ಬೆಂಗಳೂರು: ನಾವೆಲ್ಲರೂ ಪರಿಣಾಮಕಾರಿಯಾಗಿ ಬಳಸಿದರಷ್ಟೇ ಕನ್ನಡ ಉಳಿಯಲು ಸಾಧ್ಯ. ಇದಕ್ಕಾಗಿ ಐಟಿ ವಲಯದಲ್ಲಿ ಹೆಚ್ಚು ಕನ್ನಡ ಬಳಕೆಯಾಗಬೇಕು ಎಂದು ನಿರ್ದೇಶಕ ಯೋಗರಾಜ್ ಭಟ್ ಹೇಳಿದರು.
‘ನಡೆ ಕನ್ನಡ, ನುಡಿ ಕನ್ನಡ ಹಬ್ಬ–2024’ರ ಭಾಗವಾಗಿ ನಮ್ಮ ಸಂಸತಿಯನ್ನು ಸಂಭ್ರಮಿಸೋಣ, ನಮ್ಮ ಕನ್ನಡಕ್ಕಾಗಿ ನಡೆಯೋಣ ಎನ್ನುವ ಧ್ಯೇಯ ವಾಕ್ಯದೊಂದಿಗೆ ಕಾರ್ಪೊರೇಟ್ ಕನ್ನಡಿಗರು ಸಂಸ್ಥೆ, ಜಯನಗರದ 2ನೇ ಬ್ಲಾಕ್ನಲ್ಲಿ ಭಾನುವಾರ ಆಯೋಜಿಸಿದ್ದ ‘ಕನ್ನಡಕ್ಕಾಗಿ ನಡಿಗೆ’ ವಾಕಥಾನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಂಗಳೂರು ನಗರ ದೇಶದ ಐಟಿ ರಾಜಧಾನಿಯಾಗಲು ಇಲ್ಲಿನ ಕಾರ್ಪೊರೇಟ್ ಕನ್ನಡಿಗರ ಕೊಡುಗೆ ಬಹಳಷ್ಟಿದೆ. ವಿಶ್ವದಾದ್ಯಂತ ಕನ್ನಡ ಪಸರಿಸಲು ಸಿಲಿಕಾನ್ ಸಿಟಿಯ ವಾಸಿಗಳು ಹಾಗೂ ತಂತ್ರಜ್ಞಾನ ಕ್ಷೇತ್ರದ ಕನ್ನಡ ಉದ್ಯೋಗಿಗಳು ಸಾಕಷ್ಟು ಶ್ರಮಿಸಿದ್ದಾರೆ. ಕನ್ನಡದ ಅಸ್ಮಿತೆ ಉಳಿಸುವಲ್ಲಿ ಕಾರ್ಪೊರೇಟ್ ಕನ್ನಡಿಗರು ಕೊಡುಗೆಯೂ ಹೆಚ್ಚಿದೆ ಎಂದರು.
ವಾಕಥಾನ್ನಲ್ಲಿ ಸಾವಿರಕ್ಕೂ ಅಧಿಕ ಐಟಿ-ಬಿಟಿ ಸೇರಿ ಇತರ ವಲಯದ ಕಾರ್ಪೊರೇಟ್ ಕನ್ನಡಿಗರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವಿಜೃಂಭಣೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆದವು. ಶಾಸಕ ಉದಯ್ ಬಿ.ಗರುಡಾಚಾರ್, ದಕ್ಷಿಣ ಸಂಚಾರ ವಿಭಾಗ ಉಪ ಪೊಲೀಸ್ ಆಯುಕ್ತ ಶಿವಪ್ರಕಾಶ್ ದೇವರಾಜು, ನಟರಾದ ರಾಕೇಶ್ ಮಯ್ಯ, ಸಂಜನ್ ಕಜೆ, ಕಾರ್ಪೊರೇಟ್ ಕನ್ನಡಿಗರ ವೇದಿಕೆಯ ನಿತೇಶ್ ಮೂರ್ತಿ, ಎಸ್.ಜಯರಾಮ್, ಗೋವಿಂದಯ್ಯ, ಅಚ್ಚುತ್ಗೌಡ ಮತ್ತಿತರರಿದ್ದರು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now