spot_img
spot_img

ಡಿ. ೩೦ ರಂದು ರಾಜ್ಯದ ಎಲ್ಲ ಶಾಲಾ ಕಾಲೇಜುಗಳಲ್ಲಿ ವಿಶೇಷ ಚೇತನರ ದಿನಾಚರಣೆ ಕಡ್ಡಾಯ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯ 47/3 ರಂತೆ ಪ್ರತಿ ವರ್ಷ ಡಿಸೆಂಬರ್ 03 ರಂದು ವಿಶ್ವ ವಿಶೇಷ ಚೇತನರ ದಿನಾಚರಣೆ ಆಚರಿಸಲು ನಿರ್ಣಯವಾಗಿದೆ.

ಹಾಗಾಗಿ ಪ್ರತಿ ವರ್ಷದಂತೆ, 2023-24 ನೇ ಸಾಲಿನಲ್ಲಿಯೂ ಡಿಸೆಂಬರ್. 03 ರಂದು ಶಾಲಾ, ಕ್ಲಸ್ಟರ್, ಬ್ಲಾಕ್ ಹಾಗೂ ಜಿಲ್ಲಾ ಹಂತದಲ್ಲಿ ವಿಶ್ವವಿಶೇಷ ಚೇತನರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಸಮಗ್ರ ಶಿಕ್ಷಣ ಕರ್ನಾಟಕ, ರಾಜ್ಯ ಯೋಜನಾ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ವಿಶೇಷ ಚೇತನರ ಸಮಸ್ಯೆಗಳನ್ನು ಅರಿಯುವುದು ಮತ್ತು ಇವರ ಆತ್ಮ ಗೌರವವನ್ನು ಹೆಚ್ಚಿಸುವ ಹಕ್ಕುಗಳನ್ನು ರಕ್ಷಿಸುವ ಮತ್ತು ಇವರ ಒಳತಿಗಾಗಿ ಕ್ರಮವಹಿಸುವುದಾಗಿದೆ.

ವಿಶೇಷ ಚೇತರೇನು ಮುಖ್ಯ ವಾಹಿನಿಗಳಿಗೆ ಸೇರಿಸುವ ಕುರಿತು ಜಾಗೃತಿ, ಸಮಾನ ಅವಾಕಾಶ, ಸೌಲಭ್ಯ ಕಳಿಸುವುದು.

ವಿಶೇಷ ಚೇತನ್ರಲ್ಲಿ ಆತ್ಮ ವಿಶ್ವಾಸ ಬೆಳೆಸುವುದು ಹಾಗು ಸಮಾಜದ ಇತರ ವ್ಯಕ್ತಿಗನಂತೆ ಸಮಾನವಾದ ಅವಕಾಶಗಳು ಒದಗಿಸುವುದು ಮತ್ತು ಅವರಿಗೆ ಯೋಗ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು.

ಪ್ರತಿ ವರ್ಷದಂತೆ ೨೦೨೩-೨೪ ನೇ ಸಾಲಿನಲ್ಲಿಯೂ ಡಿಸೆಂಬರ್ ೦೩ ರಂದು ಶಾಲಾ, ಕ್ಲಸ್ಟರ್, ಬ್ಲಾಕ್ ಹಾಗೂ ಜಿಲ್ಲಾ ಹಂತದಲ್ಲಿ ವಿಷ ವಿಶೇಷ ಚೇತನರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವುದು.
ಪೂರ್ವಭಾವಿಯಾಗಿ ಚಟುವಟಿಕೆ / ಕಾರ್ಯಗಳನ್ನು ಯೋಜಿಸಿ, ಅಗತ್ಯ ಸಿದ್ಧತೆಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸುವುದು.

ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ವಿವಿಧ ರೀತಿಯ ನ್ಯೂನ್ಯತೆಗಳ ಬಗ್ಗೆ ಮಾಹಿತಿ ನೀಡುವುದು ಹಾಗೂ ಇಂತಹ ವಿದ್ಯಾರ್ಥಿಗಳಿಗೆ ಕಲಿಕಾ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ನೀಡಬೇಕಾದ ಸಹಕಾರದ ಕುರಿತು ಅರಿವು ಮೂಡಿಸುವುದು. ಈ ಕುರಿತು ಮುಕ್ತ ಚರ್ಚೆಗೆ ಅವಕಾಶ ಒದಗಿಸುವುದು.

ಪ್ರತಿ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗೆ ಒಬ್ಬ ಸಾಮಾನ್ಯ ವಿದ್ಯಾರ್ಥಿಯನ್ನು ಆಪ್ತ ಗೆಳೆಯ – buddy ಎಂದು ಗುರುಟಿಸಿ buddy system ಅಳವಡಿಸಲು ತಿಳಿಸಲಾಗಿತ್ತು. ಶಾಲಾ ಹಂತದಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಅವರ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಒದಗಿಸಿ, ಅವರಿಗೆ ಅವಕಾಶ ನೀಡುವುದು.

ವಿಶೇಷ ಚೇತರನ್ನು ಗೌರವಿಸುವ, ಸಮಾನ ಅವಕಾಶ ನೀಡುವ ಕುರಿತು ಎಲ್ಲ ವಿದ್ಯಾರ್ಥಿಗಳಲ್ಲಿ ಜಾಗೃತಿ ಮುಡಿಸುವುದು.

ವಿಶ್ವ ವಿಶೇಷ ಚೇತನ ದಿನಾಚರಣೆ ಸಂದರ್ಭದಲ್ಲಿ ಕ್ರೀಡಾ, ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಶೇಷ ಸಾಧನೆ ವಿಶೇಷ ಚೇತರನ್ನು ಗೌರವಿಸುವುದು.

ಸ್ಥಳೀಯ ಪರಿಸರಕ್ಕೆ ತಕ್ಕಂತೆ ಕಾರ್ಯಕ್ರಮ / ಚಟುವಟಿಕೆಗಳನ್ನು ಆಯೋಜಿಸುವುದು ಹಾಗೂ ಈ ಕುರಿತು ಸಾಕಷ್ಟು ಪೂರ್ವಭಾವಿಯಾಗಿ ಯೋಜಿಸಿ, ಯಾವುದೇ ಹಂತದಲ್ಲಿ ಲೋಪ ಬಾರದಂತೆ ಯಾವುದೇ ವಿದ್ಯಾರ್ಥಿಯ ಘನತೆಗೆ ಚ್ಯುತಿ ಬಾರದಂತೆ ಮುಂಜಾಗ್ರತೆ ವಹಿಸುವುದು.

ವಿಶೇಷ ಚೇತನರ ದಿನಾಚರಣೆಯನ್ನು ಯಶಸ್ವಿಯಾಗಿ ಆಯೋಜಿಸಿ, ಈ ಕುರಿತು ತಮ್ಮ ವ್ಯಾಪ್ತಿಯಲ್ಲಿ ವಿವಿಧ ಹಂತದಲ್ಲಿ ನಡೆದ ಆಯ್ದ ಕಾರ್ಯಕ್ರಮದ ಫೋಟೋ ಸಹಿತ ವರದಿಯನ್ನು ರಾಜ್ಯ ಕಚೇರಿಗೆ email : , cwsnkar2020@gmail.com ಗೆ ಮೇಲ್ ಮೂಲಕ ವರದಿ ಸಲ್ಲಿಸುವುದು.

ಉತ್ತಮ ಫೋಟೋ/ ವಿಡಿಯೋ ಗಳನ್ನೂ ಶಾಲಾ ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಮೀನುಗಾರಿಕೆಗೆ ಕೇಂದ್ರದಿಂದ ₹4,969 ಕೋಟಿ ಅನುದಾನ

ನವದೆಹಲಿ: 4,969.62 ಕೋಟಿ ರೂ.ಗಳ ಪ್ರಸ್ತಾವನೆಗಳಿಗೆ ಕೇಂದ್ರದ ಮೀನುಗಾರಿಕೆ ಇಲಾಖೆ ಅನುಮೋದನೆ ನೀಡಿದೆ. ಸಣ್ಣ ಮೀನುಗಾರ ಸಮುದಾಯಗಳು ಹಾಗೂ ಸಾಂಪ್ರದಾಯಿಕ ಮೀನುಗಾರರ ಅಭಿವೃದ್ಧಿಗಾಗಿ ಮತ್ತು ಅವರ...

ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್.ಐ.ಆರ್. : ಸಿದ್ದರಾಮಯ್ಯ

ಬೆಂಗಳೂರು : ಚಂದ್ರಶೇಖರ ಸ್ವಾಮೀಜಿ ಅವರ ಪ್ರಕರಣದಲ್ಲಿ ಪೊಲೀಸರು ಕಾನೂನಿನ ದೃಷ್ಟಿಯಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ಕಾನೂನಿನ ಚೌಕಟ್ಟಿನೊಳಗೆ ಬಂದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಲ್ಲವಾದರೆ...

ಶಾಂತಿ, ಸೌಹಾರ್ದತೆ ಕಾಪಾಡಬೇಕು : ಸಂಭಲ್ ಜಾಮಾ ಮಸೀದಿ

ಹೊಸದಿಲ್ಲಿ: ಸಂಭಲ್ ಜಾಮಾ ಮಸೀದಿಯ ಆವರಣದಲ್ಲಿನ ಸಮೀಕ್ಷೆಗೆ ಸುಪ್ರೀಂಕೋರ್ಟ್ ತಡೆ ನೀಡಿದ್ದು, ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಹೇಳಿದೆ. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಲಹಾಬಾದ್...

99.17 crore released to Karnataka

The central government has taken steps to globally develop major tourist destinations that are not so popular in...