Pink Salt Benefits for Health News:
ಹಿಮಾಲಯನ್ ಪಿಂಕ್ ರಾಕ್ SALT ಅಥವಾ ಪಿಂಕ್ ಉಪ್ಪು ಸೇವಿಸುವುದರಿಂದ ದೇಹದ ಆರೋಗ್ಯಕ್ಕೆ ಹಲವು ಪ್ರಯೋಜನಗಳು ದೊರೆಯುತ್ತವೆ ಎಂದು ಆರೋಗ್ಯ ತಜ್ಞರು ಮಾಹಿತಿ ನೀಡುತ್ತಾರೆ.ಸಾಮಾನ್ಯವಾದ ಬಿಳಿ SALT ಬದಲಿಗೆ ಪೋಷಕಾಂಶಗಳು ಸಮೃದ್ಧವಾಗಿರುವ ಹಿಮಾಲಯನ್ ಪಿಂಕ್ ರಾಕ್ SALT ಅಥವಾ ಪಿಂಕ್ ಉಪ್ಪು ಬಳಸುವುದು ಸೂಕ್ತ.
ಈ ಉಪ್ಪನ್ನು ಬಳಸುವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಇದೀಗ ಪಿಂಕ್ ಉಪ್ಪಿನ ಆರೋಗ್ಯದ ಪ್ರಯೋಜನಗಳ ಬಗ್ಗೆ ಅರಿತುಕೊಳ್ಳೋಣ.SALT ಹೆಚ್ಚು ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞ ವೈದ್ಯರು ತಿಳಿಸುತ್ತಾರೆ. ಹಲವು ಜನರು ಉಪ್ಪು ಸೇವಿಸಬೇಕೇ ಅಥವಾ ಇಲ್ಲವೋ ಎಂಬುದರ ಬಗ್ಗೆ ಯೋಚನೆ ಮಾಡುತ್ತಾರೆ. ಮುಖ್ಯವಾಗಿ ಅವರು ನಿರ್ದಿಷ್ಟ ವಯಸ್ಸನ್ನು ತಲುಪಿದ ಬಳಿಕ ಈ ಕುರಿತು ಹೆಚ್ಚು ಆಲೋಚನೆ ಮಾಡುತ್ತಾರೆ.
Pink salt hydrates the body: ಈ ಉಪ್ಪು ಸಾಮಾನ್ಯವಾಗಿ ದೇಹ ನಿರ್ಜಲೀಕರಣಗೊಳಿಸಲು ಕಾರಣವಾಗುತ್ತದೆ. ಪಿಂಕ್ ಉಪ್ಪು ದೇಹ ಹೈಡ್ರೀಕರಿಸುತ್ತದೆ, ಜೊತೆಗೆ ಎಲೆಕ್ಟ್ರೋಲೈಟ್ ಮಟ್ಟ ಸಮತೋಲನಗೊಳಿಸಲು ಪೂರಕವಾಗುತ್ತದೆ. ದೇಹದಿಂದ ಕಲ್ಮಶಗಳನ್ನು ಹೊರಹಾಕಲು ಹಾಗೂ ನಿರ್ವಿಷಗೊಳಿಸಲು ಈ ಉಪ್ಪು ಉತ್ತಮವಾಗಿದೆ. ಇದರಿಂದ ದೇಹವು ಹೊಸ ಚೈತನ್ಯ ಪಡೆಯುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಸಾಮಾನ್ಯ SALT ಜೊತೆಗೆ ಹೋಲಿಸಿದರೆ ಪಿಂಕ್ ಉಪ್ಪಿನಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಹಾಗೂ ಮೆಗ್ನೀಸಿಯಮ್‌ನಂತಹ 80 ವಿಭಿನ್ನ ಪ್ರಕಾರದ ಖನಿಜಗಳಿವೆ ಎಂದು ಅನೇಕ ಅಧ್ಯಯನಗಳು ಬಹಿರಂಗಪಡಿಸಿವೆ. ತಜ್ಞರು ತಿಳಿಸುವ ಪ್ರಕಾರ, ಪಿಂಕ್ SALTಲ್ಲಿ ಬಿಳಿ ಉಪ್ಪಿಗಿಂತ ಕಡಿಮೆ ಸೋಡಿಯಂ ಪ್ರಮಾಣವಿದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಹಾಗೂ ಕಡಿಮೆ ಸೋಡಿಯಂ ಸೇವಿಸಲು ಬಯಸುವವರಿಗೆ ಪಿಂಕ್ ಉಪ್ಪು ಒಳ್ಳೆಯದು.
Research says: ಪಿಂಕ್ ಉಪ್ಪು ಜೀರ್ಣಾಂಗ ವ್ಯವಸ್ಥೆಯ ಆರೋಗ್ಯಕ್ಕೆ ಪೂರಕವಾಗಿದೆ. ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳುವಲ್ಲಿ ಇದು ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ. 2020ರಲ್ಲಿ ಜರ್ನಲ್ ಆಫ್ ಫುಡ್ ಸೈನ್ಸ್‌ನಲ್ಲಿ (Journal of Food Science) ಪ್ರಕಟವಾದ ‘ಕರುಳಿನ ಆರೋಗ್ಯದ ಮೇಲೆ ಹಿಮಾಲಯನ್ ಪಿಂಕ್ SALT ಪರಿಣಾಮಗಳು’
Removes dead skin cells: ದೇಹದಿಂದ ಕೆಟ್ಟ ವಾಸನೆ ಬರುವುದನ್ನು ಸಹ ತಡೆಯುತ್ತದೆ. ಪಿಂಕ್ ಉಪ್ಪನ್ನು ನೈಸರ್ಗಿಕ ವಿಧಾನಗಳನ್ನು ಮೂಲಕ ಸಂಸ್ಕರಿಸಲಾಗುತ್ತದೆ. ಆದ್ರೆ, ಸಾಮಾನ್ಯ ಉಪ್ಪನ್ನು ಸಂಪೂರ್ಣವಾಗಿ ಸಂಸ್ಕರಿಸಿ, ಅದನ್ನು ಬಿಳಿಯಾಗಿ ಕಾಣುವಂತೆ ಮಾಡಲು ರಾಸಾಯನಿಕಗಳನ್ನು ಸೇರಿಸಲಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ಪಿಂಕ್ ಉಪ್ಪಿನಲ್ಲಿ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರೋಲೈಟ್‌ಗಳು ಇವೆ. ಇದು ದೇಹದ ಪಿಎಚ್ ಮಟ್ಟವನ್ನು ಸಮತೋಲನಗೊಳಿಸಲು ಸಾಧ್ಯವಾಗುತ್ತದೆ. ಇದು ದೇಹವನ್ನು ಸಂಪೂರ್ಣವಾಗಿ ಆರೋಗ್ಯದಿಂದ ಇರಿಸುತ್ತದೆ. ಪಿಂಕ್ ಉಪ್ಪು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ ಹಾಗೂ ವಯಸ್ಸಾಗುವುದನ್ನು ತಡೆಯಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
Special Note to Readers: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.
ಇದನ್ನು ಓದಿರಿ : MACHINERY CAPITAL : ಕರ್ನಾಟಕವು ದೇಶದ ಯಂತ್ರೋಪಕರಣಗಳ ರಾಜಧಾನಿ