spot_img
spot_img

SHIRDI SAI TEMPLE SECURITY TEAM : ಶಿರಡಿ ಸಾಯಿ ದೇಗುಲದ ರಕ್ಷಣಾ ತಂಡ ಸೇರಿದ ಸಿಂಬಾ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Shirdi, Maharashtra News:

ಸಿಂಬಾ ಬಿಡಿಡಿಎಸ್​ ತಂಡ ಸೇರಿದ್ದು, ತರಬೇತಿ ನಂತರ ಶೀಘ್ರದಲ್ಲೇ SHIRDI SAI TEMPLE SECURITY TEAMದಲ್ಲಿ ನಿಯೋಜನೆಯಾಗಲಿದೆ. ಅಷ್ಟಕ್ಕೂ ಯಾರೀ ಸಿಂಬಾ? ತಿಳಿಯಲು ಈ ಸುದ್ದಿ ಓದಿ ಇದು ಶಿರಡಿಯ ಸಾಯಿ ಬಾಬಾ ದೇಗುಲದ ಭದ್ರತಾ ಪಡೆಗೆ ಸಿಂಬಾ ಎಂಬ ಹೊಸ ಶ್ವಾನವೊಂದು ಸೇರ್ಪಡೆಗೊಂಡಿದೆ. ಇದುವರೆಗೂ ವರ್ಧನ್​ ಎಂಬ ಶ್ವಾನ ದೇಗುಲದ ಭದ್ರತೆಯಲ್ಲಿ ತನ್ನದೇ ಸೇವೆಯನ್ನು ಸಲ್ಲಿಕೆ ಮಾಡುತ್ತಿತ್ತು. ಕಳೆದ 10 ವರ್ಷಗಳ ಕಾಲ ಸತತವಾಗಿ ಇಲ್ಲಿನ ಭದ್ರತೆಯಲ್ಲಿ ಕಾರ್ಯ ನಿರ್ವಹಿಸಿದ್ದು, ಈಗ ನಿವೃತ್ತಿಯಾಗಿದೆ. ಹೀಗಾಗಿ ವರ್ಧನ್​ ಸ್ಥಾನಕ್ಕೆ ಇದೀಗ 3 ತಿಂಗಳ ಸಿಂಬಾ ಹೊಸ ಸೇರ್ಪಡೆಯಾಗಿದೆ.

From now on Simba will shoulder the responsibility of:

ದೇಶದ ಪ್ರಮುಖ ಧಾರ್ಮಿಕ ಕೇಂದ್ರದಲ್ಲಿ ಒಂದಾಗಿರುವ ಶಿರಡಿಗೆ, ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಇದರ ಜೊತೆಗೆ ವಿವಿಐಪಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸಾಯಿಬಾಬಾ ದರ್ಶನಕ್ಕೆ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಸಾಯಿ ದೇಗುಲದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವನ್ನು ವಿಶೇಷ ಬಿಡಿಡಿಎಸ್​ ತಂಡ ವಹಿಸಿದೆ. SHIRDI SAI TEMPLE SECURITY TEAM ಸಾಯಿ ಬಾಬಾ ದೇಗುಲದ ಪೊಲೀಸ್​ ಆಡಳಿತ ಮುನ್ನೆಚ್ಚರಿಕೆ ನೀಡಲು ಹಾಗೂ ಆಗಬಹುದಾದದ ಅನಾಹುತ ತಡೆಯಲು ವರ್ಧನ್​ ಜಾಗದಲ್ಲಿ ಸಿಂಬಾ ನೇಮಕ ಮಾಡಿಕೊಂಡಿದೆ. ಸಿಂಬಾ ಬಾಂಬ್​ ಪತ್ತೆ ಮತ್ತು ನಿಷ್ಕ್ರೀಯ ತಂಡದಲ್ಲಿ ಕಾರ್ಯ ನಿರ್ವಹಿಸಲಿದೆ. ಸದ್ಯ ಸಿಂಬಾ ಬಿಡಿಡಿಎಸ್​ ತಂಡ ಸೇರಿದ್ದು, ತರಬೇತಿ ಪಡೆದ ಬಳಿಕ, ಶೀಘ್ರದಲ್ಲೇ ಸಾಯಿ ದೇಗುಲದ ಭದ್ರತಾ ತಂಡದಲ್ಲಿ ಸೇರ್ಪಡೆಯಾಗಿ ತನ್ನ ಕೆಲಸ ಆರಂಭಿಸಲಿದೆ.

erification by BDDS Team:

ದೇಗುಲದ ಕಕಡ್​ ಆರತಿ, ಮಧ್ಯಾಹ್ನದ ಆರತಿ, ದುಪ ಆರತಿ ಹಾಗೇ ರಾತ್ರಿ ಶೆಜಾ ಆರತಿ ಸಮಯದಲ್ಲಿ ಬಿಡಿಡಿಎಸ್​ ತಂಡ ದೇಗುಲದ ಮೂಲೆ ಮೂಲೆ ಸೇರಿದಂತೆ ಸಾಯಿ ಸಮಾಧಿ ಸುತ್ತ ಕಟ್ಟುನಿಟ್ಟಿನ ಪರಿಶೀಲನೆ ಮಾಡಲಾಗುತ್ತದೆ. ಈ ಮೊದಲು ಬಿಡಿಡಿಎಸ್​ ತಂಡ ವರ್ಧನ್​ ಎಂಬ ಶ್ವಾನದ ಸೇವೆಯನ್ನು ಪಡೆದುಕೊಳ್ಳುತ್ತಿತ್ತು. ಇದು ನಿವೃತ್ತಿಯಾದ ಬಳಿಕ ಸಿಂಬಾ ಈ ತಂಡವನ್ನು ಸೇರ್ಪಡೆಗೊಂಡಿದೆ. ಸಿಂಬಾ ಶೀಘ್ರದಲ್ಲೇ ಪುಣೆ ಸಿಐಡಿ ತರಬೇತಿ ನೀಡಲಿದೆ ಎಂದು ಸಾಯಿ ದೇಗುಲದ ಪೊಲೀಸ್​ ಇನ್ಸ್​ಪೆಕ್ಟರ್​ ಸತೀಶ್​ ಘೋಟೆಕರ್​ ತಿಳಿಸಿದ್ದಾರೆ.

Farewell to Vardhan:

ಕಳೆದ 10 ವರ್ಷಗಳಿಂದ ವರ್ಧನ್​​ ಇಂದು ಸೇವೆಯಿಂದ ನಿವೃತ್ತಿಗೊಂಡಿದ್ದಾನೆ. ಅದಕ್ಕೆ ಬಿಡಿಡಿಎಸ್​ ತಂಡ ಭಾವಪೂರ್ವಕ ಬೀಳ್ಕೊಡುಗೆ ನೀಡಿದೆ. ಅದಕ್ಕೆ ಶಾಲು ಮತ್ತು ಹೂವಿನ ಹಾರ ಹಾಕಿ ಅದರ ಸೇವೆಯನ್ನು ಭದ್ರತಾ ಪಡೆ ಸಿಬ್ಬಂದಿ ಸ್ಮರಿಸಿಕೊಂಡರು.

ಇದನ್ನು ಓದಿರಿ : KUD SYLLABUS ISSUE : ಧಾರವಾಡ ಕವಿವಿ ಪಠ್ಯ ವಿವಾದ; ತಜ್ಞರ ಸಮಿತಿ ರಚನೆ

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

GBS SYMPTOMS PREVENTIVE MEASURES: ಶಿಶುಗಳಲ್ಲಿ ಕಂಡುಬರುವ ಈ ವೈರಸ್ ಲಕ್ಷಣಗಳೇನು?

Guntur, Andhra Pradesh News: ಪ್ರಸ್ತುತ ರಾಜ್ಯಾದ್ಯಂತ 17 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಸಾಂಕ್ರಾಮಿಕವಲ್ಲದಿದ್ದರೂ, ಜಾಗರೂಕರಾಗಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇತರ ಸೋಂಕುಗಳಿರುವ ಜನರಲ್ಲಿ...

INDIA AND QATAR SIGNED AN AGREEMENT:ಭಾರತದಲ್ಲಿ 10 ಶತಕೋಟಿ ಡಾಲರ್ ಹೂಡಿಕೆಗೆ ಮುಂದೆ ಬಂದ ಕತಾರ್

New Delhi News: ಕತಾರ್ INDIAದಲ್ಲಿ 10 ಬಿಲಿಯನ್ ಡಾಲರ್​​ ಹೂಡಿಕೆ ಮಾಡಲಿದೆ. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದ್ದು, 2 ರಾಷ್ಟ್ರಗಳು...

REMOTE AUSTRALIAN BEACH:ಆಸ್ಪ್ರೇಲಿಯಾ ಸಮುದ್ರ ಕಿನಾರೆಯಲ್ಲಿ 157 ಡಾಲ್ಫಿನ್ಗಳು ಸಾವು

Arthur River (Australia) News: 157 ಡಾಲ್ಫಿನ್​ಗಳ ಸಾವು ಕಳೆದ 48 ಗಂಟೆಗಳಲ್ಲಿ ಸಂಭವಿಸಿದೆ. ಡಾಲ್ಫಿನ್​ನ ದೊಡ್ಡ ಜಾತಿಯ ಸದಸ್ಯರಾದ ವೇಲ್ಸ್​ನಂತಹ ಸಮುದ್ರ ಜೀವಿ ಇವುಗಳ...

MAHA KUMBHMELA:75 ಜೈಲುಗಳಲ್ಲಿರುವ ಕೈದಿಗಳಿಗೆ ಗಂಗಾ ನದಿ ನೀರಿನ ಸ್ನಾನ ಭಾಗ್ಯ

Lucknow (Uttar Pradesh) News: ಪವಿತ್ರ KUMBHMELA ಸ್ನಾನಕ್ಕಾಗಿ ಜೈಲು ಸಚಿವರ ಮೇಲ್ವಿಚಾರಣೆಯಲ್ಲಿ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಕಾರಾಗೃಹಗಳ ಮಹಾನಿರ್ದೇಶಕ (ಡಿಜಿ) ಪಿ.ವಿ.ರಾಮಶಾಸ್ತ್ರಿ ತಿಳಿಸಿದ್ದಾರೆ. ಸಂಗಮದಿಂದ...