spot_img
spot_img

ಸಿಂಗಾಪುರಕ್ಕೆ ವಿಸ್ತಾರವಾದ ವಿಮಾನದ ಕಡೇಯ ಹಾರಾಟ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ನವದೆಹಲಿ: ಕಳೆದ 10 ವರ್ಷಗಳಿಂದ ವಿಮಾನಯಾನ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ವಿಸ್ತಾರಾ ಏರ್​ಲೈನ್ಸ್​​ ಮಂಗಳವಾರ ನಸುಕಿನಲ್ಲಿ ತನ್ನ ಕಡೇಯ ಹಾರಾಟ ನಡೆಸಿತು. ರಾಷ್ಟ್ರ ರಾಜಧಾನಿ ದೆಹಲಿಯಿಂದ ಸಿಂಗಾಪುರಕ್ಕೆ ಹಾರಾಟ ನಡೆಸುತ್ತಿದ್ದಂತೆ ವಿಸ್ತಾರಾ ಏರ್​ಲೈನ್ಸ್​ ಏರ್​ ಇಂಡಿಯಾದೊಂದಿಗೆ ಅಧಿಕೃತವಾಗಿ ವಿಲೀನಗೊಂಡಿತು.

ಟಾಟಾ ಮತ್ತು ಸಿಂಗಾಪೂರ್​ ಏರ್​ಲೈನ್ಸ್​ ನಡುವಿನ ಜಂಟಿ ಉದ್ಯಮವಾದ ವಿಸ್ತಾರಾ ಇದೀಗ ಏರ್​ ಇಂಡಿಯಾ ಜೊತೆ ಸೇರಿಕೊಂಡಿದೆ. ಈ ಮೂಲಕ ದೇಶದ ಅತಿದೊಡ್ಡ ಅಂತಾರಾಷ್ಟ್ರೀಯ ವಿಮಾನ ಸೇವೆ ಮತ್ತು ದೇಶೀಯ ವಿಮಾನ ಸೇವೆಯಲ್ಲಿ ಎರಡನೇ ಸ್ಥಾನ ಪಡೆದಿದೆ.

ವಿಸ್ತಾರದ ಕೊನೇಯ ಅಂತಾರಾಷ್ಟ್ರೀಯ ಹಾರಾಟ ದೆಹಲಿಯಿಂದ ಸಿಂಗಾಪೂರ್​ಗೆ ಯುಕೆ ಕೋಡ್​ 115ದೊಂದಿಗೆ ಹಾರಾಟ ನಡೆಸಿದರೆ, ದೇಶಿಯ ವಿಮಾನ ಯುಕೆ 986 ಮೂಲಕ ಮುಂಬೈನಿಂದ ದೆಹಲಿಗೆ ಟೇಕ್‌ ಆಫ್‌ ಆಯಿತು.

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ವೈಮಾನಿಕ ಸೇವೆಯಲ್ಲಿ ಹೊಸ ಅಧ್ಯಾಯ ಆರಂಭಿಸಿರುವ ವಿಸ್ತಾರ, ಮೊದಲ ಅಂತಾರಾಷ್ಟ್ರೀಯ ಹಾರಾಟವನ್ನು ಎಐ2286 ಕೋಡ್​ ಅಡಿ ದೋಹಾದಿಂದ ಮುಂಬೈಗೆ ನಡೆಸಿದೆ.

ಅಧಿಕೃತ ಮೂಲಗಳ ಪ್ರಕಾರ, ಎರಡು ವಿಮಾನ ಸೇವೆಗಳ ವಿಲೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ವಿಸ್ತಾರ ಕೌಂಟರ್​ನಲ್ಲಿ ಏರ್​ ಇಂಡಿಯಾ ಬೋರ್ಡಿಂಗ್​ ಪಾಸ್​ ನೀಡಲಾಗುತ್ತದೆ.

ವಿಸ್ತಾರಾ ವಿಮಾನಗಳು ಎಐ2 ಕೋಡ್​ನಡಿ ಕಾರ್ಯಾಚರಣೆ ನಡೆಸಲಿವೆ. ವೀಲಿನ ಘಟಕ 103 ದೇಶಿಯ ಮತ್ತು 71 ಅಂತಾರಾಷ್ಟ್ರೀಯ ಮಾರ್ಗದಲ್ಲಿ ಹಾರಾಟ ನಡೆಸಲಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಬಿಗ್​ಬಾಸ್​ ಮನೆಯಲ್ಲಿ ಎಲ್ಲಾ ಉಲ್ಟಾ ಪಲ್ಟಾ..

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 10ನೇ ವಾರಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​​ ಮನೆಯಲ್ಲಿ ಎರಡು ತಂಡವಾಗಿ ಮಾರ್ಪಟ್ಟಿದೆ. ಈ...

ತಿರುಪತಿ: ಲಡ್ಡು ಖರೀದಿಸಲು ಇದ್ದ ಮಿತಿ ತೆಗೆದು ಹಾಕಿದ ಟಿಟಿಡಿ

ಆಂಧ್ರ ಪ್ರದೇಶ: ಇನ್ನು ಮುಂದೆ ತಿರುಪತಿಗೆ ಭೇಟಿ ನೀಡುವ ಭಕ್ತರು ಕೇಳಿದಷ್ಟೂ ಲಡ್ಡು ನೀಡಲು ಹಾಗೂ ಲಡ್ಡು ತಯಾರಿಸಲು ಬೇಕಾಗಿರುವ ಸಿಬ್ಬಂದಿ ನೇಮಕಕ್ಕೂ ಟಿಟಿಡಿ...

ಕರ್ನಾಟಕದ ಕರಾವಳಿಯಲ್ಲಿ 5 ಬ್ಯಾಂಕ್​ಗಳ ಸ್ಥಾಪನೆ

ಮಂಗಳೂರು: ಇಂದು ಅಂತಾರಾಷ್ಟ್ರೀಯ ಬ್ಯಾಂಕ್ ದಿನ. ಆರ್ಥಿಕ ಅಭಿವೃದ್ಧಿ, ಶ್ರೇಯಸ್ಸಿಗೆ ಆಧಾರವಾದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಗೌರವಿಸುವ ದಿನ. ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ...

ಪ್ರೊಬಾ-3 ಮಿಷನ್ ಉಡಾವಣೆ ನಾಳೆಗೆ ಮುಂದೂಡಿಕೆ: ಇಸ್ರೋ

ಬೆಂಗಳೂರು: ಇಂದು ನಿಗದಿಯಾಗಿದ್ದ ಯುರೋಪಿಯನ್ ಸ್ಪೇಸ್ ಏಜೆನ್ಸಿಯ (ಇಎಸ್ಎ) ಪ್ರೊಬಾ -3 ಮಿಷನ್ ಉಡಾವಣೆಯನ್ನು ನಾಳೆಗೆ (ಡಿಸೆಂಬರ್ 5ಕ್ಕೆ) ಮುಂದೂಡಲಾಗಿದೆ. ನಾಳೆ ಭಾರತೀಯ ಕಾಲಮಾನ...