ಬೆಂಗಳೂರು: ನಿತ್ಯ ಕಡಿಮೆ ಬಜೆಟ್ನಲ್ಲಿ ಹಸಿವು ನೀಗಿಸಿಕೊಳ್ಳುತ್ತಿದ್ದ ಬೆಂಗಳೂರಿನ ನಾಗರೀಕರಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಇಂದಿರಾ ಕ್ಯಾಂಟೀನ್ ಗಳಲ್ಲಿ ಆಗಸ್ಟ್ 15 ರಿಂದ ಇಂದಿರಾ ಕ್ಯಾಂಟೀನ್ಗಳಲ್ಲಿ ಮೆನು ಲಿಸ್ಟ್ ಬದಲಾಗಲಿದೆ.
ಈ ಹಿಂದೆ ಗುತ್ತಿಗೆ ಪಡೆದಿದ್ದ ಸಂಸ್ಥೆಗೆ ಆಹಾರ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲವಾಗಿತ್ತು, ಕ್ಯಾಂಟೀನ್ ಆಹಾರದ ಬಗ್ಗೆ ಸಾರ್ವಜನಿಕರಿಂದ ಹಲವು ದೂರುಗಳು ಬಂದಿದ್ದವು. ಈ ಹಿನ್ನೆಲೆ ಹೊಸ ಗುತ್ತಿಗೆದಾರರನ್ನು ಆಯ್ಕೆ ಮಾಡಲಾಗಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಇಂದಿರಾ ಕ್ಯಾಂಟೀನ್ನಲ್ಲಿ ಹೊಸ ಮೆನು ಲಿಸ್ಟ್ ಇರಲಿದೆ.
ಬಿಬಿಎಂಪಿಯ 192 ಇಂದಿರಾ ಕ್ಯಾಂಟೀನ್ ಪೈಕಿ 142 ಕ್ಯಾಂಟೀನ್ ಗಳಿಗೆ ಆಹಾರ ಪೂರೈಕೆಗೆ ಹೊಸ ಗುತ್ತಿಗೆದಾರರನ್ನು ನೇಮಕ ಮಾಡಲಾಗಿದೆ. ಆಗಸ್ಟ್ 2ನೇ ವಾರದಿಂದ ಆಹಾರ ಪೂರೈಕೆ ಆರಂಭಿಸಲಿದೆ. ಬೆಳಗ್ಗಿನ ಉಪಹಾರ ಕಾಫಿ, ಟೀ ಜತೆಗೆ 3 ಬಗೆಯ ಉಪಾಹಾರ ಇರಲಿದೆ. ವಾರದ ಏಳು ದಿನವೂ ಬೆಳಗ್ಗೆ ಇಡ್ಲಿ ದೊರೆಯಲಿದೆ. ಮೂರು ಇಡ್ಲಿ (150 ಗ್ರಾಂ) ಮತ್ತು ಸಾಂಬಾರ್ (100 ಗ್ರಾಂ) ಸಿಗಲಿದೆ. ಪ್ರತಿ ದಿನವೂ ಒಂದೊಂದು ಮಾದರಿಯ ರೈಸ್ ಬಾತ್ (225 ಗ್ರಾಂ) ಜತೆಗೆ ಚಟ್ಟಿ, ಸಾಂಬರ್, ಮೊರಸು ಬಜ್ಜಿ (100 ಗ್ರಾಂ) ಹಾಗೂ ಖಾರಾ ಬೂಂದಿ (15 ಗ್ರಾಂ) ನೀಡಲಾಗುತ್ತದೆ. ಪಲಾವ್, ಬಿಸಿಬೇಳೆ ಬಾತ್. ಕಾರಬಾತ್ ಪೊಂಗಲ್ ಇರಲಿದೆ.
ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ 2 ಬಗೆಯ ಆಯ್ಕೆ ಇರಲಿದ್ದು ನಗರದ ಜನರ ಬಹುದಿನ ಬೇಡಿಕೆಯಂತೆ ಮುದ್ದೆ ಮತ್ತು ಚಪ್ಪಾತಿಯನ್ನು ನೀಡಲಾಗುತ್ತಿದೆ. ವಾರದ 7 ದಿನದಲ್ಲಿ ದಿನ ಮುದ್ದೆ ಮತ್ತು ಚಪಾತಿ ನೀಡಲಾಗುತ್ತದೆ.
ಆಗಸ್ಟ್ 15ರಿಂದ ಇಂದಿರಾ ಕ್ಯಾಂಟೀನ್ನಲ್ಲಿ ಸಿಗಲಿರುವ ಹೊಸ ಮೆನು ಲಿಸ್ಟ್ ಇಲ್ಲಿದೆ.
ಸೋಮವಾರ/ಗುರುವಾರ : ಬೆಳಗ್ಗೆ :ಇಡ್ಲಿ/ಪಲಾವ್/ ಬ್ರೆಡ್ ಜಾಮ್ , ಕಾಫಿ ಟೀ
ಮಧ್ಯಾಹ್ನ : ಅನ್ನ ತರಕಾರಿ ಸಾರು /ರಾಗಿಮುದ್ದೆ ಸೊಪ್ಪು ಸಾರು
ಮಂಗಳವಾರ /ಶುಕ್ರವಾರ: ಬೆಳಗ್ಗೆ : ಇಡ್ಲಿ/ ಬಿಸಿಬೇಳೆ ಬಾತ್/ ಮಂಗಳೂರು ಬನ್ಸ್
ಮಧ್ಯಾಹ್ನ – ಅನ್ನ ತರಕಾರಿ ಸಾರು/ ಚಪಾತಿ -ಸಾಗು
ಬುಧವಾರ: ಬೆಳಗ್ಗೆ :ಇಡ್ಲಿ / ಕಾರಬಾತ್ ಬನ್ಸ್, ಟೀ- ಕಾಫಿ
ಮಧ್ಯಾಹ್ನ ಅನ್ನ ತರಕಾರಿ ಸಾರು/ ರಾಗಿ ಮುದ್ದೆ ಸೊಪ್ಪಿನ ಸಾರು.
ಶನಿವಾರ: ಬೆಳಗ್ಗೆ- ಇಡ್ಲಿ/ ಪೊಂಗಲ್/ ಬನ್ಸ್ , ಟೀ- ಕಾಫಿ
ಮಧ್ಯಾಹ್ನ: ಅನ್ನ, ತರಕಾರಿ ಸಾರು / ಚಪಾತಿ – ಸಾಗು
ಭಾನುವಾರ: ಬೆಳಗ್ಗೆ: ಇಡ್ಲಿ / ಚೌಚೌ ಬಾತ್
ಬ್ರೆಡ್ ಜಾಮ್ – ಟೀ – ಕಾಫಿ, ಮಧ್ಯಾಹ್ನ – ಅನ್ನ ತರಕಾರಿ ಸಾರು / ರಾಗಿಮುದ್ದೆ ಸೊಪ್ಪಿನ ಸಾರು ಇರಲಿದೆ.
2017ರ ಆಗಸ್ಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡುವ ಸಲುವಾಗಿ ಪ್ರಾರಂಭಿಸಲಾಯಿತು. ರಾಜ್ಯದ ಎಷ್ಟೋ ಜನರು ಇದನ್ನೇ ನಂಬಿ ಜೀವನವನ್ನು ನಡೆಸುತ್ತಿದ್ದಾರೆ.