spot_img
spot_img

ಸೂರ್ಯ ಕ್ಯಾಪ್ಟನ್ ಆದ್ರೆ ದಬ್ಬಾಳಿಕೆ ಮಾಡ್ತಾರಾ.. ಅವಾಚ್ಯ ಶಬ್ದಗಳಿಂದ ನಿಂದಿಸ್ತಾರಾ; ಏನಿದು ಸ್ಟೋರಿ?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಕ್ಯಾಪ್ಟನ್​ ಸೂರ್ಯಕುಮಾರ್​ ನಡೆಯ ಬಗ್ಗೆ ತೀವ್ರ ಚರ್ಚೆ ಶುರುವಾಗಿದೆ. 2015ರಲ್ಲಿ ನಡೆದ ಆ ಒಂದು ಘಟನೆ ಟೀಮ್​ ಇಂಡಿಯಾದ ಡ್ರೆಸ್ಸಿಂಗ್​ರೂಮ್​ ವಾತಾವರಣ ಹೇಗಿರಲಿದೆ ಅನ್ನೋ ಕುತೂಹಲ ಹುಟ್ಟಿಸಿದೆ.

ಟೀಮ್​ ಇಂಡಿಯಾದ ನೂತನ ಕ್ಯಾಪ್ಟನ್​ ಸೂರ್ಯಕುಮಾರ್​ ಯಾದವ್​, ಮೊದಲ ಅಗ್ನಿ ಪರೀಕ್ಷೆಗೆ ಸಜ್ಜಾಗಿದ್ದಾರೆ. ಟೀಮ್​ ಇಂಡಿಯಾಗೆ ಕಾಲಿಟ್ಟ ಮೂರೇ ವರ್ಷಕ್ಕೆ ಟಿ20 ನಾಯಕನ ಪಟ್ಟ ಅಲಂಕರಿಸಿರೋ ನೂತನ ನಾಯಕನ ಅಡಿಯಲ್ಲಿ ಲಂಕಾ ದಹನಕ್ಕೆ ಟೀಮ್​ ಇಂಡಿಯಾ ರೆಡಿಯಾಗಿದೆ. ನಾಳೆಯಿಂದ ಟಿ20 ಸರಣಿ ಆರಂಭವಾಗಲಿದ್ದು, ಸೂರ್ಯಕುಮಾರ್​ ನಾಯಕತ್ವದ ಮೇಲೆ ಎಲ್ಲರ ಹದ್ದಿನ ಕಣ್ಣಿದೆ. 2015ರಲ್ಲಿ ನಡೆದ ಆ ಒಂದು ಘಟನೆ ಸೂರ್ಯನ ನಡೆ ಹೇಗಿರಲಿದೆ ಅನ್ನೋ ಕುತೂಹಲ ಹೆಚ್ಚಿಸಿದೆ.

2015ರಲ್ಲಿ ಸೂರ್ಯಕುಮಾರ್​ ಯಾದವ್​ ಮುಂಬೈ ತಂಡದ ನಾಯಕನ ಪಟ್ಟಕ್ಕೇರಿದ್ರು. ಆಗ ಸೂರ್ಯ ನಾಯಕತ್ವ ತೀವ್ರ ಟೀಕೆಗೆ ಗುರಿಯಾಗಿತ್ತು. ತಂಡದ ಸಹ ಆಟಗಾರರು ಸೂರ್ಯನ ವಿರುದ್ಧ ಗಂಭೀರ ಆರೋಪ ಮಾಡಿದ್ರು. ಮೈದಾನದಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸ್ತಾರೆ. ಡ್ರೆಸ್ಸಿಂಗ್​ ರೂಮ್​ನಲ್ಲಿ ದಬ್ಬಾಳಿಕೆ ನಡೆಸ್ತಾರೆ ಎಂದು ಮುಂಬೈ ಕ್ರಿಕೆಟ್​ ಅಸೋಸಿಯೇಷನ್​ಗೆ ದೂರು ನೀಡಿದ್ರು. ಇದ್ರ ಬೆನ್ನಲ್ಲೇ MCA ಸೂರ್ಯನನ್ನ ನಾಯಕತ್ವದಿಂದ ಕಿತ್ತು ಹಾಕಿತ್ತು. ಹೀಗಾಗಿ ಇದೀಗ ಸೂರ್ಯ ಟೀಮ್​ ಇಂಡಿಯಾದ ಸಾರಥ್ಯವಹಿಸಿದ ಬಳಿಕ, ಡ್ರೆಸ್ಸಿಂಗ್​ ರೂಮ್​ನ ವಾತಾವರಣ ಮುಂದೆ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ.

WhatsApp Group Join Now
Telegram Group Join Now
Instagram Account Follow Now
spot_img

Related articles

ಎರಡನೇ ಟೆಸ್ಟ್‌ಗೆ ತಂಡ ಹೇಗೆ ಇರಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ ? ಸ್ಟಾರ್​ ಆಟಗಾರನಿಗೆ ಕೊಕ್​​̤!

ಬಾಂಗ್ಲಾದೇಶ ತಂಡ ಟೆಸ್ಟ್ ಮತ್ತು ಟಿ20 ಸರಣಿಗಾಗಿ ಭಾರತದ ಪ್ರವಾಸ ಕೈಗೊಂಡಿದೆ. ಈಗಾಗಲೇ ಟೀಮ್​ ಇಂಡಿಯಾ 2 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಮುನ್ನಡೆ...

ತಿರುಪತಿ ವಿಚಾರ : ಡಿಸಿಎಂ ಪವನ್ ಕಲ್ಯಾಣ್‌ಗೆ ಕ್ಷಮೆ ಕೇಳಿದ ನಟ ಯಾರು ?

ತಿರುಪತಿ-ತಿರುಮಲ ಲಡ್ಡು ಪ್ರಸಾದದಲ್ಲಿ ಕಲಬೆರಕೆ ವಿಚಾರ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಲಡ್ಡು ವಿಚಾರವಾಗಿ ಸಾಕಷ್ಟು ರೀಲ್ಸ್ ಗಳು ಮತ್ತು ಮೀಮ್ಸ್ ಗಳು ಹರಿದಾಡುತ್ತಿವೆ....

ನಿಮ್ಮ ಮನೆಯಲ್ಲಿರುವ ತುಪ್ಪ ಶುದ್ಧವಾಗಿದೆಯಾ ಕಲಬೆರಕೆವಾಗಿದೆಯಾ ? ಇಲ್ಲಿವೆ ಸರಳವಾದ ಉಪಾಯಗಳು.!

ತಿರುಪತಿ ಬಾಲಾಜಿಯ ಪ್ರಸಾದದಲ್ಲಿ ಕಲಬೆರಕೆ ಆಗಿದೆ ಎಂಬ ವಿಷಯ ತಿಳಿದಾಗಿನಿಂದ ತುಪ್ಪದ ವಿಚಾರದಲ್ಲಿ ಅನೇಕ ಸಂಶಯಗಳು ಮೂಡುತ್ತಿವೆ. ನಂದಿನಿ ತುಪ್ಪದ ಬಿಟ್ರೆ ಬೇರೆ ಯಾವ...

ಅಪ್ರಾಪ್ತ ಬಾಲಕಿಯರಿಗೆ ಮಾದರಿಯಾಗಿದ್ದಾಳೆ.! ತನ್ನ ಮದುವೆಯನ್ನೇ ನಿಲ್ಲಿಸಿದ ಬಾಲಕಿ!

ಬೀದರ್, ಕಲಬುರಗಿ: ಬಸವಕಲ್ಯಾಣ ತಾಲೂಕಿನ ಹಳ್ಳಿಯೊಂದರಲ್ಲಿ 9ನೇ ತರಗತಿ ಓದುತ್ತಿರುವ 14 ವರ್ಷದ ಈ ಬಾಲಕಿ ತನ್ನ ಮದುವೆಯನ್ನೇ ನಿಲ್ಲಿಸಿದ ಬಾಲಕಿ ದಿಟ್ಟ ಹೋರಾಟಗಾರ್ತಿ, ಇತರೆ...