ಚೆನ್ನೈ: (ತಮಿಳುನಾಡು): ದ್ರಾವಿಡ ರಾಜ್ಯಗಳಲ್ಲಿ ಒಂದಾದ ತಮಿಳುನಾಡಿನಲ್ಲಿ ಮತ್ತೆ ಹಿಂದಿ ಹೇರಿಕೆ ವಿವಾದ ಎದ್ದಿದೆ. ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ)ದ ವೆಬ್‌ಸೈಟ್‌ನಲ್ಲಿ ಇಂಗ್ಲಿಷ್ ಬದಲಿಗೆ ಹಿಂದಿ ಡಿಫಾಲ್ಟ್ ಭಾಷೆಯಾಗಿ ಬದಲಿಸಿದ್ದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಎಲ್‌ಐಸಿ ವೆಬ್‌ಸೈಟ್ ಅನ್ನು ಹಿಂದಿ ಹೇರಿಕೆಯ ಪ್ರಚಾರ ಸಾಧನವಾಗಿ ಇಳಿಸಲಾಗಿದೆ. ಇಂಗ್ಲಿಷ್ ಅನ್ನು ಆಯ್ಕೆ ಮಾಡುವ ಆಯ್ಕೆಯನ್ನು ಸಹ ಹಿಂದಿಯಲ್ಲಿ ಪ್ರದರ್ಶಿಸಲಾಗುತ್ತದೆ.
ಇದು ಭಾರತದ ವೈವಿಧ್ಯತೆಯನ್ನು ತುಳಿದು ಬಲವಂತವಾಗಿ ಸಾಂಸ್ಕೃತಿಕ ಮತ್ತು ಭಾಷಾ ಹೇರಿಕೆಯೇ ಹೊರತು ಬೇರೇನೂ ಅಲ್ಲ. ಎಲ್ಐಸಿ ಎಲ್ಲಾ ಭಾರತೀಯರ ಪ್ರೋತ್ಸಾಹದಿಂದ ಬೆಳೆಯಿತು. ಅದರ ಬಹುಪಾಲು ಕೊಡುಗೆದಾರರಿಗೆ ದ್ರೋಹ ಮಾಡುವ ಧೈರ್ಯ ಹೇಗೆ?
ಈ ಭಾಷಾ ದೌರ್ಜನ್ಯವನ್ನು ತಕ್ಷಣವೇ ಹಿಂಪಡೆಯಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಎಂಕೆ ಸ್ಟಾಲಿನ್ ತಿಳಿಸಿದ್ದಾರೆ.
ಭಾರತೀಯ ಸಾರ್ವಜನಿಕ ವಲಯದ ವಿಮಾ ಕಂಪನಿ ಎಲ್‌ಐಸಿಯ ವೆಬ್‌ಸೈಟ್‌ನಲ್ಲಿ ಇಂಗ್ಲಿಷ್ ಡಿಫಾಲ್ಟ್ ಭಾಷೆಯಾಗಿತ್ತು. ಮಂಗಳವಾರದಿಂದ ಅದು ಹಿಂದಿ ಭಾಷೆಗೆ ಬದಲಾಗಿದೆ.
ಮುಖಪುಟವು ಹಿಂದಿಯಲ್ಲಿ ಪ್ರದರ್ಶನವಾಗುತ್ತಿದೆ. ಎಲ್ಐಸಿಯಲ್ಲೂ ಹಿಂದಿ ಹೇರಿಕೆ ಶುರುವಾಗಿದೆ ಎಂದು ಸಿಎಂ ಎಂ.ಕೆ.ಸ್ಟಾಲಿನ್, ವಿಪಕ್ಷ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಸೇರಿದಂತೆ ಹಲವು ನಾಯಕರು ಟೀಕಿಸಿದ್ದಾರೆ.
ಜೀವ ವಿಮಾ ನಿಗಮದ ಅಧಿಕೃತ ವೆಬ್‌ಸೈಟ್‌ನಲ್ಲಿ ಹಿಂದಿ ಭಾಷೆಯನ್ನು ಡಿಫಾಲ್ಟ್ ಆಗಿ ನೀಡಲಾಗಿದೆ. ಇದರಿಂದ ಎಲ್ಲ ವಿವರಗಳು ಹಿಂದಿಯಲ್ಲೇ ಕಾಣುತ್ತಿವೆ. ಈ ಮೊದಲಿದ್ದ ಆಂಗ್ಲ ಭಾಷೆಯನ್ನು ಆಯ್ಕೆಯಾಗಿ ನೀಡಲಾಗಿದೆ.
ಇಷ್ಟಲ್ಲದೇ, ಆಂಗ್ಲ ಭಾಷೆಯನ್ನು ಆಯ್ಕೆ ಮಾಡಿ ಎಂಬುದೂ ಹಿಂದಿಯಲ್ಲೇ ಇದೆ. ಇದು ಹಿಂದಿಯೇತರ ರಾಜ್ಯಗಳಲ್ಲಿ ಬಲವಂತವಾಗಿ ಭಾಷಾ ಹೇರಿಕೆ ಮಾಡಲಾಗುತ್ತಿದೆ ಎಂಬ ಕಿಡಿ ಹೊತ್ತಿಸಿದೆ.
ಈ ಬಗ್ಗೆ ಸಾಮಾಜಿ ಜಾಲತಾಣ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಎಲ್‌ಐಸಿ ವೆಬ್‌ಸೈಟ್ ಅನ್ನು ಹಿಂದಿ ಹೇರಿಕೆಯ ಪ್ರಚಾರ ಸಾಧನವಾಗಿ ಮಾರ್ಪಡಿಸಲಾಗಿದೆ.
ಇಂಗ್ಲಿಷ್ ಭಾಷೆಯನ್ನು ಆಯ್ಕೆ ಮಾಡುವುದೂ ಹಿಂದಿಯಲ್ಲಿದೆ. ಇದು ಭಾರತದ ವೈವಿಧ್ಯತೆಯನ್ನು ತುಳಿದು ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ.
ಎಲ್ಐಸಿ ಎಲ್ಲ ಭಾರತೀಯರ ಬೆಂಬಲದೊಂದಿಗೆ ಬೆಳೆದಿದೆ. ಅಂತಹ ಸಂಸ್ಥೆಯು ಜನರಿಗೆ ದ್ರೋಹ ಮಾಡಲು ಎಷ್ಟು ಧೈರ್ಯ? ಈ ಭಾಷಾ ದೌರ್ಜನ್ಯವನ್ನು ಕೂಡಲೇ ಹಿಂಪಡೆಯಬೇಕು’ ಎಂದು ಸ್ಟಾಲಿನ್ ಒತ್ತಾಯಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸಾಮಿ ತಮ್ಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಸಾರ್ವಜನಿಕ ವಲಯದ ಕಂಪನಿಯಾದ ಎಲ್‌ಐಸಿ ವೆಬ್‌ಸೈಟ್‌ನಲ್ಲಿ ಹಿಂದಿ ಡಿಫಾಲ್ಟ್ ಭಾಷೆಯಾಗಿದೆ.
ಹಿಂದಿ ಗೊತ್ತಿಲ್ಲದವರು ಎಲ್‌ಐಸಿಯ ವೆಬ್‌ಸೈಟ್ ಬಳಸುವಂತಿಲ್ಲ. ಕೇಂದ್ರ ಸರಕಾರ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಹಿಂದಿ ಹೇರಿಕೆ ಮಾಡಲು ಹೊರಟಿದೆ ಎಂದು ದೂಷಿಸಿದ್ದಾರೆ.
ಭಾಷೆ, ಸಂಸ್ಕೃತಿ, ಸಂಘಟನೆ ಮತ್ತು ರಾಜಕೀಯದಲ್ಲಿ ವೈವಿಧ್ಯತೆಯನ್ನು ಹೊಂದಿರುವ ಭಾರತದಲ್ಲಿ ಏಕರೂಪತೆಯನ್ನು ಹೇರುವುದು ದೇಶದ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ಇದು ಉತ್ತಮ ನಡೆಯಲ್ಲ.
ವೆಬ್‌ಸೈಟ್‌ನ ಡಿಫಾಲ್ಟ್ ಭಾಷೆಯನ್ನು ಇಂಗ್ಲಿಷ್‌ಗೆ ಬದಲಾಯಿಸಬೇಕು. ಹಿಂದಿಯನ್ನು ಹೇರುವ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಆಗ್ರಹಿಸಿದ್ದಾರೆ.