Dehradun, Uttarakhand News:
ಎರಡು ನದಿ ದಾಟಿ, ನಾಲ್ಕು ರಾಜ್ಯಗಳಲ್ಲಿ ಸಂಚಾರ ಮಾಡಿದ ಹುಲಿರಾಯ. ಈ ಟೈಗರ್ ಸುಳಿವು ಮಾತ್ರ ಇದುವರೆಗೂ ಸಿಕ್ಕಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ. ಈ ರೀತಿ ಎರಡು ನದಿ ದಾಟಿ, ನಾಲ್ಕು ರಾಜ್ಯಗಳಲ್ಲಿ ಸಂಚಾರ ಮಾಡಿದ ಹುಲಿ ಇದಾಗಿದೆ. ಆದಾಗ್ಯೂ ಈ ಹುಲಿರಾಯನ ಸುಳಿವು ಮಾತ್ರ ಇನ್ನೂ ಸಿಕ್ಕಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ. ಇದೇ ಕಾರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹುಡುಕಾಟ ಚುರುಕುಗೊಳಿಸಿದ್ದಾರೆ. ಗಡಿ ಎಂಬುದು ಮಾನವನನ್ನು ಮಾತ್ರ ಕಟ್ಟಿ ಹಾಕುವ ರೇಖೆಯಾಗಿದೆ. ಆದರೆ, ಪ್ರಾಣಿಗಳಿಗೆ ಇದರ ಕಟ್ಟುಪಾಡು ಇಲ್ಲ ಬಿಡಿ. ಇದೇ ರೀತಿಯಲ್ಲಿ ಸ್ವಚ್ಛಂದವಾಗಿ ಉತ್ತರಾಖಂಡದ ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದ ಹುಲಿಯೊಂದು ನಾಲ್ಕು ರಾಜ್ಯದಲ್ಲಿ ಸಂಚಾರ ಮಾಡಿದೆ.
Manhunt in Jammu and Kashmir’s Rajouri:
ಉತ್ತರಾಖಂಡ್ನ ರಾಜಾಜಿ ಹುಲಿ ಸಂರಕ್ಷಿತ ಪ್ರದೇಶ ಅರಣ್ಯದಿಂದ ಹೊರಟಿರುವ ಈ ಹುಲಿ ನೂರಾರು ಕಿ.ಮೀ ಸಾಗಿದ್ದು, ಇದರ ಪತ್ತೆಗೆ ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ತಮ್ಮ ಆವಾಸಸ್ಥಾನದ ಹೊರತಾಗಿ ಎಲ್ಲೆಡೆ ಈ ಹುಲಿ ಮುಕ್ತವಾಗಿ ಸಂಚಾರ ಮಾಡುತ್ತಿರುವುದು ಕೂಡ ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಇದೇ ಕಾರಣಕ್ಕೆ ಇದೀಗ ಅನೇಕ ರಾಜ್ಯಗಳಲ್ಲಿ ಈ ಹುಲಿರಾಯನನ್ನು ಪತ್ತೆ ಹಚ್ಚಲು ಇಲಾಖೆ ಮುಂದಾಗಿದೆ. ರಾಜ್ಯದ ಗಡಿದಾಟಿ ಪ್ರಯಾಣಿಸಿರುವ ಈ ಹುಲಿಯು ಇದೀಗ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಆದಾಗ್ಯೂ, ಈ ಹುಲಿ ಉತ್ತರಾಖಂಡ್ದಿಂದ ಕಾಶ್ಮೀರದವರೆಗೆ ಪ್ರಯಾಣ ಬೆಳೆಸಿದೆ ಎಂಬುದೇ ಎಲ್ಲರನ್ನೂ ಅಚ್ಚರಿಗೆ ದೂಡುವಂತೆ ಮಾಡಿದೆ.
A tiger crossing the river Ganga and Yamana:
ಕಳೆದ 24 ವರ್ಷದಲ್ಲಿ ಗಂಗಾ ಮತ್ತು ಯಮುನಾ ನದಿ ದಾಟಿ ಸಂಚಾರ ಮಾಡಿದ ಹುಲಿ ಇದಾಗಿದೆ. ಈ ಹುಲಿಯು ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದ ಗೌಹರಿ ಶ್ರೇಣಿಯಿಂದ ಗಂಗಾ ನದಿಯನ್ನು ದಾಟಿ ರಾಜಾಜಿಯ ಮೋತಿಚೂರ್ ಶ್ರೇಣಿಯನ್ನು ಪ್ರವೇಶಿಸಿದೆ. ಹಿಮಾಚಲದಲ್ಲಿದ್ದಾಗ, ಅದು ಪೊಂಟಾದಿಂದ ಯಮುನಾ ನದಿಯನ್ನು ದಾಟಿ ಹರಿಯಾಣಕ್ಕೆ ಪ್ರಯಾಣಿಸಿದೆ.
King Tiger who stepped like a king in four kingdoms:
ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಹುಲಿಗಳಿವೆ. ಅದರಲ್ಲಿ ಗಂಗಾ ನದಿ ದಾಳಿ ರಾಜಾಜಿ ಪಶ್ಚಿಮ ಭಾಗ ತಲುಪಿದ ಮೊದಲ ಹುಲಿ ಇದಾಗಿದೆ. ಈ ಹುಲಿ 2022ರಲ್ಲೂ ಕೂಡ ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ದಿಢೀರ್ ಕಣ್ಮರೆಯಾಗಿತ್ತು. ಇದಾದ ಬಳಿಕ ಫೆಬ್ರವರಿಯಲ್ಲಿ 2023ರಲ್ಲಿ ಹಿಮಾಚಲದ ಸಿಬಲ್ವರ ವನ್ಯಜೀವಿ ಧಾಮದಲ್ಲಿ ಕಾಣಿಸಿಕೊಂಡಿತ್ತು. ಇದಾದ ಬಳಿಕ ಮೇ 2023ರಲ್ಲಿ ಹರಿಯಾಣದ ಕಲೆಸರ್ ವನ್ಯಜೀವಿ ಧಾಮದಲ್ಲಿ ದಾಖಲಾಗಿತ್ತು. ಆದಾದ ಮೂರು ತಿಂಗಳ ಬಳಿಕ ಆಗಸ್ಟ್ನಲ್ಲಿ ಇದು ಹಿಮಾಚಲದ ಅರಣ್ಯದಲ್ಲಿ ಮತ್ತೆ ಕಾಣಿಸಿಕೊಂಡಿತ್ತು.
Advanced search:
ಇದೀಗ ಈ ಹುಲಿ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಪತ್ತೆಯಾಗಿರುವ ಸುದ್ದಿ ಬಂದಿದೆ. ಇದು ಹಿಮಾಚಲ ಮತ್ತು ಹರಿಯಾಣ ದಾಟಿ ಜಮ್ಮು ಮತ್ತು ಕಾಶ್ಮೀರ ತಲುಪಿರುವ ಸಾಧ್ಯತೆ ಇದೆ. ಅಲ್ಲಿದೆ 700 ರಿಂದ 800 ಕಿ.ಮೀ ದೂರ ಈ ಹುಲಿ ಗಡಿಗಳ ಎಲ್ಲೆ ಮೀರಿ ಪ್ರಯಾಣ ಮಾಡಿ ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಇದು ರಜೌರಿಯಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆ ಇದೇ ಅದರ ಆವಾಸಸ್ಥಾನವೇ ಎಂಬ ಪ್ರಶ್ನೆಯೂ ಮೂಡಿದೆ. ಈ ಬಗ್ಗೆ ಅರಣ್ಯ ಇಲಾಖೆ ಯಾವುದೇ ಸ್ಪಷ್ಟತೆಯನ್ನು ನೀಡಿಲ್ಲ.
ಸದ್ಯ, ಉತ್ತರಾಖಂಡ ಅರಣ್ಯ ಇಲಾಖೆ ಈ ಎಲ್ಲದರ ಕುರಿತು ಮಾಹಿತಿ ಸಂಗ್ರಹಿಸುತ್ತಿದೆ. ಫೆಬ್ರವರಿಯಲ್ಲಿ ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದಿಂದ ಹೊರ ಬಂದಿದೆ ಎಂಬ ಕುರಿತು ಮಾಹಿತಿ ಇಲ್ಲ. ಫೆಬ್ರವರಿಯಲ್ಲಿ ಹಿಮಾಚಲದಲ್ಲಿ ಕಂಡಿತ್ತು. ಇದಾದ ಬಳಿಕ ಅದು ಆ ಭಾಗದಲ್ಲಿ ಕಂಡುಬರದೇ ಇರುವುದು ಅರಣ್ಯ ಇಲಾಖೆಗೆ ಚಿಂತೆ ಮೂಡಿಸಿದೆ.
ಇದನ್ನು ಓದಿರಿ : HMPV OUTBREAK IN CHINA : ಚೀನಾದಲ್ಲಿ ವೇಗವಾಗಿ ಹರಡುತ್ತಿರುವ ಎಚ್ಎಂಪಿವಿ ವೈರಸ್: