spot_img
spot_img

ಮಹೀಂದ್ರ ಕಂಪನಿಯ ಹೊಸ ಎಲೆಕ್ಟ್ರಿಕ್​ ಕಾರುಗಳು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Mahindra EV Cars Launched: ಸಿಂಗಲ್​ ಚಾರ್ಜ್​ನಲ್ಲೇ 500 ಕಿ.ಮೀ ಚಲಿಸುವ ಮಹೀಂದ್ರ ಎಲೆಕ್ಟ್ರಿಕ್​ ಕಾರುಗಳು ಮಹೀಂದ್ರ ಆ್ಯಂಡ್​ ಮಹೀಂದ್ರ ಕಂಪನಿ ತನ್ನ ಹೊಸ ಎಲೆಕ್ಟ್ರಿಕ್​ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಲೆಕ್ಟ್ರಿಕ್​ ವಾಹನಪ್ರಿಯರಿಗೆ ಒಳ್ಳೆಯ ಸುದ್ದಿ. ಎರಡು ಹೊಸ ಎಲೆಕ್ಟ್ರಿಕ್ ಕಾರುಗಳು ಮಾರುಕಟ್ಟೆಗೆ ಬಂದಿವೆ. ದೇಶೀಯ ಕಾರು ತಯಾರಕ ಕಂಪೆನಿ ಮಹೀಂದ್ರ ಆ್ಯಂಡ್​ ಮಹೀಂದ್ರ ತನ್ನ ಎರಡು ಹೊಸ ಇವಿಗಳನ್ನು ಬಿಡುಗಡೆ ಮಾಡಿದೆ. ಇವುಗಳಿಗೆ ‘Mahindra XEV 9e’ ಮತ್ತು ‘Mahindra BE 6e’ ಎಂದು ಹೆಸರಿಡಲಾಗಿದೆ.

‘ಮಹೀಂದ್ರಾ XEV 9e’ ಡಿಸೈನ್​: ಹೊಸ XEV 9e ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳ ಜೊತೆ ಈ ಕಾರಿನಲ್ಲಿ ಟ್ರೈಯಾಂಗಲ್​ ಹೆಡ್‌ಲೈಟ್‌ಗಳು, ಇನ್​ವರ್ಟೆಡ್​ ಎಲ್-ಶೇಪ್​ ಎಲ್‌ಇಡಿ ಡಿಆರ್‌ಎಲ್‌ಗಳು, ಮುಂಭಾಗದಲ್ಲಿ ಎಲ್‌ಇಡಿ ಲೈಟ್ ಬಾರ್, ಬ್ಯಾಕ್​ ಆ್ಯಂಡ್​ ಫ್ರಂಟ್​ ಬಂಪರ್‌ಗಳು, ಬ್ಲಾಂಕ್ಡ್-ಆಫ್ ಗ್ರಿಲ್, ಫ್ರಂಟ್ ಮತ್ತು ರಿಯರ್ ಸ್ಕಿಡ್ ಪ್ಲೇಟ್ ಇದೆ. ಕಾಂಟ್ರಾಸ್ಟ್ ಕಲರ್​ನ ORVMಗಳನ್ನು ಹೊಂದಿದೆ.

ಇವುಗಳ ಹೊರತಾಗಿ, ರಿಫ್ರೆಶ್ ಮಾಡಿದ ಎಲ್‌ಇಡಿ ಟೈಲ್‌ಲೈಟ್‌ಗಳು, ಇಂಟಿಗ್ರೇಟೆಡ್ ಸ್ಪಾಯ್ಲರ್, ಸಿ-ಪಿಲ್ಲರ್-ಮೌಂಟೆಡ್ ರಿಯರ್ ಡೋರ್ ಹ್ಯಾಂಡಲ್, ಕನೆಕ್ಟೆಡ್ ಟೈಲ್‌ಲೈಟ್ ಸೆಟಪ್, ಏರೋ ಇನ್ಸರ್ಟ್‌ಗಳೊಂದಿಗೆ ಹೊಸ ಅಲಾಯ್​ ವ್ಹೀಲ್​ಗಳನ್ನು ಅಳವಡಿಸಲಾಗಿದೆ.

ಈ ಕಾರು 59kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ವಿದ್ಯುತ್ ಮೋಟರ್‌ಗೆ ಸಂಪರ್ಕ ಹೊಂದಿದೆ. 228bhp ಪವರ್ ಮತ್ತು 380Nm ಟಾರ್ಕ್ ಉತ್ಪಾದಿಸುತ್ತದೆ. ಫುಲ್​ ಚಾರ್ಜ್‌ನಲ್ಲಿ 656 ಕಿಲೋಮೀಟರ್‌ಗಳಷ್ಟು ದೂರ ಕ್ರಮಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದರ ಬ್ಯಾಟರಿಯನ್ನು 140kW DC ಫಾಸ್ಟ್ ಚಾರ್ಜರ್ ಮೂಲಕ ಕೇವಲ 20 ನಿಮಿಷಗಳಲ್ಲಿ ಶೇ 20-80ರಷ್ಟು ಚಾರ್ಜ್ ಮಾಡಬಹುದು. 0-100 kmph ವೇಗವನ್ನು ಈ ಕಾರು 6.8 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ.

ಈ ಕಾರು ಎರಡು-ಸ್ಪೋಕ್ ಮಲ್ಟಿಫಂಕ್ಷನ್ ಫ್ಲಾಟ್-ಬಾಟಮ್ ಸ್ಟೀರಿಂಗ್ ವ್ಹೀಲ್, ಪನೋರಮಿಕ್ ಸನ್‌ರೂಫ್, ಲೆವೆಲ್ 2 ಎಡಿಎಎಸ್ ಸೂಟ್, 360-ಡಿಗ್ರಿ ಕ್ಯಾಮೆರಾ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ತ್ರೀ-ಸ್ಕ್ರೀನ್ ಸೆಟಪ್, ಡ್ಯಾಶ್‌ಬೋರ್ಡ್, ಟ್ವೀಕ್ಡ್​ ಸೆಂಟರ್ ಕನ್ಸೋಲ್, ನ್ಯೂ ಗೇರ್ ಲಿವರ್ ಮತ್ತು ರೋಟರಿ ಡಯಲ್‌ ಒಳಗೊಂಡಿದೆ.

ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ (EPB), 1400-ವ್ಯಾಟ್ ಹರ್ಮನ್-ಕಾರ್ಡನ್ ಮೂಲದ 16-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್, ಆಟೋ ಪಾರ್ಕ್ ಫಂಕ್ಷನ್, ವೈರ್‌ಲೆಸ್ ಮೊಬೈಲ್ ಪ್ರೊಜೆಕ್ಷನ್, ಸವೆನ್​ ಏರ್‌ಬ್ಯಾಗ್ಸ್​, 65W ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್, ಶೆಡೂಲ್ಡ್​ ಚಾರ್ಜಿಂಗ್​ ಜೊತೆ ಫಂಕ್ಷನ್​ ಆ್ಯಂಡ್​ ಕ್ಯಾಬಿನ್ ಪ್ರಿ-ಕೂಲಿಂಗ್ ಫಂಕ್ಷನ್ ಕಾರಿನಲ್ಲಿದೆ.

‘ಮಹೀಂದ್ರ BE 6e’ ಕಾರನ್ನು ‘BE 05’ ಎಂದು ಕರೆಯಲಾಗುತ್ತದೆ. ಇದು ಕೂಪೆ ಎಸ್‌ಯುವಿ. ಆಭರಣದಂತಹ ಹೆಡ್‌ಲೈಟ್‌ಗಳು, ಹಿಂಭಾಗದ ಎಲ್ಇಡಿ ಲೈಟ್ ಬಾರ್, ಟಾಪ್-ಸ್ಪೆಕ್ ರೂಪಾಂತರಕ್ಕಾಗಿ 20-ಇಂಚಿನ ವ್ಹೀಲ್ಸ್​ನಂತಹ​ ಸ್ಟೈಲಿಂಗ್ ಎಲಿಮೆಂಟ್ಸ್​ ಹೊಂದಿದೆ. ‘XEV 9e’ ಗಿಂತ ಸ್ವಲ್ಪ ಚಿಕ್ಕದಾದ ಬೂಟ್ ಸ್ಪೇಸ್ ಅಂದ್ರೆ ಇದು 455 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಇದಲ್ಲದೆ, 45 ಲೀಟರ್ ಫ್ರಂಕ್​ ಹೊಂದಿದೆ.

ಇದರ ಕ್ಯಾಬಿನ್ ಡ್ರೈವರ್​-ಸೆಂಟ್ರಿಕ್​, ಫೈಟರ್ ಜೆಟ್‌ಗಳಂತಹ ಥ್ರಸ್ಟರ್‌ಗಳಿಂದ ಪ್ರೇರಿತವಾಗಿದೆ. ‘XEV 9e’ನಂತೆ ವೈಶಿಷ್ಟ್ಯಪೂರ್ಣ ಮಾದರಿಯಾಗಿದೆ. ಮಲ್ಟಿ-ಜೋನ್ ಕ್ಲೈಮೇಟ್ ಕಂಟ್ರೋಲ್, ಮಲ್ಟಿಪಲ್ ಡ್ರೈವ್ ಮೋಡ್‌ಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್, ಹೈ-ಎಂಡ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (ಮಹೀಂದ್ರಾ ಸೋನಿಕ್ ಸ್ಟುಡಿಯೋ), ಪನೋರಮಿಕ್ ಸನ್‌ರೂಫ್, ಕನೆಕ್ಟ್ ಕಾರ್ ತಂತ್ರಜ್ಞಾನ, AI (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಇಂಟರ್ಫೇಸ್‌ನಂತಹ ವೈಶಿಷ್ಟ್ಯಗಳನ್ನು ಈ ಕಾರು ಒಳಗೊಂಡಿದೆ.

ಕುತೂಹಲಕಾರಿ ಅಂಶವೆಂದರೆ, ಇದು ಸುಮಾರು ಮೂರು ಕಿಲೋಮೀಟರ್ ಉದ್ದದ ವೈರಿಂಗ್ ಸರಂಜಾಮು ಹೊಂದಿದೆ. 2,000ಕ್ಕೂ ಹೆಚ್ಚು ಸರ್ಕ್ಯೂಟ್‌ಗಳು ಮತ್ತು 36 ECUಗಳನ್ನು ಅಳವಡಿಸಲಾಗಿದೆ. ಏಳು ಏರ್ ಬ್ಯಾಗ್‌ಗಳು, ADAS, 360 ಡಿಗ್ರಿ ಕ್ಯಾಮೆರಾ ಮತ್ತು ಅನೇಕ ಸುರಕ್ಷತಾ ವೈಶಿಷ್ಟ್ಯಗಳಿವೆ.

ಈ ಎರಡು ಕಾರುಗಳ ಪವರ್‌ಟ್ರೇನ್ ಅನ್ನು ಕಂಪನಿಯ INGLO ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. 59kWh ಮತ್ತು 79kWh ಸಪೋರ್ಟ್​ನೊಂದಿಗೆ ಈ ಕಾರುಗಳು ಬರುತ್ತವೆ. ‘BE 6e’ ಎರಡು ಬ್ಯಾಟರಿ ಆಯ್ಕೆಗಳು ಹೊಂದಿದೆ. ಇದರ ಗರಿಷ್ಠ ವ್ಯಾಪ್ತಿ 682 ಕಿ.ಮೀ. ಆಗಿದೆ.

ಮೋಟಾರ್ 288bhp ಪವರ್ ಮತ್ತು 380nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬ್ಯಾಟರಿಯನ್ನು 175kWh DC ಫಾಸ್ಟ್ ಚಾರ್ಜರ್‌ನೊಂದಿಗೆ 20 ನಿಮಿಷಗಳಲ್ಲಿ 20-80 ಪ್ರತಿಶತದಿಂದ ಚಾರ್ಜ್ ಮಾಡಬಹುದು. ಇದು ದೊಡ್ಡ ಬ್ಯಾಟರಿಯೊಂದಿಗೆ 500 ಕಿ.ಮೀ. ವ್ಯಾಪ್ತಿಯನ್ನು ಒದಗಿಸುವ ನಿರೀಕ್ಷೆಯಿದೆ.

‘XEV 9e’ ಅನ್ನು ₹21.9 ಲಕ್ಷ (ಎಕ್ಸ್ ಶೋ ರೂಂ) ಇದ್ದು, ಮಾರುಕಟ್ಟೆಯಲ್ಲಿ ‘BE 6e’ ಬೆಲೆ ₹18.9 ಲಕ್ಷ (ಎಕ್ಸ್ ಶೋ ರೂಂ) ಇದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ANCIENT WELL DISCOVERED – ಸಂಭಾಲ್ನಲ್ಲಿ ಮತ್ತೊಂದು ಪುರಾತನ ಬಾವಿ ಪತ್ತೆ

Sambhal (Uttar Pradesh) News: ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆಯುತ್ತಿರುವ 'ರಹಸ್ಯಗಳ' ಉತ್ಖನನದಲ್ಲಿ ಮತ್ತೊಂದು ಪುರಾತನ ಬಾವಿ ಪತ್ತೆಯಾಗಿದೆ. ಇದು ಯಾತ್ರಾರ್ಥಿಗಳ ದಾಹ ತಣಿಸುತ್ತಿದ್ದ ತೀರ್ಥಗಂಗೆ...

KARNATAKA INVESTMENT PROJECTS – ₹9,823 ಕೋಟಿ ಹೂಡಿಕೆಯ ಯೋಜನೆಗಳಿಗೆ ಸಿಎಂ ಅಸ್ತು

Bangalore News: ರಾಜ್ಯದ ವಿವಿಧ ಕೈಗಾರಿಕಾ ವಲಯಗಳಲ್ಲಿ ಒಟ್ಟು 9,823 ಕೋಟಿ ರೂ ಬಂಡವಾಳ ಹೂಡಿಕೆಯ ಒಂಬತ್ತು ಪ್ರಸ್ತಾವನೆಗಳಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಒಪ್ಪಿಗೆ...

YEAR ENDER 2024 – ರಾಜ್ಯ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆಗಳು, ಮೇಲಾಟಗಳ ಮೆಲುಕು

Bangalore News: 2024ರಲ್ಲಿ ಲೋಕಸಭೆ ಚುನಾವಣೆ, ನಂತರ ನಡೆದ ಉಪ ಚುನಾವಣೆಗಳಿಂದಾಗಿ ಕರ್ನಾಟಕ ಸಾಕಷ್ಟು ಅಚ್ಚರಿ, ಮೇಲಾಟಗಳನ್ನು ಕಂಡಿದೆ. 2023 ಇನ್ನೇನು ಕೆಲವೇ ದಿನಗಳಲ್ಲಿ ಕೊನೆಗೊಳ್ಳಲಿದ್ದು,...

POOJA TO KUMARAPADA – ಪೂರ್ವಸಂಪ್ರದಾಯದಂತೆ ಕುಮಾರ ಪರ್ವತದಲ್ಲಿ ಕುಮಾರಪಾದಕ್ಕೆ ಪೂಜೆ

Subrahmanya (South Kannada) News: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕ ವೇದ ಮೂರ್ತಿ ಸೀತಾರಾಮ ಯಡಪಡಿತ್ತಾಯ ಅವರು ಪೂರ್ವಶಿಷ್ಟ ಸಂಪ್ರದಾಯದ ಪ್ರಕಾರ ಮಾರ್ಗಶಿರ ಬಹುಳ...