ರಾತ್ರಿ ಮಲಗುವಾಗ ಇದನ್ನು ಮಾಡಬೇಡಿ!
ಇಂದಿನ ಕಾಲದಲ್ಲಿ ಹೆಚ್ಚಿನವರಿಗೆ ಸ್ಮಾರ್ಟ್ ಫೋನ್ ಮೇಲೆ ಆಕರ್ಷಣೆ ಇದ್ದೆ ಇರುತ್ತದೆ. ನಮಗೆ ಸ್ಮಾರ್ಟ್ಫೋನ್ ಹೇಗೆ ಅಗತ್ಯವಾಗಿದೆಯೋ, ಅದನ್ನು ಬಳಕೆ ಮಾಡುವ ವಿಧಾನ ಸಹ ಬಹಳ ಮುಖ್ಯವಾಗಿರುತ್ತದೆ.
Mobile ಫೋನ್ ಪಕ್ಕದಲ್ಲಿ ಇದ್ದರೇ ಕಷ್ಟ!
ಆದ್ರೆ ಸ್ಮಾರ್ಟ್ಫೋನ್ ಬಳಸುವಾಗ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅಂತೆಯೇ ಪಕ್ಕದಲ್ಲೇ ಮೊಬೈಲ್ ಇಟ್ಟುಕೊಂಡು ಮಲಗುವವರಿಗೆ ಆಘಾತಕಾರಿ ಸುದ್ದಿಯೊಂದನ್ನು ತಜ್ಞರು ತಿಳಿಸಿದ್ದಾರೆ.
ತಡ ರಾತ್ರಿ Mobile ಫೋನ್ use ಮಾಡಬೇಡಿ!
ತಡರಾತ್ರಿಯವರೆಗೆ ಮೊಬೈಲ್ ನೋಡುತ್ತಾ ಮಲಗುವುದು, ಪಕ್ಕದಲ್ಲಿಯೇ ಇಟ್ಟುಕೊಂಡು ನಿದ್ರೆ ಹೋಗುವುದು ಈಗಂತೂ ಸಾಮಾನ್ಯವಾಗಿದ್ದು, ಇದು ಸಂತಾನೋತ್ಪತ್ತಿಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಹೇಳುತ್ತಾರೆ.
Mobile ಫೋನ್ ನಿಂದ ಬಂಜೆತನ
ಹೀಗಾಗಿ ಇತ್ತೀಚಿನ ದಿನಗಳಲ್ಲಿ ಬಂಜೆತನ ಹೆಚ್ಚುತ್ತಿರುವುದಕ್ಕೆ ಮೊಬೈಲ್ ಪಕ್ಕದಲ್ಲಿ ಇಟ್ಟುಕೊಂಡು ಮಲಗುವ ಅಭ್ಯಾಸವೂ ಒಂದು ಕಾರಣವಾಗಿರಬಹುದು ಎಂದು ಸಂಶೋಧನೆಗಳು ತಿಳಿಸಿವೆ. ಅಲ್ಲದೇ ಗರ್ಭಿಣಿ ಮಹಿಳೆಯರು ಮೊಬೈಲ್ ಅನ್ನು ಪಕ್ಕದಲ್ಲಿ ಇಟ್ಟುಕೊಂಡು ಮಲಗುವುದರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಒತ್ತಡ, ಆತಂಕ ಜಾಸ್ತಿ ಆಗುತ್ತದೆ. ಜೊತೆಗೆ ನಿದ್ರಾಹೀನತೆಯ ತೊಂದರೆ ಕೂಡ ಉಂಟಾಗಬಹುದು. ಇದಲ್ಲದೆ ಇದು ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.
ಪೃಷರ ಪುರುಷತ್ವ ಹಾಳಾಗುತ್ತೆ?
ಈ ಅಭ್ಯಾಸವು ಪುರುಷರಲ್ಲಿ ವೀರ್ಯದ ಗಣತಿಯನ್ನು ಕಡಿಮೆ ಮಾಡುವುದರೊಂದಿಗೆ ಅವುಗಳ ಗುಣಮಟ್ಟವನ್ನು ತಗ್ಗಿಸಬಹುದು, ಹಾಗಾಗಿ ಈ ಅಭ್ಯಾಸ ಪುರುಷರಲ್ಲಿನ ಬಂಜೆತನಕ್ಕೆ ಪ್ರಮುಖ ಕಾರಣವಾಗಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
Mobile ಫೋನ್ ದೂರದಲ್ಲಿ ಇಡಬೇಕು!
ಹೀಗಾಗಿ ನೀವು ರಾತ್ರಿ ಮಲಗುವಾಗ ಮೊಬೈಲ್ ಅನ್ನು ಸ್ವಲ್ಪ ದೂರದಲ್ಲಿ ಇರಿಸಿ ಮಲಗುವುದು ಒಳ್ಳೆಯದು. ಏಕೆಂದರೆ ಮೊಬೈಲ್ ಪಕ್ಕದಲ್ಲಿ ಇಟ್ಟುಕೊಂಡು ಮಲಗುವುದರಿಂದ ತಲೆಗೆ ಸಂಬಂಧಪಟ್ಟ ಕ್ಯಾನ್ಸರ್ ಬೆಳವಣಿಗೆ ಆಗುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಒಳ್ಳೆಯ ಪುಸ್ತಕ ಎಲ್ಲ ರೋಗಕ್ಕೂ ಮದ್ದು!
ಇದರ ಬದಲು ರಾತ್ರಿ ಸಮಯದಲ್ಲಿ ಒಂದು ಒಳ್ಳೆಯ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ. ಇದರಿಂದ ನಿದ್ರೆಯೂ ಚೆನ್ನಾಗಿ ಬರುತ್ತದೆ. ಇದು ಒಳ್ಳೆಯ ಅಭ್ಯಾಸ ಕೂಡ.
ಇನ್ನಷ್ಟು ಓದಿರಿ:
C M ಗೆ ಶೋಕಾಸ್ ನೋಟಿಸ್: ಇದಕ್ಕೆಲ್ಲ ಅಂಜುವ ಜಾಯಮಾನ ನನ್ನದಲ್ಲ -C M ಸಿದ್ದರಾಮಯ್ಯ
New Parliament Building: ಸೋರುತಿಹುದು 971 Crore ಸಂಸದ್ ಮಾಳಿಗೆ ಮಹಾ ಜ್ಞಾನಿಯಿಂದ?