ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಇಷ್ಟ ಪಡುವ ಅಭ್ಯರ್ಥಿಗಳಿಗೆ ಇಲ್ಲೊಂದು ಗುಡ್ನ್ಯೂಸ್ ಇದೆ. ಆರ್ಆರ್ಸಿ ಪೂರ್ವ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತ ಅಪ್ರೆಂಟಿಸ್ ಜಾಬ್ಸ್ ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಪ್ಲೇ ಮಾಡಬಹುದಾಗಿದೆ.
ಇದನ್ನೂ ಓದಿ : ಕಿರಿಯ ವೈದ್ಯರು ಕೆಲಸಕ್ಕೆ ಹಾಜರಾಗಿ, ಇಲ್ಲದಿದ್ದರೆ ಶಿಸ್ತುಕ್ರಮ: ಎಂದು ಹೇಳಿದ, ಸುಪ್ರೀಂ ಕೋರ್ಟ್.!
ಅಭ್ಯರ್ಥಿಗಳು ಆನ್ಲೈನ್ ಮೂಲಕವೇ ಅಪ್ಲೇ ಮಾಡಬೇಕು. ಇನ್ನು ಈ ಹುದ್ದೆಗೆ ಸಂಬಂಧಿಸಿದ ಪ್ರಮುಖವಾದ ದಿನಾಂಕ, ಆಯ್ಕೆ ಪ್ರಕ್ರಿಯೆ, ವಿದ್ಯಾರ್ಹತೆ, ವಯೋಮಿತಿ ಸೇರಿ ಇತರೆ ಮಾಹಿತಿ ಇಲ್ಲಿ ನೀಡಲಾಗಿದೆ. ಸೆಪ್ಟೆಂಬರ್ 9 ರಂದು ನೋಟಿಫಿಕೇಶನ್ ರಿಲೀಸ್ ಮಾಡಲಾಗಿತ್ತು. ಅರ್ಜಿ ಇನ್ನು ಆರಂಭವಾಗಿಲ್ಲ. ಇದೇ ಸೆಪ್ಟೆಂಬರ್ 24ರಿಂದ ಅರ್ಜಿ ಪ್ರಾರಂಭ ಮಾಡಲಾಗುತ್ತದೆ. ಬಳಿಕ ಅಭ್ಯರ್ಥಿಗಳು ಅಪ್ಲೇ ಮಾಡಬಹುದು. ಇಲಾಖೆಯ ಅಧಿಕೃತ ವೆಬ್ಸೈಟ್ rrcer.org. ಗೆ ಭೇಟಿ ನೀಡಿ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಬಹುದು.
ಇದನ್ನೂಓದಿ : ದರ್ಶನ್ ವಿರುದ್ಧದ ಚಾರ್ಜ್ಶೀಟ್ಗೆ ಹೊಸ ಟ್ವಿಸ್ಟ್ ಕೊಡಲು ಮುಂದಾದ ದಾಸನ ಪರ ವಕೀಲರು..!
ಇನ್ನು ಈ ಹುದ್ದೆಗಳಿಗೆ ಪರೀಕ್ಷೆ ಇರುವುದಿಲ್ಲ. ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಮೆಟ್ರಿಕ್ಯುಲೇಷನ್ ಮತ್ತು ITI ಪರೀಕ್ಷೆಗಳಿಂದ ಸರಾಸರಿ ಅಂಕಗಳ ಮೇಲೆ ಆಯ್ಕೆಯನ್ನು ನಿರ್ಧರಿಸಲಾಗುತ್ತದೆ. ಮೆರಿಟ್ ಲಿಸ್ಟ್ ಆದ ಮೇಲೆ ದಾಖಲಾತಿ ಪರಿಶೀಲನೆಗೆ ಅಭ್ಯರ್ಥಿಗಳನ್ನು ಕರೆಯಲಾಗುತ್ತದೆ. ಇಬ್ಬರು ಅಭ್ಯರ್ಥಿಗಳು ಸಮ ಅಂಕಗಳನ್ನು ಹೊಂದಿದ್ದರೇ ಫಸ್ಟ್ ಪಾಸ್ ಆಗಿದ್ದವರನ್ನು ಪರಿಗಣಿಸಲಾಗುತ್ತದೆ. ಆನ್ಲೈನ್ನಲ್ಲಿ ಅಪ್ಲೇ ಮಾಡಿದ ಎಲ್ಲ ದಾಖಲೆಗಳನ್ನು ಅಭ್ಯರ್ಥಿಗಳು ತರಬೇಕಾಗುತ್ತದೆ.
ವಿಭಾಗಗಳು ಹಾಗೂ ಒಟ್ಟು ಹುದ್ದೆಗಳು
ಒಟ್ಟು 3115 ಹುದ್ದೆಗಳು ಭರ್ತಿ ಮಾಡಲಾಗುತ್ತಿದೆ
ಹೌರಾ ವಿಭಾಗ- 659
ಲಿಲುವಾ ಕಾರ್ಯಾಗಾರ- 612
ಸೀಲ್ದಾ ವಿಭಾಗ- 440
ಕಂಚುರಪಾರ ಕಾರ್ಯಾಗಾರ- 187
ಮಾಲ್ಡಾ ವಿಭಾಗ- 138
ಅಸನ್ಸೋಲ್ ವಿಭಾಗ- 412
ಜಮಾಲ್ಪುರ್ ಕಾರ್ಯಾಗಾರ- 667
ಅರ್ಜಿ ಶುಲ್ಕ ;
ಜನರಲ್ ಅಭ್ಯರ್ಥಿಗಳಿಗೆ- 100 ರೂಪಾಯಿಗಳು
ಎಸ್ಸಿ, ಎಸ್ಟಿ- ಮೀಸಲಾಯಿತಿ ವಿನಾಯಿತಿ ಇರುತ್ತದೆ
ಸ್ಯಾಲರಿ- ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಆಗಿದ್ದರಿಂದ ಉತ್ತಮ ಮಟ್ಟದ ಸಂಬಳ ಇರುತ್ತದೆ.
ವಿದ್ಯಾರ್ಹತೆ- SSLC ಜೊತೆ ITI ಪಾಸ್ ಆಗಿರಬೇಕು
ವಯೋಮಿತಿ- 15 ವರ್ಷದಿಂದ 24 ವರ್ಷದ ಒಳಗಿನವರು
ಈ ಹುದ್ದೆಗೆ ಸಂಬಂಧಿಸಿದ ದಿನಾಂಕಗಳು..?
ನೋಟಿಫಿಕೇಶನ್ ಪ್ರಕಟ- ಸೆಪ್ಟೆಂಬರ್ 09
ಅರ್ಜಿ ಹಾಕಲು ಪ್ರಾರಂಭ- ಸೆಪ್ಟೆಂಬರ್ 24
ಅರ್ಜಿ ಕೊನೆ ದಿನಾಂಕ- ಅಕ್ಟೋಬರ್ 23