spot_img
spot_img

ಅನುಕಂಪದ ಆಧಾರದ ಮೇಲೆ ಉದ್ಯೋಗ : ರಾಜ್ಯಸರ್ಕಾರ ಆದೇಶ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಂಗಳೂರು : ಅನುಕಂಪದ ಆಧಾರದ ಮೇಲೆ ನೌಕರಿಗಾಗಿ ಬರುವ ಪ್ರಸ್ತಾವನೆಗಳನ್ನು ಇನ್ಮುಂದೆ ಆನ್ ಲೈನ್ ತಂತ್ರಾಂಶದ ಮೂಲಕವೇ ನಿರ್ವಹಿಸುವಂತೆ ಶಾಲಾ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಲಾಗಿದೆ.

ಅನುಕಂಪದ ನೇಮಕಾತಿ ಅರ್ಜಿಗಳನ್ನು ಪ್ರಸ್ತುತ ಭೌತಿಕವಾಗಿ ನಿರ್ವಹಣೆ ಮಾಡಲಾಗುತ್ತಿದ್ದು, ಇದರಿಂದ ಹಲವು ಪ್ರಕರಣಗಳಲ್ಲಿ ಅರ್ಜಿದಾರರಿಗೆ ಅನಗತ್ಯ ತೊಂದರೆ ಉಂಟಾಗಿದ್ದು, ಹೀಗಾಗಿ ಅರ್ಜಿ ವಿಲೇವಾರಿ ವಿಳಂಬವೂ ಆಗುತ್ತಿದೆ. ಹೀಗಾಗಿ ಆನ್ ಲೈನ್ ತಂತ್ರಾಂಶ ಇಇಡಿಎಸ್ ನಲ್ಲಿ ನಿರ್ವಹಣೆಯ ವ್ಯವಸ್ಥೆ ಅಭಿವೃದ್ಧಿ ಪಡಿಸಲಾಗಿದೆ.

ಅನುಕಂಪದ ನೇಮಕಾತಿ ಅರ್ಜಿಗಳನ್ನು ಸಂಪೂರ್ಣವಾಗಿ ಆನ್‌ಲೈನ್ ತಂತ್ರಾಂಶದ ಮುಖಾಂತರ ಇಇಡಿಎಸ್ ನಲ್ಲಿ ನಿರ್ವಹಿಸಲು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಇಲಾಖಾ ವೆಬ್‌ಸೈಟ್ https://schooleducation.karnataka.gov.in ಭೌತಿಕವಾಗಿ ಸ್ವೀಕೃತಿಯಾಗಿ ನಿರ್ವಹಣೆ ಕ್ರಮಗಳು ಆಗುತ್ತಿದ್ದು ಇದರಿಂದ ಹಲವು ಪ್ರಕರಣಗಳಲ್ಲಿ ಅರ್ಜಿದಾರರಿಗೆ ಅನಗತ್ಯ ತೊಂದರೆಗಳಾಗುತ್ತಿರುವುದು ಗಮನಕ್ಕೆ ಬಂದಿದೆ.

ಅಸಾಧಾರಣ ವಿಳಂಬವನ್ನೂ ಸಹ ಗಮನಿಸಿದ್ದು ದೂರುಗಳಿಗೆ ದಾರಿಯಾಗಿದೆ. ಇನ್ನು ಮುಂದೆ ಎಲ್ಲಾ ಅನುಕಂಪದ ನೇಮಕಾತಿ ಅರ್ಜಿಗಳನ್ನು ಆನ್‌ಲೈನ್ ವ್ಯವಸ್ಥೆಯಲ್ಲಿಯೇ ಸ್ವೀಕರಿಸಲು ಮತ್ತು ಆಯಾ ಕಛೇರಿ ಹಂತಗಳಲ್ಲಿ ಮತ್ತು ಮೇಲು ಕಛೇರಿಗೆ ಅರ್ಜಿಗಳನ್ನು ಮುಂದಿನ ಕ್ರಮಕ್ಕಾಗಿ ಆನ್‌ಲೈನ್‌ನಲ್ಲಿಯೇ ಸಲ್ಲಿಸಲು ವ್ಯವಸ್ಥೆಗೊಳಿಸಲಾಗಿದೆ.

ಅನುಕಂಪದ ಆಧಾರಿತ ಅರ್ಜಿಗಳ ಪ್ರಕ್ರಿಯೆಯು ಯಾವುದೇ ವಿಳಂಬವಿಲ್ಲದಂತೆ ಕಾರ್ಯನಿರ್ವಾಹಕರ ಹಂತದಿಂದ ನೇಮಕಾತಿ ಆದೇಶ ನೀಡುವವರೆಗೆ ಆನ್‌ಲೈನ್ ವ್ಯವಸ್ಥೆಯಲ್ಲಿ ನಿರ್ವಹಣೆಗೊಳ್ಳಲು ಕೆಳಕಂಡ ಸೂಚನೆಗಳನ್ನು ಹೊರಡಿಸಲಾಗಿದೆ. ಸೂಚನೆಗಳನ್ನು ಪಾಲಿಸದೇ ಭೌತಿಕವಾಗಿ ಅರ್ಜಿಗಳನ್ನು ನಿರ್ವಹಿಸುವುದನ್ನು ಅತ್ಯಂತ ಗಂಭಿರವಾಗಿ ಪರಿಗಣಿಸಲಾಗುವುದು ಮತ್ತು ಅಂತಹ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಎಚ್ಚರಿಸಿದೆ.

ಇನ್ನು ಮುಂದೆ ಅರ್ಜಿದಾರರಿಗೆ ಅನುಕೂಲವಾಗುವಂತೆ ಮತ್ತು ಇಡೀ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಿರ್ವಹಿಸಬಹುದಾದ ರೀತಿಯಲ್ಲಿ ಈಗಾಗಲೇ ಆನ್‌ಲೈನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು ಪ್ರಸ್ತುತ ವಿವಿಧ ಜಿಲ್ಲೆಗಳಿಂದ ಆನ್‌ಲೈನ್ ಪರೀಕ್ಷೆಗೆ ಮಾಡ್ಯೂಲ್‌ನ್ನು ಒದಗಿಸಿ ವರದಿಗಳನ್ನು ಪಡೆಯಲಾಗುತ್ತಿದೆ. ವರದಿಗಳ ಆಧಾರದಲ್ಲಿ ತಂತ್ರಾಂಶವು ಅತ್ಯಂತ ಸಮರ್ಥವಾಗಿ ಮತ್ತು ಸುಲಭ ವ್ಯವಹರಣೆಗೆ ಸೂಕ್ತವಾಗಿ ಇರುತ್ತದೆ.

1. ದಿನಾಂಕ:18.11.2024 ರಿಂದ ಎಲ್ಲಾ ಅನುಕಂಪದ ಆಧಾರಿತ ನೇಮಕಾತಿ ಕೋರಿಕೆ ಅರ್ಜಿಗಳನ್ನು ಕಡ್ಡಾಯವಾಗಿ ಆನ್‌ಲೈನ್‌ ವ್ಯವಸ್ಥೆಯಲ್ಲಿಯೇ ಸ್ವೀಕರಿಸತಕ್ಕದ್ದು ಮತ್ತು ನಿರ್ವಹಿಸತಕ್ಕದ್ದು. ಆದರೆ ದಿನಾಂಕ:18.10.2024 ರಿಂದ 16.11.2024 ರವರೆಗೆ ಸಮಾನಾಂತರವಾಗಿ ಭೌತಿಕವಾಗಿಯೂ ಅರ್ಜಿಗಳನ್ನು ಪಡೆದು ಆನ್‌ಲೈನ್ ವ್ಯವಸ್ಥೆ ಮತ್ತು ಭೌತಿಕ ವ್ಯವಸ್ಥೆಯಲ್ಲಿ ಪುಕ್ರಿಯೆಯನ್ನು ಹಮ್ಮಿಕೊಳ್ಳತಕ್ಕದ್ದು.

ಈ ವ್ಯವಸ್ಥೆಯು ಅನುಕಂಪದ ಆಧಾರಿತ ಅರ್ಜಿದಾರರಿಗೆ ಯಾವುದೇ ತೊಂದರೆಯಾಗದಂತೆ ಆಡಳಿತ ವ್ಯವಸ್ಥೆಯಲ್ಲಿ ಭೌತಿಕ ಪದ್ದತಿಯಿಂದ ಆನ್‌ಲೈನ್ ಪದ್ಮತಿಗೆ ಪೂರ್ಣ ಹೊಂದಿಕೊಳ್ಳಲು ಸಮಯವನ್ನು ಕಲ್ಪಿಸಲಾಗಿದೆ (transition period). ಇದರಿಂದ ತಂತ್ರಾಂಶವನ್ನು ಬಳಸುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹೊಸ ವ್ಯವಸ್ಥೆಗೆ ಒಗ್ಗೂಡಿಕೊಳ್ಳಲು ಮತ್ತು ಅರ್ಜಿದಾರರಿಗೂ ಸಹ ಸೂಕ್ತ ತಾಂತ್ರಿಕ ಮಾರ್ಗದರ್ಶನವನ್ನು ನೀಡಲು ತರಬೇತಿಯನ್ನು ಪಡೆದುಕೊಳ್ಳಲು ಕಾಲಾವಕಾಶವನ್ನು ಕಲ್ಪಿಸಲಾಗಿದೆ. ಆದರೆ ದಿನಾಂಕ:19-11-2024 ರಿಂದ ಮುಂದಕ್ಕೆ ಅರ್ಜಿ ಸ್ವೀಕಾರ ಮತ್ತು ಎಲ್ಲಾ ಪ್ರಾರಂಭಿಕ ಪ್ರಕ್ರಿಯೆಗಳಿಂದ ಆಖೈರಿನವರೆಗೆ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿಯೇ ಕಡತ ನಿರ್ವಹಣೆಯಾಗತಕ್ಕದ್ದು ಈಗಾಗಲೇ ಇಇಡಿಎಸ್ ತಂತ್ರಾಂಶವನ್ನು ಬಳಸಲಾಗುತ್ತಿರುವುದರಿಂದ ಅನುಕಂಪದ ಆಧಾರಿತ ನೇಮಕಾತಿ ಅರ್ಜಿಗಳ ಆನ್‌ಲೈನ್ ನಿರ್ವಹಣೆಗೆ ಒಗ್ಗಿಕೊಳ್ಳುವುದು ಸುಲಭವಾಗಿಯೇ ಇದೆ.

2. ಅನುಕಂಪದ ಆಧಾರಿತ ನೇಮಕಾತಿಗೆ ಚಾಲ್ತಿಯಲ್ಲಿರುವ ನಿಯಮಗಳನುಸಾರ ಎಲ್ಲಾ ಅಂಶಗಳನ್ನು ಪರಿಗಣಿಸಿ ವ್ಯವಸ್ಥೆಗಳನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿದೆ ಮತ್ತು ಭೌತಿಕ ಕಡತ ನಿರ್ವಹಣೆಯ ಪ್ರತಿರೂಪದಂತೆಯ ಆನ್‌ಲೈನ್ ವ್ಯವಸ್ಥೆಯ ಕಡತ ನಿರ್ವಹಣೆ ಸಹ ಇರಲಿದೆ.

3. ಪ್ರಸ್ತುತದಲ್ಲಿ ಅನುಕಂಪದ ಆಧಾರಿತ ನೇಮಕಾತಿ ಕೋರಿಕೆ ಅರ್ಜಿಯು ಒಂದನೇ ಹಂತದಲ್ಲಿ ಆಯಾ ಕಛೇರಿ ಮುಖ್ಯಸ್ಥರಲ್ಲಿ ಭೌತಿಕವಾಗಿ ಸ್ವೀಕೃತವಾಗುತ್ತಿದೆ. ಆದರೆ ಇನ್ನು ಮುಂದೆ ಅರ್ಜಿದಾರರಿಗೆ ಅನುಕೂಲವಾಗುವಂತೆ ನೇರವಾಗಿ https://schooleducation.karnataka.gov.in ಮುಖಾಂತರ ಒದಗಿಸಲಾಗಿರುವ ಲಿಂಕ್‌ನಲ್ಲಿ ಅರ್ಜಿಯನ್ನು ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಆಯಾ ಕಛೇರಿ ಮುಖ್ಯಸ್ಥರು ಅವರ ಲಾಗಿನ್ ಮುಖಾಂತರದಲ್ಲಿ ಡ್ಯಾಶ್‌ಬೋರ್ಡ್‌ನ್ನು ರ್ಡ್‌ನ್ನು ಪರಿಶೀಲಿಸಿಕಂಡು ಅರ್ಜಿ ಸ್ವೀಕೃತವಾಗಿರುವ ಬಗ್ಗೆ ಭೌತಿಕ ವಹಿಯಲ್ಲಿಯೂ ಸಹ ನೋಂದಾಯಿಸಿಕೊಳ್ಳಬಹುದಾಗಿದೆ.

ಪ್ರಕ್ರಿಯೆಯು ಅತ್ಯಂತ ಸರಳವಾಗಿರುವಂತೆ ವ್ಯವಸ್ಥೆಗೊಳಿಸಲಾಗಿದೆ ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣದಲ್ಲಿ ಅರ್ಜಿದಾರನಿಗೆ ಅರ್ಜಿ ಸಲ್ಲಿಸಲು ಲಾಗಿನ್ ಪೇಜ್ ತೆರೆದುಕೊಳ್ಳಲಿದೆ. ಅದರಲ್ಲಿ ಕನ್ನಡ ಮತ್ತು ಆಂಗ್ಲ ಭಾಷಾ ಅವತರಣಿಕೆಯನ್ನು ಆಯ್ಕೆ ಮಾಡಬಹುದಾಗಿದೆ. ಮೃತ ಸರ್ಕಾರಿ ನೌಕರರ ಅವಲಂಬಿತರಿಂದ ಅರ್ಜಿ ಸಲ್ಲಿಕೆಯಾಗುವುದರಿಂದ ಮೃತ ಸರ್ಕಾರಿ ನೌಕರರ ಕೆ.ಜಿ.ಐ.ಡಿ ಸಂಖ್ಯೆಯನ್ನೇ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್‌ನ್ನಾಗಿ ಪ್ರಥಮದಲ್ಲಿ ಇರಿಸಿಕೊಂಡಿದೆ.

4. ಪ್ರಥಮವಾಗಿ ಕೆಜಿಐಡಿ ಸಂಖ್ಯೆ ಬಳಸಿ ಲಾಗಿನ್ ಐಡಿ ಮುಖಾಂತರ ಲಾಗಿನ್ ಆಗುವ ಅರ್ಜಿದಾರರಿಗೆ ಮೃತ ನೌಕರರ ಮೂಲ ವಿವರಗಳನ್ನು ಲಾಗಿನ್ ಪೇಜ್‌ನಲ್ಲಿ ಡಿಸ್ಟ್‌ ನೀಡಲಾಗಿದೆ. ಅಲ್ಲೇ ಮುಂದುವರೆದು ಅರ್ಜಿದಾರರು ತಮ್ಮ ಮೂಲ ವಿವರಗಳನ್ನು ನಮೂದಿಸಿ ಅರ್ಜಿಯನ್ನು ಆನ್‌ಲೈನ್‌ನಲ್ಲಿ ದಾಖಲಿಸುವುದು ಮತ್ತು ಒದಗಿಸಲಾಗಿರುವ ಸ್ಟಾಟ್‌ನಲ್ಲಿ ಅವರ ಲಿಖಿತ ಅರ್ಜಿಯನ್ನು ಸಹ ಅಪ್‌ಲೋಡ್ ಮಾಡಲು ವ್ಯವಸ್ಥೆ ಇರುತ್ತದೆ.

ಈ ಬಗ್ಗೆ ಮತ್ತು ಕಛೇರಿಗಳಲ್ಲಿ ಕಡತ ನಿರ್ವಹಣೆ ಬಗ್ಗೆ ಎಲ್ಲಾ ಭಾಗಿದಾರರ ತಿಳುವಳಿಕೆಗೆ ಇದರೊಂದಿಗೆ “USER MANUAL” ಪ್ರತಿಯನ್ನು ಲಗತ್ತಿಸಿದೆ. ಸದರಿ ಮಾನ್ಯುಯಲ್ ನಲ್ಲಿ screen shot ಚಿತ್ರಣಗಳ ಸಹಿತ Flow chart ಮಾದರಿಯಲ್ಲಿ ಸುಲಭವಾಗಿ ತಿಳಿದುಕೊಳ್ಳಬಹುದಾದ ವಾದ ಮಾದರಿಯಲ್ಲಿ ವಿವರಿಸಲಾಗಿದೆ.

ಈ ಬಗ್ಗೆ ಆಯಾ ಕಛೇರಿಯ ಮುಖ್ಯಸ್ಥರು ಸಹ ತಮ್ಮ ಅಧೀನದ/ ಅಧೀನ ಕಛೇರಿಯ ಸಿಬ್ಬಂದಿಗಳನ್ನೊಳಗೊಂಡಂತೆ ಎಲ್ಲರಿಗೂ ಕಡ್ಡಾಯವಾಗಿ ಸಂಪೂರ್ಣ ತಿಳುವಳಿಕೆಯನ್ನು ನೀಡಿ ಅನುಕಂಪದ ಆಧಾರಿತ ಅರ್ಜಿದಾರರಿಗೆ ಯಾವುದೇ ತೊಂದರೆಯಾಗದಂತೆ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

5. ಅನುಕಂಪದ ಆಧಾರಿತ ನೇಮಕಾತಿಯು ಮಾನವೀಯ ನೆಲೆಯಲ್ಲಿ ಇಲಾಖೆಯ ಮೃತ ಸರ್ಕಾರಿ ನೌಕರರ ಕುಟುಂಬದವರಿಗೆ ಸರ್ಕಾರವು ಕಲ್ಪಿಸಿರುವ ಒಂದು ಅವಕಾಶ. ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ನಿವೃತ್ತಿ ವಯೋಮಾನಕ್ಕಿಂತ ಮೊದಲು ಅಕಸ್ಮಾತ್ ಮರಣ ಹೊಂದಿದಲ್ಲಿ ಆ ಎಲ್ಲಾ ಮೃತ ಸರ್ಕಾರಿ ನೌಕರರ ಕುಟುಂಬಕ್ಕೆ ಸರ್ಕಾರವು ಕಲ್ಪಿಸಿರುವ ಅವಕಾಶಗಳಂತೆ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು ಕ್ರಮವಹಿಸಿ ಸೂಕ್ತ ನೇಮಕಾತಿಗಳನ್ನು ಕಲ್ಪಿಸುವುದು ಅತ್ಯಂತ ಸಂವೇದನಾತ್ಮಕ ಜವಾಬ್ದಾರಿ ಎಂಬುದನ್ನು ತಿಳಿದುಕೊಳ್ಳತಕ್ಕದ್ದು. ಆಕಸ್ಮಿಕವಾದ ಸಂದರ್ಭಗಳು ಯಾವುದೇ ರೀತಿಯಲ್ಲಿಯೂ, ಯಾವುದೇ ಸಂದರ್ಭದಲ್ಲಿಯೂ ಯಾರಿಗಾದರೂ ಬರಬಹುದಾಗಿದೆ ಎಂಬುದನ್ನು ನಾವೆಲ್ಲರೂ ಅರಿಯತಕ್ಕದ್ದು.

ಇದರಲ್ಲಿ ಯಾವುದೇ ಅಪಚಾರವಾಗದಂತೆ ಮತ್ತು ಲೋಪವಾಗದಂತೆ ಸದರಿ ಕುಟುಂಬದ ಅವಲಂಬಿತ ಅರ್ಜಿದಾರರಿಗೆ ಸಹಕರಿಸುವುದು, ಮಾರ್ಗದರ್ಶನ ನೀಡುವುದು, ಕಡತವನ್ನು ಸೂಕ್ತವಾಗಿ ನಿರ್ವಹಿಸಿ ಅನುಕಂಪದ ಆಧಾರಿತ ನೇಮಕಾತಿ ಅರ್ಜಿಯನ್ನು ವಿಲೇವಾರಿ ಮಾಡತಕ್ಕದ್ದು.

6. ಅನುಕಂಪದ ಆಧಾರಿತ ಅರ್ಜಿ ಕುರಿತಂತೆ ಚಾಲ್ತಿಯಲ್ಲಿರುವ ಎಲ್ಲಾ ನಿಯಮಗಳು ಮತ್ತು ಇಲಾಖೆಯಿಂದ ಹೊರಡಿಸಲಾದ ಎಲ್ಲಾ ಸುತ್ತೋಲೆ/ಜ್ಞಾಪನ/ಪತ್ರ ವ್ಯವಹರಣೆಯ ಎಲ್ಲಾ ಸೂಚನೆಗಳು ಆನ್‌ಲೈನ್‌ನಲ್ಲಿ ಕಡತ ನಿರ್ವಹಣೆ ವ್ಯವಸ್ಥೆಗೂ ಅನ್ವಯವಾಗಲಿದೆ ಎಂಬುದನ್ನು ಸೂಚಿಸಲಾಗಿದೆ.

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

KEN BETWA RIVER LINKING PROJECT – ಕೆನ್-ಬೆಟ್ವಾ ನದಿ ಜೋಡಣೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

Khajuraho (Central Region): ಮಧ್ಯ ಪ್ರದೇಶದಲ್ಲಿ ಹುಟ್ಟುವ ಎರಡು ನದಿಗಳಾದ ಕೆನ್​ ಮತ್ತು ಬೆಟ್ವಾ ನದಿಗಳನ್ನು ಜೋಡಿಸಿ, ಅದರ ನೀರನ್ನು ಮಧ್ಯ ಪ್ರದೇಶ ಮತ್ತು ಉತ್ತರ...

KERALA NEWS – ಬುಧವಾರ ಸಂಜೆ ಶಬರಿಮಲೆ ಅಯ್ಯಪ್ಪನಿಗೆ ‘ತಂಗ ಅಂಗಿ’ ಆಭರಣ ತೊಡಿಸಿ ದೀಪಾರಾಧನೆ, ಡಿ.26 ರಂದು ಮಂಡಲಪೂಜೆ

 kerala (shabarimale) : ಶಬರಿಮಲೆ ಸನ್ನಿಧಾನದಲ್ಲಿ ಡಿ.25ರಂದು ವಿಶೇಷ ದೀಪಾರಾಧನೆ, ಡಿ.26 ಸಂಜೆ ಮಂಡಲಪೂಜೆ ನಡೆಯಲಿದೆ.ಅಯ್ಯಪ್ಪನಿಗೆ 'ತಂಗ ಅಂಗಿ' ಆಭರಣ ತೊಡಿಸಲಾಗುತ್ತದೆ. ರಾತ್ರಿ 11ಕ್ಕೆ ಹರಿವರಾಸನಂ...

BELAGAVI NEWS – ಬೆಳಗಾವಿ ತಾಲೂಕು ಶಾಲೆಗಳಿಗೆ ಡಿ.26, 27 ರಂದು ರಜೆ

Belagavi News : ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಆಚರಣೆ- ಗಾಂಧಿ‌ ಭಾರತ ಕಾರ್ಯಕ್ರಮ ನಿಮಿತ್ತ ಬೆಳಗಾವಿ ತಾಲೂಕಿನ ಶೈಕ್ಷಣಿಕ ವಲಯದ (ನಗರ ಮತ್ತು ಗ್ರಾಮೀಣ) ಸರಕಾರಿ,...

BJP MLA MUNIRATHNA – BJP ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ

Bangalore News: ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಕಾರ್ಯಕ್ರಮ ಮುಗಿಸಿ ಹೋಗುವಾಗ ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ ನಡೆದಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ...