ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಕ್ಯಾಪ್ಟನ್ ಸೂರ್ಯಕುಮಾರ್ ನಡೆಯ ಬಗ್ಗೆ ತೀವ್ರ ಚರ್ಚೆ ಶುರುವಾಗಿದೆ. 2015ರಲ್ಲಿ ನಡೆದ ಆ ಒಂದು ಘಟನೆ ಟೀಮ್ ಇಂಡಿಯಾದ ಡ್ರೆಸ್ಸಿಂಗ್ರೂಮ್ ವಾತಾವರಣ ಹೇಗಿರಲಿದೆ ಅನ್ನೋ ಕುತೂಹಲ ಹುಟ್ಟಿಸಿದೆ.
ಟೀಮ್ ಇಂಡಿಯಾದ ನೂತನ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್, ಮೊದಲ ಅಗ್ನಿ ಪರೀಕ್ಷೆಗೆ ಸಜ್ಜಾಗಿದ್ದಾರೆ. ಟೀಮ್ ಇಂಡಿಯಾಗೆ ಕಾಲಿಟ್ಟ ಮೂರೇ ವರ್ಷಕ್ಕೆ ಟಿ20 ನಾಯಕನ ಪಟ್ಟ ಅಲಂಕರಿಸಿರೋ ನೂತನ ನಾಯಕನ ಅಡಿಯಲ್ಲಿ ಲಂಕಾ ದಹನಕ್ಕೆ ಟೀಮ್ ಇಂಡಿಯಾ ರೆಡಿಯಾಗಿದೆ. ನಾಳೆಯಿಂದ ಟಿ20 ಸರಣಿ ಆರಂಭವಾಗಲಿದ್ದು, ಸೂರ್ಯಕುಮಾರ್ ನಾಯಕತ್ವದ ಮೇಲೆ ಎಲ್ಲರ ಹದ್ದಿನ ಕಣ್ಣಿದೆ. 2015ರಲ್ಲಿ ನಡೆದ ಆ ಒಂದು ಘಟನೆ ಸೂರ್ಯನ ನಡೆ ಹೇಗಿರಲಿದೆ ಅನ್ನೋ ಕುತೂಹಲ ಹೆಚ್ಚಿಸಿದೆ.
2015ರಲ್ಲಿ ಸೂರ್ಯಕುಮಾರ್ ಯಾದವ್ ಮುಂಬೈ ತಂಡದ ನಾಯಕನ ಪಟ್ಟಕ್ಕೇರಿದ್ರು. ಆಗ ಸೂರ್ಯ ನಾಯಕತ್ವ ತೀವ್ರ ಟೀಕೆಗೆ ಗುರಿಯಾಗಿತ್ತು. ತಂಡದ ಸಹ ಆಟಗಾರರು ಸೂರ್ಯನ ವಿರುದ್ಧ ಗಂಭೀರ ಆರೋಪ ಮಾಡಿದ್ರು. ಮೈದಾನದಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸ್ತಾರೆ. ಡ್ರೆಸ್ಸಿಂಗ್ ರೂಮ್ನಲ್ಲಿ ದಬ್ಬಾಳಿಕೆ ನಡೆಸ್ತಾರೆ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ಗೆ ದೂರು ನೀಡಿದ್ರು. ಇದ್ರ ಬೆನ್ನಲ್ಲೇ MCA ಸೂರ್ಯನನ್ನ ನಾಯಕತ್ವದಿಂದ ಕಿತ್ತು ಹಾಕಿತ್ತು. ಹೀಗಾಗಿ ಇದೀಗ ಸೂರ್ಯ ಟೀಮ್ ಇಂಡಿಯಾದ ಸಾರಥ್ಯವಹಿಸಿದ ಬಳಿಕ, ಡ್ರೆಸ್ಸಿಂಗ್ ರೂಮ್ನ ವಾತಾವರಣ ಮುಂದೆ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ.