ಬೆಳಗಾವಿ: ಸರ್ಕಾರದಿಂದ ಇಲಾಖೆಗೆ ಒಟ್ಟು 8.24 ಲಕ್ಷ ಪುಸ್ತಕಗಳನ್ನು ನೀಡಲಾಗಿದೆ. ಅದರಲ್ಲಿ 7.96 ಲಕ್ಷ ಪುಸ್ತಕಗಳನ್ನು ಹಂಚಿಕೆ ಮಾಡಲಾಗಿದೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 28,000 ಪುಸ್ತಕಗಳು ಹಂಚಿಕೆಯಾಗಿಲ್ಲ.
ಗಡಿ ಭಾಗದ ಶಾಲೆಗಳ ಬಗ್ಗೆ ಶಿಕ್ಷಣ ಇಲಾಖೆ(Education Department) ನಿರ್ಲಕ್ಷ್ಯ ತೋರಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಶಾಲೆಗಳು ಪ್ರಾರಂಭವಾಗಿ ಆರು ತಿಂಗಳು ಕಳೆದರೂ ಸಹ ಇನ್ನು ಪಠ್ಯ ಪುಸ್ತಕಗಳು(Text Books) ದೊರಕಿಲ್ಲ ಅನ್ನೋದು ನಿಜಕ್ಕೂ ಅಚ್ಚರಿಯ ವಿಷಯವಾಗಿದೆ. ಅಥಣಿ ತಾಲೂಕಿನ ಹಲವು ಗ್ರಾಮಗಳ ಸರ್ಕಾರಿ ಕನ್ನಡ ಹಾಗೂ ಮರಾಠಿ ಶಾಲೆಗಳ ವಿದ್ಯಾರ್ಥಿಗಳಿಗೆ ಕನ್ನಡ ಭಾಗ ಎರಡು ಹಾಗೂ ಇಂಗ್ಲಿಷ್ ಮತ್ತು ಕೆಲ ಶಾಲೆಗಳಿಗೆ ಹಿಂದಿ ಪುಸ್ತಕಗಳು ದೊರಕದೇ ಮಕ್ಕಳು ವಿದ್ಯಾಭ್ಯಾಸದಿಂದ(Education) ವಂಚಿತವಾಗುತ್ತಿದ್ದಾರೆ.
ಜೂನ್ ಮೊದಲ ಹಾಗೂ ಜುಲೈ ಅಂತ್ಯದ ಒಳಗಾಗಿ ಭಾಗ ಒಂದು ಹಾಗೂ ಭಾಗ ಎರಡು ಪಠ್ಯ ಪುಸ್ತಕಗಳನ್ನ ನೀಡಬೇಕಿದ್ದ ರಾಜ್ಯ ಸರ್ಕಾರ, ಶಾಲೆ ಪ್ರಾರಂಭವಾಗಿ ಐದು ತಿಂಗಳ ನಂತರ ಅಂದ್ರೆ ಸಪ್ಟೆಂಬರ್ ತಿಂಗಳ ಅಂತ್ಯದಲ್ಲಿ ಆಯಾ ತಾಲೂಕು ಕ್ಷೇತ್ರದ ಶಿಕ್ಷಣಾಧಿಕಾರಿಗಳಿಗೆ ಪುಸ್ತಕಗಳನ್ನ ಹಸ್ತಾಂತರಿಸಿದೆ.
ಸರ್ಕಾರದಿಂದ ಬಂದ ಪುಸ್ತಕಗಳನ್ನ ಖಾಸಗಿ ಶಾಲೆಗಳಿಗೆ ಮಾರಾಟ ಮಾಡಿರುವ ಆರೋಪ ಶಿಕ್ಷಣ ಇಲಾಖೆ ವಿರುದ್ಧ ಕೇಳಿ ಬರುತ್ತಿವೆ. ಚಿಕ್ಕೋಡಿ ಉಪ ವಿಭಾಗದ ಅಥಣಿ ತಾಲೂಕಿನ ಹಲವು ಕಡೆಗಳಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಪಠ್ಯಪುಸ್ತಕದಿಂದ ವಂಚಿತರಾಗಿದ್ದಾರೆ.
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 28,000 ಪುಸ್ತಕಗಳು ಹಂಚಿಕೆಯಾಗಿಲ್ಲ. ಇದರಿಂದಾಗಿ ತಾಲೂಕಿನ ಹಲವು ಶಾಲೆಗಳ ಮಕ್ಕಳು ಹಳೇ ಪುಸ್ತಕಗಳಿಂದ ವಿದ್ಯಾಭ್ಯಾಸ ಮಾಡುವ ಅನಿವಾರ್ಯತೆ ಎದುರಾಗಿದೆ.
ಚಿಕ್ಕೋಡಿ ಉಪ ವಿಭಾಗದ ಅಥಣಿ ತಾಲೂಕಿನ ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ 74,000 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಸರ್ಕಾರದಿಂದ ಇಲಾಖೆಗೆ ಒಟ್ಟು 8.24 ಲಕ್ಷ ಪುಸ್ತಕಗಳನ್ನು ನೀಡಲಾಗಿದೆ. ಅದರಲ್ಲಿ 7.96 ಲಕ್ಷ ಪುಸ್ತಕಗಳನ್ನು ಹಂಚಿಕೆ ಮಾಡಲಾಗಿದೆ.
ಎಲ್ಲೋ ಒಂದು ಕಡೆ ಶಿಕ್ಷಣ ಇಲಾಖೆಯಿಂದಲೇ ಕನ್ನಡ ಕೊಲ್ಲುವ ಕೆಲಸ ನಡೀತಾ ಎಂದು ಕನ್ನಡ ಪರ ಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರುತ್ತಿವೆ. ಈ ಸಂಬಂಧ ಸರ್ಕಾರದ ವಿಶೇಷ ತಂಡ ತನಿಖೆ ನಡೆಸಿದ್ದು, ಸ್ವತ್ಯಾಸತ್ಯತೆ ಹೊರ ಬೀಳಬೇಕಿದೆ. ಒಟ್ಟಾರೆ ಹಲವು ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಿರುವುದು ನಿಜಕ್ಕೂ ದುರಂತವೇ ಸರಿ.