WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
California, USA News:
LOS ANGELES ಕ್ಯಾಸ್ಟೈಕ್ ಸರೋವರದ ಬಳಿ ಬುಧವಾರ ಮತ್ತೆ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಇದರಿಂದ 50 ಸಾವಿರ ಜನರ ಸ್ಥಳಾಂತರಕ್ಕೆ ಸೂಚಿಸಲಾಗಿದೆ.ಬುಧವಾರ ಬೆಳಗ್ಗೆ ತಡವಾಗಿ ಬೆಂಕಿ ಕಾಣಿಸಿಕೊಂಡಿದೆ. ಇದು ಒಂದೇ ದಿನದೊಳಗೆ ಸುಮಾರು 41 ಚದರ ಕಿಲೋಮೀಟರ್ ವ್ಯಾಪಿಸಿಕೊಂಡು ಮರಗಳು, ಅರಣ್ಯು ಪ್ರದೇಶವನ್ನು ಸುಟ್ಟುಹಾಕಿದೆ.
ಇನ್ನಷ್ಟು ವ್ಯಾಪಿಸುತ್ತಿರುವ ಕಾರಣ ಈ ಪ್ರದೇಶದಲ್ಲಿ ಜನರ ಸ್ಥಳಾಂತರ ಪ್ರಕ್ರಿಯೆ ಆರಂಭಿಸಲು ಸೂಚಿಸಲಾಗಿದೆ.LOS ANGELES ಉತ್ತರದ ಕಡಿದಾದ ಪರ್ವತಗಳಲ್ಲಿ ಮತ್ತೆ ಕಾಳ್ಗಿಚ್ಚು ವ್ಯಾಪಿಸಿಕೊಂಡಿದೆ. ಇದು ತೀವ್ರಗತಿಯಲ್ಲಿ ಹರಡುತ್ತಿದ್ದು, ಈ ಪ್ರದೇಶದ 50 ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರ ಮಾಡಲು ಸರ್ಕಾರ ಆದೇಶ ನೀಡಲಾಗಿದೆ.
14 percent brought under control; ಬೆಂಕಿ ನಂದಿಸಲು ಅಗ್ನಿಶಾಮಕ ದಳಗಳು ಸತತವಾಗಿ ಕಾರ್ಯಾಚರಣೆ ನಡೆಸುತ್ತಿವೆ. ಸದ್ಯಕ್ಕೆ ಶೇಕಡಾ 14 ರಷ್ಟು ಅಗ್ನಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಕಾಳ್ಗಿಚ್ಚು, ಕಳೆದ 15 ದಿನಗಳಿಗಿಂತ ಭಿನ್ನವಾಗಿದೆ ಎಂದು ಹೇಳಿದ್ದಾರೆ.ಈ ಬಗ್ಗೆ ಮಾಹಿತಿ ನೀಡಿರುವ LOS ANGELES ಕೌಂಟಿ ಅಗ್ನಿಶಾಮಕ ದಳದ ಮುಖ್ಯಸ್ಥ ಆಂಥೋನಿ ಮರ್ರೋನ್, ಈ ಪ್ರದೇಶವು ತೀವ್ರ ಪ್ರಮಾಣದ ಕಾಡ್ಗಿಚ್ಚಿನ ಅಪಾಯಕ್ಕೀಡಾಗಿದೆ. ಇನ್ನೂ 23 ಸಾವಿರ ಜನರ ಸ್ಥಳಾಂತರದ ಎಚ್ಚರಿಕೆ ನೀಡಲಾಗಿದೆ.
ಸದ್ಯ ಅರಣ್ಯದಲ್ಲಿ ಮಾತ್ರ ಬೆಂಕಿಯ ರೌದ್ರಾವತಾರ ಮುಂದುವರಿದಿದೆ. ಮನೆಗಳು ಅಥವಾ ಪ್ರಾಣ ಹಾನಿ ಸಂಭವಿಸಿದ ವರದಿಗಳಿಲ್ಲ ಎಂದು ಅವರು ಹೇಳಿದ್ದಾರೆ.LOS ANGELES ಮತ್ತು ವೆಂಚುರಾ ಕೌಂಟಿ ಪ್ರದೇಶಗಳಲ್ಲಿ ಶುಕ್ರವಾರದವರೆಗೂ ರೆಡ್ ಅಲರ್ಟ್ ಘೋಷಿಸಲಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ಹೊತ್ತಿಕೊಳ್ಳುವ ಹಾಟ್ ಸ್ಪಾಟ್‌ಗಳಲ್ಲಿ ತೀವ್ರ ಎಚ್ಚರಿಕೆ ವಹಿಸಿದ್ದಾರೆ.
ಬೆಂಕಿಯಿಂದಾಗಿ 31 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲು ಆದೇಶಿಸಲಾಗಿದೆ. ಸದ್ಯ ಗಾಳಿಯ ತೀವ್ರತೆಯೂ ತುಸು ಕಡಿಮೆಯಾಗಿದೆ. ಹೀಗಾಗಿ ವ್ಯಾಪಿಸುವ ವೇಗವೂ ಕಮ್ಮಿ ಇದೆ. ಬುಧವಾರ ಮಧ್ಯಾಹ್ನ ಈ ಪ್ರದೇಶದಲ್ಲಿ ಗಾಳಿಯ ವೇಗ ಗಂಟೆಗೆ 67 ಕಿಮೀ ನಷ್ಟಿತ್ತು. ರಾತ್ರಿಯ ವೇಳೆಗೆ ಅದು ಗಂಟೆಗೆ 105 ಕಿಮೀನಷ್ಟು ಹೆಚ್ಚಾಗಿದೆ. ಕಾಡ್ಗಿಚ್ಚು ನಂದಿಸಲು 4 ಸಾವಿರಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
Chance of rain on Saturday: ಜನವರಿ 7 ರಿಂದ ಕಾಣಿಸಿಕೊಂಡಿರುವ ಕಾಡ್ಗಿಚ್ಚಿನಲ್ಲಿ ಈವರೆಗೂ ಕನಿಷ್ಠ 28 ಮಂದಿ ಸಾವನ್ನಪ್ಪಿದ್ದಾರೆ. 22 ಮಂದಿ ನಾಪತ್ತೆಯಾಗಿದ್ದಾರೆ. 14 ಸಾವಿರಕ್ಕೂ ಹೆಚ್ಚು ಮನೆಗಳು ಸುಟ್ಟು ಭಸ್ಮವಾಗಿವೆ.LOS ANGELESನ ದಕ್ಷಿಣ ಭಾಗದಲ್ಲಿ ಮಳೆ ಬೀಳುವ ಸಂಭವ ಇದೆ.
ಬೆಂಕಿಗೆ ಸುಟ್ಟು ಹೋಗಿರುವ ಪೆಸಿಫಿಕ್ ಪಾಲಿಸೇಡ್ಸ್ ಮತ್ತು ಅಲ್ಟಾಡೆನಾ ಪ್ರದೇಶಗಳಿಗೆ ಅಲ್ಲಿನ ನಿವಾಸಿಗಳು ಮರಳುತ್ತಿದ್ದಾರೆ. ಗುರುವಾರದವರೆಗೆ ಬಿರುಗಾಳಿಯಿಂದ ಕೂಡಿದ ಶುಷ್ಕ ವಾತಾವರಣವಿದೆ. ಶನಿವಾರದಿಂದ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನು ಓದಿರಿ : TRAIN TO KASHMIR : ಫೆಬ್ರವರಿಯಲ್ಲಿ ಮೊದಲ ರೈಲು ಉದ್ಘಾಟಿಸಲಿರುವ ಪ್ರಧಾನಿ ಮೋದಿ