Muda ಆಯುಕ್ತ ದಿನೇಶ್ಕುಮಾರ್ಗೆ ಸರ್ಕಾರದ ಉಡುಗೊರೆ?
ಹಾವೇರಿಯ ವಿಶ್ವವಿದ್ಯಾಲಯದ ಕುಲಸಚಿವನಾಗಿ ಜಿ.ಟಿ.ದಿನೇಶ್ಕುಮಾರ್ರನ್ನ ನೇಮಕ ಮಾಡುವ ಮೂಲಕ ರಾಜ್ಯ ಸರ್ಕಾರ ಮತ್ತಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮಾಜಿ ಮುಡಾ ಆಯುಕ್ತನಿಗೆ ರಾಜ್ಯ ಸರ್ಕಾರದಿಂದ ದೊಡ್ಡ ಉಡುಗೊರೆ ಸಿಕ್ಕಿದೆ.
ದಿನೇಶ್ ಕುಮಾರ್ ನೇಮಕ
ಇಂತಹ ವೇಳೆಯೇ ಜಿ.ಟಿ.ದಿನೇಶ್ ಕುಮಾರ್ ಅವರ ಈ ನೇಮಕ ಮತ್ತಷ್ಟು ಚರ್ಚೆಗೆ ವೇದಿಕೆ ಮಾಡಿಕೊಟ್ಟಿದೆ. ಮುಡಾ ವಿಚಾರದಲ್ಲಿ ಈಗಾಗಲೇ ರಾಜ್ಯ ಸರ್ಕಾರ ಅನೇಕ ಮುಜುಗರವನ್ನು ಅನುಭವಿಸುತ್ತಿದೆ. ಸಿಎಂ ಸಿದ್ದರಾಮಯ್ಯನವರ ಕುರ್ಚಿಗೆ ಕಂಟಕ ತಂದೊಡ್ಡುವಂತಹ ಬೆಳವಣಿಗೆಗಳು ನಡೆದಿವೆ. 50:50 ಅನುಪಾತದಡಿ ಮುಡಾದಲ್ಲಿ ನಡೆದಿದೆ ಎನ್ನಲಾದ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಕೆಎಎಸ್ ಅಧಿಕಾರಿ ಜಿ.ಟಿ.ದಿನೇಶ್ ಕುಮಾರ್ ಮೇಲೆ ಗಂಭೀರ ಆರೋಪ ಕೇಳಿಬಂದಿತ್ತು.
ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ?
ಯಾವುದೇ ಸ್ಥಳ ತೋರಿಸಿದೇ ವರ್ಗಾವಣೆ ಆಗಿದ್ದ ದಿನೇಶ್ಕುಮಾರ್ ಈಗ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರಾಗಿ ನೇಮಕಗೊಂಡಿದ್ದಾರೆ. ಆರೋಪ ಕೇಳಿ ಬಂದ ತಕ್ಷಣ ಮೈಸೂರಿಗೆ ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಸಭೆ ನಡೆಸಿ ಮುಡಾ ಆಯುಕ್ತರಾಗಿದ್ದ ಜಿ.ಟಿ.ದಿನೇಶ್ ಕುಮಾರ್ರನ್ನ ವರ್ಗಾವಣೆ ಮಾಡಲಾಗಿತ್ತು.
ಗಂಭೀರ ಆರೋಪ?
50:50 ಅನುಪಾತದಡಿ ಮುಡಾದಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಕೆಎಎಸ್ ಅಧಿಕಾರಿ ಜಿ.ಟಿ.ದಿನೇಶ್ ಕುಮಾರ್ (G T Dinesh Kumar) ಅವರ ಮೇಲೆ ಗಂಭೀರ ಆರೋಪ ಕೇಳಿ ಬಂದಿತ್ತು. ಈಗ ಹಾವೇರಿ ವಿವಿಯ ಕುಲಸಚಿವರಾಗಿ ವರ್ಗಾವಣೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. 2022ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಜಿ.ಟಿ.ದಿನೇಶ್ ಕುಮಾರ್ ಅಧಿಕಾರ ಸ್ವೀಕರಿಸಿದ್ದರು.
ಮಾಜಿ ಮುಡಾ ಆಯುಕ್ತನಿಗೆ ಭರ್ಜರಿ ಗಿಫ್ಟ್!
ಮಾಜಿ ಮುಡಾ ಆಯುಕ್ತನಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ. ಕೆಎಎಸ್ ಅಧಿಕಾರಿ ಜಿ.ಟಿ ದಿನೇಶ್ ಕುಮಾರ್ ಅವರನ್ನು ಹಾವೇರಿ ವಿಶ್ವವಿದ್ಯಾಲಯದ (Haveri University) ಕುಲಸಚಿವರಾಗಿ (Registrar) ವರ್ಗಾವಣೆ (Transfer) ಮಾಡಲಾಗಿದೆ.
ಇನ್ನಷ್ಟು ಓದಿರಿ:
Darshan ಪಶ್ಚಾತಾಪದ ಮಾತು! ಟೈಂ ಸರಿಯಿಲ್ಲ ಅಷ್ಟೇ ಏನು ಮಾಡೋದು?
ಕೊನೆಗೂ ದರ್ಶನ್ ಕೈಯಲ್ಲಿದ್ದ ಕಡಗ ತೆಗೆಸಿದ ಪೊಲೀಸರು.. ಬಳ್ಳಾರಿ ಜೈಲಲ್ಲೂ ಅದೇ ಗತ್ತು, ದೌಲತ್ತು!