ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 10ನೇ ವಾರಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಬಿಗ್ಬಾಸ್ ಮನೆಯಲ್ಲಿ ಎರಡು ತಂಡವಾಗಿ ಮಾರ್ಪಟ್ಟಿದೆ. ಈ ಬಾರಿಯ ಕನ್ನಡದ ಬಿಗ್ಬಾಸ್ನಲ್ಲಿ ದಿನಕೊಂದು ತಿರುವು, ಊಹಿಸಲಾರದ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇಷ್ಟು ದಿನ ಸೈಲೆಂಟ್ ಆಗಿದ್ದ ಬಿಗ್ಬಾಸ್ ಮನೆ ಈಗ ಸಖತ್ ವೈಲೆಂಟ್ ಆಗಿದೆ. ಈ ಬಾರಿಯ ಬಿಗ್ಬಾಸ್ ಮನೆಗೆ ಬಂದ ಸ್ಪರ್ಧಿಗಳು ಟಾಸ್ಕ್ಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಹೌದು, ಈ ಬಾರಿ ಬಿಗ್ಬಾಸ್ ಗೇಮ್ನಲ್ಲಿ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ವಿಂಗಡಿಸಿ, ಎರಡು ಟಿವಿ ಚಾನೆಲ್ಗಳನ್ನ ಮುನ್ನಡೆಸುವ ಜವಾಬ್ದಾರಿ ನೀಡಲಾಗಿದೆ. ಅಂತೆಯೇ ಮೊನ್ನೆಯಿಂದ ಬಿಗ್ಬಾಸ್ ಮನೆ ಎರಡು ಟಿವಿ ವಾಹಿನಿಯಾಗಿ ಪರಿವರ್ತನೆಗೊಂಡಿದೆ. ಅಂತೆಯೇ ಟಿವಿ ವಾಹಿನಿಯ ಎದುರಾಳಿ ಸ್ಪರ್ಧಿಗಳಿಗೆ ಟಾಸ್ಕ್ ನೀಡಲಾಗುತ್ತಿದೆ. ನಿನ್ನೆಯ ಸಂಚಿಕೆಯಲ್ಲಿ ಶಿಶಿರ್ ಗೆಳತಿ ಐಶ್ವರ್ಯಾಗೆ ಮೂರು ಹಾಗಲಕಾಯಿ ತಿನ್ನುವಂತೆ ಕೇಳಿಕೊಂಡಿದ್ದಾರೆ.
ಅದೇ ರೀತಿ ಗೌತಮಿಗೆ ರಜತ್ ಎರಡು ಹಸಿ ಮೆಣಸಿನಕಾಯಿ ತಿನ್ನುವ ಟಾಸ್ಕ್ ನೀಡಲಾಗಿದೆ. ಅಲ್ಲದೇ ರಜತ್ಗೆ ಉಗ್ರಂ ಮಂಜು ತನ್ನ ತಲೆ ಕೂದಲು ಬೋಳಿಸಿಕೊಳ್ಳುವಂತೆ ಹೇಳಿದ್ದಾರೆ. ಅದಕ್ಕೆ ರಜತ್ ‘ಓಕೆ’ ಎಂದು ತಮ್ಮ ಕೂದಲನ್ನೂ ಟ್ರಿಮ್ ಮಾಡಿಸಿಕೊಂಡಿದ್ದಾರೆ. ಇಂದು ರಿಲೀಸ್ ಆದ ಹೊಸ ಪ್ರೋಮೋದಲ್ಲಿ ರಜತ್ ಟೀಮ್ ತ್ರಿವಿಕ್ರಮ್ಗೆ ನೇರವಾದ ಸವಾಲ್ ಹಾಕಿದ್ದಾರೆ.
ಅದುವೆ ಕೂದಲು, ಮೀಸೆ ಹಾಗೂ ಗಡ್ಡವನ್ನು ಬೋಳಿಸಿಕೊಳ್ಳಬೇಕು ಅಂತ. ಆದರೆ ಅದಕ್ಕೆ ತ್ರಿವಿಕ್ರಮ್ ತಲೆ ಕೂದಲನ್ನು ಮಾತ್ರ ಬೋಳಿಸೋದಾಗಿ ಹೇಳಿದ್ದಾರೆ.
ಆದರೆ ಇಲ್ಲಿ ತ್ರಿವಿಕ್ರಮ್ ಟೀಮ್ ಅವರು ಅವರಿಗೆ ಇಷ್ಟ ಬಂದ ಹಾಗೇ ಟಾಸ್ಕ್ ಆಡುತ್ತಿದ್ದಾರೆ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಎದುರಾಳಿ ತಂಡದವರು ಕೊಟ್ಟ ಟಾಸ್ಕ್ ಅನ್ನು ಪದೇ ಪದೇ ಬದಲಾಯಿಸಿದ್ದಾರೆ. ಇದೇ ವಿಚಾರಕ್ಕೆ ರಜತ್ ತಂಡ ಜೋರಾಗಿ ಗಲಾಟೆ ಮಾಡಿಕೊಂಡಿದ್ದಾರೆ.