ಟೀಂ ಇಂಡಿಯಾ ಮಾಜಿ ಬ್ಯಾಟರ್ ಅಜಯ್ ಜಡೇಜಾ ರಾಜಮನೆತನದವರು ಎಂಬುದು ಅವರು ಕ್ರಿಕೆಟ್ ಆಡುತ್ತಿದ್ದ ಕಾಲದಲ್ಲೇ ತಿಳಿದು ಬಂದಿದೆ. ಗುಜರಾತಿನ ಜಾಮ್ ನಗರದ ರಾಜಮನೆತವರಾದ ಅವರಿಗೆ ಕೆಎಸ್ ರಣಜಿತ್ ಸಿಂಹಜೀ ಮತ್ತು ಕೆಎಲ್ ದುಲೀಪ್ ಸಿಂಹಜಿ ಅವರು ಸಹ ಅಜಯ್ ಜಡೇಜಾ ಅವರ ಸಂಬಂಧಿಕರು. ರಣಜಿತ್ ಸಿಂಗ್ ಜಿ ಅವರ ಹೆಸರಿನಲ್ಲಿ ಪ್ರತಿಷ್ಠಿತ ರಣಜಿ ಟ್ರೋಫಿ ಮತ್ತು ದುಲೀಪ್ ಸಿಂಗ್ ಜಿ ಅವರ ಹೆಸರಿನಲ್ಲಿ ದುಲೀಪ್ ಟ್ರೋಪಿ ಪಂದ್ಯಾವಳಿಗಳು ನಡೆಯುತ್ತವೆ. ದಸರಾ ಹಬ್ಬದ ಸಂದರ್ಭದಲ್ಲಿ ರಾಜಮನೆತನದ ಪ್ರಮುಖರಾಗಿರುವ ಅಜಯ್ ಜಡೇಜಾ ಅವರ ದೊಡ್ಡಪ್ಪ ಮಹಾರಾಜ ಶತ್ರುಶಲ್ಯಸಿಂಗ್ ಜಡೇಜಾ ಅವರ ಘೋಷಣೆ ಮಾಡಿದ್ದಾರೆ.
ಹೀಗಾಗಿ 53ರ ಹರೆಯದ ಅಜಯ್ ಜಡೇಜಾ ಅವರು ಇದೀಗ ಅಧಿಕೃತವಾಗಿ ಬಹುದೊಡ್ಡ ಆಸ್ತಿಗೆ ವಾರಸುದಾರರಾಗಲಿದ್ದಾರೆ.
ಜಡೇಜಾ ಅವರು ಇದೀಗ ಸುಮಾರು 1455 ಕೋಟಿ ರೂಪಾಯಿ ಮೌಲ್ಯದ ಆಸ್ತಿಗೆ ಒಡೆಯರಾಗಲಿದ್ದಾರೆ. ಐಪಿಎಲ್ ನಿಂದ ಅವರು ಸಂಪಾದಿಸುತ್ತಿರುವ ಆಸ್ತಿ ಭಾರತದಲ್ಲಿ ಬೇರಾವ ಕ್ರಿಕೆಟಿಗನಿಂದಲೂ ಹೆಚ್ಚು. ರಾಂಚಿ ಮತ್ತು ಡೆಹ್ರಾಡೂನ್ ಗಳಲ್ಲಿನ ಫಾರ್ಮಾ ಹೌಸ್ ಗಳೂ ಸೇರಿದಂತೆ ಭಾರತದ ವಿವಿಧೆಡೆ ಅವರ ಆಸ್ತಿಯಿದೆ.
ಜೊತೆಗೆ ಹಲವಾರು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಎಲ್ಲದರ ಒಟ್ಟು ಮೌಲ್ಯ 1000 ಕೋಟಿ ರೂಗಳಿಗೂ ಹೆಚ್ಚು ಎಂದು ಹೇಳಲಾಗಿದೆ.
ಇನ್ನು ವಿರಾಟ್ ಕೊಹ್ಲಿ ಆಸ್ತಿಯ ಬಗ್ಗೆ ಕೇಳಲೇಬೇಕಿಲ್ಲ. ಪ್ರಸ್ತುತ ವಿಶ್ವದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಕ್ರಿಕೆಟಿಗ ಅವರಾಗಿದ್ದಾರೆ. ಜಾಹೀರಾತುಗಳಿಂದಲೇ ನೂರಾರು ಕೋಟಿ ಹಣ ಗಳಿಸುವ ಅವರಿಗೆ ಮುಂಬೈ, ದಿಲ್ಲಿಗಳಲ್ಲಿ ಬಂಗ್ಲೆಗಳಿವೆ. ಪಾರ್ಟ್ ಟೈಂ ಬೌಲರ್ ಸಹ ಆಗಿದ್ದ ಅವರು 20 ವಿಕೆಟ್ ಗಳನ್ನೂ ಕಬಳಿಸಿದ್ದಾರೆ. ಏಕದಿನ ಸ್ಪೆಷಲಿಸ್ಟ್ ಆಗಿದ್ದರಿಂದ ಟೆಸ್ಟ್ ಆಡಿದ್ದು ಕಡಿಮೆಯೇ. ಆಡಿರುವ 15 ಟೆಸ್ಟ್ ಗಳಲ್ಲಿ 576 ರನ್ ಗಳಿಸಿದ್ದೇ ಅವರ ಸಾಧನೆ.
ಬಳಿಕ ಕ್ರಿಕಟ್ ವೀಕ್ಷಕ ವಿವರಣೆಕಾರನಾಗಿ, ಕ್ರಿಕೆಟ್ ಕೋಚ್ ಆಗಿಯೂ ಗುರುತಿಸಿಕೊಂಡರು. ಅವರ ಮಾರ್ಗದರ್ಶನದಲ್ಲಿ ಅಫ್ಘಾನಿಸ್ತಾನ ಕಳೆದ ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದನ್ನು ಸ್ಮರಿಸಬಹುದು.