ವಿಶ್ವ ಸಿನಿಮಾ ದಿನಾಚರಣೆ ನಾಳೆಯೊಂದೇ ಬಾಕಿಯಿದೆ. ಅದಕ್ಕೆಂದೇ ಮಲ್ಟಿಫ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (MAI) ವಿಶ್ವ ಸಿನಿಮಾ ದಿನಾಚರಣೆಗಾಗಿ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಆಫರ್ ತೆರೆದಿಟ್ಟಿದ್ದು, ಸಿನಿ ರಸಿಕರು ಬರೀ 99 ರೂಪಾಯಿಗೆ ಮಲ್ಟಿಫ್ಲೆಕ್ಸ್ನಲ್ಲಿ ಸಿನಿಮಾ ವೀಕ್ಷಿಸಬಹುದು ಎಂದಿದೆ.
ಸೆಪ್ಟೆಂಬರ್ 20 ರಂದು ವಿಶ್ವ ಸಿನಿಮಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಸಿನಿಮಾ ಪ್ರಿಯರು ಬರೀ 99 ರೂಪಾಯಿಗೆ ಸಿನಿಮಾ ನೋಡುವ ಅವಕಾಶ ತೆರೆದಿಟ್ಟಿದೆ. ಪಿವಿಆರ್ ಐನೋಕ್ಸ್, ಸಿನಿಪೊಲೀಸ್, ಮೀರಜ್, ಮೂವಿ ಟೈಂ ಮತ್ತು ಡಿಲೈಟ್ ಮೂಲಕ ಸುಮಾರು 4 ಸಾವಿರ ಸ್ಕ್ರೀನ್ಗಳಲ್ಲಿ ಸಿನಿಮಾ ವೀಕ್ಷಿಸಬಹುದಾಗಿದೆ.
ಇದನ್ನೂ ಓದಿ : BSNL: ಪ್ರತಿದಿನ 2GB ಡೇಟಾ.. ದಿನಕ್ಕೆ 7 ರೂಪಾಯಿಯಂತೆ 75 ದಿನಗಳ ವ್ಯಾಲಿಡಿಟಿ
ಮಲ್ಟಿಫ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಈ ಕುರಿತಾಗಿ,‘ವಿಶೇಷ ದಿನದಂದು ಎಲ್ಲಾ ವಯಸ್ಸಿನವರು ಮಲ್ಟಿಫ್ಲೆಕ್ಸ್ನಲ್ಲಿ ಸಿನಿಮಾ ವೀಕ್ಷಿಸಬಹುದಾಗಿದೆ. ಈ ವರ್ಷ ಬಹುಚಲನಚಿತ್ರಗಳ ಅದ್ಭುತ ಯಶಸ್ಸನ್ನು ಆಚರಿಸುತ್ತಿದೆ. ಈ ಯಶಸ್ಸಿಗೆ ಕಾರಣರಾದ ಸಿನಿಪ್ರೀಯರಿಗೆ ಹೃತ್ಪೂರ್ವಕ ಧನ್ಯವಾದಗಳು. ಜೊತೆಗೆ ಸ್ಥಳೀಯ ಸಿನಿಮಾ ಥಿಯೇಟರ್ ಹೋಗಿ ಸಿನಿಮಾ ವೀಕ್ಷಿಸಿ. ಇದು ಮುಕ್ತ ಆಹ್ವಾನ’ ಎಂದು ಹೇಳಿದೆ.
ಜೊತೆಗೆ ಇದು ‘ರಾಷ್ಟ್ರೀಯ ಸಿನಿಮಾ ದಿನದ 3ನೇ ಆವೃತ್ತಿ. ಹಿಂದಿನ 2 ಆವೃತ್ತಿಗಳು 6 ಮಿಲಿಯನ್ಗಿಂತಲೂ ಹೆಚ್ಚು ಪ್ರವೇಶಗಳನ್ನು ದಾಖಲಿಸಿವೆ’ ಎಂದು ಹೇಳಿದೆ.
ಇದನ್ನೂ ಓದಿ : ಜಮ್ಮು-ಕಾಶ್ಮೀರದಲ್ಲಿ ಇಂದು ಚುನಾವಣೆ: ಮೊದಲ ಹಂತದಲ್ಲಿ 7 ಜಿಲ್ಲೆಗಳ 24 ಕ್ಷೇತ್ರಗಳಿಗೆ ಮತದಾನ ಆರಂಭ, 219 ಅಭ್ಯರ್ಥಿಗಳು ಕಣದಲ್ಲಿ
ಯಾವ ಸಿನಿಮಾವನ್ನು ವೀಕ್ಷಿಸಬಹುದು?
ಸಿನಿ ಪ್ರಿಯರಿಗೆ ಹಲವು ಆಯ್ಕೆಗಳಿವೆ. ಬ್ಲಾಕ್ಬಸ್ಟರ್, ಸೀಕ್ವೆಲ್ ಮತ್ತು ಟೈಮ್ಲೆಸ್ ಕ್ಲಾಸಿಕ್ ಸಿನಿಮಾ ವೀಕ್ಷಿಸಬಹುದಾಗಿದೆ. ಯುಧ್ರಾ, ಕಹಾನ್ ಶುರು ಕಹಾನ್ ಖತಮ್, ನವ್ರಾ ಮಜಾ ನವಸಾಚಾ-2, ಸುಚಾ ಸೂರ್ಮಾ, ನೆವರ್ ಲೆಟ್ ಗೋ, ಟ್ರಾನ್ಸ್ಫಾರ್ಮರ್ಸ್ ಒನ್ ಸಿನಿಮಾ ನೋಡಬಹುದಾಗಿದೆ.
ಕಳೆದ ವಾರ ಬಿಡುಗಡೆಗೊಂಡ ದಿ ಬಂಕಿಂಗ್ ಹ್ಯಾಮ್ ಮರ್ಡರ್ಸ್, ಅರ್ದಾರ್ಸ್ ಸರ್ಬತ್ ದೇ ಭಲೇ ದಿ ಸಿನಿಮಾಗಳನ್ನು ವೀಕ್ಷಿಸಬಹುದಾಗಿದೆ.
ಇದರ ಜೊತೆಗೆ ಆಗಸ್ಟ್ 15ರಿಂದ ಬಿಡುಗಡೆಯಾಗಿ ಬಾಕ್ಸ್ ಆಫೀಸನ್ನು ಧೂಳಿಪಟ ಮಾಡುತ್ತಿರುವ ಸ್ತ್ರೀ-2, ತುಂಬದ್ (2018), ವೀರ್ ಝಾರಾ (2004) ಮರು ಬಿಡುಗಡೆಯಾಗಿದೆ.