spot_img
spot_img

ಕಾರ್ಡಿನಲ್​ ಆಗಿ ದೀಕ್ಷೆ ಪಡೆದ ಕೇರಳದ ಜಾರ್ಜ್

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಕೊಚ್ಚಿ(ಕೇರಳ): ಕೇರಳದ ಕ್ಯಾಥೋಲಿಕ್ ಪಾದ್ರಿ ಜಾರ್ಜ್ ಜೇಕಬ್ ಕೂವಕಾಡ್ ಅವರು ಕಾರ್ಡಿನಲ್​ ಆಗಿ ನೇಮಕವಾಗಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಜೇಕಬ್‌ಗೆ ಕಾರ್ಡಿನಲ್ ಪದವಿ ಪ್ರದಾನ ಮಾಡಿದರು.

ಸಮಾಜಸೇವೆಗೆ ತಮ್ಮ ಜೀವನ ಮುಡಿಪಾಗಿಟ್ಟ ಕೇರಳದ ಪಾದ್ರಿ ಜಾರ್ಜ್​ ಜೇಕಬ್​ ಕೂವಕಾಡ್​​ ಅವರ ಜೊತೆಗೆ 20 ಮಂದಿ ಕಾರ್ಡಿನಲ್​ಗಳಾಗಿ ಮುಂಬಡ್ತಿ ಪಡೆದರು. ಭಾರತದಿಂದ ಜೇಕಬ್​ ಈ ಉನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ.

ಈ ಸಮಾರಂಭಕ್ಕೆ ಸಾಕ್ಷಿಯಾಗಲು ಸರ್ಕಾರವು ಕೇಂದ್ರ ಸಚಿವ ಜಾರ್ಜ್ ಕುರಿಯನ್ ನೇತೃತ್ವದ ನಿಯೋಗವನ್ನು ಕಳುಹಿಸಿತ್ತು. ಸಮಾರಂಭಕ್ಕೂ ಮೊದಲು ಭಾರತೀಯ ನಿಯೋಗವು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿತು.

ಬಿಷಪ್​ ನಂತರದ ಪ್ರಮುಖ ಗೌರವವಾದ ಕಾರ್ಡಿನಲ್​ ಪದವಿಗೆ ಭಾರತೀಯ ಕ್ಯಾಥೋಲಿಕ್ ಪಾದ್ರಿ ಜಾರ್ಜ್ ಜೇಕಬ್ ಕೂವಕಾಡ್ ನೇಮಕವಾಗಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್‌ನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಜೇಕಬ್‌ಗೆ ಕಾರ್ಡಿನಲ್ ಪದವಿ ಪ್ರದಾನ ಮಾಡಿದರು.

51 ವರ್ಷದ ಜಾರ್ಜ್​ ಜೇಕಬ್​​ ಕೂವಕಾಡ್​ ಅವರು ಕೇರಳದಲ್ಲಿ ಹುಟ್ಟಿ ಬೆಳೆದವರು. ಪ್ರಮುಖ ಕ್ರಿಶ್ಚಿಯನ್​ ಸಮುದಾಯವಾದ ಚಂಗನಾಚೆರಿಯ ಸಿರೋ ಮಲಬಾರ್​ ಆರ್ಚ್​ಡಯಾಸಿಸ್​​ಗೆ ಸೇರಿದವರು. 2004ರಲ್ಲಿ ಪಾದ್ರಿಯಾಗಿ ನೇಮಕಗೊಂಡು ಕ್ಯಾನನ್​ ಕಾನೂನಿನಲ್ಲಿ ಡಾಕ್ಟರೇಟ್​ ಪಡೆದಿದ್ದಾರೆ.

ಕಾರ್ಡಿನಲ್​ ಆಗಿ ಪದೋನ್ನತಿ ಪಡೆದ ಕೂವಕಾಡ್​ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಭಾರತಕ್ಕೆ ಇದು ಹೆಮ್ಮೆಯ ಸಂಗತಿ. ಜೀಸಸ್​​ ಕ್ರಿಸ್ತರ ಕಟ್ಟಾ ಅನುಯಾಯಿಯಾಗಿ ಮಾನವೀಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಮುಂದಿನ ಎಲ್ಲ ಕಾರ್ಯಗಳು ನೆರವೇರಲಿ ಎಂದು ಶುಭ ಕೋರಿದ್ದಾರೆ.

2020ರಲ್ಲಿ ಹೋಲಿ ಸೀ ಸೆಕ್ರೆಟರಿಯೇಟ್ ಆಫ್ ಸ್ಟೇಟ್‌ನಲ್ಲಿ ಹುದ್ದೆಯಲ್ಲಿದ್ದಾಗ ಪೋಪ್ ಫ್ರಾನ್ಸಿಸ್ ಅವರ ವಿದೇಶ ಪ್ರವಾಸಗಳನ್ನು ಆಯೋಜಿಸುವ ಜವಾಬ್ದಾರಿ ಹೊಂದಿದ್ದರು. ಅಕ್ಟೋಬರ್​ 25ರಂದು ಪೋಪ್​ ಅವರು ಕೂವಕಾಡ್​ ಅವರನ್ನು ಆರ್ಚ್​ಬಿಷಪ್​ ಆಗಿ ನೇಮಿಸಿದ್ದರು.

ಕಾರ್ಡಿನಲ್​ಗಳಾಗಿ ಆಯ್ಕೆಯಾದ ಭಾರತದ ಜೇಕಬ್​ ಸೇರಿದಂತೆ 21 ಮಂದಿ ಪೋಪ್​ ಫ್ರಾನ್ಸಿಸ್​ ಅವರಿಂದ ದೀಕ್ಷೆ ಪಡೆದರು. ಜೊತೆಗೆ ಅವರಿಂದ ಕಾರ್ಡಿನಲ್​ಗಳು ಧರಿಸುವ ಸಮವಸ್ತ್ರ, ಉಂಗುರ ಮತ್ತು ಟೊಪ್ಪಿಯನ್ನು ಪಡೆದರು. ಪ್ರಾರ್ಥನೆಯ ಬಳಿಕ ಪ್ರಮಾಣಪತ್ರ ನೀಡಲಾಯಿತು.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SAMSUNG GALAXY S25 SERIES : ಭಾರತೀಯ ಮಾರುಕಟ್ಟೆಗೆ ಕಾಲಿಟ್ಟ ಸ್ಯಾಮ್ಸಂಗ್ ಹೊಸ ಸ್ಮಾರ್ಟ್ಫೋನ್ಗಳು

Hyderabad News: ಬಹುನಿರೀಕ್ಷಿತ SAMSUNG GALAXY S25ಸರಣಿಯು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಈ ಫೋನ್‌ಗಳ ಬೆಲೆ ಮತ್ತು ವಿಶೇಷತೆಗಳು ಇಲ್ಲಿವೆ.ದಕ್ಷಿಣ ಕೊರಿಯಾದ ಟೆಕ್ ದೈತ್ಯ...

WANKHEDE STADIUM 50TH ANNIVERSARY:14,505 ಲೆದರ್ ಬಾಲ್ಗಳಿಂದ ‘ವಾಕ್ಯ’ ರಚಿಸಿ ಗಿನ್ನೆಸ್ ದಾಖಲೆ.

Mumbai News: ಎಂಸಿಎ ಈ ದಾಖಲೆಯನ್ನು ಆ ಪಂದ್ಯದಲ್ಲಿ ಶತಕ ಗಳಿಸಿದ ದಿವಂಗತ ಏಕನಾಥ್ ಸೋಲ್ಕರ್ ಮತ್ತು ಕ್ರೀಡೆಗೆ ಅಸಾಧಾರಣ ಕೊಡುಗೆಗಳನ್ನು ನೀಡಿದ ಮುಂಬೈನ ಇತರ...

GALWAN VALLEY IN LEH LADAKH:ಭರದ ಕಾರ್ಯಾಚರಣೆ.

Leh (Ladakh) News: ಭಾರತೀಯ ಸೇನೆ ಮತ್ತು ಸ್ಥಳೀಯ ಮಧ್ಯಸ್ಥಗಾರರ ಸಹಯೋಗದಲ್ಲಿ ಅಧಿಕಾರಿಗಳು ಕಣಿವೆಯಲ್ಲಿ ಈ ಯೋಜನೆಗೆ ಮುಂದಾಗಿದ್ದು, ಸ್ಥಳೀಯ ಪ್ರವಾಸಿಗ ಆಕರ್ಷಿಣೀಯ ತಾಣವಾಗಿ ರೂಪಿಸುವ...

PINK SALT BENEFITS FOR HEALTH : ಪಿಂಕ್ ಉಪ್ಪಿನಿಂದ ಆರೋಗ್ಯಕ್ಕೆ ಹಲವು ಪ್ರಯೋಜನ

Pink Salt Benefits for Health News: ಹಿಮಾಲಯನ್ ಪಿಂಕ್ ರಾಕ್ SALT ಅಥವಾ ಪಿಂಕ್ ಉಪ್ಪು ಸೇವಿಸುವುದರಿಂದ ದೇಹದ ಆರೋಗ್ಯಕ್ಕೆ ಹಲವು ಪ್ರಯೋಜನಗಳು ದೊರೆಯುತ್ತವೆ...