ಹೇ ಸೀತಾರಾಮ್ ನ್ಯೂಸ್ ಡೆಸ್ಕ್ : ಐಪಿಎಲ್-2025ರ ಸಿದ್ಧತೆಗಳು ಪ್ರಾರಂಭವಾಗಿದೆ, ಎಲ್ಲಾ ಫ್ರಾಂಚೈಸಿಗಳು ಮೆಗಾ ಹರಾಜಿಗಾಗಿ ಬಕ ಪಕ್ಷಿಯ ತರಹ ಕಾದು ಕೂತಿವೆ. ಇದಕ್ಕೆ ಮುಂಬೈ ಇಂಡಿಯನ್ಸ್ ಹೊರತಾಗಿಲ್ಲ. ಕಳೆದ ಐಪಿಎಲ್ನಲ್ಲಿ ಕ್ಯಾಪ್ಟನ್ಸಿ ವಿಚಾರದಲ್ಲಿ ದೊಡ್ಡ ವಿವಾದ ಸೃಷ್ಟಿಸಿದ್ದ ಮುಂಬೈ ಇಂಡಿಯನ್ಸ್, ಈ ವರ್ಷ ಏನು ಮಾಡಲಿದೆ ಅಂತಾ ತೀವ್ರ ಕುತೂಹಲ ಸೃಷ್ಟಿಸಿದೆ.
ಇದನ್ನೂ ಓದಿ : ಜಮ್ಮು ಕಾಶ್ಮೀರ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್.. 10 ವರ್ಷಗಳ ಬಳಿಕ 3 ಮಹತ್ವದ ಹೆಜ್ಜೆ; ಏನದು?
ಯಾಕೆಂದರೆ ಕಳೆದ ಬಾರಿ ರೋಹಿತ್ ಶರ್ಮಾ ಅವರಿಗೆ ಕ್ಯಾಪ್ಟನ್ಸಿಯಿಂದ ಕೊಕ್ ನೀಡಿ, ಗುಜರಾತ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯರನ್ನು ಕರೆದುಕೊಂಡು ಬಂದಿತ್ತು. ಇದು ಮುಂಬೈ ಇಂಡಿಯನ್ಸ್ನ ಕೆಲವು ಆಟಗಾರರು ಹಾಗೂ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಪರಿಣಾಮ ಐಪಿಎಲ್ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಹೀನಾಯವಾಗಿ ಸೋಲನ್ನು ಕಂಡಿತು. ಹೀಗಾಗಿ ಮುಂಬೈ ಇಂಡಿಯನ್ಸ್ ಈ ವರ್ಷ ಪಾಂಡ್ಯಗೆ ಗೇಟ್ ಪಾಸ್ ನೀಡಲಿದೆ ಎನ್ನಲಾಗ್ತಿದೆ. ಇದರ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಮುಂಬೈ ಫ್ರಾಂಚೈಸಿ ಬಗ್ಗೆ ಭಾರೀ ಚರ್ಚೆ ಆಗ್ತಿದೆ.
ಹಾರ್ದಿಕ್ ಪಾಂಡ್ಯಗೆ ತಂಡದಿಂದ ಗೇಟ್ ಪಾಸ್ ನೀಡಲಾಗುತ್ತದೆ. ಈ ಸಂಬಂಧ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ ಜೊತೆ ಮಹತ್ವದ ಮಾತುಕತೆ ನಡೆಸಿದೆ. ರೋಹಿತ್ ಶರ್ಮಾ ಇಟ್ಟಿರುವ ಷರತ್ತುಗಳನ್ನು ಮುಂಬೈ ಇಂಡಿಯನ್ಸ್ ಒಪ್ಪಿಕೊಂಡಿದೆ. ಸೂರ್ಯಕುಮಾರ್ ಯಾದವ್ ನಾಯಕರಾಗಬೇಕೋ ಅಥವಾ ಅವರೇ ನಾಯಕರಾಗಬೇಕೋ ಅನ್ನೋದನ್ನು ರೋಹಿತ್ ನಿರ್ಧರಿಸಲಿದ್ದಾರೆ. ಸೂರ್ಯ ಮುಂದಿನ ನಾಯಕನಾಗಬಹುದು. ರೋಹಿತ್ ಅವರನ್ನು ಉಳಿಸಿಕೊಳ್ಳಲು ಮುಂಬೈ ಶಕ್ತಿಮೀರಿ ಪ್ರಯತ್ನ ಮಾಡುತ್ತಿದೆ. ಜೊತೆಗೆ ಸೂರ್ಯ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ ಎಂಬ ಚರ್ಚೆ ಶುರುವಾಗಿದೆ.