100, 200, 500 ರೂಪಾಯಿ ಗರಿ, ಗರಿ ನೋಟು. ಅಬ್ಬಾ.. ಏನಿದು ಮಳೆಯಂತೆ ಆಕಾಶದಿಂದ ತೇಲಿ ಬರುತ್ತಿದೆ ಅಂತ ಅಂದುಕೊಳ್ಳಬೇಡಿ. ಇದು ನಿಜವಾದ ನೋಟಿನ ಸುರಿಮಳೆ.
ಈ ನೋಟಿನ ಮಳೆ ಆಕಾಶದಿಂದ ಬರುತ್ತಿರುವುದಲ್ಲ. ಮದುವೆಯ ಮನೆಯಲ್ಲಿ ಖುಷಿಗಾಗಿ ಗರಿ, ಗರಿ ನೋಟನ್ನು ಚೆಲ್ಲುತ್ತಾ ಸಂಭ್ರಮ ಆಚರಿಸುತ್ತಿರುವ ರೀತಿ.
ಉತ್ತರಪ್ರದೇಶದ ಸಿದ್ಧಾರ್ಥನಗರದಲ್ಲಿ ಒಂದು ಅದ್ಧೂರಿಯಾದ ಮದುವೆ ಸಮಾರಂಭ ನಡೆದಿದೆ. ಈ ಮದುವೆಗೆ ಬಂದ ಅತಿಥಿಗಳು ಅದೆಷ್ಟು ಖುಷಿಯಲ್ಲಿ ತೇಲಾಡಿದ್ದಾರೆ ಅಂದ್ರೆ ಅವರಿಗೆ ದುಡ್ಡು ಅನ್ನೋದು ಲೆಕ್ಕವೇ ಇಲ್ಲ. ಅಷ್ಟೇ ಸಂತೋಷದಲ್ಲಿ ದುಡ್ಡಿನ ಮಳೆಗೈದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸದ್ಯ ನೋಟಿನ ಮಳೆ ಸುರಿದಿರುವ ವಿಡಿಯೋ ವೈರಲ್ ಆಗಿದೆ. ಬಿಲ್ಡಿಂಗ್ ಮೇಲೆ ಹತ್ತಿರುವ ಜನರು 100, 200, 500 ರೂಪಾಯಿ ನೋಟುಗಳನ್ನ ಬೇಕಾಬಿಟ್ಟಿಯಾಗಿ ಚೆಲ್ಲಿದ್ದಾರೆ.
ಬಿಲ್ಡಿಂಗ್ ಮೇಲಿಂದ ಗರಿ, ಗರಿ ನೋಟುಗಳನ್ನು ಸಂತೋಷದಿಂದಲೇ ಬಿಸಾಡಲಾಗಿದೆ. ಕೆಳಗಿದ್ದ ಜನರಂತೂ ಸಿಕ್ಕಿದ್ದೇ ಸೀರುಂಡೆ ಅನ್ನೋ ರೀತಿ ಹಾರಿಕೊಂಡು ಬಂದ ನೋಟುಗಳನ್ನ ಕ್ಯಾಚ್ ಹಿಡಿದಿದ್ದಾರೆ.
ಕೈಗೆ ಸಿಕ್ಕಷ್ಟು ನೋಟುಗಳನ್ನು ಜೇಬಿಗಿಳಿಸಿಕೊಂಡು ಅಲ್ಲಿಂದ ಕಾಲ್ಕಿಕ್ಕಿತ್ತಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಇದು ಅಮಾನವೀಯ ಕೃತ್ಯ ಎಂದು ಟೀಕಿಸುತ್ತಿದ್ದಾರೆ.