spot_img
spot_img

GRAMEEN BHARAT MAHOTSAV : ಜಾತಿ ರಾಜಕೀಯ ಹೆಸರಲ್ಲಿ ಕೆಲವರಿಂದ ಶಾಂತಿ ಕದಡುವ ಯತ್ನ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

New Delhi News:

ಗ್ರಾಮೀಣ ಜನರಿಗೆ ಘನತೆಯ ಬದುಕು ರೂಪಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆ ಆಗಿದೆ. ನಮ್ಮ ಗುರಿ ಗ್ರಾಮೀಣ ಭಾರತವನ್ನು ಸಬಲೀಕರಣಗೊಳಿಸುವುದು ಎಂದು ಪ್ರಧಾನಿ ಮೋದಿ ಹೇಳಿದರು. ದೆಹಲಿಯ ಭಾರತ್​ ಮಂಟಪ್​ನಲ್ಲಿ GRAMEEN BHARAT MAHOTSAV ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 2014ರಲ್ಲಿ ಪ್ರಧಾನಿಯಾದಾಗಿನಿಂದ ಪ್ರತಿ ಕ್ಷಣವೂ ಗ್ರಾಮೀಣ ಭಾರತ ಸಬಲೀಕರಣಕ್ಕೆ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದರು.

ಕೆಲವರು ಜಾತಿ ರಾಜಕೀಯ ಹೆಸರಿನಲ್ಲಿ ವಿಷ ಹರಡುವ ಮೂಲಕ ಶಾಂತಿ ಕದಡುವ ಯತ್ನವನ್ನು ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಸಾಮರಸ್ಯ ಮತ್ತು ಶಾಂತಿ ಬಲಗೊಳಿಸುವಲ್ಲಿ ನಾವು ಕಾರ್ಯ ನಿರ್ವಹಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. 2025ರ ವರ್ಷದ ಆರಂಭದಲ್ಲೇ GRAMEEN BHARAT MAHOTSAV ಬೃಹತ್​ ಕಾರ್ಯಕ್ರಮವನ್ನು ಭಾರತದ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಪರಿಚಯಿಸಲಾಗಿದೆ.

ಇದು ಹೊಸ ಗುರುತು ಸೃಷ್ಟಿಸಲಿದ್ದು, ಈ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ನಬಾರ್ಡ್​ ಮತ್ತು ಇತರೆ ಉದ್ಯೋಗಿಗಳಿಗೆ ಶುಭಾಶಯ ತಿಳಿಸಿದರು. ಗ್ರಾಮೀಣ ಪ್ರದೇಶಗಳು ಎದುರಿಸುತ್ತಿರುವ ಸವಾಲಿನ ನಡುವೆ ನಾನು ನನ್ನ ಬಾಲ್ಯವನ್ನು ಗ್ರಾಮೀಣ ಪ್ರದೇಶದಲ್ಲಿ ಕಳೆದ. ಇದರಿಂದಾಗಿ ಅಲ್ಲಿನ ಸವಾಲುಗಳನ್ನು ಎದುರಿಸುವುದು ಕಲಿತೆ ಹಾಗೇ ಅವರ ಸಾಮರ್ಥ್ಯ ಅರಿತೆ.

ಗ್ರಾಮೀಣ ಪ್ರದೇಶದ ಜನರು ಕಠಿಣ ಶ್ರಮದ ಹೊರತಾಗಿ ಅವರು ಸೀಮಿತ ಸೌಲಭ್ಯದಿಂದಾಗಿ ಅವಕಾಶದ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದರು.

Promotion of Guarantee of Basic Facilities:

ನಮ್ಮ ಗುರಿ ಗ್ರಾಮೀಣ ಭಾರತವನ್ನು ಸಬಲೀಕರಣಗೊಳಿಸುವುದು. ಅವರಿಗೆ ಅವಕಾಶಗಳ ನೀಡುವ ಮೂಲಕ ಮುನ್ನಡೆ ಸಾಧಿಸಲು ಸಹಾಯ ಮಾಡಿ, ವಲಸೆ ತಪ್ಪಿಸಿ, ಆರಾಮದಾಯಕ ಬದುಕು ಕಲ್ಪಿಸುವುದಾಗಿದೆ. ಇದನ್ನು ಸಾಧಿಸಲು ಪ್ರತಿ ಗ್ರಾಮದಲ್ಲಿ ಮೂಲಭೂತ ಸೌಲಭ್ಯದ ಖಾತ್ರಿಯ ಪ್ರಚಾರವನ್ನು ನಾವು ಆರಂಭಿಸಿದ್ದಾಗಿ ತಿಳಿಸಿದರು.

2014ರಿಂದ ನಾನು ಕಚೇರಿ ಅಧಿಕಾರ ವಹಿಸಿಕೊಂಡಾಗಿನಿಂದಾಗಲೂ ಪ್ರತಿ ಘಳಿಗೆ ಗ್ರಾಮೀಣ ಭಾರತದ ಸೇವೆಗಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಗ್ರಾಮೀಣ ಜನರಿಗೆ ಘನತೆಯ ಬದುಕು ರೂಪಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆ ಆಗಿದೆ.

Poverty Reduction:

ದಶಕಗಳ ಹಿಂದೆ ಅಭಿವೃದ್ಧಿಯಿಂದ ವಂಚಿತವಾದ ಪ್ರದೇಶಗಳು ಇದೀಗ ಸಮಾನ ಹಕ್ಕು ಪಡೆಯುತ್ತಿವೆ. ನಿನ್ನೆಯಷ್ಟೇ ಎಸ್​ಬಿಐ ವರದಿ ಕೂಡ ಬಿಡುಗಡೆಯಾಗಿದ್ದು, ಅದರಲ್ಲಿ 2012ಕ್ಕೆ ಹೋಲಿಕೆ ಮಾಡಿದಾಗ ಶೇ 26ರಷ್ಟಿದ್ದ ಬಡತನವೂ 2024ರಲ್ಲಿ ಶೇ 5ಕ್ಕೆ ಕುಸಿದಿದೆ ಎಂದು ಉಲ್ಲೇಖಿಸಿದರು.

ಈ ಹಿಂದಿನ ಸರ್ಕಾರಗಳು ಎಸ್​ಸಿ, ಎಸ್​ಟಿ ಮತ್ತು ಒಬಿಸಿ ಅಗತ್ಯತೆಗೆ ಗಮನ ನೀಡಲಿಲ್ಲ. ಗ್ರಾಮಗಳಲ್ಲಿ ವಲಸೆಗಳು ನಿರಂತರವಾಗಿ ಬಡತನ ಕೂಡ ಹೆಚ್ಚಾಯಿತು. ಪರಿಣಾಮ ನಗರ ಮತ್ತು ಗ್ರಾಮಗಳ ನಡುವಿನ ಅಂತರ ಹೆಚ್ಚಾಗುತ್ತಲೇ ಹೋಗಿತ್ತು.

Basic Improved Livelihoods of Government Measures:

ಗ್ರಾಮೀಣ ಜನರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಅವಕಾಶ ಸೃಷ್ಟಿಸುವ ಮೂಲಕ ಅವರಿಗೆ ಗರಿಷ್ಠ ಆರ್ಥಿಕ ಬೆಂಬಲವನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಪಿಎಂ ಕಿಸಾನ್​ ಸಮ್ಮಾನ್​ ನಿಧಿ ಮೂಲಕ ರೈತರಿಗೆ ಮೂರು ಲಕ್ಷ ಕೋಟಿಯನ್ನು ಒದಗಿಸಲಾಗಿದೆ. ಕಳೆದ 10 ವರ್ಷದಲ್ಲಿ ರೈತರಿಗೆ ನೀಡುತ್ತಿರುವ ಕೃಷಿ ಸಾಲವನ್ನು 3.5 ಪಟ್ಟು ಹೆಚ್ಚಿಸಲಾಗಿದೆ ಎಂದರು.

ಕಳೆದೊಂದು ದಶಕದಿಂದ ನಮ್ಮ ಸರ್ಕಾರೂ ಗ್ರಾಮೀಣ ಭಾರತವನ್ನು ಮೇಲೆತ್ತು ಕಾರ್ಯದಲ್ಲಿ ನಿರತವಾಗಿದೆ, ಪ್ರಧಾನ ಮಂತ್ರಿ ಫಸಲ್​ ಭೀಮಾ ಯೋಜನಾ ಮತ್ತು ಪಿಎಂ ಕಿಸಾನ್​ ಸಮ್ಮಾನ್​ ನಿಧಿಯಂತಹ ಆರ್ಥಿಕ ನೀತಿಯ ಉಪಕ್ರಮವನ್ನು ಜಾರಿ ಮಾಡಲಾಗಿದೆ. ವಿಕಸಿತ ಭಾರತ 2047 ಗಾಗಿ ಸುಧಾರಿತ ಗ್ರಾಮೀಣ ಭಾರತವನ್ನು ನಿರ್ಮಿಸುವುದು ಎಂಬ ಧ್ಯೇಯದ ಮೇರೆಗೆ ಭಾರತ್​ ಮಂಟಪ್​ನಲ್ಲಿ ಇಂದಿನಿಂದ ಜನವರಿ 9ರ ವರೆಗೆ ಆರು ದಿನಗಳ ಕಾಲ ಈ GRAMEEN BHARAT MAHOTSAV ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

(ಪಿಟಿಐ/ಎಎನ್​ಐ/ಐಎಎನ್​ಎಸ್​) ಕಳೆದೊಂದು ದಶಕದಿಂದ ನಿರಂತರವಾಗಿ ಹಲವು ಬೆಳೆಗಳಿಗೆ ರೈತರ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ. ಸ್ವಾಮಿತ್ವ ಯೋಜನೆಯಂತಹ ಕ್ರಮಗಳು ಗ್ರಾಮೀಣ ಜನರಿಗೆ ಆಸ್ತಿ ಪತ್ರವನ್ನು ನೀಡುತ್ತಿದೆ. ಗ್ರಾಮೀಣ ಜನರ ಖರೀದಿ ಸಾಮರ್ಥ್ಯವು ಗಮನಾರ್ಹವಾಗಿ ಸುಧಾರಣೆ ಕಂಡಿದೆ. ಮೊದಲಬಾರಿಗೆ ತಮ್ಮ ಆದಾಯದದಲ್ಲಿ ಆಹಾರದ ಮೇಲೆ ಗ್ರಾಮೀಣ ಜನರು ವ್ಯಯ ಮಾಡುತ್ತಿರುವುದು ಶೇ 50ರಷ್ಟು ಕಡಿಮೆಯಾಗಿದ್ದು, ಇದು ಇತರೆ ಅಗತ್ಯತೆ ಮೇಲೆ ಹೆಚ್ಚು ಖರ್ಚು ಮಾಡಲ ಅವಕಾಶ ನೀಡಿದೆ ಎಂದರು.

 

ಇದನ್ನು ಓದಿರಿ : VANDE BHARAT SLEEPER TRAIN : ಪ್ರಾಯೋಗಿಕ ಸಂಚಾರದಲ್ಲಿ ಗಂಟೆಗೆ 180 ಕಿಮೀ ಗರಿಷ್ಠ

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...