spot_img
spot_img

ರೈತರಿಗಾಗಿ ಡಿ.15ರೊಳಗೆ ‘ಸಾಗುವಳಿ ಚೀಟಿ’ ವಿತರಣೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಂಗಳೂರು: ರಾಜ್ಯ ಸರ್ಕಾರದಿಂದ ಬಗರ್ ಹುಕುಂ ಸಾಗುವಳಿದಾರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ. ಬರೋಬ್ಬರಿ 1.26 ಲಕ್ಷ ಅರ್ಜಿಗಳು ಸಾಗುವಳಿ ಚೀಟಿಗೆ ಅರ್ಹವಾಗಿವೆ. ಮೊದಲ ಹಂತದಲ್ಲಿ ಡಿಸೆಂಬರ್.15ರೊಳಗೆ 5,000 ರೈತರಿಗೆ ಸಾಗುವಳಿ ಚೀಟಿ ವಿತರಣೆ ಮಾಡುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಶುಕ್ರವಾರ ವಿಕಾಸ ಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಜಿಲ್ಲಾಧಿಕಾರಿಗಳ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬಗರ್ ಹುಕುಂ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳ ಪೈಕಿ ಕನಿಷ್ಟ 5,000 ಜನರ ಅರ್ಜಿಗಳನ್ನಾದರೂ “ಬಗರ್ ಹುಕುಂ” ಕಮಿಟಿಯ ಎದುರು ಮಂಡಿಸಿ ಡಿ.15ರ ಒಳಗೆ ಸಾಗುವಳಿ ಚೀಟಿ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ನೀಡಿದರು.
ಮೊದಲು ಗ್ರಾಮ ಆಡಳಿತ ಅಧಿಕಾರಿ ಅರ್ಜಿದಾರರ ಸ್ಥಳ ಪರಿಶೀಲಿಸಬೇಕು. ತದನಂತರ ಕಂದಾಯ ನಿರೀಕ್ಷಕರು ಹಾಗೂ ತಹಶೀಲ್ದಾರ್ ವರದಿ ಸಲ್ಲಿಸಬೇಕು. ಈ ಎಲ್ಲಾ ಪ್ರಕ್ರಿಯೆಗಳ ನಂತರವೇ ಅರ್ಹ ಅರ್ಜಿಗಳನ್ನು ಬಗರ್ ಹುಕುಂ ಕಮಿಟಿ ಎದುರು ಮಂಡಿಸಲು ಸಾಧ್ಯ. ಈ ಕೆಲಸಗಳು ಸಮಯಾವಕಾಶ ಬೇಡುವಂತದ್ದಾಗಿದ್ದು, ಅಧಿಕಾರಿಗಳಿಗೆ ಮೊದಲ ಹಂತದಲ್ಲಿ 5,000 ಅರ್ಜಿಗಳ ಗುರಿ ನೀಡಿದ್ದು, ಜನವರಿ ವೇಳೆಗೆ ಈ ಗುರಿ 15 ರಿಂದ 20 ಸಾವಿರಕ್ಕೆ ಏರಿಕೆಯಾಗಲಿದೆ” ಎಂದರು.
ಈ ಬಗ್ಗೆ ಮಾಹಿತಿ ನೀಡಿದ ಅವರು, “ರಾಜ್ಯಾದ್ಯಂತ ಲಕ್ಷಾಂತರ ಜನ ಬಗರ್ ಹುಕುಂ ಅಡಿಯಲ್ಲಿ ಜಮೀನು ಮಂಜೂರಾತಿಗೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಪೈಕಿ 1,26,000 ಅರ್ಜಿಗಳನ್ನು ಮಾತ್ರ ಅರ್ಹ ಎಂದು ಪರಿಗಣಿಸಲಾಗಿದೆ. ಕೆಲ ಜಿಲ್ಲೆಗಳಲ್ಲಿ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಈಗಾಗಲೇ ಬಗರ್ ಹುಕುಂ ಕಮಿಟಿ ಎದುರು ಇಡಲಾಗಿದೆ. “ಬಗರ್ ಹುಕುಂ” ಯೋಜನೆಯ ಅಡಿ ಅರ್ಹ ಫಲಾನುಭವಿಗಳಿಗೆ ಡಿಜಿಟಲ್ ಸಾಗುವಳಿ ಚೀಟಿ ನೀಡಲಾಗುವುದು ಎಂದು ತಿಳಿಸಿದರು.
“ಬಗರ್ ಹುಕುಂ ಯೋಜನೆಯ ಅಡಿ ಜಮೀನು ಮಂಜೂರಾತಿಗೆ ಕೋರಿ ಅರ್ಜಿ ಸಲ್ಲಿಸಿದವರ ಪೈಕಿ 5 ರಿಂದ 6 ಲಕ್ಷ ಅರ್ಜಿಗಳನ್ನು ಅನರ್ಹ ಎಂದು ಪರಿಗಣಿಸಲಾಗಿದೆ. ಕಾನೂನು ರೀತ್ಯಾ ಅರ್ಜಿ ಸಲ್ಲಿಸಬೇಕಾದ ದಿನಕ್ಕೆ 18 ವರ್ಷ ತುಂಬದ 26,051 ಜನ ಅರ್ಜಿ ಸಲ್ಲಿಸಿದ್ದಾರೆ. ಇದಲ್ಲದೆ, ಈಗಾಗಲೇ 4.38 ಎಕರೆ ಜಮೀನು ಹೊಂದಿರುವ 26,922 ಅರ್ಜಿಗಳು, ಕೆರೆ ರಸ್ತೆ ಸೇರಿ ಬಿ-ಖರಾಬು ಪ್ರದೇಶಗಳ ಮಂಜೂರಾತಿಗೆ ಕೋರಿ 40,799 ಅರ್ಜಿಗಳು, ಅರಣ್ಯ ಪ್ರದೇಶಗಳ ಮಂಜೂರಾತಿಗೆ 1,68,119 ಅರ್ಜಿಗಳು, ನಗರ ಪರಿಮಿತಿಯೊಳಗೆ ಮಂಜೂರಾತಿ ಕೋರಿ 68,561 ಅರ್ಜಿಗಳು, ತಾಲೂಕಿನಲ್ಲೇ ವಾಸ ಇಲ್ಲದ 8,665 ಅರ್ಜಿಗಳು ಹಾಗೂ ಕೃಷಿಕರಲ್ಲ 1,00,400 ಜನ ಅರ್ಜಿ ಸಲ್ಲಿಸಿದ್ದಾರೆ. ಈ ಎಲ್ಲಾ ಅರ್ಜಿಗಳನ್ನೂ ಅನರ್ಹ ಎಂದು ಪರಿಗಣಿಸಲಾಗಿದೆ” ಎಂದು ಅವರು ಮಾಹಿತಿ ನೀಡಿದರು.
ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ರೈತರಿಗೆ ಮಂಜೂರಾಗುವ ಜಮೀನಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಕಿಂಚಿತ್ತೂ ತಕರಾರು ಬರಬಾರದು, ಕಡತ ಕಳೆದು ಹೋಯ್ತು ಎಂದು ರೈತರು ಮತ್ತೆ ಸರ್ಕಾರಿ ಕಚೇರಿಗೆ ಅಲೆಯಬಾರದು ಎಂಬ ವಿಚಾರದಲ್ಲಿ ಸರ್ಕಾರ ಬದ್ದವಾಗಿದೆ. ಹೀಗಾಗಿ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಬಗರ್ ಹುಕುಂ ಕಮಿಟಿ ಎದುರು ಮಂಡಿಸಿ ಮಂಜೂರಾದ ಜಮೀನಿಗೆ ಪೋಡಿಯೂ ಮಾಡಿಸಿ, ಪಹಣಿಯಲ್ಲಿ ಹೆಸರನ್ನು ನಮೂದಿಸಿ ಸ್ವತಃ ತಹಶೀಲ್ದಾರರು ನೋಂದಣಿ ಕಚೇರಿಯಲ್ಲಿ ಜಮೀನಿನ ನೋಂದಣಿಯೂ ಮಾಡಿ ರೈತರಿಗೆ ಡಿಜಿಟಲ್ ಸಾಗುವಳಿ ಚೀಟಿ ನೀಡಲಾಗುವುದು” ಎಂದು ಅವರು ಮಾಹಿತಿ ನೀಡಿದರು. ಆದರೆ, ಆ ಸಂಖ್ಯೆ ಸಮಾಧಾನಕರವಾಗಿಲ್ಲ. ಹೀಗಾಗಿ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಗುರಿ ನಿಗದಿಪಡಿಸಲಾಗಿದೆ. ಡಿ.15ರ ಒಳಗೆ ರಾಜ್ಯಾದ್ಯಂತ ಕನಿಷ್ಟ 5,000 ಅರ್ಹ ಅರ್ಜಿಗಳನ್ನು ಕಮಿಟಿ ಎದುರು ಮಂಡಿಸಲು ಸೂಚಿಸಲಾಗಿದೆ.
“ಅನರ್ಹ ಅರ್ಜಿಗಳನ್ನು ಅಧಿಕಾರಿಗಳ ಮಟ್ಟದಲ್ಲೇ ಪರಿಶೀಲನೆ ವೇಳೆ ವಿಲೇವಾರಿ ಮಾಡಬೇಕು. ಇಂತಹ ಅರ್ಜಿಗಳನ್ನು ಬಗರ್ ಹುಕುಂ ಕಮಿಟಿ ಎದುರು ಮಂಡಿಸಿ ಸಮಯವನ್ನು ವ್ಯರ್ಥ ಮಾಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ, ಈ ಪರಿಶೀಲನೆಯೇ ಅಂತಿಮವಲ್ಲ. ಒಂದು ವೇಳೆ ಅಧಿಕಾರಿಗಳ ತಪ್ಪಿನಿಂದ ಅರ್ಹ ಅರ್ಜಿಯನ್ನು ವಿಸರ್ಜಿಸಲಾಗಿದ್ದರೆ ಅಂತಹ ಅರ್ಜಿಗಳನ್ನು ಮತ್ತೆ ಮರು ಪರಿಶೀಲನೆ ಒಳಪಡಿಸಲಾಗುವುದು” ಎಂದೂ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಬಿಗ್​ಬಾಸ್​ ಕೊಟ್ಟ ಟಾಸ್ಕ್​ ಆಡಲು ಸ್ಪರ್ಧಿಗಳ ಹರಸಾಹಸ

ಕನ್ನಡದ ಬಿಗ್​ಬಾಸ್​ ಸೀಸನ್​ 11ರಲ್ಲಿ ವೈಲ್ಡ್​ ಕಾರ್ಡ್​ ಸ್ಪರ್ಧಿಗಳು ಸಖತ್​ ಸದ್ದು ಮಾಡುತ್ತಿದ್ದಾರೆ. ತಮ್ಮ ಹಳ್ಳಿ ಸೊಗಡಿನ ರೀತಿಯಲ್ಲೇ ಹಾಡು ಹಾಡಿ ವೀಕ್ಷಕರಿಗೆ ಮನರಂಜನೆ...

ರಾಜ್ಯದ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ಕನ್ಯಾಕುಮಾರಿ ಮತ್ತು ಶ್ರೀಲಂಕಾ ಪ್ರದೇಶದಲ್ಲಿ ವಾಯುಭಾರ ಕುಸಿತವಾಗಿದ್ದು, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮನ್ನಾರ್ ಗಲ್ಫ್...

ಹಿಂದುಳಿದ ವರ್ಗಗಳ ಮೀಸಲಾತಿಗೆ ಆಗ್ರಹ : ಪಂಚಮಸಾಲಿಗರ ಹೋರಾಟ ತೀವ್ರ!

ಬೆಂಗಳೂರು: ಪ್ರತಿಭಟನಾಕಾರರ ಮೇಲೆ ಪೊಲೀಸರ ಲಾಠಿ ಚಾರ್ಜ್ ವಿರೋಧಿಸಿ ಸುವರ್ಣಸೌಧದ ಬಳಿ ಇರುವ ಅಂಬೇಡ್ಕರ್ ಪ್ರತಿಮೆ ಎದುರು ವಿಪಕ್ಷ ನಾಯಕ ಆರ್, ಅಶೋಕ್ ನೇತೃತ್ವದಲ್ಲಿ...

ಆಸ್ತಿ ತೆರಿಗೆ ಕಟ್ಟಲು ನಿರಾಕರಣೆ : ರಸ್ತೆ ಸರಿಪಡಿಸಿದ ಪಂಚಾಯಿತಿ ಸದಸ್ಯರು

ಬೆಂಗಳೂರು: ಆಸ್ತಿ ತೆರಿಗೆ ಕಟ್ಟುವುದಿಲ್ಲ ಎಂಬ ನಾಗರಿಕರಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಹಾಲನಾಯಕನಹಳ್ಳಿ ಪಂಚಾಯಿತಿಯ 15 ಸದಸ್ಯರು ತಮ್ಮ ಜೇಬಿನಿಂದ ಸುಮಾರು 5 ಲಕ್ಷ...