ಕಾವೇರಿ ಜಲಾನಯನ ಪ್ರದೇಶದ ಸುತ್ತಮುತ್ತ ಮಳೆ ಹಿನ್ನೆಲೆಯಲ್ಲಿ ಕೆಆರ್‌ಎಸ್ (ಕೃಷ್ಣ ರಾಜ ಸಾಗರ) ಡ್ಯಾಂನಿಂದ 90 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಇದರಿಂದ ನದಿ ಪಾತ್ರದ ಜಮೀನುಗಳಲ್ಲಿ ಬೆಳೆಯಲಾಗಿದ್ದ ಕಬ್ಬು, ತೆಂಗು, ಭತ್ತ, ಅಡಿಕೆ ಸೇರಿದಂತೆ ಹಲವು ಬೆಳೆಗಳು ಮುಳುಗಡೆಯಾಗಿವೆ.
ಕ್ಷಣ ಕ್ಷಣಕ್ಕೂ ಕೆಆರ್‌ಎಸ್ ಡ್ಯಾಂ ಒಳಹರಿವು ಹೆಚ್ಚಳವಾಗುತ್ತಿದೆ. ಜಲಾಶಯದಿಂದ ನೀರು ರಿಲೀಸ್ ಮಾಡಿದ್ದರಿಂದ ನದಿ ಪಾತ್ರದ ಜನರಲ್ಲಿ ಆತಂಕ ಹೆಚ್ಚಾಗಿದೆ. ಧಾರ್ಮಿಕ ಕ್ಷೇತ್ರ, ಪ್ರವಾಸಿ ತಾಣಗಳಿಗೂ ಜಲ ಕಂಟಕ ತಟ್ಟಿದೆ. ನಿಮಿಷಾಂಬ ದೇವಾಲಯ, ರಂಗನಾಥ ಸ್ವಾಮಿ, ಪಶ್ಚಿಮ ವಾಹಿನಿಯ ಸ್ನಾನಘಟ್ಟಗಳು ಮುಳುಗಡೆಯಾಗಿವೆ. ನದಿ ಪಕ್ಕದ ಮನೆಗಳಿಗೂ ನೀರು ನುಗ್ಗುವ ಭೀತಿ ಇದ್ದು ನದಿ ನೀರು ಮತ್ತಷ್ಟು ಹೆಚ್ಚಾದರೆ ಅಪಾಯ ಪಕ್ಕಾ ಎನ್ನಲಾಗುತ್ತಿದೆ. ಹೀಗಾಗಿ ನದಿ ಪಾತ್ರದ ಜನರು ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ.
ಇಂದಿನ ಕೆಆರ್‌ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ- 124.80 ಅಡಿ
ಇಂದಿನ ಮಟ್ಟ- 124.35 ಅಡಿ
ಗರಿಷ್ಠ ಸಾಂದ್ರತೆ- 49.452 ಟಿಎಂಸಿ
ಇಂದಿನ ಸಾಂದ್ರತೆ- 48.824 ಟಿಎಂಸಿ
ಒಳ ಹರಿವು- 90,000 ಕ್ಯೂಸೆಕ್
ಹೊರ ಹರಿವು- 80,000 ಕ್ಯೂಸೆಕ್