spot_img
spot_img

ಕಿತ್ತೂರು ಉತ್ಸವ ಅಂಗವಾಗಿ ಇತಿಹಾಸ ಬಿಂಬಿಸುವ ಚಿತ್ರಗಳು

spot_img
spot_img

Share post:

ಚೆನ್ನಮ್ಮನ ಕಿತ್ತೂರು: ಚನ್ನಮ್ಮನ ಕಿತ್ತೂರು ಉತ್ಸವದ ಅಂಗವಾಗಿ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಹಾಗೂ ಸೋಮವಾರ ಪೇಟೆಯ ಹೃದಯ ಭಾಗದಲ್ಲಿರುವ ರಾಣಿ ಚನ್ನಮ್ಮನ ಪುತ್ಥಳಿಗೆ ಹೊಸಕಳೆ ಬಂದಿದೆ.
ಕೋಟೆ ಆವರಣದಲ್ಲಿ ಅ. 23ರಿಂದ 25 ರ ವರೆಗೆ ನಡೆಯಲಿರುವ ಚನ್ನಮ್ಮನ ಕಿತ್ತೂರು ಉತ್ಸವ ಹೆದ್ದಾರಿ ಕೆಳ ಸೇತುವೆಯ ಪಕ್ಕದ ಗೋಡೆಗಳಲ್ಲಿ ರಾಣಿ ಚನ್ನಮ್ಮ ಹಾಗೂ ಇತಿಹಾಸ ಬಿಂಬಿಸುವ ಕೆಲವು ಸನ್ನಿವೇಶ, ಚಿತ್ರಗಳು ಜೀವ ಪಡೆದಿದ್ದು, ಕಿತ್ತೂರು ಕಳೆಗಟ್ಟಿದೆ.
ಅಶ್ವಾರೂಢ ಚನ್ನಮ್ಮನ ಪ್ರತಿಮೆಗೆ ಹಲವಾರು ಬಾರಿ ಬಣ್ಣ ಬಳಿದಿದ್ದರೂ ದಪ್ಪನೆಯ ರೂಪ ತಾಳಿದೆ. ಇದನ್ನು ಮನಗಂಡ ಶಾಸಕ ಬಾಬಾಸಾಹೇಬ ಪಾಟೀಲ ಅದಕ್ಕೆ ಹೊಸರೂಪ ಕೊಡಲು ನಿರ್ಧರಿಸಿದರು.
ಕೇರಳದ ಕಲಾವಿದರನ್ನು ಈ ಕಾರ್ಯಕ್ಕಾಗಿ ಕರೆಯಿಸಲಾಗಿದ್ದು, ಪುತ್ಥಳಿಗೆ ಹೊಸ ರೂಪ ನೀಡಿ, ಗೋಡೆಗಳಿಗೆ ಹೊಸ ಮೆರುಗು ನೀಡಿದ್ದಾರೆ.
ಕೋಟೆ ಆವರಣ, ಸೋಮವಾರ ಪೇಟೆ ಮತ್ತು ಗುರುವಾರ ಪೇಟೆ, ಕೋಟೆ ಆವರಣದಲ್ಲಿ ಲೈಟ್ ಸರಮಾಲೆಗಳನ್ನು ಕಲಾತ್ಮಕವಾಗಿ ಜೋಡಿಸಲಾಗಿದೆ.
ಪೆಂಡಾಲ್ ಸಿದ್ಧಪಡಿಸುವುದು, ಪಟ್ಟಣಕ್ಕೆ ಲೈಟಿಂಗ್ ವ್ಯವಸ್ಥೆಯ ಜೊತೆಗೆ ಗಿಡಗಳಲ್ಲಿ ಬೆಳಕು ಅರಳಿದೆ. ಚನ್ನಮ್ಮನ ವೃತ್ತವೂ, ಪುತ್ಥಳಿಯ ಬಳಿ ಮಾಡಿರುವ ಲೈಟ್ ವ್ಯವಸ್ಥೆಯು ಸಾರ್ವಜನಿಕರನ್ನು ಹೆಚ್ಚು ಗಮನ ಸೆಳೆಯುವಂತೆ ಮಾಡಿದೆ.
‘ಪೆಂಡಾಲ್ ನಿರ್ಮಾಣ ಮತ್ತು ಚಿತ್ರ ಬಿಡಿಸುವ ಅಲ್ಪ ಕೆಲಸ ಮಾತ್ರ ಬಾಕಿ ಉಳಿದಿದೆ ಪಟ್ಟಣದಲ್ಲಿ ಸುರಿದ ಮಳೆಯಿಂದ ಕೆಲಸಕ್ಕೆ ಅಡ್ಡಿಯಾಗಿದೆ’
ಶಾಸಕರ ಇಚ್ಚೆಯಂತೆ ಸ್ಥಳದಲ್ಲಿದ್ದು, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜ ಸಂಗೊಳ್ಳಿ ಉಸ್ತುವಾರಿ ನೋಡಿಕೊಂಡರು. ಮುಖಂಡ ಆಶ್ಫಾಕ್ ಹವಾಲ್ದಾರ್ ಬೆಂಗಾವಲಾಗಿ ನಿಂತಿದ್ದರು.
ಬಾಬಾಸಾಹೇಬ ಪಾಟೀಲ ಶಾಸಕಗೋಡೆ ಮೇಲೆ ರಚಿಸಿರುವ ಇತಿಹಾಸ ಬಿಂಬಿಸುವ ಚಿತ್ರಗಳು ಹಲವು ದಶಕದ ವರೆಗೆ ಇರಲಿವೆ ಎನ್ನುತ್ತಾರೆ ಕಲಾವಿದರು. ಇದು ವೃತ್ತದ ಅಂದ ಹೆಚ್ಚಲು ಕಾರಣವಾಗಿದೆ.
ಕಲಾವಿದ ಸಂತೋಷ ತುಬಾಕಿ ಮತ್ತು ತಂಡದ ಕಲಾವಿದರ ಕೈಚಳಕದಲ್ಲಿ ಕೆಳ ಸೇತುವೆ ಪಕ್ಕದ ಗೋಡೆಗಳಲ್ಲಿ ರಾಣಿ ಚನ್ನಮ್ಮ ಹೋರಾಟ ಮಾಡಿದ ದೃಶ್ಯಗಳು ಸೇರಿ ವಿವಿಧ ಇತಿಹಾಸ ಬಿಂಬಿಸುವ ಒಟ್ಟು ಒಂಬತ್ತು ಚಿತ್ರಗಳು ಮೂಡಿಬಂದಿವೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚನಬಸಪ್ಪ ತಿಳಿಸಿದರು.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...