IPL 2025:
ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ ಮುನ್ನವೇ ವಿದೇಶಿ ಆಟಗಾರರನ್ನು ಬ್ಯಾನ್ ಮಾಡಲು ಐಪಿಎಲ್ ಫ್ರಾಂಚೈಸಿಗಳು ನಿರ್ಧರಿಸಿದ್ದಾರೆ. ನಿಜಕ್ಕೂ ವಿದೇಶಿ ಆಟಗಾರರು ಬ್ಯಾನ್ ಆಗುತ್ತಾರಾ? ಏನು ಸುದ್ದಿ ನೀವೇ ಮುಂದೆ ಓದಿರಿ!
IPL 2025 ಮೆಗಾ ಹರಾಜ:
ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ ಮುನ್ನವೇ ವಿದೇಶಿ ಆಟಗಾರರಿಗೆ ದೊಡ್ಡ ಶಾಕ್ ? ಹೌದು ಐಪಿಎಲ್ ಫ್ರಾಂಚೈಸಿಗಳು ಈ ಮಾತನ್ನು ನಿರ್ಧರಿಸಿದ್ದಾರೆ. ಇದಕ್ಕಾಗಿ ಬಿಸಿಸಿಐಗೆ ಹೊಸ ನಿಯಮವನ್ನು ಜಾರಿಗೆ ತರುವಂತೆ ಮನವಿ ಕೂಡ ಮಾಡಿದೆ. ಏನು ಆ ಗೋಸಾ ನಿಯಮಗಳು? ಏನಕ್ಕೆ ಈ ಒಂದು ನಿಯಮಗಳನ್ನು ಮಾಡಲಾಗುತ್ತಿದೆ? ಎಂದು ಓದಿ!
ವಿದೇಶಿ ಆಟಗಾರರಿಗೆ ಶಾಕ್!
ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡು ಆ ಬಳಿಕ ಹಿಂದೆ ಸರಿಯುವ ವಿದೇಶಿ ಆಟಗಾರರ ಮೇಲೆ ಎರಡು ವರ್ಷಗಳ ನಿಷೇಧ ಹೇರಬೇಕೆಂದು ಕೆಲ ಫ್ರಾಂಚೈಸಿಗಳು ಪ್ರಸ್ತಾಪಿಸಿವೆ. ಇದಕ್ಕೆ ಮುಖ್ಯ ಕಾರಣ, ಕೆಲ ಆಟಗಾರರು ಆಯ್ಕೆಯಾದರೂ ಐಪಿಎಲ್ ಆರಂಭದ ವೇಳೆ ಹಿಂದೆ ಸರಿಯುತ್ತಿರುವುದು. ವಿದೇಶಿ ಆಟಗಾರರ ಇಂತಹ ನಡೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಇದೀಗ ಐಪಿಎಲ್ ಫ್ರಾಂಚೈಸಿಗಳು ಆಗ್ರಹಿಸಿದೆ.
IPL 202518ರ ಮೆಗಾ ಹರಾಜು:
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18ರ ಮೆಗಾ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಈಗಾಗಲೇ ಮೆಗಾ ಹರಾಜಿನ ಕುರಿತಾಗಿ BCCI ಹಾಗೂ IPL ಮಾಲೀಕರ ನಡುವೆ ಸಭೆ ನಡೆದಿದೆ. ಈ ಸಭೆಯಲ್ಲಿ ಫ್ರಾಂಚೈಸಿಗಳು ಕೆಲ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಈ ಡಿಮ್ಯಾಂಡ್ಗಳಲ್ಲಿ ಮುಖ್ಯವಾದವು ಫಾರಿನ್ ಪ್ಲೇಯರ್ಸ್ ಬ್ಯಾನ್ ರೂಲ್ಸ್. ನಿಜಕ್ಕೂ ಫಾರಿನ್ ಪ್ಲೇಯರ್ಸ್ ಬ್ಯಾನ್ ರೂಲ್ಸ್ IPL 2025 18ರ ಮೆಗಾ ಹರಾಜಿನಲ್ಲಿ ಕಾಣ ಬಹುದಾ? ಎಂಬ ಪ್ರಶ್ನೆಗೆ ಕಾಯ್ದು ನೋಡಬೇಕಿದೆ.
ಯಾವ ಆಟಗಾರರು IPL 2025 18ರ ಮೆಗಾ ಹರಾಜಿನಿಂದ ಔಟ್?
ಗಾಯದ ಹೊರತಾಗಿ ಯಾವುದೇ ವಿದೇಶಿ ಆಟಗಾರ ಐಪಿಎಲ್ನಿಂದ ಹಿಂದೆ ಸರಿದರೆ, ಅಂತಹ ಆಟಗಾರರನ್ನು 2 ವರ್ಷಗಳವರೆಗೆ ಬ್ಯಾನ್ ಮಾಡುವಂತೆ ತಿಳಿಸಲಾಗಿದೆ. ಈ ನಿಯಮವು ಈ ಬಾರಿಯ ಮೆಗಾ ಹರಾಜಿನ ವೇಳೆ ಜಾರಿಯಾಗುವ ಸಾಧ್ಯತೆಯಿದೆ.
IPL 2025 ಹೊಸ ಯೋಜನೆ ಹೇಗಿದೆ?
ನಾವು ಎಲ್ಲಾ ರೀತಿಯ ಯೋಜನೆಗಳನ್ನು ರೂಪಿಸಿ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತೇವೆ. ಹೀಗೆ ಯೋಜನೆಯೊಂದಿಗೆ ಖರೀದಿಸಿದ ಆಟಗಾರರು ಕೊನೆಯ ಕ್ಷಣದಲ್ಲಿ ಕೈ ಕೊಡುವುದರಿಂದ ಅದು ತಂಡದ ಸಮತೋಲನ ಮೇಲೆ ಪರಿಣಾಮ ಉಂಟು ಮಾಡುತ್ತಿದೆ. ಹೀಗಾಗಿ ಐಪಿಎಲ್ಗೆ ಆಯ್ಕೆಯಾಗಿ ವಿನಾಕಾರಣ ಹಿಂದೆ ಸರಿಯುವ ಆಟಗಾರರ ಮೇಲೆ ಕೆಲ ವರ್ಷಗಳವರೆಗೆ ನಿಷೇಧ ಹೇರಬೇಕೆಂದು ಫ್ರಾಂಚೈಸಿಗಳು ಆಗ್ರಹಿಸಿದೆ.
ಯಾರಿಗಾಗಿ ಈ ರೂಲ್ಸ್?
ಐಪಿಎಲ್ 2022, 2024 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಜೇಸನ್ ರಾಯ್ ಟೂರ್ನಿ ಆರಂಭಕ್ಕೂ ಕೆಲ ದಿನಗಳಿರುವಾಗ ಹಿಂದೆ ಸರಿದಿದ್ದರು. ಹಾಗೆಯೇ ವನಿಂದು ಹಸರಂಗ (SRH), ಹ್ಯಾರಿ ಬ್ರೂಕ್ (DC), ಡೇವಿಡ್ ವಿಲ್ಲಿ (ಎಲ್ಎಸ್ಜಿ), ಗಸ್ ಅಟ್ಕಿಸನ್ (KKR), ಮಾರ್ಕ್ ವುಡ್ (LSG) ಸೇರಿದಂತೆ ಕೆಲ ಆಟಗಾರರು ಕಳೆದ ಸೀಸನ್ನಲ್ಲಿ ಕೈಕೊಟ್ಟಿದ್ದರು.
🚨 NEWS 🚨
BCCI on Wednesday organized a constructive dialogue with the owners of the 10 franchises on various subjects pertaining to the upcoming season of the #TATAIPL.
Read more 🔽
— IndianPremierLeague (@IPL) July 31, 2024
ಇನ್ನಷ್ಟು ಓದಿರಿ:
Mooda scamನಲ್ಲಿ ನನ್ನ ಪಾತ್ರ ಏನು ಇಲ್ಲ CM Siddaramaiah?
MYSURU ಚಲೋ ಪಾದಯಾತ್ರೆಗೂ ಮುನ್ನ BJP ರಾಜ್ಯಾಧ್ಯಕ್ಷರು ಮಾಡಿದ್ದು ಏನು?