spot_img
spot_img

ಎದೆ ಹಾಲು ಕುಡಿಯುವಾಗಲೇ ಉಸಿರುಗಟ್ಟಿ ಸಾವು ಸಂಭವ

spot_img
spot_img

Share post:

ಸಾಗರ್ (ಮಧ್ಯ ಪ್ರದೇಶ)​​: ಅಪರೂಪದ ಕಾಯಿಲೆಗಳು ಕೆಲವರಲ್ಲಿ ಜನ್ಮಜಾತವಾಗಿ ಬಂದಿದ್ದು, ಅನೇಕ ಬಾರಿ ಅವುಗಳನ್ನು ಪತ್ತೆ ಮಾಡುವಲ್ಲಿ ವೈದ್ಯರು ಕೂಡ ಎಡವುತ್ತಾರೆ. ಅದೇ ರೀತಿಯ ಪ್ರಕರಣವೊಂದು ಭಾಗ್ಯೋದಯ ತೀರ್ಥ ಆಸ್ಪತ್ರೆಯಲ್ಲಿ ದಾಖಲಾಗಿದೆ.

ಶೀತ ಮತ್ತು ಕಡಿಮೆ ವಾಸನೆ ಗ್ರಹಣ ಶಕ್ತಿ ಸಮಸ್ಯೆ ಹೊಂದಿರುವ ಉತ್ತರ ಪ್ರದೇಶದ ಮೂಲದ 20ರ ಯುವತಿಗೆ ಉಸಿರಾಡುವುದು ಬಲು ತ್ರಾಸದಾಯಕ ಸಮಸ್ಯೆಗಳಾಗುತ್ತವೆ.

ಈ ಸಮಸ್ಯೆ ಹೊಂದಿರುವ ಮಕ್ಕಳ ತಾಯಿಯ ಎದೆ ಹಾಲು ಸೇವಿಸುವಾಗಲೇ ಉಸಿರುಗಟ್ಟಿ ಸಾವನ್ನಪ್ಪುತ್ತಾರೆ. ಜಗತ್ತಿನಲ್ಲಿ 8 ಸಾವಿರ ಮಕ್ಕಳಲ್ಲಿ ಒಬ್ಬರಿಗೆ ಈ ಸಮಸ್ಯೆ ಕಾಣುತ್ತದೆ.

ಇವರನ್ನು ಪರೀಕ್ಷಿಸಿ ಇಎನ್​ಟಿ ಸರ್ಜನ್​ ಡಾ ದಿನೇಶ್​ ಪಟೇಲ್​ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಾರಣ ಯುವತಿಗೆ ಇದ್ದಿದ್ದು, ಸಾಮಾನ್ಯ ಸಮಸ್ಯೆಯಲ್ಲ. ಜೀವನ್ಮರಣದಂತಹ ಸಮಸ್ಯೆಯಲ್ಲಿಯೇ 20 ವರ್ಷಗಳ ಕಾಲದಿಂದ ಜೀವಿಸುತ್ತಿದ್ದು, ಈ ಬಗ್ಗೆ ಅವಳು ಯಾವುದೇ ಅರಿವು ಹೊಂದಿರಲಿಲ್ಲ.

ಈ ಯುವತಿ ಹುಟ್ಟಿನಿಂದಲೇ ಕೊನಾಲ್ ಅಟ್ರೆಸಿಯಾ ಎಂಬ ಸಮಸ್ಯೆಯಿಂದ ಬಳಲುತ್ತಿದ್ದಳು, ಈ ಸಮಸ್ಯೆಯಲ್ಲಿ ಮೂಗು ಮತ್ತು ಬಾಯಿ ನಡುವೆ ಸಂಪರ್ಕವಿರುವುದಿಲ್ಲ. ಹುಟ್ಟಿನಿಂದ ಬರುವ ಈ ಸಮಸ್ಯೆಯಲ್ಲಿ ಮಗು ತಾಯಿಯ ಎದೆ ಹಾಲು ಸೇವಿಸುವಾಗಲೇ ಉಸಿರುಗಟ್ಟಿ ಸಾವನ್ನಪ್ಪುತ್ತಾರೆ.

ಜಗತ್ತಿನಲ್ಲಿ 8 ಸಾವಿರ ಮಕ್ಕಳಲ್ಲಿ ಒಬ್ಬರಿಗೆ ಈ ಸಮಸ್ಯೆ ಕಾಣುತ್ತದೆ. ಇದೊಂದು ಅಪರೂಪದ ಸಮಸ್ಯೆಯಾಗಿದೆ ಅಂತಾರೆ ವೈದ್ಯರು. ಈ ಕುರಿತು ಮಾತನಾಡಿರುವ ವೈದ್ಯರಾದ ಡಾ ದಿನೇಶ್​ ಪಟೇಲ್​, ಕೊನಾಲ್​ ಅಟ್ರಿಸಿಯಾ ಜನ್ಮಜಾತ ಸಮಸ್ಯೆಯಾಗಿದ್ದು, ಹುಟ್ಟಿನಿಂದಲೇ ಈ ಸಮಸ್ಯೆ ಕಂಡು ಬರುತ್ತದೆ.

ಈ ಸಮಸ್ಯೆ ಇದ್ದಾಗ ಏಕಕಾಲದಲ್ಲಿ ಕಣ್ಣು, ಮೂಗು ಮತ್ತು ಹೃದಯ ಸಮಸ್ಯೆ ಕಾಣುತ್ತದೆ. ಈ ಕೇಸ್​ನಲ್ಲಿ ಯುವತಿಯ ಎರಡೂ ಮೂಗಿನಲ್ಲಿ ಪೊರೆ ರೂಪುಗೊಂಡಿಲ್ಲ. ಬದಲಾಗಿ ಮೂಗಿನ ಹಿಂಭಾಗದ ಭಾಗವು ಬಾಯಿಗೆ ಸಂಪರ್ಕ ಹೊಂದಿಲ್ಲ. ಇದರಿಂದಾಗಿ ಆಕೆ ಮೂಗಿನ ಮೂಲಕ ಉಸಿರಾಡಲು ಸಾಧ್ಯವಾಗದೇ, ಬಾಯಿಯ ಮೂಲಕ ಉಸಿರಾಡುತ್ತಿದ್ದಾಳೆ.

ಈ ಸಮಸ್ಯೆ ಇದ್ದಾಗ ಮಗು ತಾಯಿಯ ಹಾಲು ಕುಡಿಯುತ್ತಿದ್ದಂತೆ ಸಾವು ಸಂಭವಿಸುತ್ತದೆ. ಕಾರಣ ಮಗು ಹಾಲು ಕುಡಿಯುವಾಗ ಬಾಯು ಮುಚ್ಚಿ, ಮೂಗಿನಿಂದ ಉಸಿರಾಡಬೇಕು. ಈ ವೇಳೆ, ಮಗು ಉಸಿರುಗಟ್ಟಿ ದೇಹ ನೀಲಿಯಾಗುವ ಲಕ್ಷಣಗಳು ಕಾಣುತ್ತದೆ. ಅನೇಕ ಬಾರಿ ಆಸ್ಪತ್ರೆಗೆ ತರುವ ಮುನ್ನವೇ ಮಕ್ಕಳು ಸಾವನ್ನಪ್ಪುತ್ತದೆ.

ಆದರೆ, ರೋಗಿಯು ಕಳೆದ 20 ವರ್ಷದಿಂದ ಈ ಸಮಸ್ಯೆ ಇದ್ದರೂ ಆರೋಗ್ಯವಾಗಿದ್ದಾರೆ. ಕಾರಣ ಈ ಸಿಂಡ್ರೋಮ್​ನಲ್ಲಿ ಎರಡರಿಂದ ಮೂರು ವಿಧವಿದೆ. ಇದರಲ್ಲಿ ಒಂದು ಮೂಗಿನ ಪೊರೆಯು ರಚನೆಯಾಗುವುದಿಲ್ಲ ಅಥವಾ ಎರಡೂ ಮೂಗಿನ ಪೊರೆಗಳು ಇರುವುದಿಲ್ಲ. ಅಥವಾ ಮೂಳೆ ಅಥವಾ ಪೊರೆಯಲ್ಲಿ ಸಮಸ್ಯೆ ಇರುತ್ತದೆ.

ರೋಗಿ ಯುವತಿ ಕಳೆದ 20 ವರ್ಷದಿಂದ ಈ ಸಮಸ್ಯೆ ಅನುಭವಿಸುತ್ತಿದ್ದು, 7 ವರ್ಷವಿದ್ದಾಗ ಒಮ್ಮೆ ಲಲಿತ್​ಪುರ್​ನಲ್ಲಿ ಮೂಗಿನ ಬಾಗಿದ ಮೂಳೆಗಳ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಆದರೆ, ಈ ಆಪರೇಷನ್​ನಿಂದ ಯಾವುದೇ ಸುಧಾರಣೆ ಕಂಡಿಲ್ಲ. ಕಾರಣ ಈಕೆಯ ಮೂಗಿನ ಭಾಗ ಬಾಯಿಗೆ ಸಂಪರ್ಕ ಹೊಂದಿಲ್ಲದಿರುವುದು ಇವರ ಅರಿವಿಗೆ ಬಂದಿಲ್ಲ.

ಇದೀಗ ಯುವತಿ ಸಮಸ್ಯೆ ಹೇಳಿಕೊಂಡು ಬಂದಾಗ ಎಂಡೋಸ್ಕೋಪಿ ಮತ್ತು ಸಿಟಿ ಸ್ಕ್ಯಾನ್​ ಮಾಡಲಾಗಿದೆ. ಈ ವೇಳೆ ಈಕೆಗೆ ಕೊನಾಲ್​ ಅಟ್ರಿಸಿಯಾ ಸಮಸ್ಯೆ ಇರುವುದು ಕಂಡು ಬಂದಿದೆ. ಇದೀಗ ಶಸ್ತ್ರ ಚಿಕಿತ್ಸೆ ನಡೆಸಿ, ಮೂಗು ಮತ್ತು ಬಾಯಿ ನಡುವೆ ಸಂಪರ್ಕ ಕಲ್ಪಿಸಲಾಗಿದೆ. ಯುವತಿ ಆರೋಗ್ಯ ಕೂಡ ಸುಧಾರಣೆ ಕಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...