ವಿದೇಶಗಳಲ್ಲಿರುವ ಕನ್ನಡಿಗರಿಗೆ ತಮ್ಮ ಮಕ್ಕಳು ಕನ್ನಡ ಕಲಿಯಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ, ಅಲ್ಲಿ ಕನ್ನಡ ಕಲಿಕೆಗೆ ಈ ಮೊದಲು ಅಂಥ ವ್ಯವಸ್ಥೆಯಿರಲಿಲ್ಲ. ಆ ಕೊರತೆಯನ್ನು ನೀಡುವಲ್ಲಿ ಅಮೆರಿಕದಲ್ಲಿರುವ ಕನ್ನಡ ಅಕಾಡೆಮಿ ಶ್ಲಾಘನೀಯ ಕಾರ್ಯ ಮಾಡುತ್ತಿದೆ.
ಕನ್ನಡಿಗರ ಮಟ್ಟಿಗೆ ಹೇಳುವುದಾದರೆ ವಲಸೆ ನಮ್ಮಗೇನೂ ಹೊಸತೇನಲ್ಲ. ಅಮೆರಿಕ, ಯೂರೋಪ್, ಆಫ್ರಿಕಾ ಸೇರಿದಂತೆ ನಾನಾ ಖಂಡಗಳಿಗೆ ಅನೇಕ ಕನ್ನಡಿಗರು ವಲಸೆ ಹೋಗಿದ್ದಾರೆ, ಹೋಗುತ್ತಲೂ ಇದ್ದಾರೆ.
ಹಾಗೆ ಹೋದವರಿಗೆ ಕಾಡುವ ಏಕೈಕ ಕೊರಗು ಎಂದರೆ. ಅದು ನಮ್ಮ ಕನ್ನಡ ಭಾಷೆ. ಅಂಥ ಕನ್ನಡಿಗರು ತಮ್ಮ ಮಕ್ಕಳು ಕನ್ನಡ ಕಲಿಯಬೇಕು, ಕನ್ನಡದ ಜೊತೆಗೆ ಒಂದು ಬಾಂಧವ್ಯವನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ಹಂಬಲಿಸುತ್ತಾರೆ.
ಮಕ್ಕಳಿಗೆ ಅಥವಾ ಕೆಲವೊಮ್ಮೆ ಹಿರಿಯರಿಗೂ ಕನ್ನಡ ಕಲಿಸುವ ಕಾರ್ಯವನ್ನು ಅಮೆರಿಕದಲ್ಲಿರುವ ಕನ್ನಡ ಅಕಾಡೆಮಿ ಮಾಡುತ್ತಿದೆ.
ಶಿವಕುಮಾರ್ ಗೌಡರ್ ಎಂಬ ಇಂಜಿನಿಯರ್ ಒಬ್ಬರ ಚಿಂತನೆಯ ಫಲಶ್ರುತಿಯಾಗಿರುವ ಈ ಅಕಾಡೆಮಿ, ಗೌಡರ್ ಅವರ ಸ್ನೇಹಿತರಾದ ನವೀನ್, ಅರುಣ್ ಸಂಪತ್, ಮಧು ರಂಗಪ್ಪ ಗೌಡ, ಅಶೋಕ್ ಕಟ್ಟಿಮನೆ, ಗೌತಮ್ ಜಯಣ್ಣ, ಶಶಿ ಬಸವರಾಜ್, ಗುರುಪ್ರಸಾದ್, ವಿಕಾಸ್ ಹೆಗ್ಡೆ, ಸಂಧ್ಯಾ, ಸೂರ್ಯಪ್ರಕಾಶ್, ಸುನೈನಾ ಗೌಡ ಶರ್ಮಾ, ನೈನಾ ಶರ್ಮಾ ಸೇರಿಕೊಂಡು ಈ ಸಂಸ್ಥೆಯನ್ನು ಬೆಳೆಸಿದ್ದಾರೆ.
ಕೇವಲ ಅಕ್ಷರಗಳನ್ನು ಕಲಿತ ಮಾತ್ರಕ್ಕೆ ನಮ್ಮ ಭಾಷೆಯ ಬಗ್ಗೆ ಮಕ್ಕಳಿಗೆ ಹೆಮ್ಮೆ ಬರುವುದಿಲ್ಲ. ಹೀಗಾಗಿ, ನಾಡಿನ ಇತಿಹಾಸ, ಭವ್ಯ ಪರಂಪರೆಯನ್ನು ಪಠ್ಯದಲ್ಲಿ ತಂದೆ. ನಾನು ಅಥವಾ ನಮ್ಮಂಥವರು ಕನ್ನಡ ಕಲಿಸಿ ಹೋಗಿ ಬಿಡಬಹುದು.
ಕನ್ನಡದ ಕಂಪನ್ನು ವಿಶ್ವದೆಲ್ಲೆಡೆ ಪಸರಿಸುವ ಯತ್ನದಲ್ಲಿ ಅವರು ಮಾಡಿಕೊಂಡಿರುವ ಸುಂದರವಾದ ಲಾಂಚನವೇ ಅವರ ಮನಸ್ಸಿನ ತುಡಿತಗಳನ್ನು ಎತ್ತಿ ಹಿಡಿಯುವಂತಿದೆ ಎಂದಿದ್ದಾರೆ.
ವರ್ಷಗಳ ಹಿಂದೆ ಶುರುವಾದ ಈ ಕನ್ನಡ ಅಕಾಡೆಮಿಯ ಸತತ ಪ್ರಯತ್ನದಿಂದಾಗಿ ಅಮೆರಿಕದ ನಾನಾ ಶಾಲಾ ಕಾಲೇಜುಗಳಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸಲು ಅಲ್ಲಿನ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ಕನ್ನಡ ಅಕಾಡೆಮಿಯು 14ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ನೂರಾರು ಶಾಲಾ ಕಾಲೇಜುಗಳಲ್ಲಿ ಕನ್ನಡವನ್ನು ಕನ್ನಡಿಗರ ಮಕ್ಕಳಿಗೆ ಹಾಗೂ ಕನ್ನಡ ಕಲಿಯಲು ಆಸಕ್ತಿ ತೋರುವ ಹಲವಾರು ವಿದೇಶಿಗರ ಮಕ್ಕಳಿಗೆ ಕನ್ನಡ ಹೇಳಿಕೊಡುತ್ತಿದೆ.
ನನಗೆ ಮಾತೃಭಾಷೆ ಪ್ರೇಮ ತುಂಬಾ ಕಾಡತೊಡಗಿದ್ದರಿಂದ ಆ ದೇಶದಲ್ಲಿ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವ, ಈ ಮೂಲಕ ಕನ್ನಡ ಉಳಿಸುವ ಕೈಂಕರ್ಯಕ್ಕೆ ಗೌಡರು ಕೈಹಾಕಿದರು.
ಕನ್ನಡದ ಕಂಪನ್ನು ವಿಶ್ವದೆಲ್ಲೆಡೆ ಪಸರಿಸುವ ಯತ್ನದಲ್ಲಿ ಅವರು ಮಾಡಿಕೊಂಡಿರುವ ಸುಂದರವಾದ ಲಾಂಚನವೇ ಅವರ ಮನಸ್ಸಿನ ತುಡಿತಗಳನ್ನು ಎತ್ತಿ ಹಿಡಿಯುವಂತಿದೆ.