spot_img
spot_img

DOCUMENTS FOR PROPERTY BUY : ಖರೀದಿಸುವ ಆಸ್ತಿ ಯಾವ ಖಾತಾದಲ್ಲಿರಬೇಕು?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Bangalore News:

ಬೆಂಗಳೂರಲ್ಲಿ PROPERTY ಖರೀದಿ ವೇಳೆ ದಾಖಲೆಗಳ ಪರಿಶೀಲನೆ ಬಹುಮುಖ್ಯ. ಹಾಗಾಗಿ ಖರೀದಿಸುವ PROPERTY ಯಾವ ಖಾತೆಯಲ್ಲಿ ಎಂಬುದನ್ನು ತಿಳಿದುಕೊಳ್ಳಬೇಕು. ಈ ಕುರಿತ ಮಾಹಿತಿ ಇಲ್ಲಿದೆ.

ಪ್ರಮುಖವಾಗಿ PROPERTY ದಾಖಲೆಗಳನ್ನು ಎ ಹಾಗೂ ಬಿ ಖಾತಾ ಎಂದು ವಿಂಗಡಿಸಲಾಗಿದೆ. ಖರೀದಿಸಲು ಉದ್ದೇಶವಿರುವ PROPERTY ಯಾವ ಖಾತಾದಡಿ ಇದೆ ಎಂಬುದನ್ನು ತಿಳಿದುಕೊಳ್ಳುವುದು ಅತಿ ಮುಖ್ಯ. ಎ ಮತ್ತು ಬಿ ಖಾತೆಗಳ ನಡುವೆ ಇರುವ ವ್ಯತ್ಯಾಸವೇನು?, ಯಾವ ಖಾತೆ ಇದ್ದರೆ ಒಳ್ಳೆಯದು ಎಂಬೆಲ್ಲಾ ಪ್ರಶ್ನೆಗಳು ಮೂಡುವುದು ಸಹಜ.

ಇದಕ್ಕೆ ಸಂಪೂರ್ಣ ಮಾಹಿತಿ ಇಲ್ಲಿದೆ.PROPERTY ಖರೀದಿ ಮಾಡುವವರು ಸ್ವಲ್ಪ ಯಾಮಾರಿದರೂ ಸಮಸ್ಯೆಗೆ ಸಿಲುಕುವುದು ನಿಶ್ಚಿತ. ಮುಖ್ಯವಾಗಿ ರಾಜಧಾನಿ ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಭಾರಿ ಜಾಗೃತರಾಗಿರಬೇಕು. PROPERTY ಖರೀದಿ ಮಾಡುವ ವೇಳೆ ದಾಖಲೆ ಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಿಯೇ ವ್ಯವಹಾರದಲ್ಲಿ ಮುಂದುವರೆಯುವುದು ಅತ್ಯಗತ್ಯ.

Account System: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಿಂದ ನೀಡಲಾದ ಖಾತಾ ಪ್ರಮಾಣಪತ್ರವು PROPERTYಯ ಗಾತ್ರ, ಪ್ರದೇಶ, ಸ್ಥಳ ಮತ್ತು ಪ್ರಕಾರದ (ವಸತಿ ಅಥವಾ ವಾಣಿಜ್ಯ) ಪ್ರಮುಖ ಮಾಹಿತಿಯನ್ನು ಒಳಗೊಂಡಿರುತ್ತದೆ.

ಬೆಂಗಳೂರಿನ PROPERTY ತೆರಿಗೆ ಸಂಗ್ರಹವನ್ನು ಸರಳಗೊಳಿಸಲು 2007 ರಲ್ಲಿ ಖಾತಾ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಇದು ಬೆಂಗಳೂರಿನಲ್ಲಿರುವ ಆಸ್ತಿಯ ಮಾಲೀಕತ್ವದ ವಿವರಗಳನ್ನು ಮೌಲ್ಯೀಕರಿಸುವ ಕಾನೂನು ದಾಖಲೆಯಾಗಿದೆ.

What is an A Account? ಸರಳವಾಗಿ ಹೇಳುವುದಾದರೆ, PROPERTYಯು ಸಂಪೂರ್ಣವಾಗಿ ಕಾನೂನುಬದ್ಧವಾಗಿದ್ದರೆ, ಅವುಗಳನ್ನು ಎ ಖಾತಾ ಎಂದು ವರ್ಗೀಕರಿಸಲಾಗುತ್ತದೆ. ಖಾತಾ ಪ್ರಮಾಣ ಪತ್ರ PROPERTYಯು ಸಂಬಂಧಪಟ್ಟ ಸಂಸ್ಥೆಗಳಿಂದ ಅಗತ್ಯವಿರುವ ಎಲ್ಲಾ ಅನುಮೋದನೆಗಳನ್ನು ಪಡೆದುಕೊಂಡಿದ್ದರೆ ಮತ್ತು ಕಟ್ಟಡ ಬೈಲಾಗಳು, ಆಸ್ತಿ ತೆರಿಗೆ ಸೇರಿದಂತೆ ನಿಗದಿತ ಮಾನದಂಡಗಳಿಗೆ ಅನುಸಾರವಾಗಿ ನಿರ್ಮಿಸಲಾಗಿದ್ದರೆ ಅದನ್ನು ಕಾನೂನುಬದ್ಧವಾಗಿದೆ ಎಂದು ಮೌಲ್ಯೀಕರಿಸಲಾಗುತ್ತದೆ.

Where is the B account?  ನಿರ್ದಿಷ್ಟ ಆಸ್ತಿಯ ಅಥವಾ ಕಟ್ಟಡದ ಕನ್ವರ್ಷನ್ ಪ್ರಕ್ರಿಯೆಯಲ್ಲಿ, ನಿರ್ಮಾಣದಲ್ಲಿ ಅಥವಾ ಇತರ ಯಾವುದೇ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆಯಾಗಿದ್ದರೆ ಬಿ ಖಾತಾ ನೀಡಲಾಗುತ್ತದೆ.PROPERTY ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣವಾಗಿರುವ ಕಟ್ಟಡಗಳು, ಬಡಾವಣೆಗಳು ಅಥವಾ ಕಂದಾಯ ನಿವೇಶನಗಳನ್ನು ಮಹಾನಗರ ಪಾಲಿಕೆ ಬಿ ಖಾತಾ ಎಂದು ವರ್ಗೀಕರಿಸಿದೆ.

ಆದರೆ, ಬಿ ಖಾತಾ ಹೊಂದಿರುವ PROPERTYಗಳೆಲ್ಲ ಸಂಪೂರ್ಣ ಕಾನೂನುಬಾಹಿರ ಎಂದು ಹೇಳಲಾಗುವುದಿಲ್ಲ.ಬಿ ಖಾತಾ ಹೊಂದಿರುವ PROPERTY, ಕಟ್ಟಡಗಳು ಸಹ ಬಿಬಿಎಂಪಿಯ ತೆರಿಗೆ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ನಾಗರಿಕ ಶುಲ್ಕಗಳು ಮತ್ತು ತೆರಿಗೆಗಳ ಪಾವತಿಯ ಹೊರತಾಗಿಯೂ ಸಂಪೂರ್ಣವಾಗಿ ಕಾನೂನುಬದ್ಧವಲ್ಲದ PROPERTYಯೇ ಬಿ ಖಾತಾ ಎಂದು ಹೇಳಲಾಗುತ್ತದೆ.

ನಿರ್ಮಾಣದ ವೇಳೆ ಕಟ್ಟಡದ ಬೈಲಾಗಳನ್ನು ಉಲ್ಲಂಘಿಸುವುದು, ಕಂದಾಯ ಭೂಮಿಯಲ್ಲಿ ನಿರ್ಮಾಣ, ಅನಧಿಕೃತ ಬಡಾವಣೆಗಳಲ್ಲಿ ಕಟ್ಟಡ ನಿರ್ಮಾಣ, ಪೂರ್ಣಗೊಳಿಸುವಿಕೆ ಅಥವಾ ವಿತರಣೆ ಪ್ರಮಾಣಪತ್ರಗಳ ಕೊರತೆ ಇದ್ದಲ್ಲಿ ಅಂತಹ ಆಸ್ತಿಗೆ ಬಿ ಖಾತಾ ಪ್ರಮಾಣ ಪತ್ರ ನೀಡಲಾಗುತ್ತದೆ.

How to identify A and B account? ಇನ್ನೊಂದೆಡೆ, ಎ ಖಾತಾ ಹಾಗೂ ಬಿ ಖಾತಾಗೆ ಬಿಬಿಎಂಪಿ ರಿಜಿಸ್ಟರ್ ಅನ್ನು ನಿರ್ವಹಿಸುತ್ತಿದೆ. ಹೀಗಾಗಿ PROPERTY ಇರುವ ವಾರ್ಡ್​​ ಮತ್ತು ಮಾಹಿತಿಯೊಂದಿಗೆ ಮಹಾನಗರ ಪಾಲಿಕೆಯಿಂದಲೂ ಖಾತಾ ವಿವರ ತಿಳಿದುಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾನಗರ ಪಾಲಿಕೆ ಬೆಂಗಳೂರಿನ ಪ್ರತಿಯೊಂದು PROPERTYಗೂ ಖಾತಾ ಪ್ರಮಾಣಪತ್ರ ನೀಡುತ್ತದೆ. ಹಾಗಾಗಿ, PROPERTY ದಾಖಲೆಗಳಲ್ಲಿಯೂ ಖಾತಾ ಯಾವುದು ಎಂಬುದು ನಮೂದಾಗಿರುತ್ತದೆ.

Is it possible to switch accounts? ಆದರೆ, ಇದು ಬಿ ಖಾತಾ PROPERTYಯಲ್ಲಿ ಎಷ್ಟು ಪ್ರಮಾಣದಲ್ಲಿ ನಿಯಮಮಗಳ ಉಲ್ಲಂಘನೆಯಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಿರ್ದಿಷ್ಟ ಪ್ರಮಾಣದ ನಿಯಮ ಉಲ್ಲಂಘನೆಗೆ ದಂಡ ಪಾವತಿಸಿ, ನಂತರ ನಿಯಮಗಳನ್ನು ಪಾಲಿಸುವ ಮೂಲಕ ಬಿ ಖಾತಾವನ್ನು ಎ ಖಾತಾಗೆ ಪರಿವರ್ತಿಸಲು ಬಿಬಿಎಂಪಿ ಅವಕಾಶ ನೀಡಿದೆ.

ಇನ್ನು ಬಿ ಖಾತಾ ಹೊಂದಿರುವ ಆಸ್ತಿ ಮಾಲೀಕರು ಆತಂಕಪಡುವ ಅಗತ್ಯವಿಲ್ಲ. ನಿರ್ದಿಷ್ಟ ನಿಯಮಗಳ ಅನುಸಾರ ಬಿ ಖಾತಾವನ್ನು ಎ ಖಾತಾಗೆ ಪರಿವರ್ತಿಸಲು ಕೂಡ ಮಹಾನಗರ ಪಾಲಿಕೆ ಅವಕಾಶ ನೀಡುತ್ತದೆ.ಇದರಿಂದ ಖಾತೆ ಆದ PROPERTYಗಳನ್ನು ಮಾತ್ರ ನೋಂದಣಿ ಮಾಡಬಹುದು. ಕಾಗದ ದಾಖಲೆಗಳ ಆಧಾರದಲ್ಲಿ ಯಾವುದೇ ಕಾರಣಕ್ಕೂ ನೋಂದಣಿಗೆ ಪರಿಗಣಿಸಬಾರದು.

ಬಿಬಿಎಂಪಿ, ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಅಭಿಯಾನದ ಮಾದರಿಯಲ್ಲಿ ಖಾತಾ ನೀಡುವ ಪ್ರಕ್ರಿಯೆಯನ್ನು ನಡೆಸಲು ಸೂಚನೆ ನೀಡಿದ್ದು, ಫೆಬ್ರವರಿ 10ರ ಒಳಗಾಗಿ ನಿಗದಿತ ಅವಧಿಯಲ್ಲಿ ಖಾತಾ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು’ ಎಂದು ಸಿಎಂ ಸೂಚನೆ ನೀಡಿದ್ದಾರೆ.ಇತ್ತೀಚೆಗೆ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು,

‘ಬಿಬಿಎಂಪಿಯಲ್ಲಿ ಸುಮಾರು 15 ಲಕ್ಷ ಆಸ್ತಿಗಳು ಖಾತಾ ದಾಖಲೆಗಳನ್ನು ಹೊಂದಿಲ್ಲ. ಇದರಿಂದ ತೆರಿಗೆಯನ್ನೂ ಕಟ್ಟದ ಕಾರಣ ಸಾವಿರಾರು ಕೋಟಿ ರೂ. ತೆರಿಗೆ ಪ್ರತಿ ವರ್ಷ ಸರ್ಕಾರಕ್ಕೆ ನಷ್ಟ ಉಂಟಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾತಾ ನೀಡಿರುವುದನ್ನು ಡಾಟಾ ಬೇಸ್‌ನಲ್ಲಿ ಹಾಕಬೇಕು.

ಇದನ್ನು ಓದಿರಿ : PENALTY FOR PLASTIC : ಅರಣ್ಯದ ಹೆದ್ದಾರಿಯಲ್ಲಿ ಸಂಚರಿಸುವಾಗ ಪ್ಲಾಸ್ಟಿಕ್ ಇದ್ರೆ ಬೀಳಲಿದೆ ದಂಡ

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

HIGH COURT : ಚಾಮರಾಜಪೇಟೆ ಪಶು ವೈದ್ಯಕೀಯ ಆಸ್ಪತ್ರೆ ಜಾಗ ಮೊರಾರ್ಜಿ ಶಾಲೆಗೆ ಹಸ್ತಾಂತರ

Bangalore News: HIGH COURT ಪ್ರಕರಣ ಸಂಬಂಧ ವಕೀಲ ಗಿರೀಶ್ ಭಾರದ್ವಾಜ್​ ​ ಹಾಗೂ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ...

SAFETY OF WOMEN:ಮಹಿಳೆಯರ ಸುರಕ್ಷತೆಗೆ ಶೂ ಡಿವೈಸ್ ಆವಿಷ್ಕರಿಸಿದ ವಿದ್ಯಾರ್ಥಿ

Alwar (Rajasthan) News​: ದುಷ್ಕರ್ಮಿಗಳ ವಿರುದ್ಧ ರಕ್ಷಣೆ ಪಡೆಯಲು ಶಾಕ್​ ನೀಡುವ ಶೂವನ್ನು ವಿದ್ಯಾರ್ಥಿ ವಿನ್ಯಾಸ ಮಾಡಿದ್ದಾರೆ. ಇದರಿಂದ ಧರಿಸಿದವರಿಗೆ ಯಾವುದೇ ಗಂಭೀರ ಸಮಸ್ಯೆ ಅಥವಾ...

UPCOMING SMARTPHONES IN FEBRUARY:ಈ ತಿಂಗಳು ಮಾರುಕಟ್ಟೆಗೆ ಲಗ್ಗೆಯಿಡುವ ಸ್ಮಾರ್ಟ್ಫೋನ್ಗಳಿವು

  Upcoming Smartphone Launches in February News: ಈ ಫೆಬ್ರವರಿ ತಿಂಗಳಲ್ಲಿ ಸೂಪರ್​ ಫೀಚರ್​ಗಳೊಂದಿಗೆ ಹೊಸ SMARTPHONES​ಗಳನ್ನು ಪರಿಚಯಿಸಲು ಅನೇಕ ಕಂಪೆನಿಗಳು ಕಾತುರವಾಗಿವೆ. ಪ್ರಪಂಚಾದ್ಯದಂತ ಅನೇಕ...

WORLD CANCER DAY: ಕ್ಯಾನ್ಸರ್ ವಿರುದ್ಧ ಹೋರಾಡಿದ ಸೆಲೆಬ್ರಿಟಿಗಳಿವರು.

  Shivarajkumar News : CANCER ವಿರುದ್ಧ ಧೈರ್ಯದಿಂದ ಹೋರಾಡಿ, ಎಷ್ಟೋ ರೋಗಿಗಳಿಗೆ ಬದುಕಿನ ಭರವಸೆ ಮೂಡಿಸಿದ ಸೆಲೆಬ್ರಿಟಿಗಳ ಮಾಹಿತಿ ಇಲ್ಲಿದೆ. ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಇತ್ತೀಚೆಗಷ್ಟೇ CANCER...