Rapidly Spreading Hmpv Virus in China News:
ಕೋವಿಡ್ ವೈರಸ್ ಜಗತ್ತನ್ನು ಕಾಡಿದ ಐದು ವರ್ಷಗಳ ಬಳಿಕ ಇದೀಗ CHINA ದಲ್ಲಿ ಮತ್ತೊಂದು ವೈರಸ್ ವೇಗವಾಗಿ ಹರಡುತ್ತಿರುವ ಕುರಿತು ವರದಿಯಾಗಿದೆ. ನೆರೆಯ ರಾಷ್ಟ್ರಗಳು ಈ ವೈರಸ್ ಪತ್ತೆ ಮಾಡುವ ನಿಟ್ಟಿನಲ್ಲಿ ಸ್ಕ್ರೀನಿಂಗ್ ಹಾಗೂ ಪ್ರತ್ಯೇಕತೆಯ ಪ್ರೋಟೋಕಾಲ್‌ಗಳನ್ನು ಘೋಷಿಸಲು ಮುಂದಾಗಿವೆ.ಅದುವೇ, ‘ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್’ (human metapneumo virus or HMPV) ಈ ವರ್ಷ ಆರಂಭದಲ್ಲಿCHINA ದಲ್ಲಿ ಕಾಣಿಸಿಕೊಂಡಿರುವ ಹೊಸ ವೈರಸ್ ಇದು. ಆರೋಗ್ಯ ಅಧಿಕಾರಿಗಳು ಈ ವೈರಸ್ ಹರಡುವಿಕೆ ನಿಯಂತ್ರಿಸಲು ಕಾರ್ಯನಿರ್ವಹಿಸುತ್ತಿದ್ದಾರೆ.
ಇಲ್ಲಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಜನರು ಕಿಕ್ಕಿರಿದು ಸೇರಿದ್ದಾರೆ. ಈ ಕುರಿತ ವಿಡಿಯೋಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಹರಿದಾಡುತ್ತಿವೆ. ಜೊತೆಗೆ CHINA ದ ಉತ್ತರ ಪ್ರಾಂತ್ಯಗಳಲ್ಲಿ 14 ವರ್ಷದೊಳಗಿನ ಮಕ್ಕಳು ಹೆಚ್ಚಿನ ಸಂಖ್ಯೆ ಈ ವೈರಸ್ನ ಸೋಂಕಿಗೆ ಒಳಗಾಗಿದ್ದಾರೆ. ಇದರ ಬೆನ್ನಲ್ಲೆ ಹೆಚ್ಚುತ್ತಿರುವ ಪ್ರಕರಣಗಳನ್ನು ತಡೆಗಟ್ಟಲು ಮತ್ತು ಪತ್ತೆ ಮಾಡಲು CHINA ಸರ್ಕಾರವು ಸ್ಕ್ರೀನಿಂಗ್ ಹಾಗೂ ಪ್ರತ್ಯೇಕ ಪ್ರೋಟೋಕಾಲ್‌ಗಳು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
What is HMPV virus and how is it spread?: ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV) ಎಂಬುದು ಉಸಿರಾಟಕ್ಕೆ ಸಂಬಂಧಿಸಿದ ವೈರಸ್ ಆಗಿದ್ದು, ಹೆಚ್ಚಿನ ವ್ಯಕ್ತಿಗಳಲ್ಲಿ ಕಡಿಮೆ ತೀವ್ರತೆಯ (ಶೀತ ತರಹದ ಲಕ್ಷಣ) ರೋಗಲಕ್ಷಣಗಳನ್ನು ಕಂಡುಬರುತ್ತದೆ. ಆದರೆ, ಮಕ್ಕಳು, ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಬ್ರಾಂಕೈಟಿಸ್ ಮತ್ತು ನ್ಯುಮೋನಿಯಾದಂತಹ ತೀವ್ರ ಲಕ್ಷಣಗಳು ಕಾಣಿಸುತ್ತವೆ.ಈ ಸೋಂಕುಗಳಂತೆಯೇ HMPV ವೈರಸ್ ವೇಗವಾಗಿ ಹಬ್ಬುತ್ತಿದೆ.
ಇದರಿಂದ ಉತ್ತರ CHINA ದಲ್ಲಿ ಆರೋಗ್ಯ ಸಂಪನ್ಮೂಲಗಳ ಕೊರತೆ ಉಂಟಾಗಿದೆ ಎಂದು ವರದಿ ತಿಳಿಸಿದೆ.ರಾಯಿಟರ್ಸ್ ವರದಿ ಪ್ರಕಾರ, CHINA ದಲ್ಲಿ HMPV ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿವೆ. CHINA ದೇಶವು ಇನ್ಫ್ಲುಯೆನ್ಸ A, ಮೈಕೋಪ್ಲಾಸ್ಮಾ ನ್ಯುಮೋನಿಯಾ, ರೈನೋವೈರಸ್ ಮತ್ತು COVID-19 ರೀತಿಯ ದೀರ್ಘಕಾಲದ ಪ್ರಕರಣಗಳಂತಹ ಇತರ ಸೋಂಕುಗಳ ಒಂದೇ ಸಮಯದಲ್ಲಿ ಏಕಾಏಕಿ ಹರಡಿವೆ.
Chinese Government & WHO Response: ಈ ವ್ಯವಸ್ಥೆ ಹೊಸ ಸಾಂಕ್ರಾಮಿಕ ಬೆದರಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪತ್ತೆಹಚ್ಚಲು ಮತ್ತು ಪ್ರತಿಕ್ರಿಯಿಸುವ ಗುರಿ ಹೊಂದಿದೆ.ಐದು ವರ್ಷಗಳ ಹಿಂದೆ ಕೋವಿಡ್-19 ಏಕಾಏಕಿ ಹರಡಿದ್ದ ವೇಳೆಯಲ್ಲಿ ಉಂಟಾದ ಪರಿಸ್ಥಿತಿ ಪುನರಾವರ್ತನೆಯಾಗದಂತೆ ತಡೆಯುವ ಪ್ರಯತ್ನದಲ್ಲಿ, CHINA ಸರ್ಕಾರವು ಈ ವೈರಸ್ನ ಮೇಲ್ವಿಚಾರಣಾ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ನಡೆಸುತ್ತಿದೆ.
CHINAದ ಆರೋಗ್ಯ ಅಧಿಕಾರಿಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಎರಡೂ ಹೊಸ ಸಾಂಕ್ರಾಮಿಕ ರೋಗಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಸ್ಪಷ್ಟಪಡಿಸಿವೆ. WHO ಜಾಗತಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಿಲ್ಲ, ಜೊತೆಗೆ HMPV ಕುರಿತು ನಿರ್ದಿಷ್ಟ ಎಚ್ಚರಿಕೆಗಳನ್ನು ನೀಡಿಲ್ಲ.
CHINAದಲ್ಲಿ ಕೋವಿಡ್-19 ಆರ್ಭಟ ತಗ್ಗಿದ ನಂತರ, ಇದೀಗ ಎಚ್ಎಂಪಿವಿ ವೈರಸ್ ವೇಗವಾಗಿ ಹರಡುತ್ತಿದೆ. ಎಚ್ಎಂಪಿವಿ ವೈರಸ್ನಿಂದ ಉಸಿರಾಟದ ಸೋಂಕುಗಳ ಹೆಚ್ಚಳ ಸೇರಿದಂತೆ ವಿವಿಧ ಆರೋಗ್ಯದ ಸಮಸ್ಯೆಗಳು ಕಾಡುತ್ತದೆ. ವೈರಸ್ನಿಂದ ಸುರಕ್ಷಿತವಾಗಿರುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಇದನ್ನು ಓದಿರಿ : DIGITAL PERSONAL DATA PROTECTION : ಕರಡು ಪ್ರಸ್ತಾವನೆ: ಮಕ್ಕಳ ಸಾಮಾಜಿಕ ಮಾಧ್ಯಮ ಖಾತೆ