ಮೈಸೂರು: ಮೈಸೂರಿನಿಂದ ಬೆಂಗಳೂರು ನಡುವೆ ಸಂಚಾರ ಮಾಡುವ ನಾನ್ ಸ್ಟಾಪ್ ಬಸ್ ಗಳ ಟಿಕೆಟ್ ದರವು 187 ರೂಪಾಯಿಗಳಾಗಿದ್ದು, 3 ರೂಪಾಯಿ ಚಿಲ್ಲರೆ ಕೊಡುವುದಕ್ಕೆ ನಿರ್ವಾಹಕರು ಕಷ್ಟಪಡುತ್ತಿದ್ದರು. ಇದನ್ನು ಮನಗಂಡ ಅಧಿಕಾರಿಗಳು ಚಿಲ್ಲರೆ ಸಮಸ್ಯೆ ಹೋಗಲಾಡಿಸಿದೆ.
ಈಗ ಜಗತ್ತು ಡಿಜಿಟಲ್(Digital) ಆಗುತ್ತಿದೆ. ನಮ್ಮ ಕೈಯಲ್ಲಿ ಮೊಬೈಲ್(Mobile) ಒಂದು ಇದ್ದರೆ ಸಾಕು, ಯಾವುದೇ ವ್ಯವಹಾರವನ್ನು ಮಾಡಬಹುದು.
ವಾಯವ್ಯ ಸಾರಿಗೆಯಲ್ಲಿ ಡಿಜಿಟಲ್ ವ್ಯವಸ್ಥೆ ಇದ್ದರೂ ಸಹ, ಹಳೆ ಮೈಸೂರು ಭಾಗದ ಸಾರಿಗೆಯಲ್ಲಿ ಈ ಸೌಲಭ್ಯ ಇಲ್ಲಿಯವರೆಗೆ ಇರಲಿಲ್ಲ. ಇದೇ ಮೊದಲ ಬಾರಿಗೆ ಮೈಸೂರು – ಬೆಂಗಳೂರು ನಡುವೆ ಸಂಚಾರ ಮಾಡುವ ಎಕ್ಸ್‌ಪ್ರೆಸ್ ಬಸ್‌ಗಳಿಗೆ ಈಗ ಡಿಜಿಟಲ್ ಸೇವೆ ವಿಸ್ತರಣೆಯಾಗಿದೆ.
ಮೈಸೂರು ನಗರದಿಂದ ಬೆಂಗಳೂರಿಗೆ ತೆರಳುವ ಬಸ್‌ಗಳಲ್ಲಿ ಮೂರು ವಿಧದ ವ್ಯವಸ್ಥೆ ಇದೆ. ನಾನ್ ಸ್ಟಾಪ್, ಎಕ್ಸ್‌ಪ್ರೆಸ್ ಹಾಗೂ ಶೆಟಲ್ ಬಸ್‌ಗಳಿವೆ. ಆದರೆ ಮೈಸೂರಿನಿಂದ ಬೆಂಗಳೂರು ನಡುವೆ ಸಂಚಾರ ಮಾಡುವ ನಾನ್ ಸ್ಟಾಪ್ ಬಸ್ ಗಳ ಟಿಕೆಟ್ ದರವು 187 ರೂಪಾಯಿಗಳಾಗಿದ್ದು, 3 ರೂಪಾಯಿ ಚಿಲ್ಲರೆ ಕೊಡುವುದಕ್ಕೆ ನಿರ್ವಾಹಕರು ಕಷ್ಟಪಡುತ್ತಿದ್ದರು. ಇದನ್ನು ಮನಗಂಡ ಅಧಿಕಾರಿಗಳು ಚಿಲ್ಲರೆ ಸಮಸ್ಯೆಗೆ ಬ್ರೇಕ್ ಹಾಕಿದ್ದಾರೆ. ಈ ಮೂಲಕ ಡಿಜಿಟಲ್ ಪಾವತಿ ವ್ಯವಸ್ಥೆ ಬಹುತೇಕ ಸಫಲತೆಯನ್ನು ಕಂಡಿದೆ.
ಬಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಗೂಗಲ್ ಪೇ, ಫೋನ್ ಪೇ, ಪೇಟಿಯಂನಂತಹ ಯುಪಿಐಗಳನ್ನು ಹೊಂದಿರಬೇಕು. ಪ್ರಯಾಣಿಕರು ಟಿಕೆಟ್ ಎಲ್ಲಿಗೆ ಎಂದು ಹೇಳಿದ ನಂತರ, ನಿರ್ವಾಹಕರು ಟಿಕೆಟ್ ಮಷಿನ್‌ನಲ್ಲಿ ಡೈನಾಮಿಕ್ ಕ್ಯೂ ಆರ್ ಕೋಡ್ ತೋರಿಸುತ್ತಾರೆ. ಆಗ ಪ್ರಯಾಣಿಕರು QR ಕೋಡ್‌ಗೆ ಸ್ಯ್ಕಾನ್ ಮಾಡುತ್ತಿದ್ದಂತೆ ಹಣ ಪಾವತಿಯಾಗುತ್ತದೆ. ಬಳಿಕ ಕಂಡಕ್ಟರ್ ಟಿಕೆಟ್ ನೀಡುತ್ತಾರೆ.