spot_img
spot_img

ರೇಣುಕಾಸ್ವಾಮಿ ಬಿಡಬೇಡಿ, ಸಾಯಿಸಿ.. ಕಿರುಚಾಡಿದ್ದ ಪವಿತ್ರಾ ಗೌಡ; ವಿಕೃತ ಮುಖದ ಕರಾಳ ಸತ್ಯ ಬಯಲು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ 17 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಾಗಿದೆ. ಚಾರ್ಜ್‌ಶೀಟ್‌ನಲ್ಲಿ ಆರೋಪಿಗಳ ಪಾತ್ರ ಮತ್ತು ಆರೋಪಿಗಳ ವಿರುದ್ಧ ಲಭ್ಯವಾಗಿರುವ ಸಾಕ್ಷಿಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. ಬರೋಬ್ಬರಿ 3991 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಅಷ್ಟೂ ಜನ ಆರೋಪಿಗಳ ಪಾತ್ರದ ಬಗ್ಗೆ ಮಾಹಿತಿ ದಾಖಲಿಸಲಾಗಿದೆ.

ರೇಣುಕಾಸ್ವಾಮಿ ಕೇಸ್‌ನಲ್ಲಿ ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಪವಿತ್ರಾ ಗೌಡ ಅವರನ್ನೇ A1 ಮಾಡಲಾಗಿದೆ. ಅಂದ್ರೆ ರೇಣುಕಾಸ್ವಾಮಿ ಅವರ ಕೊಲೆ ಮಾಡಲು ಪವಿತ್ರಾ ಗೌಡ ಅವರೇ ಮೂಲ ಕಾರಣ. ಅಷ್ಟೇ ಅಲ್ಲದೇ ರೇಣುಕಾಸ್ವಾಮಿಯ ಮೇಲೆ ಹಲ್ಲೆ ನಡೆಸುವ ಸ್ಥಳದಲ್ಲಿ ಹಾಜರಿದ್ದರು ಎನ್ನಲಾಗಿದೆ.

ಇದನ್ನೂ ಓದಿ : ಪಟ್ಟಣಗೆರೆ ಶೆಡ್‌ನಲ್ಲಿ ನಿಜಕ್ಕೂ ನಡೆದಿದ್ದೇನು? A1-A17 ಪಾತ್ರ ಏನೇನು? ಇಲ್ಲಿದೆ ಕಂಪ್ಲಿಟ್‌ ಸ್ಟೋರಿ

ಪವಿತ್ರಾ ಗೌಡ ಅವರು ರೇಣುಕಾಸ್ವಾಮಿ ಅವರಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ. ಕೃತ್ಯ ನಡೆದ ಸಮಯದಲ್ಲಿ ಪವಿತ್ರಾ ಗೌಡ ಅವರು ಅಲ್ಲೇ ಇರುವುದಕ್ಕೆ ಸಾಕ್ಷಿಗಳು ಪತ್ತೆಯಾಗಿದೆ. ಪವಿತ್ರಾ ಗೌಡ ಅವರ ಮೊಬೈಲ್ ಪಟ್ಟಣಗೆರೆ ಶೆಡ್‌ನಲ್ಲಿ ಆ್ಯಕ್ಟಿವ್ ಆಗಿದ್ದು, ಸಿಸಿಟಿವಿಯಲ್ಲೂ ಪವಿತ್ರಾ ಗೌಡ ಅವರು ಸೆರೆಯಾಗಿದ್ದಾರೆ.

ರೇಣುಕಾಸ್ವಾಮಿ ಕಾಮೆಂಟ್‌ ರಹಸ್ಯ!
ಚಿತ್ರದುರ್ಗದ ರೇಣುಕಾಸ್ವಾಮಿ A1 ಪವಿತ್ರಾ ಗೌಡ ಅವರ ಮೂರು ಫೋಟೋಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದ. ಪವಿತ್ರಾ ಗೌಡ ಅವರು ಸೀರೆಯಲ್ಲಿ ಹಾಕಿದ್ದ ಫೋಟೋಗೆ ರೇಣುಕಾಸ್ವಾಮಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ಎನ್ನಲಾಗಿದೆ.

ಇದನ್ನೂ ಓದಿ : ರಾಕ್ಷಸನ ರೀತಿಯಲ್ಲಿ ವರ್ತನೆ; ರೇಣುಕಾಸ್ವಾಮಿ ಕೈಮುಗಿದು ಬೇಡಿಕೊಂಡರೂ ಬಿಡಲಿಲ್ಲವಂತೆ ದರ್ಶನ್

ಬಿಡಬೇಡಿ, ಸಾಯಿಸಿ.. ಕಿರುಚಾಡಿದ್ದ ಪವಿತ್ರಾ ಗೌಡ!

A1 ಪವಿತ್ರಾ ಗೌಡ ಅವರು ರೇಣುಕಾಸ್ವಾಮಿ ಕೊಲೆಯಾದ ಜಾಗದಲ್ಲಿ ಏನು ಮಾಡಿದ್ರು ಅನ್ನೋದು ಇತರೆ ಆರೋಪಿಗಳಿಂದ ಗೊತ್ತಾಗಿದೆ. ರೇಣುಕಾಸ್ವಾಮಿಯನ್ನು ಸಾಯಿಸಲು ಪ್ರಚೋದನೆ ನೀಡಿದ್ದೇ ಪವಿತ್ರಾ ಗೌಡ ಎಂದು ಇತರೆ ಆರೋಪಿಗಳು ತಮ್ಮ ಹೇಳಿಕೆಯಲ್ಲಿ ನೀಡಿದ್ದಾರೆ. ಇದರಿಂದ ರೇಣುಕಾಸ್ವಾಮಿ ಪ್ರಕರಣದಲ್ಲಿ ಪವಿತ್ರಾ ಅವರ ಪಾತ್ರ ದೃಢವಾಗಿದೆ.

ರೇಣುಕಾಸ್ವಾಮಿ ಮೇಲೆ ದರ್ಶನ್‌ ಗ್ಯಾಂಗ್‌ನ ಪ್ರತಿಯೊಬ್ಬರೂ ಹೊಡೆಯುವಾಗ ಪವಿತ್ರಾ ಗೌಡ ನಿಂತು ಕಿರುಚಾಡುತ್ತಿದ್ದಾರೆ. ಬಿಡಬೇಡಿ, ಸಾಯಿಸಿ ಅವನನ್ನ ಅಂತ ಪವಿತ್ರಾ ಕೂಗಾಡಿದ್ದಾರೆ. ಆಕೆ ಹೇಳಿದ್ದಕ್ಕೆ ನಾವು ಹಲ್ಲೆ ಮಾಡಿದ್ದೇವೆ ಅಂತ ಇತರ ಆರೋಪಿಗಳು ಹೇಳಿಕೆ ನೀಡಿದ್ದಾರೆ. ರೇಣುಕಾಸ್ವಾಮಿಯನ್ನು ಬಿಡಬೇಡಿ ಸಾಯಿಸಿ ಅಂದಿದ್ದ ಪವಿತ್ರಾ ಗೌಡ ಅವರ ಹೇಳಿಕೆಯಿಂದಲೇ ಪವಿತ್ರಾ ಗೌಡ ಅವರನ್ನು ಪೊಲೀಸರು A1 ಮಾಡಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img

Related articles

IND VS PAK:ಚಾಂಪಿಯನ್ಸ್ ಟ್ರೋಫಿಯಲ್ಲಿಂದು ಹೈವೋಲ್ಟೇಜ್ ಪಂದ್ಯ

Ind Was Pak News: ಈಗಾಗಲೇ ಬಾಂಗ್ಲಾದೇಶ ವಿರುದ್ಧ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿರುವ IND ಎರಡನೇ ಪಂದ್ಯದಲ್ಲೂ ಗೆಲುವು ಓಟ ಮುಂದುವರೆಸುವ ಲೆಕ್ಕಾಚಾರದಲ್ಲಿದೆ. ಮತ್ತೊಂದೆಡೆ,...

STOCK MARKET: ಸೆನ್ಸೆಕ್ಸ್ 425 ಅಂಶ ಕುಸಿತ, 22,795ಕ್ಕಿಳಿದ ನಿಫ್ಟಿ

Mumbai News: ಎನ್ಎಸ್ಇ ನಿಫ್ಟಿ 50 ಕೂಡ 127.25 ಪಾಯಿಂಟ್ ಅಥವಾ ಶೇಕಡಾ 0.51 ರಷ್ಟು ಕುಸಿದು 22,795.90 ರಲ್ಲಿ ಕೊನೆಗೊಂಡಿದೆ. ನಿಫ್ಟಿ 50 ದಿನದ...

PRE BUDGET MEETING:ಮುಂಬರುವ 2025-26ರ ರಾಜ್ಯ ಬಜೆಟ್ನಲ್ಲಿ ಕಾಸಿಯಾದ ನಿರೀಕ್ಷೆಗಳೇನು?

Bangalore News : ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ BUDGET ಪೂರ್ವ ಸಭೆ ನಡೆಸಿ...

TRAINS KUMBH MELA: ಇಲ್ಲಿ ತನಕ 3 ಕೋಟಿಗೂ ಹೆಚ್ಚು ಭಕ್ತರ ರೈಲು ಯಾನ!!

Vijayawada (Andhra Pradesh) News: ಫೆಬ್ರವರಿ 26 ರಂದು ಕೊನೆಗೊಳ್ಳುವ ಕುಂಭಮೇಳ ಕಣ್ತುಂಬಿಕೊಳ್ಳಲು ಭಕ್ತರ ದಂಡು ಪ್ರಯೋಗರಾಜ್​ ಗೆ ಆಗಮಿಸುತ್ತಿದೆ. ಭಾರತೀಯ ರೈಲ್ವೇಸ್​ ಇದುವರೆಗೂ 3.09...