KIA Syros Teaser Released: ದಕ್ಷಿಣ ಕೊರಿಯಾದ ವಾಹನ ತಯಾರಕ ಕಿಯಾ ಭಾರತೀಯ ಮಾರುಕಟ್ಟೆಯಲ್ಲಿ ಅನೇಕ ಉತ್ತಮ SUV ಕಾರುಗಳನ್ನು ರಿಲೀಸ್ ಮಾಡಿದೆ. ಕಂಪನಿಯು ಕಿಯಾ ಸಿರೋಸ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಕಾರಿನ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದೆ.
ಬಿಡುಗಡೆಯಾದ ಹೊಸ ಟೀಸರ್‌ನಲ್ಲಿ ಎಸ್‌ಯುವಿಯ ಕೆಲವು ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಕಿಯಾ ಸಿರೋಸ್ ಎಸ್‌ಯುವಿಯು ಆಕರ್ಷಕ ಸನ್‌ರೂಫ್, ಎಲ್‌ಇಡಿ ಲೈಟ್ಗಳು, ಎಲ್‌ಇಡಿ ಡಿಆರ್‌ಎಲ್ ಮತ್ತು ರೂಫ್ ರೈಲ್‌ಗಳು, ಎಡಿಎಎಸ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬರಲಿದೆ.
ಹೊಸ ಟೀಸರ್ಗೂ ಮುನ್ನ ಮತ್ತೊಂದು ಟೀಸರ್ ಹಾಗೂ ಸ್ಕೆಚ್ ಬಿಡುಗಡೆಯಾಗಿದೆ. 50 ಸೆಕೆಂಡುಗಳ ಟೀಸರ್ ವಾಹನದ ಹೆಸರು ಮತ್ತು ಮುಂಭಾಗದ ನೋಟವನ್ನು ನೀಡುತ್ತಿದೆ.
ಕಂಪನಿಯ ಪ್ರಕಾರ, ಹೊಸ ಎಸ್ಯುವಿ ಅತ್ಯಂತ ಫ್ಯೂಚರಿಸ್ಟಿಕ್ ವಿನ್ಯಾಸದೊಂದಿಗೆ ಬಿಡುಗಡೆಯಾಗಲಿದೆ. ಈ SUV ಅನ್ನು ಕಿಯಾ ವಿಶೇಷವಾಗಿ ಆಧುನಿಕ ವಿನ್ಯಾಸ, ಉತ್ತಮ ತಂತ್ರಜ್ಞಾನ ಮತ್ತು ಹೆಚ್ಚಿನ ಸ್ಥಳಾವಕಾಶದೊಂದಿಗೆ SUV ಆಗಿ ವಿನ್ಯಾಸಗೊಳಿಸಿದೆ.
ಹೊಸ ಟೀಸರ್ಗೂ ಮುನ್ನ ಮತ್ತೊಂದು ಟೀಸರ್ ಹಾಗೂ ಸ್ಕೆಚ್ ಬಿಡುಗಡೆಯಾಗಿದೆ. 50 ಸೆಕೆಂಡುಗಳ ಟೀಸರ್ ವಾಹನದ ಹೆಸರು ಮತ್ತು ಮುಂಭಾಗದ ನೋಟವನ್ನು ನೀಡುತ್ತಿದೆ. ಕಂಪನಿಯ ಪ್ರಕಾರ, ಹೊಸ ಎಸ್ಯುವಿ ಅತ್ಯಂತ ಫ್ಯೂಚರಿಸ್ಟಿಕ್ ವಿನ್ಯಾಸದೊಂದಿಗೆ ಬಿಡುಗಡೆಯಾಗಲಿದೆ.
ಈ SUV ಅನ್ನು ಕಿಯಾ ವಿಶೇಷವಾಗಿ ಆಧುನಿಕ ವಿನ್ಯಾಸ, ಉತ್ತಮ ತಂತ್ರಜ್ಞಾನ ಮತ್ತು ಹೆಚ್ಚಿನ ಸ್ಥಳಾವಕಾಶದೊಂದಿಗೆ SUV ಆಗಿ ವಿನ್ಯಾಸಗೊಳಿಸಿದೆ.
ಕಂಪನಿ ಇನ್ನೂ ಅಧಿಕೃತವಾಗಿ ದಿನಾಂಕವನ್ನು ಪ್ರಕಟಿಸಿಲ್ಲ. ಹೊಸ SUV 15 ಮತ್ತು 20 ಡಿಸೆಂಬರ್ 2024ರ ನಡುವೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
SUVಯ ಬೆಲೆಯನ್ನು ಬಿಡುಗಡೆಯ ಸಮಯದಲ್ಲಿ ಕಂಪನಿ ಬಹಿರಂಗಪಡಿಸುತ್ತದೆ. ಆದರೆ, Syros SUV Kia 10 ಲಕ್ಷ ರೂ ಎಕ್ಸ್ ಶೋ ರೂಂ ಬೆಲೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.