spot_img
spot_img

ಸರಕಾರಿ ನೇಮಕಾತಿ ಅರ್ಹತಾ ನಿಯಮಗಳನ್ನು ಮಧ್ಯದಲ್ಲಿ ಬದಲಿಸುವಂತಿಲ್ಲ: ಸುಪ್ರೀಂ ಕೋರ್ಟ್

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Govt Recruitment : ಸರಕಾರಿ ನೇಮಕಾತಿಗಳಲ್ಲಿ ಅರ್ಹತಾ ನಿಯಮಗಳನ್ನು ನೇಮಕಾತಿ ಪ್ರಕ್ರಿಯೆ ಮಧ್ಯ ಬದಲಿಸಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಗುರುವಾರ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು,ನೇಮಕಾತಿ ಮಾನದಂಡಗಳನ್ನು ಪ್ರಕ್ರಿಯೆ ಮಧ್ಯದಲ್ಲಿ ಬದಲಿಸುವುದು ಸಮಾನತೆಯ ಹಕ್ಕು ಮತ್ತು ತಾರತಮ್ಯದ ವಿರುದ್ಧ ಹಕ್ಕನ್ನು ಉಲ್ಲಂಘಿಸುತ್ತದೆಯೇ ಎನ್ನುವುದನ್ನು ಪರಿಶೀಲಿಸಿದೆ.

ಪೀಠದ ತೀರ್ಪನ್ನು ಬರೆದ ನ್ಯಾ.ಮನೋಜ್ ಮಿಶ್ರಾ ಅವರು,‌ ನೇಮಕಾತಿ ಪ್ರಕ್ರಿಯೆಯ ಆರಂಭದಲ್ಲಿ ಅಸ್ತಿತ್ವದಲ್ಲಿದ್ದ ನಿಯಮಗಳನ್ನು ಅವು ನಿಷ್ಪಕ್ಷ ಮತ್ತು ಸಂವಿಧಾನದ 14ನೇ ವಿಧಿ(ಸಮಾನತೆಯ ಹಕ್ಕು)ಗೆ ಅನುಗುಣವಾಗಿರುವವರೆಗೆ ಬದಲಿಸುವಂತಿಲ್ಲ ಎಂದು ಹೇಳಿದ್ದಾರೆ.

ಆಯ್ಕೆಪಟ್ಟಿಯಲ್ಲಿ ಹೆಸರಿನ ಸೇರ್ಪಡೆಯು ನೇಮಕಾತಿಯ ಸಂಪೂರ್ಣ ಹಕ್ಕನ್ನು ಖಾತರಿಪಡಿಸುವುದಿಲ್ಲ ಎಂದು ಅಭಿಪ್ರಾಯಿಸಿರುವ ಪೀಠವು, ಆದರೆ ನೇಮಕಾತಿ ಪ್ರಾಧಿಕಾರವು ಆಯ್ಕೆ ಪಟ್ಟಿಯಲ್ಲಿ ಹೆಸರಿಸಲಾದ ಅಭ್ಯರ್ಥಿಗಳನ್ನು ನೇಮಕಾತಿ ಮಾಡದಿರುವುದಕ್ಕೆ ಸಮಂಜಸವಾದ ಕಾರಣಗಳನ್ನು ತೋರಿಸಬೇಕು ಎಂದು ಹೇಳಿದೆ.

ಪೀಠವು ಕಳೆದ ವರ್ಷದ ಜುಲೈನಲ್ಲಿ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಪ್ರಕರಣವು 2009ರಲ್ಲಿ ರಾಜಸ್ಥಾನ ಉಚ್ಚ ನ್ಯಾಯಾಲಯದ 13 ಅನುವಾದಕರ ಹುದ್ದೆಗಳಿಗೆ ನೇಮಕಾತಿಗೆ ಸಂಬಂಧಿಸಿದೆ.

ನೇಮಕಾತಿ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನಗಳ ಬಳಿಕ ಉಚ್ಚ ನ್ಯಾಯಾಲಯವು ಕಟ್-ಆಫ್ ಅಂಕಗಳನ್ನು 75ಕ್ಕೆ ಹೆಚ್ಚಿಸಿತ್ತು. ಪರಿಣಾಮವಾಗಿ ಕೇವಲ ಮೂವರು ಅಭ್ಯರ್ಥಿಗಳು ಅರ್ಹರಾಗಿದ್ದರು.
ನೇಮಕಾತಿ ಪ್ರಕ್ರಿಯೆ ಎಂಬುದು ಅರ್ಜಿಗಳನ್ನು ಆಹ್ವಾನಿಸುವುದರೊಂದಿಗೆ ಆರಂಭವಾಗಿ ಹುದ್ದೆ ಭರ್ತಿ ಬಳಿಕ ಕೊನೆಗೊಳ್ಳುತ್ತದೆ. ಅಸ್ತಿತ್ವದಲ್ಲಿರುವ ನಿಯಮಗಳು ಅನುಮತಿಸದ ವಿನಾ ಅರ್ಹತಾ ನಿಯಮಗಳನ್ನು ಮಧ್ಯದಲ್ಲಿಯೇ ಬದಲಾಯಿಸುವಂತಿಲ್ಲ.

ನೇಮಕಾತಿ ನಿಯಮಗಳು ಮನಸೋಇಚ್ಛೆಯಾಗಿರದೆ ಸಂವಿಧಾನದ 14 (ಸಮಾನತೆಯ ಹಕ್ಕು) ಮತ್ತು 16ನೇ (ಸರ್ಕಾರಿ ಉದ್ಯೋಗದಲ್ಲಿ ತಾರತಮ್ಯ ಮಾಡದಿರುವುದು) ವಿಧಿಗಳಿಗೆ ಅನುಗುಣವಾಗಿರಬೇಕು. ಆಯ್ಕೆ ಪಟ್ಟಿಯಲ್ಲಿ ನಿಯೋಜನೆಯಾಗಿದ್ದ ಮಾತ್ರಕ್ಕೆ ಅಭ್ಯರ್ಥಿಗೆ ಉದ್ಯೋಗದ ಸಂಪೂರ್ಣ ಹಕ್ಕು ದೊರೆಯುವುದಿಲ್ಲ.

ಕೆ ಮಂಜುಶ್ರೀ ಪ್ರಕರಣದ ತೀರ್ಪು ಉತ್ತಮ ಕಾನೂನಾಗಿದ್ದು ಹರಿಯಾಣ ಸರ್ಕಾರ ಮತ್ತು ಸುಭಾಷ್‌ ಚಂದರ್‌ ಮರ್ವಾಹಾ ಇನ್ನಿತರರ ನಡುವಣ ಪ್ರಕರಣದ ತೀರ್ಪನ್ನು ಪರಿಗಣನೆಗೆ ತೆಗೆದುಕೊಳ್ಳದೆ ಇರುವುದು ತಪ್ಪಲ್ಲ ಎಂದು ತಿಳಿಸಿದೆ.

ಈ ಪ್ರಕರಣವು ರಾಜಸ್ಥಾನ ಹೈಕೋರ್ಟ್‌ನ ಸಿಬ್ಬಂದಿಗೆ ಹದಿಮೂರು ಭಾಷಾಂತರಕಾರ ಹುದ್ದೆಗಳನ್ನು ಭರ್ತಿ ಮಾಡುವ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದೆ.

ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಹಾಜರಾಗಬೇಕಿತ್ತು, ನಂತರ ವೈಯಕ್ತಿಕ ಸಂದರ್ಶನಕ್ಕೆ ಹಾಜರಾಗಬೇಕಿತ್ತು. ಕನಿಷ್ಠ ಶೇ.75 ಅಂಕ ಗಳಿಸಿದವರನ್ನೇ ಹುದ್ದೆಗಳಿಗೆ ಆಯ್ಕೆ ಮಾಡಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಆದೇಶ ಹೊರಡಿಸಿರುವುದು ನಂತರ ಬೆಳಕಿಗೆ ಬಂದಿತು.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಬಿಗ್​ಬಾಸ್​ ಮನೆಯಲ್ಲಿ ಎಲ್ಲಾ ಉಲ್ಟಾ ಪಲ್ಟಾ..

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 10ನೇ ವಾರಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​​ ಮನೆಯಲ್ಲಿ ಎರಡು ತಂಡವಾಗಿ ಮಾರ್ಪಟ್ಟಿದೆ. ಈ...

ತಿರುಪತಿ: ಲಡ್ಡು ಖರೀದಿಸಲು ಇದ್ದ ಮಿತಿ ತೆಗೆದು ಹಾಕಿದ ಟಿಟಿಡಿ

ಆಂಧ್ರ ಪ್ರದೇಶ: ಇನ್ನು ಮುಂದೆ ತಿರುಪತಿಗೆ ಭೇಟಿ ನೀಡುವ ಭಕ್ತರು ಕೇಳಿದಷ್ಟೂ ಲಡ್ಡು ನೀಡಲು ಹಾಗೂ ಲಡ್ಡು ತಯಾರಿಸಲು ಬೇಕಾಗಿರುವ ಸಿಬ್ಬಂದಿ ನೇಮಕಕ್ಕೂ ಟಿಟಿಡಿ...

ಕರ್ನಾಟಕದ ಕರಾವಳಿಯಲ್ಲಿ 5 ಬ್ಯಾಂಕ್​ಗಳ ಸ್ಥಾಪನೆ

ಮಂಗಳೂರು: ಇಂದು ಅಂತಾರಾಷ್ಟ್ರೀಯ ಬ್ಯಾಂಕ್ ದಿನ. ಆರ್ಥಿಕ ಅಭಿವೃದ್ಧಿ, ಶ್ರೇಯಸ್ಸಿಗೆ ಆಧಾರವಾದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಗೌರವಿಸುವ ದಿನ. ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ...

ಪ್ರೊಬಾ-3 ಮಿಷನ್ ಉಡಾವಣೆ ನಾಳೆಗೆ ಮುಂದೂಡಿಕೆ: ಇಸ್ರೋ

ಬೆಂಗಳೂರು: ಇಂದು ನಿಗದಿಯಾಗಿದ್ದ ಯುರೋಪಿಯನ್ ಸ್ಪೇಸ್ ಏಜೆನ್ಸಿಯ (ಇಎಸ್ಎ) ಪ್ರೊಬಾ -3 ಮಿಷನ್ ಉಡಾವಣೆಯನ್ನು ನಾಳೆಗೆ (ಡಿಸೆಂಬರ್ 5ಕ್ಕೆ) ಮುಂದೂಡಲಾಗಿದೆ. ನಾಳೆ ಭಾರತೀಯ ಕಾಲಮಾನ...