ಬಿಹಾರ ಈ ಹಿಂದೆ ಗೂಂಡಾ ರಾಜ್ಯವೆಂದೇ ಕುಖ್ಯಾತಿ ಪಡೆದಿತ್ತು. ಕೊಲೆಗಳು, ದರೋಡೆಗಳು ಕಳ್ಳತನಗಳು ಸಾಮಾನ್ಯವೆಂದರೆ ಸಾಮಾನ್ಯ ಅನ್ನುವಂತೆ ಅಲ್ಲಿ ಈ ಮೊದಲು ನಡೆಯುತ್ತಿದ್ದವು. ಆದ್ರೆ ಇತಿಹಾಸ ಮರುಕಳಿಸುತ್ತಿದೆಯೋ ಏನೋ ಅನ್ನೋ ರೀತಿಯ ಒಂದು ಘಟನೆ ಬಿಹಾರದ ಪೂರ್ನಿಯಾದಲ್ಲಿ ನಡೆದು ಹೋಗಿದೆ. ತನಿಷ್ಕಾ ಶೋ ರೂಮ್ಗೆ ನುಗ್ಗಿದ ದರೋಡೆಕೋರೆರು ಅಕ್ಷರಶಃ ಶೋರೂಮ್ನ್ನು ದೋಚಿಕೊಂಡು ಹೋಗಿದ್ದಾರೆ.
ಜಸ್ಟ್ 20 ನಿಮಿಷ ಅಷ್ಟೇ, ಆ 20 ನಿಮಿಷದಲ್ಲಿಯೇ 2 ಕೋಟಿ ಮೌಲ್ಯದ ಚಿನ್ನಾಭರಣವನ್ನು ಲೂಟಿ ಮಾಡಿ ಎಸ್ಕೇಪ್ ಆಗಿದೆ ದರೊಡೆಕೋರರ ತಂಡ. ಬಿಹಾರದ ಪೂರ್ನಿಯಾದಲ್ಲಿರುವ ತನಿಷ್ಕಾ ಶೋರೂಮ್ಗೆ ಶುಕ್ರವಾರ ಗಿರಾಕಿಗಳ ವೇಷದಲ್ಲಿ ಬಂದ ಆರೇಳು ಮಂದಿ ದರೋಡೆಕೋರರ ತಂಡದಲ್ಲಿ ಇಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕೈಯದಲ್ಲಿ ದೊಡ್ಡ ಬ್ಯಾಗ್ ಹಿಡಿದುಕೊಂಡು ಬಂದಿದ್ದರು. ಅವರು ದರೋಡೆ ಮಾಡುವ ಉದ್ದೇಶದಿಂದಲೇ ಬಂದಿರುವುದರಿಂದ ಕೇವಲ 20 ನಿಮಿಷದಲ್ಲಿ ಅದನ್ನು ಮಾಡಿ ಮುಗಿಸಿದರು ಅಂತ ತನಿಷ್ಕಾ ಶೋರೂಮ್ನ ಸಿಬ್ಬಂದಿ ಹೇಳಿದೆ. ಗನ್ ಹಿಡಿದುಕೊಂಡೆ ಶೋರೂಮ್ಗೆ ನುಗ್ಗಿದ ತಂಡ ಕೊಟ್ಯಾಂತರ ರೂಪಾಯಿ ಮೌಲ್ಯದ ಚಿನ್ನ, ವಜ್ರದ ಆಭರಣಗಳನ್ನು ತಮ್ಮ ಬ್ಯಾಗ್ನಲ್ಲಿ ತುಂಬಿಕೊಂಡು ಹೋಗಿದ್ದಾರೆ ಎಂದು ಸಿಬ್ಬಂದಿ ಹೇಳಿದೆ.
ಸ್ಥಳಕ್ಕೆ ಭೇಟಿ ನೀಡಿದ ಪಪ್ಪು ಯಾದವ್!
ತನಿಷ್ಕಾ ಶೋರೂಮ್ಗೆ ಭೇಟಿ ನೀಡಿದ ಲೋಕಸಭಾ ಸದಸ್ಯ ಪಪ್ಪು ಯಾದವ್, ಯಾವುದೋ ಅಂತಾರಾಷ್ಟ್ರೀಯ ಗ್ಯಾಂಗ್ ಚಿನ್ನದ ಶೋರೂಮ್ ಲೂಟಿ ಮಾಡಿದೆ ಎಂದು ಹೇಳಿದ್ದಾರೆ. ಹತ್ತಿರದಲ್ಲಿಯೇ ಎಸ್ಪಿ ಮನೆ ಇದೆ ಆದರೂ ಕೂಡ ಇಂತಹ ಘಟನೆಯೊಂದು ನಡೆದು ಹೋಗಿದೆ. ಆಡಳಿತ ನಡೆಸುವವರೇ ಕ್ರಿಮಿನಲ್ಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಗುಡುಗಿದ್ದಾರೆ. ಡಿಐಜಿ ವಿಕಾಸ್ ಕುಮಾರ್ ಅವರು ತನಿಷ್ಕಾ ಶೋ ರೂಮ್ ಪರಿಶೀಲನೆ ನಡೆಸಿದ್ದಾರೆ. ಶೋರೂಮ್ನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ದರೋಡೆ ಗ್ಯಾಂಗ್ ಹೆಡೆಮುರಿ ಕಟ್ಟೋದಕ್ಕೆ ಸಜ್ಜಾಗಿದ್ದಾರೆ.