spot_img
spot_img

ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಗೆ ವಿಶೇಷ ಗಿಫ್ಟ್ ಕೊಟ್ಟಿದ್ದೇನೆ ?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಕಾಲ ಅಮೆರಿಕಾದ ಪ್ರವಾಸದಲ್ಲಿದ್ದಾರೆ. ಕ್ವಾಡ್​ ಸಮಿತಿಯಲ್ಲಿ ಭಾಗಿಯಾಗಲು ಅಮೆರಿಕಾಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾ ಅಧ್ಯಕ್ಷ ಜೋ ಬೈಡನ್​ಗೆ ಒಂದು ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಮೋದಿ ನೀಡಿದ ಉಡುಗೊರೆಯನ್ನು ಕಂಡು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಹಾಗೂ ಯುಎಸ್​​ನ ಪ್ರಥಮ ಮಹಿಳೆ, ಬೈಡನ್ ಪತ್ನಿ ಜಿಲ್ ಬೈಡನ್​ ಸಂತೋಷ ಪಟ್ಟಿದ್ದಾರೆ.

ಇದನ್ನೂ ಓದಿ : ಶ್ರೀಕೃಷ್ಣ ಜನ್ಮ ಭೂಮಿಯಲ್ಲಿ ಮತಾಂತರ 5 ಮಂದಿ ಅಂದರ್.!

ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಅಧ್ಯಕ್ಷ ಜೋ ಬೈಡನ್​ಗೆ (Silver Train) ಬೆಳ್ಳಿಯಿಂದ ತಯಾರಿಸಲಾದ ಪುರಾತನ ರೈಲಿನ ಮಾದರಿಯನ್ನು ಉಡುಗೊರೆಯಾಗಿ ನೀಡಿದ್ದು, ಬೈಡನ್ ಪತ್ನಿ ಜಿಲ್ ಬೈಡನ್​ಗೆ ಪಶ್ಮಿನಾ ಶಾಲ್​ನ್ನು ಉಡುಗೊರೆಯಾಗಿ ನೀಡಿದ್ದಾರೆ. ಜೋ ಬೈಡನ್​ಗೆ ಮೋದಿ ನೀಡಿದ ಉಡುಗೊರೆ ಉಭಯ ದೇಶಗಳ ನಡುವಿನ ಗಟ್ಟಿಯಾದ ಬಾಂಧವ್ಯವನ್ನು ಮತ್ತು ರಾಜತಾಂತ್ರಿಕ ಸಂಬಂಧವನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗಿದೆ. ಅದು ಮಾತ್ರವಲ್ಲ 21ನೇ ಶತಮಾನದ ಈ ಎರಡು ದೇಶಗಳ ಪಾಲುದಾರಿಕೆಯನ್ನೂ ಕೂಡ ಈ ಒಂದು ಉಡುಗೊರೆ ಪ್ರತಿನಿಧಿಸುತ್ತದೆ ಎಂದು ಉಭಯ ನಾಯಕರು ಹೇಳಿದ್ದಾರೆ.

ಮೋದಿ ನೀಡಿರುವ ರೈಲು ಮಾದರಿಯ ಉಡುಗೊರೆಯನ್ನು ಶೇಕಡಾ 92.5ರಷ್ಟು ಬೆಳ್ಳಿಯನ್ನು ಬಳಸಿ ತಯಾರಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಒಂದು ರೈಲು ಮಾದರಿ ಅತ್ಯಂತ ಅಪರೂಪದ ಕುಶಲಗಾರಿಕೆಯ ಮೂಲಕ ಕೆತ್ತನೆ ಮಾಡಲಿಗಿದ್ದು. ಮಹಾರಾಷ್ಟ್ರ ಮೂಲದ ಕುಶಲಕರ್ಮಿಯೊಬ್ಬರು ಈ ಒಂದು ರೈಲು ಮಾದರಿಯನ್ನು ನಿರ್ಮಿಸಿದ್ದಾರೆ ಅಂತ ತಿಳಿದು ಬಂದಿದೆ.

ಇದನ್ನೂ ಓದಿ : PUC, ಡಿಪ್ಲೋಮಾ, ಐಟಿಐ, ಜೆಎಲ್​ಡಿಸಿ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌ : ರೆವಿನ್ಯೂ ಇಲಾಖೆಯಲ್ಲಿ ಬೃಹತ್ ಹುದ್ದೆಗಳ ನೇಮಕಾತಿ.!

ಇನ್ನು ರೈಲಿನ ಮಾಡಲ್ ಮೇಲೆ ದೆಹಲಿ ಟು ದೆಲವಾರೆ ಎಂದು ಕೂಡ ಕೆತ್ತಲಾಗಿದೆ. ಜೋ ಬೈಡನ್ ಹುಟ್ಟೂರಾದ ದೆಲವಾರೆಯಲ್ಲಿಯೇ ಸದ್ಯ ಕ್ವಾಡಿ ಸಮಿತಿ ನಡೆಯುತ್ತಿದ್ದು. ಕ್ವಾಡ ಸಮಿತಿಯಲ್ಲಿ ಉಭಯ ದೇಶಗಳ ಸಂಬಂಧದ ಗಟ್ಟಿತನವನ್ನು ಈ ಒಂದು ರೈಲು ಮಾದರಿ ಪ್ರತಿಬಿಂಬಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಬೈಡನ್ ಪತ್ನಿಗೆ ಪಪೀರ್​ ಮ್ಯಾಚ್​ಬಾಕ್ಸ್​ನಲ್ಲಿ ಪಾಶ್ಮೀನಾ ಶಾಲ್​ನ್ನು ಮೋದಿ ಉಡುಗೊರೆಯಾಗಿ ನೀಡಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಸಿದ್ಧಗೊಳ್ಳುವ ಈ ಶಾಲ್ ತನ್ನದೆ ಆದ ವಿಶೇಷತೆಯನ್ನು ಹೊಂದಿದೆ.

WhatsApp Group Join Now
Telegram Group Join Now
Instagram Account Follow Now
spot_img

Related articles

ಮಣಿಪುರದಲ್ಲಿ ಇನ್ನೂ ಮೂರು ದಿನ ಮೊಬೈಲ್ ಇಂಟರ್ನೆಟ್ ನಿಷೇಧ

ಇಂಫಾಲ್: ನವೆಂಬರ್ 16 ರಂದು, ಸರ್ಕಾರ, ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಅಮಾನತುಗೊಳಿಸಿತ್ತು. ಮಣಿಪುರ ಸರ್ಕಾರವು ಬುಧವಾರ ಮೊಬೈಲ್ ಇಂಟರ್ನೆಟ್ ಸೇವೆ ಅಮಾನತು ಆದೇಶವನ್ನು...

ಬಿಗ್ ಬಾಸ್ ಮನೆಯಲ್ಲಿ ಒಂದೇ ಟಾಸ್ಕ್​ನಲ್ಲೇ ವೀಕ್ಷಕರ ಹೃದಯ ಗೆದ್ದ ಶೋಭಾ ಶೆಟ್ಟಿ

ಕನ್ನಡದ ಬಿಗ್​ಬಾಸ್​ ಸೀಸನ್​ 11ರ ಆಟದ ಕಿಚ್ಚು ಜೋರಾಗಿ ಹೊತ್ತಿ ಉರಿಯುತ್ತಿದೆ. ಕನ್ನಡ ಬಿಗ್​ಬಾಸ್​ನಲ್ಲಿ​ ಇತಿಹಾಸದಲ್ಲೇ ಬಂದ ಮೊದಲ ದಿನನೇ ಯಾವ ವೈಲ್ಡ್​ ಕಾರ್ಡ್...

ಸಾರ್ವಜನಿಕ ಆಸ್ಪತ್ರೆಗಳಲ್ಲಿ ಶೇ. 20ರಷ್ಟು ಸೇವಾ ಶುಲ್ಕ ಹೆಚ್ಚಳ

ಮಂಗಳೂರು : ಶುಲ್ಕ ಹೆಚ್ಚಳ ಮಾಡುವ ಮೂಲಕ ಗ್ಯಾರಂಟಿಗಳಿಗೆ ಹಣ ಹೊಂದಿಸಬೇಕಾದ ಪರಿಸ್ಥಿತಿ ಸರ್ಕಾರಕ್ಕೆ ಎದುರಾಗಿಲ್ಲ. ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕವನ್ನ ಸರ್ಕಾರ ತೆಗೆದುಕೊಳ್ಳುವುದಿಲ್ಲ...

20 ಬೋಗಿಗಳ ಹೊಸ ವಂದೇ ಭಾರತ್‌ ರೈಲು; ಕರ್ನಾಟಕದ ಈ ಮಾರ್ಗದಲ್ಲಿ ಸಂಚಾರ

ಬೆಂಗಳೂರು: ಬೇಡಿಕೆ ಹಿನ್ನೆಲೆ ತಿರುವನಂತಪುರ - ಮಂಗಳೂರು - ತಿರುವನಂತಪುರ ಮಾರ್ಗದಲ್ಲಿ 20 ಬೋಗಿಯ ವಂದೇ ಭಾರತ್‌ ರೈಲು ಓಡಿಸಲು ನಿರ್ಧರಿಸಲಾಗಿದೆ. ಮಂಗಳೂರು-ತಿರುವನಂತಪುರ ವಂದೇ ಭಾರತ್‌...