spot_img
spot_img

iPhone16 ಪ್ಲಸ್ ಈಗ ಕಡಿಮೆ ಬೆಲೆಗೆ ಸಿಗುತ್ತೆ; ಯಾವ ದೇಶದಲ್ಲಿ ?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಕುಪರ್ಟಿನೋ ಮೂಲದ ಆ್ಯಪಲ್​​ ಕೊನೆಗೂ ಐಫೋನ್​ 16 ಸಿರೀಸ್​ ಅನ್ನು ಬಿಡುಗಡೆ ಮಾಡಿದೆ. ನೂತನ ಬ್ರ್ಯಾಂಡೆಡ್​ ಫೋನ್​ ಈಗಾಗಲೇ ಹಲವರ ಮನಗೆದ್ದಿದೆ. ಆದರೆ ಇನ್ನು ಕೆಲವರು ಅದರ ಮೂಲ ಬೆಲೆ ಕೇಳಿ ತಲೆ ಕೆಡಿಸಿಕೊಂಡಿದ್ದಾರೆ. ಸದ್ಯ ಭಾರತವನ್ನು ಸೇರಿಸಿ ಕಡಿಮೆ ಬೆಲೆಗೆ ಐಫೋನ್​ 16 ಸಿರೀಸ್​ ಯಾವ ದೇಶದಲ್ಲಿ ಸಿಗುತ್ತದೆ ಎಂದು ನೋಡೋಣ.

ಇದನೂ ಓದಿ:ದ್ವಿತೀಯ ಪಿಯುಸಿನಲ್ಲಿ ಅದರೆ ಸಾಕು ಡೈರೆಕ್ಟ್ ಸೆಲೆಕ್ಷನ್; ಚಿಕ್ಕಬಳ್ಳಾಪುರದ ಗ್ರಾಮ ಪಂಚಾಯತಿಗಳಲ್ಲಿ ಹುದ್ದೆಗಳ ನೇಮಕಾತಿ.!

iPhone 16 ಮತ್ತು ಐಫೋನ್​ 16 ಪ್ಲಸ್​​ 5 ಬಣ್ಣದಲ್ಲಿ ಸಿಗಲಿದೆ. ಕಪ್ಪು, ಬಿಳಿ, ಗುಲಾಬಿ, ಟೀಲ್​​ ಮತ್ತು ಅಲ್ಟ್ರಾಮರೀನ್​​ ಬಣ್ಣದಲ್ಲಿ ಖರೀದಿಸಬಹುದಾಗಿದೆ. ಸೆಪ್ಟೆಂಬರ್​​ 13ರಿಂದ ಐಫೋನ್​ 16 ಆರ್ಡರ್​ ಪ್ರಾರಂಭವಾಗುತ್ತದೆ. ಸೆಪ್ಟೆಂಬರ್​​ 20ರಿಂದ ಖರೀದಿಗೆ ಸಿಗುತ್ತದೆ.

ಭಾರತದ ರೂಪಾಯಿಗಳಲ್ಲಿ ಐಫೋನ್​ 16ನ ದರ 128ಜಿಬಿ ಮಾಡಲ್​ 79,900 ರೂಪಾಯಿಂದ ಶುರುವಾಗುತ್ತದೆ. ಇದೆ ಹ್ಯಾಂಡ್​ಸೆಟ್​ 256 ಜಿಬಿ ಹಾಗೂ 512ಜಿಬಿ ಮಾಡಲ್​ನಲ್ಲೂ ಕೂಡ ದೊರೆಯುತ್ತವೆ ಅವುಗಳ ಬೆಲೆ 89,900 ಹಾಗೂ 1,09,900 ​ರೂಪಾಯಿ.

ಇನ್ನು iPhone 16 ಪ್ಲಸ್​ 128 ಜಿಬಿ ಮಾಡಲ್​ನ ಬೆಲೆ 89,900 ಒಂದು ವೇಳೆ ನೀವು 256ಜಿಬಿಯನ್ನು ಆಯ್ಕೆ ಮಾಡಿಕೊಂಡಲ್ಲಿ ಅದರ ಬೆಲೆ ಒಂದು ಲಕ್ಷಕ್ಕೆ ಜಸ್ಟ್ ನೂರು ರೂಪಾಯಿ ಕಡಿಮೆ ಅಂದ್ರೆ 99,900. ಇನ್ನು ಐಫೋನ್16ಪ್ಲಸ್​​ 512 ಜಿಬಿ ಸ್ಟೋರೆಜ್ ಹೊಂದಿರುವ ಮಾಡೆಲ್​ಗೆ 1,19,900 ರೂಪಾಯಿಯನ್ನು ನಿಗದಿ ಮಾಡಲಾಗಿದೆ.

ಭಾರತದ ರೂಪಾಯಿಗಳಲ್ಲಿ ಐಫೋನ್ ಪ್ರೊ ಹಾಗೂ ಪ್ರೊಮ್ಯಾಕ್ಸ್​ನ ಬೆಲೆಯನ್ನು ನೋಡುವುದಾದರೆ ಐಫೋನ್ 16 ಪ್ರೊ 128ಜಿಬಿ ಮಾಡಲ್​ನ ಬೆಲೆ 1,19,900. ಆದ್ರೆ ಗ್ರಾಹಕರು ಈ ಸರಣಿಯಲ್ಲೂ 256 ಜಿಬಿ, 512 ಜಿಬಿ 1ಟಿಬಿ ಸ್ಟೋರೆಜ್ ಇರುವ ಹ್ಯಾಂಡ್​ಸೆಟ್​ನ್ನು ಆಯ್ಕೆ ಮಾಡಿಕೊಳ್ಳಬಹುದು ಅವುಗಳ ಬೆಲೆ 256 ಜಿಬಿ ಸ್ಟೋರೆಜ್​ನದ್ದು 1,29,990 ರೂಪಾಯಿ 512 ಜಿಬಿಯದ್ದು 1,49,900 ಹಾಗೂ 1 ಟೆರಾಬೈಟ್​ ಸ್ಟೋರೆಜ್ ಇರುವ ಹ್ಯಾಂಡ್​ಸೆಟ್​ನ ಬೆಲೆ 1,69,900 ರೂಪಾಯಿಗಳು.

ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ; ಪರೀಕ್ಷೆ ಇಲ್ಲದೆ, 3 ಸಾವಿರಕ್ಕೂ ಅಧಿಕ ಜಾಬ್ಸ್ ಲಭ್ಯ..!

ಇನ್ನು ಐಫೋನ್ ಪ್ರೊಮ್ಯಾಕ್ಸ್​ನ 256ಜಿಬಿ ಸ್ಟೋರೆಜ್ ಇರುವ ಹ್ಯಾಂಡ್​ಸೆಟ್ ಬೆಲೆ 1,44,900 ರೂಪಾಯಿಗಳು. ಇದೇ ಐಫೋನ್​ 512 ಜಿಬಿ ಸ್ಟೋರೆಜ್​ನ ಸಾಮರ್ಥ್ಯವನ್ನು ಹೊಂದಿರುವ ಮಾಡೆಲ್ ಇದೆ. ಅದರ ಬೆಲೆ 1,64,900 ರೂಪಾಯಿಗಳು. ಅದೇ 1 ಟೆರಾ ಬೈಟ್​ ಸ್ಟೋರೆಜ್ ಸಾಮರ್ಥ್ಯವಿರುವ ಮಾಡೆಲ್​ನ ಬೆಲೆ 1,84,900 ರೂಪಾಯಿಗಳು.

ಭಾರತವನ್ನು ಹೊರತು ಪಡಿಸಿ ಅಮೆರಿಕಾದಲ್ಲಿ ಐಫೋನ್​ 16 ಸಿರೀಸ್​ ಬೆಲೆ 67,100 ರಿಂದ ಪ್ರಾರಂಭವಾಗುತ್ತದೆ. ಐಫೋನ್​ 16 ಪ್ರೊ ಮ್ಯಾಕ್ಸ್​​​ 1,00,692 ರೂಪಾಯಿಗೆ ಸಿಗುತ್ತದೆ.

ಕೆನಡಾ ದೇಶದಲ್ಲೂ 69,874 ರೂಪಾಯಿಗೆ iPhone16 ಸಿರೀಸ್​​ ಸಿಗುತ್ತದೆ. ಇನ್ನು ದುಬೈನಲ್ಲಿ 77,701 ರೂಪಾಯಿಗೆ ಐಫೋನ್​ 16 ಖರೀದಿಸಬಹುದಾಗಿದೆ.

ಇದನ್ನೂ ಓದಿ:ಹಣ ಅಂದ್ರೆ, ಹೆಣ ಕೂಡ ಬಾಯಿ ಬಿಡುತ್ತೆ; ದ್ರಾವಿಡ್ ಪದೇ ಪದೇ ಈ ಮಾತು ಸುಳ್ಳು ಮಾಡಿದ್ದಾರೆ.!

ಇನ್ನು ಸಿಂಗಪುರ ಮತ್ತು ಯುನೈಟೆಡ್​​​ ಕಿಂಗ್​ಡಮ್​​​ನಲ್ಲಿ ಐಫೋನ್​ 16 ಬಲು ದುಬಾರಿಯಾಗಿದೆ. 83,604 ರೂಪಾಯಿಗೆ ಐಫೋನ್​ 16 ಸಿಂಗಾಪುರದಲ್ಲಿ ದೊರೆತರೆ, 87,826 ರೂಪಾಯಿಗೆ ಯುನೈಟೆಡ್​ ಕಿಂಗ್​ಡಮ್​ನಲ್ಲಿ ಖರೀದಿಸಲು ಸಿಗುತ್ತದೆ.

WhatsApp Group Join Now
Telegram Group Join Now
Instagram Account Follow Now
spot_img

Related articles

VIVO V50 LAUNCHED IN INDIA:ಪ್ರೀಮಿಯಂ ಸ್ಲಿಮ್ ಡಿಸೈನ್ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ವಿವೋ, ಮಿಡಲ್ ರೇಂಜ್ನಲ್ಲಿ ಇದೇ ಟಾಪ್

Vivo V50 Launched in India News : ವಿವೋ ಇಂದು ತನ್ನ ಹೊಸ ಸ್ಮಾರ್ಟ್‌ಫೋನ್ VIVO V50 ಅನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ....

TESLA BEGINS HIRING IN INDIA:ಮಸ್ಕ್ ಸಂಸ್ಥೆಯಲ್ಲಿ ಕೆಲಸ ಮಾಡಲು ಅದ್ಭುತ ಅವಕಾಶ

New Delhi News: ಇದರೊಂದಿಗೆ ಅಮೆರಿಕದ ದೈತ್ಯ ಎಲೆಕ್ಟ್ರಿಕಲ್​ ಕಾರು ಕಂಪನಿಯಲ್ಲಿ ಕೆಲಸ ಮಾಡಬೇಕೆಂಬ ಕನಸು ಹೊಂದಿರುವವರಿಗೆ ಟೆಸ್ಲಾ ಸುವರ್ಣಾವಕಾಶ ನೀಡಿದೆ. ಮುಂಬೈನಲ್ಲಿ ಹಲವು ಹುದ್ದೆಗಳ...

MAHAKUMBH : ಆ ಅಘೋರಿ ಭವಿಷ್ಯವೇ ನಿಜವಾಯ್ತಾ?

MAHAKUMBH : ಉತ್ತರ ಪ್ರದೇಶದ ದೇವ ಪ್ರಯಾಗದಲ್ಲಿ MAHAKUMBH ನಡೆಯುತ್ತಿದೆ. ಕಳೆದ 30 ದಿನಗಳ ಅಂತರದಲ್ಲಿ 7 ಅಗ್ನಿ ದುರಂತ ಎದುರಾಗಿವೆ. ಈ ಹಿಂದೆ ಹೀಗೆ...

DARSHAN : ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿ ದರ್ಶನ್ ಭಾವುಕ

Darshan News: ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ DARSHAN ಹುಟ್ಟುಹಬ್ಬವನ್ನು ಆಚರಿಸಿಕೊಂಡರು. 48ನೇ ವರ್ಷಕ್ಕೆ ಕಾಲಿಟ್ಟ ದಾಸನಿಗೆ ಸ್ಯಾಂಡಲ್​ವುಡ್​ ತಾರೆಯರು, ವಿವಿಧ ಕ್ಷೇತ್ರದ ಗಣ್ಯರು...