪ್ಯಾನ್ ಕೇಕ್ಸ್ ಸಿದ್ಧಪಡಿಸೋದು ಹೇಗೆ ಗೊತ್ತಾ

spot_img
spot_img

Share post:

Carrot Cucumber Pan Cake Recipe:

ಸಂಜೆಯ ಸಮಯದಲ್ಲಿ ಅನೇಕರಿಗೆ ಏನನ್ನಾದರೂ ಸ್ನ್ಯಾಕ್ಸ್ ತಿನ್ನಬೇಕು ಅನಿಸುತ್ತದೆ. ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಮಮ್ಮಿ ತಿನ್ನಲು ಏನಾದರೂ ತಿಂಡಿ ಇದೆಯೇ ಎಂದು ಸಾಮಾನ್ಯವಾಗಿ ಕೇಳುತ್ತಾರೆ. ಈ ವೇಳೆಯಲ್ಲಿ ಹೆಚ್ಚಿನವರು ಬಜ್ಜಿ, ಪಕೋಡಾ, ವಡೆ ಹಾಗೂ ವಿವಿಧ ತಿಂಡಿಗಳನ್ನು ಸಿದ್ಧಪಡಿಸುತ್ತಾರೆ.

ಯಾವಾಗಲೂ ಒಂದೇ ಬಗೆಯ ತಿಂಡಿಗಳನ್ನು ಸೇವಿಸಿ ಬೇಜಾರಾಗಿದೆ. ಇದರಿಂದ ನಾವು ನಿಮಗೆ ಅದ್ಭುತವಾದ ರೆಸಿಪಿಯನ್ನು ನಾವು ತಂದಿದ್ದೇವೆ. ಅದುವೇ…CUCUMBER CARROT PANCAKES . ಇವುಗಳು ತುಂಬಾ ರುಚಿಕರವಾಗಿದ್ದು, ಒಮ್ಮೆ ಸೇವಿಸಿದರೆ ಮತ್ತೆ ಮತ್ತೆ ಸೇವಿಸಬೇಕು ಅನಿಸುತ್ತದೆ. ಸೌತೆಕಾಯಿ- ಗಜ್ಜರಿ ಪ್ಯಾನ್ ಕೇಕ್ಸ್​ ಎಣ್ಣೆಯನ್ನು ಹೀರಿಕೊಳ್ಳುವುದಿಲ್ಲ. ಈ ಸೂಪರ್ ಟೇಸ್ಟಿ ಸ್ನ್ಯಾಕ್ ರೆಸಿಪಿಗೆ ಯಾವ ಪದಾರ್ಥಗಳು ಬೇಕಾಗುತ್ತವೆ ಹಾಗೂ ರೆಡಿ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

Ingredients for Cucumber-Gajjari Pan Cakes:

  • ಅಕ್ಕಿ ಹಿಟ್ಟು – ಕಾಲು ಕಪ್
  • ಕಡಲೆ ಹಿಟ್ಟು – ಎರಡು ಟೀಸ್ಪೂನ್​
  • ಕಾರ್ನ್ ಹಿಟ್ಟು – ಎರಡು ಟೀಸ್ಪೂನ್
  • ಸ್ಟಫಿಂಗ್ ಹಿಟ್ಟು – ಒಂದು ಟೀಸ್ಪೂನ್
  • ಉಪ್ಪು – ರುಚಿಗೆ ಬೇಕಾಗುವಷ್ಟು
  • ಕ್ಯಾರೆಟ್ – 1
  • ಈರುಳ್ಳಿ – 1
  • ಸೌತೆಕಾಯಿ – 1
  • ಕಟ್ ಮಾಡಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಶುಂಠಿ ಪೇಸ್ಟ್ – ಅರ್ಧ ಟೀಸ್ಪೂನ್
  • ಕಾಳುಮೆಣಸಿನ ಪುಡಿ – ಅರ್ಧ ಟೀಸ್ಪೂನ್
  • ಬೇಕಿಂಗ್ ಪೌಡರ್ – ಅರ್ಧ ಟೀಸ್ಪೂನ್
  • ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು (ಡೀಪ್​ ಫ್ರೈ ಮಾಡಲು ಬೇಕಾಗುವಷ್ಟು)

How to make Cucumber-Gajjari Pan Cakes:

  • ಮೊದಲು ಈರುಳ್ಳಿ ಸಣ್ಣಗೆ ಕತ್ತರಿಸಿ ಪಕ್ಕಕ್ಕೆ ಇಟ್ಟುಕೊಳ್ಳಿ. ಕ್ಯಾರೆಟ್ ಮತ್ತು ಸೌತೆಕಾಯಿಯನ್ನು ತುರಿದು ಇಟ್ಟುಕೊಳ್ಳಬೇಕಾಗುತ್ತದೆ.
  • ಈಗ ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಸಣ್ಣದಾಗಿ ಕಟ್​ ಮಾಡಿದ ಈರುಳ್ಳಿ, ತುರಿದ ಕ್ಯಾರೆಟ್ ಮತ್ತು ಸೌತೆಕಾಯಿ ಸೇರಿಸಿ.
  • ನಂತರ ಅಕ್ಕಿ ಹಿಟ್ಟು, ಕಡೆಲೆ ಬೇಳೆ ಹಿಟ್ಟು, ಕಾರ್ನ್ ಫ್ಲೋರ್, ಸ್ಟಫಿಂಗ್ ಫ್ಲೋರ್, ಶುಂಠಿ ಪೇಸ್ಟ್, ಪೆಪ್ಪರ್ ಪೌಡರ್, ಉಪ್ಪು, ಬೇಕಿಂಗ್ ಪೌಡರ್, ಕೊತ್ತಂಬರಿ ಸೊಪ್ಪಿನ ಪುಡಿ, ಅರ್ಧ ಕಪ್ ನೀರು ಸೇರಿಸಿ ಹಾಗೂ ಈ ಹಿಟ್ಟಿನ ಮಿಶ್ರಣವನ್ನು ಚೆನ್ನಾಗಿ ಕಲಸಿಟ್ಟುಕೊಳ್ಳಿ. ನಂತರ ಸಣ್ಣ ವಡೆ ರೀತಿ ಮಾಡಿ ಇಡಬೇಕಾಗುತ್ತದೆ.
  • ಅದಕ್ಕಾಗಿ ಚಪಾತಿ ಮಣೆಯ ಮೇಲೆ ಪಾಲಿಥಿನ್ ಪೇಪರ್ ಹರಡಿ. ಅದರ ಮೇಲೆ ಸ್ವಲ್ಪ ಎಣ್ಣೆಯನ್ನು ಹಚ್ಚಿ ಹಾಗೂ ಈ ಹಿಟ್ಟಿನಿಂದ ಸಣ್ಣ ವಡೆ ರೀತಿ ಮಾಡಿ. ಪ್ರತಿಯೊಂದನ್ನು ನಿಮ್ಮ ಬೆರಳುಗಳ ಸಹಾಯದಿಂದ ಅವುಗಳನ್ನು ಕಟ್ಲೆಟ್​ನಂತೆಯೂ (ಪ್ಯಾನ್​ಕೇಕ್​) ಮಾಡಬಹುದು.
  • ಈಗ ಸ್ಟೌವ್​ ಮೇಲೆ ಪ್ಯಾನ್​ ಇಟ್ಟು ಬಿಸಿ ಮಾಡಿ. ಪ್ಯಾನ್​ ಬಿಸಿಯಾದ ಬಳಿಕ, ಈ ಹಿಂದೆ ಮಾಡಿದ ಪ್ಯಾನ್‌ಕೇಕ್‌ಗಳನ್ನು ಹಾಕಿ, ಎರಡೂ ಬದಿಗಳಲ್ಲಿ ಚೆನ್ನಾಗಿ ಫ್ರೈ ಮಾಡಬೇಕು.
  • ಸರಿಯಾಗಿ ಬೆಂದ ಬಳಿಕ, ಪ್ಯಾನ್‌ಕೇಕ್‌ ತಟ್ಟೆಯಲ್ಲಿ ತೆಗೆದುಕೊಂಡು, ಟೊಮೆಟೊ ಸಾಸ್, ಕೆಚಪ್ ಅಥವಾ ರೈತಾದೊಂದಿಗೆ ತಿನ್ನಬಹುದು. ಇದೀಗ ತುಂಬಾ ರುಚಿಯಾದ ಸೌತೆಕಾಯಿ- ಗಜ್ಜರಿ ಪ್ಯಾನ್ ಕೇಕ್ಸ್ ರೆಡಿ! ನಿಮಗೆ ಇಷ್ಟವಾದರೆ ಸಂಜೆ ವೇಳೆಯಲ್ಲಿ ಟ್ರೈ ಮಾಡಿ ನೋಡಿ. ಮಕ್ಕಳಿಂದ ಹಿಡಿದು ಹಿರಿಯರೆಲ್ಲರೂ ಇಷ್ಟಪಟ್ಟು ಸೇವಿಸುತ್ತಾರೆ.

ಇದನ್ನು ಓದಿರಿ : FREE CYCLE RIDE : ಹುಬ್ಬಳ್ಳಿ – ಧಾರವಾಡದಲ್ಲಿ ಉಚಿತ ಸೈಕಲ್ ಸವಾರಿ

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...