spot_img
spot_img

ಐಟಿ ವಲಯದಲ್ಲಿ ಕನ್ನಡ ಮೊಳಗಲಿ : ನಿರ್ದೇಶಕ ಯೋಗರಾಜ್​ ಭಟ್

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಂಗಳೂರು: ನಾವೆಲ್ಲರೂ ಪರಿಣಾಮಕಾರಿಯಾಗಿ ಬಳಸಿದರಷ್ಟೇ ಕನ್ನಡ ಉಳಿಯಲು ಸಾಧ್ಯ. ಇದಕ್ಕಾಗಿ ಐಟಿ ವಲಯದಲ್ಲಿ ಹೆಚ್ಚು ಕನ್ನಡ ಬಳಕೆಯಾಗಬೇಕು ಎಂದು ನಿರ್ದೇಶಕ ಯೋಗರಾಜ್​ ಭಟ್​ ಹೇಳಿದರು.
‘ನಡೆ ಕನ್ನಡ, ನುಡಿ ಕನ್ನಡ ಹಬ್ಬ–2024’ರ ಭಾಗವಾಗಿ ನಮ್ಮ ಸಂಸತಿಯನ್ನು ಸಂಭ್ರಮಿಸೋಣ, ನಮ್ಮ ಕನ್ನಡಕ್ಕಾಗಿ ನಡೆಯೋಣ ಎನ್ನುವ ಧ್ಯೇಯ ವಾಕ್ಯದೊಂದಿಗೆ ಕಾರ್ಪೊರೇಟ್​ ಕನ್ನಡಿಗರು ಸಂಸ್ಥೆ, ಜಯನಗರದ 2ನೇ ಬ್ಲಾಕ್​ನಲ್ಲಿ ಭಾನುವಾರ ಆಯೋಜಿಸಿದ್ದ ‘ಕನ್ನಡಕ್ಕಾಗಿ ನಡಿಗೆ’ ವಾಕಥಾನ್​ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಂಗಳೂರು ನಗರ ದೇಶದ ಐಟಿ ರಾಜಧಾನಿಯಾಗಲು ಇಲ್ಲಿನ ಕಾರ್ಪೊರೇಟ್​ ಕನ್ನಡಿಗರ ಕೊಡುಗೆ ಬಹಳಷ್ಟಿದೆ. ವಿಶ್ವದಾದ್ಯಂತ ಕನ್ನಡ ಪಸರಿಸಲು ಸಿಲಿಕಾನ್​ ಸಿಟಿಯ ವಾಸಿಗಳು ಹಾಗೂ ತಂತ್ರಜ್ಞಾನ ಕ್ಷೇತ್ರದ ಕನ್ನಡ ಉದ್ಯೋಗಿಗಳು ಸಾಕಷ್ಟು ಶ್ರಮಿಸಿದ್ದಾರೆ. ಕನ್ನಡದ ಅಸ್ಮಿತೆ ಉಳಿಸುವಲ್ಲಿ ಕಾರ್ಪೊರೇಟ್​ ಕನ್ನಡಿಗರು ಕೊಡುಗೆಯೂ ಹೆಚ್ಚಿದೆ ಎಂದರು.
ವಾಕಥಾನ್​ನಲ್ಲಿ ಸಾವಿರಕ್ಕೂ ಅಧಿಕ ಐಟಿ-ಬಿಟಿ ಸೇರಿ ಇತರ ವಲಯದ ಕಾರ್ಪೊರೇಟ್​ ಕನ್ನಡಿಗರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವಿಜೃಂಭಣೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆದವು. ಶಾಸಕ ಉದಯ್​ ಬಿ.ಗರುಡಾಚಾರ್​, ದಕ್ಷಿಣ ಸಂಚಾರ ವಿಭಾಗ ಉಪ ಪೊಲೀಸ್​ ಆಯುಕ್ತ ಶಿವಪ್ರಕಾಶ್​ ದೇವರಾಜು, ನಟರಾದ ರಾಕೇಶ್​ ಮಯ್ಯ, ಸಂಜನ್​ ಕಜೆ, ಕಾರ್ಪೊರೇಟ್​ ಕನ್ನಡಿಗರ ವೇದಿಕೆಯ ನಿತೇಶ್​ ಮೂರ್ತಿ, ಎಸ್​.ಜಯರಾಮ್​, ಗೋವಿಂದಯ್ಯ, ಅಚ್ಚುತ್​ಗೌಡ ಮತ್ತಿತರರಿದ್ದರು.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...