ಬಿಗ್‌ಬಾಸ್ ಸೀಸನ್ 11 ಪ್ರೇಕ್ಷಕರ ತಲೆಗೆ ಈಗ ಹುಳ ಬಿಟ್ಟಂತೆ ಆಗಿದೆ. 9ನೇ ವಾರ ಬಿಗ್‌ಬಾಸ್ ಮನೆಯಲ್ಲಿ ಒಂದು ಸಾಮ್ರಾಜ್ಯ ಕಟ್ಟಿದ್ದರು. ಆ ಸಾಮ್ರಾಜ್ಯಕ್ಕೆ ಮಹಾರಾಜ ಮಂಜಣ್ಣ, ಯುವರಾಣಿಯಾಗಿ ಮೋಕ್ಷಿತಾ ಅವರನ್ನ ಆಯ್ಕೆ ಮಾಡಲಾಗಿತ್ತು.
ರಾಜ, ರಾಣಿಯ ಜಗಳದಲ್ಲಿ ಬಿಗ್ ಬಾಸ್ ಮನೆ ರಣರಂಗವೇ ಆಗಿತ್ತು. ಬಿಗ್ ಬಾಸ್ ಸಾಮ್ರಾಜ್ಯದ ಈ ತಪ್ಪು, ಒಪ್ಪುಗಳು ಈಗ ಕಿಚ್ಚ ಸುದೀಪ್ ಅವರ ಕಟಕಟೆಯನ್ನು ಹತ್ತಿದೆ.
ಬಿಗ್ ಬಾಸ್ ಮನೆಯ ಸಾಮ್ರಾಜ್ಯದಲ್ಲಿ ಮಹಾರಾಜರಾಗಿದ್ದ ಮಂಜಣ್ಣ ಹಾಗೂ ಯುವರಾಣಿ ಮೋಕ್ಷಿತಾ ಅವರ ಮಧ್ಯೆ ಬಿಗ್ ಫೈಟ್ ನಡೆದಿತ್ತು. ಟಾಸ್ಕ್‌ನ ಹೊರೆತುಪಡಿಸಿ ಈ ಇಬ್ಬರು ಪರ್ಸನಲ್ ಆಗಿ ತಮ್ಮ ಆಟವನ್ನು ಪ್ರದರ್ಶಿಸಿದ್ದರು. ಈ ಪರ್ಸನಲ್ ವಿಚಾರವನ್ನ ಕಿಚ್ಚ ಸುದೀಪ್ ಅವರು ವಾರದ ಕತೆಯಲ್ಲಿ ಪ್ರಶ್ನಿಸಿದ್ದಾರೆ.
ಮಂಜಣ್ಣ ಮೇಲೆ ಮೋಕ್ಷಿತಾ ಅವರು ಪರ್ಸನಲ್ ಆಗಿ ಜಿದ್ದಿಗೆ ಬೀಳಲು ಕಾರಣವೇನು? ಇದೇ ಪ್ರಶ್ನೆಯನ್ನ ಕಿಚ್ಚ ಸುದೀಪ್ ಅವರು ಕೇಳಿದಾಗ ಮೋಕ್ಷಿತಾ ಅವರು ನೇರವಾಗಿ ಉತ್ತರ ನೀಡಿದ್ದಾರೆ. ಕೆಲವೊಂದು ಅವರ ಮಾತುಗಳು ನನಗೆ ನೋವಾಗುವಂತೆ ಮಾಡಿದೆ. ನನಗೆ ಹರ್ಟ್ ಆದ ಮೇಲೆ ನಾನು ಆ ರೀತಿ ರಿಯಾಕ್ಟ್ ಮಾಡೋದಕ್ಕೆ ಶುರು ಮಾಡಿದೆ ಎಂದು ಮೋಕ್ಷಿತಾ 2 ಕಡ್ಡಿ 1 ತುಂಡು ಮಾಡಿದಂತೆ ಹೇಳಿದ್ದಾರೆ.
ಮಂಜಣ್ಣ ಹಾಗೂ ಮೋಕ್ಷಿತಾ ಅವರ ಜಗಳದ ಮಧ್ಯೆ ಗೌತಮಿ ಕೂಡ ತುಪ್ಪ ಸುರಿದಿದ್ದಾರೆ. ಬಿಗ್ ಬಾಸ್ ಟಾಸ್ಕ್‌ನಲ್ಲಿ ಯುವರಾಣಿಯನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಬಾರದು ಅಂತ ಹೇಳಿದಾಗ ಗೌತಮಿ ಅವರು ನಿರಾಕರಿಸುತ್ತಾರೆ. ಗೌತಮಿ ಅವರು ಈ ರೀತಿ ನಡೆದುಕೊಂಡಿದ್ದು ಯಾಕೆ ಎಂದು ಪ್ರಶ್ನಿಸಲಾಗಿದೆ.
ಗೌತಮಿ ಅವರನ್ನು ಕಿಚ್ಚ ಸುದೀಪ್ ಅವರು ಪ್ರಜೆ ಮಾತಾಡುತ್ತಾ ಇದ್ರಾ ಅಥವಾ ಗೌತಮಿ ಮಾತಾಡುತ್ತಾ ಇದ್ದರಾ. ಸಂಬಂಧ ಸಂಬಂಧ ಅಂತೀರಾ ಆಮೇಲೆ ಮೋಸ ಆಯ್ತು, ನಂಬಿಕೆ ದ್ರೋಹ ಆಯ್ತು ಅಂತೀರಾ. ಬಿಗ್ ಬಾಸ್ ಮನೆಯಲ್ಲಿ ಯಾರು ಹೇಳಿದ್ರು ನಿಮಗೆ ಬೇರೆಯವರನ್ನ ನಂಬಿ ಅಂತ ಎಂದು ಸುದೀಪ್ ಕೇಳಿದ್ದಾರೆ. ಈ ಪರ್ಸನಲ್ ಫೈಟ್‌ನ ಮತ್ತಷ್ಟು ವಿಚಾರಗಳು ಇಂದಿನ ಕಿಚ್ಚನ ಪಂಚಾಯ್ತಿಯಲ್ಲಿ ಬಟಾ ಬಯಲಾಗುತ್ತಿದೆ.