spot_img
spot_img

ದಾವಣಗೆರೆಯಲ್ಲಿ ಸಿಸೇರಿಯನ್ ಹೆರಿಗೆ ಪ್ರಮಾಣ ಏರಿಕೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ದಾವಣಗೆರೆ: ಜಿಲ್ಲೆಯಲ್ಲಿ ಸಹಜ ಹೆರಿಗೆಗಳಿಗಿಂತ ಸಿಸೇರಿಯನ್​​ ಹೆರಿಗೆಗಳ ಪ್ರಮಾಣ ಹೆಚ್ಚಿದೆ ಎಂದು ಡಿಹೆಚ್​ಓ ಷಣ್ಮುಖಪ್ಪ ಎಸ್​​​. ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಚಿಗಟೇರಿ ಆಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಸೇರಿಯನ್​​ ಪ್ರಮಾಣ ಶೇ. 40ರಷ್ಟಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಶೇ. 72 ರಷ್ಟಿರುವ ವರದಿಯನ್ನು ಗಮನಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ದಂಗಾಗಿದ್ದಾರೆ. ಸಿಸೇರಿಯನ್ ಹೆರಿಗೆ ಪ್ರಮಾಣ ಕಂಡು ಆರೋಗ್ಯ ಇಲಾಖೆ ಸಭೆ ಕರೆಯಲು ಚಿಂತಿಸಿದೆ.
ದಾವಣಗೆರೆಯಲ್ಲಿ ಸಹಜ ಹೆರಿಗೆಗಿಂತ ಸಿಸೇರಿಯನ್​​ ಪ್ರಮಾಣ ಅಧಿಕವಾಗಿದೆ. ಹೀಗಾಗಿ ಕೂಲಂಕಷವಾಗಿ ಚರ್ಚಿಸಿ ಎಚ್ಚರಿಕೆ ನೀಡುತ್ತೇವೆ ಎಂದು ಡಿಹೆಚ್​ಓ ಹೇಳಿದ್ದಾರೆ.
ದಾವಣಗೆರೆಯ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಉತ್ತಮ ಆಸ್ಪತ್ರೆ ವ್ಯವಸ್ಥೆ ಇಲ್ಲದ ಕಾರಣ ಚಿಕಿತ್ಸೆಗಾಗಿ ಜನಸಾಮಾನ್ಯರು ಬೆಣ್ಣೆನಗರಿಗೆ ಆಗಮಿಸುವುದು ಸಾಮಾನ್ಯ. ಆದರೆ ಹೆರಿಗೆ ವಿಚಾರದಲ್ಲಿ ದಾವಣಗೆರೆಯಲ್ಲಿ ಸಹಜ ಹೆರಿಗೆಗಳಿಗಿಂತ ಸಿಸೇರಿಯನ್​ ಹೆರಿಗೆಗೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ.
ಡಿಹೆಚ್ಓ ಷಣ್ಮುಖಪ್ಪ .ಎಸ್. ಅವರು ಈಟಿವಿ ಭಾರತ್​ಗೆ ಪ್ರತಿಕ್ರಿಯಿಸಿ “ಖಾಸಗಿ ಆಸ್ಪತ್ರೆಗಳಲ್ಲಿ ಎಪ್ರಿಲ್​​ – ಅಕ್ಟೋಬರ್​ ತನಕ ಒಟ್ಟು ತಿಂಗಳಲ್ಲಿ ಒಟ್ಟು 4291 ಹೆರಿಗೆಗಳ ಪೈಕಿ 3093 ಸಿಸೇರಿಯನ್ ಹೆರಿಗೆಗಳು ವರದಿ ಆಗಿವೆ. ಚಿಗಟೇರಿ ಆಸ್ಪತ್ರೆ, ಮಹಿಳಾ ಮಕ್ಕಳ ಆಸ್ಪತ್ರೆಯಲ್ಲಿ ಎಪ್ರಿಲ್​-ಅಕ್ಟೋಬರ್​ ತನಕ 7,676 ಹೆರಿಗೆಗಳ ಪೈಕಿ ಒಟ್ಟು 3,079 ಸಿಸೇರಿಯನ್ ಹೆರಿಗೆಗಳು ಆಗಿವೆ. ಖಾಸಗಿ ಆಸ್ಪತ್ರೆ ಹಾಗು ಸರ್ಕಾರಿ ಆಸ್ಪತ್ರೆ ಸೇರಿಸಿ ಏಳು ತಿಂಗಳಲ್ಲಿ 6172 ಸಿಸೇರಿಯನ್ ಹೆರಿಗೆಗಳು ವರದಿ ಆಗಿವೆ. ಎಲ್ಲಾ ಖಾಸಗಿ ಆಸ್ಪತ್ರೆಯವರಿಗೆ ಕರೆದು ಒಂದು ಸಭೆ ಮಾಡಿ, ಅ ಸಭೆಯಲ್ಲಿ ಸಿಸೇರಿಯನ್ ಪ್ರಮಾಣ ಏಕೆ ಹೆಚ್ಚಾಗುತ್ತಿದೆ ಎಂಬುದಕ್ಕೆ ಕೂಲಂಕಷವಾಗಿ ಚರ್ಚಿಸಿ ಎಚ್ಚರಿಕೆ ನೀಡುತ್ತೇವೆ. ಅಲ್ಲದೆ ಈ ಸಂಖ್ಯೆಯನ್ನು ಕಡಿಮೆ ಮಾಡಲು ಕ್ರಮ ವಹಿಸುತ್ತೇವೆ” ಎಂದರು.
ದಾವಣಗೆರೆ- 2,895 ಒಟ್ಟು ಹೆರಿಗೆಗಳ ಪೈಕಿ, 1,256 ಸಿಸೇರಿಯನ್​. ಶೇಕಡಾವಾರು 43 ಹೆರಿಗೆಗಳು, ಹರಿಹರ- 1,245 ಒಟ್ಟು ಹೆರಿಗೆಗಳ ಪೈಕಿ 550 ಸಿಸೇರಿಯನ್. ಶೇಕಡಾವಾರು 44 ಹೆರಿಗೆಗಳು, ಜಗಳೂರು- 1,102 ಒಟ್ಟು ಹೆರಿಗೆಗಳ ಪೈಕಿ 394 ಸಿಸೇರಿಯನ್. ಶೇಕಡಾವಾರು 36 ಹೆರಿಗೆಗಳು, ಚನ್ನಗಿರಿ- 1,284 ಒಟ್ಟು ಹೆರಿಗೆಗಳ ಪೈಕಿ 462 ಸಿಸೇರಿಯನ್​. ಶೇಕಡವಾರು 36 ಹೆರಿಗೆಗಳು, ಹೊನ್ನಾಳಿ: 1,150 ಒಟ್ಟು ಹೆರಿಗೆಗಳ ಪೈಕಿ, 417 ಸಿಸೇರಿಯನ್. ಶೇಕಡವಾರು 36 ಹೆರಿಗೆಗಳು, ಒಟ್ಟು ಹೆರಿಗೆಗಳು 7,676. 3,079 ಸಿಸೇರಿಯನ್​​ ಹೆರಿಗೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ವರದಿ ಆಗಿವೆ ಎಂದು ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

C T RAVI ARREST ISSUE – ಸಿ.ಟಿ ರವಿ ಫೇಕ್ ಎನ್ಕೌಂಟರ್ ಮಾಡುವ ಉದ್ದೇಶ ಪೊಲೀಸರಿಗೆ ಇತ್ತಾ?

Hubli News: "ತರಾತುರಿಯಲ್ಲಿ ಸಿ. ಟಿ. ರವಿ‌ ವಿರುದ್ಧ ಎಫ್​ಐಆರ್ ಮಾಡಲಾಗಿದೆ. ಕಾಮನ್ ಸೆನ್ಸ್ ಬೇಡ್ವಾ ಬೆಳಗಾವಿ ಕಮಿಷನರ್​ಗೆ. ಬೆಳಗಾವಿ ಕಮಿಷನರ್ ಅನ್​ಫಿಟ್ ಇದ್ದಾರೆ" ಎಂದು...

PM MODI TO ATTEND CHRISTMAS – ಪ್ರಧಾನಿ ಮೋದಿ ನಾಳೆ ಕ್ರಿಸ್ಮಸ್ ಆಚರಣೆಯಲ್ಲಿ ಭಾಗಿ

New Delhi News: ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿ ಕ್ರಿಸ್​ಮಸ್ ಆಚರಣೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಕ್ಯಾಥೊಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ) ಸೋಮವಾರ ಸಂಜೆ...

BANDIPUR FOREST – ಬಂಡೀಪುರ ರಾತ್ರಿ ಸಂಚಾರ ನಿಷೇಧ ಸಮಸ್ಯೆ

BANDIPUR NEWS : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ (BTR) ಮೂಲಕ ಹಾದು ಹೋಗುವ 24.7 ಕಿ.ಮೀ ವ್ಯಾಪ್ತಿಯಲ್ಲಿ ರಾತ್ರಿ ಸಂಚಾರ ನಿಷೇಧಕ್ಕೆ ಸಂಬಂಧಿಸಿದ ಸಮಸ್ಯೆಗಳು...

JAYADEVA HOSPITAL – ನೂತನ ಜಯದೇವ ಆಸ್ಪತ್ರೆ ಸಿಎಂ ಸಿದ್ದರಾಮಯ್ಯ ಉದ್ಘಾಟನೆ

Kalaburagi News: ಹೃದ್ರೋಗ ಆಸ್ಪತ್ರೆಯನ್ನು ಉದ್ಘಾಟಿಸುವ ಮುನ್ನ ಸಿದ್ದರಾಮಯ್ಯ, ಆಸ್ಪತ್ರೆಯ ನೀಲಿ ನಕಾಶೆಯನ್ನು ವೀಕ್ಷಿಸಿದರು. ಆಸ್ಪತ್ರೆಯನ್ನು ವಿಕ್ಷೀಸಿದ ಸಿದ್ದರಾಮಯ್ಯ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆಯವರೊಂದಿಗೆ...